‘೧ ಜುಲೈ ೨೦೨೪ ರಿಂದ ದೇಶದಲ್ಲಿ ಆರಂಭವಾಗಿರುವ ೩ ಕ್ರಿಮಿನಲ್ ಕಾನೂನುಗಳಲ್ಲಿ ಹಳೆಯ ‘ಭಾರತೀಯ ದಂಡಸಂಹಿತೆ’ಯ (‘ಇಂಡಿಯನ್ ಪೆನಲ್ ಕೋಡ್’ನ) ಸ್ಥಾನದಲ್ಲಿ ‘ಭಾರತೀಯ ನ್ಯಾಯ ಸಂಹಿತೆ’ ಬಂದಿದೆ. ಭಾರತೀಯ ದಂಡಸಂಹಿತೆಯೆಂದರೆ ಅಪರಾಧ ಮತ್ತು ಅದರ ಶಿಕ್ಷೆಯ ವಿವರಣೆ ಪತ್ರವಾಗಿದೆ. ಯಾವ ಶಿಕ್ಷೆಗಳಿವೆ ? ಯಾವ ಯಾವ ಕೃತಿಗಳಿಗೆ ಅಪರಾಧವೆನ್ನುತ್ತಾರೆ ? ಜಾಮೀನು ಎಂದರೇನು ? ಅದನ್ನು ಯಾವೆಲ್ಲ ಅಪರಾಧಗಳಲ್ಲಿ ಕೊಡಲಾಗುತ್ತದೆ ? ಅದರ ಹಿಂದೆ ಯಾವೆಲ್ಲ ಉದ್ದೇಶಗಳಿರುತ್ತವೆ ? ಅವಲೋಕನಾರ್ಹ ಹಾಗೂ ಅವಲೋಕನಾರ್ಹವಲ್ಲದ ಅಪರಾಧಗಳೆಂದರೇನು ? ಮತ್ತು ಯಾವ ಯಾವ ಅಪರಾಧಗಳಿಗೆ ಅವಲೋಕನಾರ್ಹ ಎಂದು ಹೇಳಲಾಗುತ್ತದೆ ? ಇವೆಲ್ಲವನ್ನು ‘ಭಾರತೀಯ ನ್ಯಾಯ ಸಂಹಿತೆ ೨೦೨೩’ರಲ್ಲಿ ವಿಶ್ಲೇಷಿಸಲಾಗಿದೆ. ಭಾರತೀಯ ದಂಡ ಸಂಹಿತೆಯ ಪ್ರವಾಸ ‘ಭಾರತೀಯ ನ್ಯಾಯ ಸಂಹಿತೆ’ಯಲ್ಲಿ ಬಂದು ಮುಕ್ತಾಯವಾಯಿತು.
೧. ಭಾರತೀಯ ನ್ಯಾಯ ಸಂಹಿತೆಯಲ್ಲಿ ಮಾಡಲಾಗಿರುವ ಬದಲಾವಣೆಗಳು
ಭಾರತೀಯ ನ್ಯಾಯಸಂಹಿತೆಯು ಭಾರತೀಯ ದಂಡ ಸಂಹಿತೆಯ ಸುಧಾರಿತ ಆವೃತ್ತಿಯಾಗಿದೆ. ಇದರಲ್ಲಿ ಅನೇಕ ಸುಧಾರಣೆಗಳನ್ನು ಮಾಡಲಾಗಿದೆ. ಇದರಲ್ಲಿ ಕೆಲವು ಕಾಲಬಾಹ್ಯ ಅಪರಾಧಗಳನ್ನು ರದ್ದುಪಡಿಸಲಾಗಿದೆ. ಕೆಲವನ್ನು ಸುಧಾರಣೆ ಮಾಡಲಾಗಿದೆ ಮತ್ತು ಕೆಲವನ್ನು ಹೊಸತಾಗಿ ಸಮಾವೇಶಗೊಳಿಸಲಾಗಿದೆ. ‘ಸೆಡಿಶನ್’ ಎಂದರೆ ರಾಜದ್ರೋಹ’ ಈ ಅಪರಾಧವನ್ನು ಭಾರತೀಯ ನ್ಯಾಯ ಸಂಹಿತೆಯಿಂದ ತೆಗೆಯಲಾಗಿದೆ. ಅದರ ಬದಲು ‘ರಾಷ್ಟ್ರದ್ರೋಹ’ ಈ ಅಪರಾಧವನ್ನು ಸಮಾವೇಶಗೊಳಿಸಲಾಗಿದೆ. ಇದರಲ್ಲಿ ರಾಷ್ಟ್ರವಿರೋಧಿ ಕೃತ್ಯಗಳು ಒಳಗೊಂಡಿವೆ. ಭಯೋತ್ಪಾದಕ ಕೃತ್ಯಗಳು, ಆಕ್ರಮಣಗಳು, ಭಯೋತ್ಪಾದನೆಗೆ ಸಹಾಯ, ಒಳಸಂಚು ಮಾಡುವುದು, ಇಂತಹ ದೇಶದ ಸಾರ್ವಭೌಮತ್ವಕ್ಕೆ ಅಡ್ಡಿಪಡಿಸುವ ಯಾವುದೇ ಕೃತಿಯನ್ನು ‘ಭಯೋತ್ಪಾದಕ ಅಪರಾಧ’, ಎಂದು ಸಂಬೋಧಿಸಲಾಗುತ್ತದೆ. ಆದ್ದರಿಂದ ಈಗ ಇದನ್ನು ಅಪರಾಧವೆಂದು ನಿರ್ಧರಿಸಲಾಗಿದೆ ಹಾಗೂ ಹೊಸ ಕಾನೂನಿನಲ್ಲಿ ಫಿರ್ಯಾದಿಯ ದೂರನ್ನು ಯಾವುದೇ ಪೊಲೀಸ್ ಉಪನಿರೀಕ್ಷಕರೂ ತೆಗೆದುಕೊಳ್ಳಬಹುದು.
೨. ಆತ್ಮಹತ್ಯೆಯ ಪ್ರಯತ್ನವನ್ನು ಅಪರಾಧವೆಂದು ಪರಿಗಣಿಸುವುದು ಮತ್ತು ಪರಿಗಣಿಸದಿರುವುದರ ಹಿಂದಿನ ಕಾರಣಮೀಮಾಂಸೆ
ಇನ್ನೊಂದು ಅಪರಾಧ ನಿಜವಾಗಿ ನೋಡಿದರೆ ಅದು ತಾಂತ್ರಿಕ ದೃಷ್ಟಿಯಿಂದ ಯಾವತ್ತೂ ಅಪರಾಧವಾಗಿರಲಿಲ್ಲ, ಅದೆಂದರೆ ‘ಆತ್ಮಹತ್ಯೆಯ ಪ್ರಯತ್ನ’ ! ಈಗ ಇದು ಅಪರಾಧವಾಗಿಲ್ಲ ಹಾಗೂ ಭಾರತೀಯ ಕಾನೂನಿನ ಪ್ರಕಾರ ಇದನ್ನೂ ವರ್ಗೀಕರಣ ಮಾಡಲಾಗಿದೆ. ಯಾವುದೇ ವ್ಯಕ್ತಿ ಯಾವಾಗ ಪರಿಸ್ಥಿತಿಗೆ ಶರಣಾಗಿ ಆತ್ಮಹತ್ಯೆಯ ಮೂಲಕ ಸಾವನ್ನಪ್ಪಲು ಪ್ರಯತ್ನಿಸುತ್ತಾನೆಯೋ ಆಗ ಈ ಕೃತಿ ತುಂಬಾ ಗಂಭೀರವಾಗಿರುತ್ತದೆ, ಅದನ್ನು ಕಾನೂನಿನ ಕನ್ನಡಕದಿಂದ ನೋಡದೆ ಮಾನವೀಯತೆಯ ಮೂಲಕ ನೋಡಬೇಕಾಗುವುದು. ಭಾರತೀಯ ದಂಡಸಂಹಿತೆಯಲ್ಲಿನ ಕಲಮ್ ೩೦೯ ಇದು ‘ಆತ್ಮಹತ್ಯೆಯ ಪ್ರಯತ್ನವನ್ನು ಅಪರಾಧವೆಂದು ಹೇಳಬೇಕು’, ಎಂದು ಹೇಳುತ್ತದೆ; ಆದರೆ ಇದರಲ್ಲಿ ವರ್ಗೀಕರಣ ಮಾಡಲಾಗಿದೆ.
ಒಬ್ಬ ವ್ಯಕ್ತಿ ತನ್ನ ಜೀವನವನ್ನು ವೈಯಕ್ತಿಕ ಕಾರಣ, ವೈಫಲ್ಯ, ನಿರಾಶೆ, ಭಯ ಇತ್ಯಾದಿಗಳಿಂದ ಮುಗಿಸಲು ನಿರ್ಣಯ ತೆಗೆದುಕೊಂಡರೆ ಹಾಗೂ ಅದಕ್ಕಾಗಿ ಪ್ರಯತ್ನಿಸಿದರೆ, ಈಗ ಅದು ಅಪರಾಧವಾಗುವುದಿಲ್ಲ. ಆತ್ಮಹತ್ಯೆಯ ಪ್ರಯತ್ನ ಹಾಗೂ ಪ್ರತ್ಯಕ್ಷ ಆತ್ಮಹತ್ಯೆ ಇವು ಬೇರೆ ಬೇರೆಯಾಗಿವೆ. ಹೊಸ ಕಾನೂನಿಗನುಸಾರ ಯಾವುದೇ ವ್ಯಕ್ತಿ ಸರಕಾರಿ ಕಾರ್ಯಾಲಯಕ್ಕೆ ಹೋಗಿ ಸರಕಾರಿ ಅಧಿಕಾರಿಯ ಮೇಲೆ ಒತ್ತಡ ತರಲು ಆತ್ಮಹತ್ಯೆಗೆ ಪ್ರಯತ್ನಿಸಿದರೆ ಅದು ಅಪರಾಧವಾಗುತ್ತದೆ. ಕೇವಲ ಒತ್ತಡತಂತ್ರವೆಂದು ಈ ರೀತಿ ಮಾಡಿದರೆ, ಅದು ಅಪರಾಧವಾಗುತ್ತದೆ. ಒಂದು ವೇಳೆ ಯಾವುದೇ ವ್ಯಕ್ತಿ ಇಂತಹ ಪ್ರಯತ್ನ ಮಾಡಿದರೆ, ಇದರ ಬಗ್ಗೆ ತನಿಖೆಯಾಗುತ್ತದೆ. ಅವನ ಆತ್ಮಹತ್ಯೆಗೆ ಇಂತಿಂತಹ ವ್ಯಕ್ತಿಯೇ ಕಾರಣವೆಂದು ಅವನು ಬರೆದಿಟ್ಟಿದ್ದರೆ, ಇಂತಹ ವ್ಯಕ್ತಿಯ ಕಿರುಕುಳವನ್ನು ಸಹಿಸಲಾರದೆ ಅವನು ಆತ್ಮಹತ್ಯೆಗೆ ಪ್ರಯತ್ನಿಸಿದರೆ’, ಅದರ ಬಗ್ಗೆ ಕಾರ್ಯಾಚರಣೆಯಾಗುತ್ತದೆ; ಅದೊಂದು ಕಾನೂನು ಪ್ರಕ್ರಿಯೆಯಾಗಿದೆ. ಇದರಲ್ಲಿ ಸಿಲುಕಿಕೊಳ್ಳುವ ಸಾಧ್ಯತೆಯಿದೆ. ಇದಕ್ಕೆ ‘ಅಟೆಂಪ್ಟ್ ಟು ಸುಸೈಡ್’ (ಆತ್ಮಹತ್ಯೆಯ ಪ್ರಯತ್ನ) ಈ ಕಲಮ್‌ನಡಿ ಕಾರ್ಯಾಚರಣೆಯಾಗಬಹುದು. ಉದಾಹರಣೆಗೆ ಅತ್ತೆ-ಮಾವನ ಹಿಂಸೆಯಿಂದ ಸೊಸೆ ಇಂತಹ ಪ್ರಯತ್ನ ಮಾಡಿದರೆ ಹಾಗೂ ಅವಳು ಮುಂದಿನಂತೆ ಬರೆದಿಟ್ಟಿದ್ದರೆ, ‘ನನ್ನ ಜೀವಕ್ಕೆ ಏನಾದರೂ ಹೆಚ್ಚು ಕಡಿಮೆಯಾದರೆ’ ಸಂಬಂಧಪಟ್ಟವರ ಮೇಲೆ ಕ್ರಮತೆಗೆದುಕೊಳ್ಳಿ.’ ಹಾಗೇನಾದರೂ ಆದರೆ ಆ ವ್ಯಕ್ತಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವ ಸಾಧ್ಯತೆಯಿದೆ. ಆದ್ದರಿಂದ ಎಲ್ಲರೂ ಜಾಗರೂಕರಾಗಿರಬೇಕು.
ತನ್ನ ಜೀವಕ್ಕೆ ಒಳಿತುಕೆಡುಕುಗಳು, ‘ಬ್ಲ್ಯಾಕ್‌ಮೇಲಿಂಗ್’ ಕೃತ್ಯವಾಗಬಾರದೆಂದು ಕಾನೂನುತಜ್ಞರು ಈ ಕಾಳಜಿಯನ್ನು ತೆಗೆದುಕೊಂಡಿದ್ದಾರೆ. ಇಲ್ಲದಿದ್ದರೆ ಯಾರಾದರೂ ಸೇಡು ತೀರಿಸಿಕೊಳ್ಳಲು ಯಾರನ್ನಾದರೂ ಸಿಲುಕಿಸಬಹುದು. ಕೆಲವೊಮ್ಮೆ ಯಾವುದಾದರೂ ಆತ್ಮಹತ್ಯೆಯ ಪ್ರಯತ್ನ ನಿಜವಾದ ಹತ್ಯೆಯೂ ಆಗಿರಬಹುದು. ಆತ್ಮಹತ್ಯೆಯ ಪ್ರಯತ್ನದ ನಂತರ ಆ ವ್ಯಕ್ತಿ ‘ಮೂರ್ಛೆ ಹೋಗಿದ್ದರೆ’ ಅದರ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳುವುದು ತುಂಬಾ ಕಷ್ಟವಾಗುತ್ತದೆ; ಏಕೆಂದರೆ ಸತ್ಯ ಏನೆಂದು ಆ ವ್ಯಕ್ತಿ ಮಾತ್ರ ಹೇಳಬಹುದು.
೩. ಭಾರತೀಯ ನ್ಯಾಯ ಸಂಹಿತೆಯಲ್ಲಿ ಸೂಚಿಸಿದ ಉಪಾಯ
ಸದ್ಯ ಹೀಗೆ ತಿಳಿದುಕೊಳ್ಳೋಣ, ನೈಸರ್ಗಿಕವಾಗಿ ಯಾರಾದರೂ ಆತ್ಮಹತ್ಯೆಗೆ ಪ್ರಯತ್ನಿಸಿದರೆ ಮತ್ತು ಆ ವ್ಯಕ್ತಿ ಬದುಕುಳಿದರೆ ನಂತರ ಅವನು ಇದಕ್ಕೆ ಯಾರೂ ಹೊಣೆಯಲ್ಲ, ಎಂದು ಹೇಳಿದರೆ ಅದು ಅಪರಾಧವಾಗುವುದಿಲ್ಲ. ಇದಕ್ಕೆ ಅಪರಾಧದ ದೃಷ್ಟಿಕೋನದಿಂದ ಅನೇಕ ಅಂಗಗಳಿವೆ. ಇಲ್ಲದಿದ್ದರೆ ಯಾವ ವ್ಯಕ್ತಿಗೆ ತನ್ನ ಜೀವನವನ್ನು ಮುಗಿಸಲಿಕ್ಕಿತ್ತೊ, ಆ ವ್ಯಕ್ತಿ ಮೊದಲೇ ತೊಂದರೆಯಲ್ಲಿರುವಾಗ ಅವನಿಗೆ ಇನ್ನೂ ಶಿಕ್ಷೆ ನೀಡಿ ಅವನ ಜೀವಕ್ಕೆ ಇನ್ನೂ ತೊಂದರೆ ಕೊಡುವುದೆಂದರೆ, ಇದು ಮಾನವೀಯತೆಯ ವಿರುದ್ಧ ಆಗುತ್ತದೆ. ಆದ್ದರಿಂದ ಆ ವ್ಯಕ್ತಿಗೆ ಯೋಗ್ಯ ರೀತಿಯಲ್ಲಿ ಬುದ್ಧಿವಾದ ಹೇಳಿ ಮಾನಸಿಕ ಉಪಚಾರವನ್ನು ಹೇಳಲಾಗಿದೆ.’
– ನ್ಯಾಯವಾದಿ ಶೈಲೇಶ ಕುಲಕರ್ಣಿ, ಕುರ್ಟಿ ಫೋಂಡಾ ಗೋವಾ.