ಮಧ್ಯಪ್ರದೇಶದ ಮುಖ್ಯಮಂತ್ರಿ ಡಾ ಮೋಹನ್ ಯಾದವ್ ಅವರ ದೊಡ್ಡ ಘೋಷಣೆ
ಭೋಪಾಲ್ (ಮಧ್ಯಪ್ರದೇಶ) – ಧಾರ್ಮಿಕ ಸ್ವಾತಂತ್ರ್ಯ ಕಾನೂನಿನ ಮೂಲಕ ಮತಾಂತರ ಮಾಡುವವರಿಗೆ ಗಲ್ಲು ಶಿಕ್ಷೆ ನೀಡುವ ಅವಕಾಶ ಮಾಡುತ್ತಿದ್ದೇವೆ ಎಂದು ಮಧ್ಯಪ್ರದೇಶದ ಭಾಜಪ ಸರಕಾರದ ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಘೋಷಿಸಿದ್ದಾರೆ. ಅವರು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಅವರು ಮಾತನಾಡಿ, ಮುಗ್ಧ ಹೆಣ್ಣು ಮಕ್ಕಳನ್ನು ಚುಡಾಯಿಸುವ ಪ್ರಕರಣಗಳಲ್ಲಿ ಸರಕಾರವು ಅತ್ಯಂತ ಕಠಿಣ ನೀತಿ ಅನುಸರಿಸುತ್ತಿದೆ. ಈ ಸಂಬಂಧ ಮರಣದಂಡನೆಯ ವ್ಯವಸ್ಥೆಯನ್ನು ಮಾಡಲಾಗಿದೆ. ಇದರಿಂದ ಮುಗ್ಧ ಜನರ ಮೇಲೆ ಬಲವಂತವಾಗಿ ಅಥವಾ ಆಮಿಷವೊಡ್ಡಿ ದೌರ್ಜನ್ಯ ಮಾಡುವವರಿಗೆ ಬದುಕುವ ಹಕ್ಕನ್ನು ನೀಡಬಾರದು. ಇದರ ಜೊತೆಗೆ ಧಾರ್ಮಿಕ ಸ್ವಾತಂತ್ರ್ಯ ಕಾನೂನಿನಲ್ಲಿ ಬದಲಾವಣೆ ಮಾಡಿ ಜನರ ಮತಾಂತರ ಮಾಡುವವರಿಗೆ ಮರಣದಂಡನೆಯ ವ್ಯವಸ್ಥೆ ಮಾಡಲಾಗುವುದು. ಈ ನಿರ್ಧಾರದಿಂದ ರಾಜ್ಯದ ಮತಾಂತರ ಘಟನೆಗಳ ಮೇಲೆ ಕಟ್ಟುನಿಟ್ಟಿನ ನಿಗಾ ಇಡಲಾಗುವುದು. ಯಾವುದೇ ಪರಿಸ್ಥಿತಿಯಲ್ಲಿ ಮತಾಂತರ ಅಥವಾ ದುರ್ವರ್ತನೆಗೆ ಸಮಾಜದಲ್ಲಿ ಸ್ಥಾನವಿರುವುದಿಲ್ಲ. ಈ ಹೇಯ ಕೃತ್ಯಗಳಿಗೆ ಪ್ರೋತ್ಸಾಹ ನೀಡುವವರೊಂದಿಗೆ ಸರಕಾರ ಕಠಿಣವಾಗಿ ವರ್ತಿಸಲಿದೆ, ಎಂದು ಹೇಳಿದರು.
ಸಂಪಾದಕೀಯ ನಿಲುವುಪ್ರತಿಯೊಂದು ರಾಜ್ಯವೂ ಈ ರೀತಿಯ ಕಾನೂನು ಮಾಡುವ ಬದಲು ಕೇಂದ್ರ ಸರಕಾರವೇ ಈ ಕಾನೂನನ್ನು ಇಡೀ ದೇಶಕ್ಕೆ ಮಾಡುವುದು ಅತ್ಯಗತ್ಯವಾಗಿದೆ. ಇದಕ್ಕಾಗಿ ಈಗ ಹಿಂದೂಗಳೂ ಒತ್ತಡ ಹೇರುವುದು ಅಗತ್ಯವಾಗಿದೆ! |