ಭಾರತ ಭಯೋತ್ಪಾದನೆಯ ವಿರುದ್ಧ ಕಠೋರ ನಿಲುವನ್ನು ಅವಲಂಬಿಸಬೇಕು !

ಲೆಬನೇನ್‌ನ ಮೇಲೆ ಇಸ್ರೈಲ್‌ ಮಾಡಿದ ವಿನಾಶಕಾರಿ ಬಾಂಬ್‌ಸ್ಫೋಟದ ನಂತರ ಭಯೋತ್ಪಾದಕ ಸಂಘಟನೆ ‘ಹಿಜ್ಬುಲ್ಲಾ’ದ ಭಯೋತ್ಪಾದಕರು ಮೊಣಕಾಲೂರಿದಿದ್ದಾರೆ. ಅವರು ಈಗ ಮಾನವೀಯತೆಯ ಆಧಾರದಲ್ಲಿ ದಯೆ ತೋರಿಸಬೇಕೆಂದು ಮೊರೆಯಿಡುತ್ತಿದ್ದಾರೆ; ಆದರೆ ಇಸ್ರೈಲ್‌ ಮೇಲೆ ೮ ಸಾವಿರ ಪ್ರಾಣಘಾತಕ ಶಸ್ತ್ರಗಳ ಆಘಾತ ಮಾಡಿದ ನಂತರ ಈ ಬದಲಾವಣೆಯಾಗಿದೆ. ಈ ಹಿಂದೆ ೨೦೦೬ ರಲ್ಲಿ ಇಸ್ರೈಲ್‌ ವಿರುದ್ಧ ನಡೆದ ಭೀಕರ ಯುದ್ಧದಲ್ಲಿ ಲೆಬನಾನ್‌ ಇಸ್ರೈಲ್‌ ಮುಂದೆ ಶರಣಾಗಿತ್ತು ಹಾಗೂ ಹಿಜ್ಬುಲ್ಲಾದಿಂದ ‘ಅದು ಇಸ್ರೈಲ್‌ ವಿರುದ್ಧ ಯಾವುದೇ ರೀತಿಯ ಶತ್ರುತ್ವವನ್ನು ತೋರಿಸುವುದಿಲ್ಲ ಹಾಗೂ ಭವಿಷ್ಯದಲ್ಲಿ ಶಾಂತಿಯಿಂದ ಇರುವೆವು’, ಎಂಬ ಆಶ್ವಾಸನೆ ಪಡೆದುಕೊಂಡಿತ್ತು. ಅನಂತರ ಲೆಬನಾನ್‌ ಅವರೊಂದಿಗೆ ಉದಾರತೆಯಿಂದ ಹಾಗೂ ದಯೆಯಿಂದ ವರ್ತಿಸುತ್ತಿತ್ತು; ಆದರೆ ೨೦೦೬ ರ ದಾರುಣ ಸೋಲಿನ ಅವಮಾನದಿಂದ ಚೇತರಿಸಿಕೊಂಡ ನಂತರ ಹಿಜ್ಬುಲ್ಲಾ ತನ್ನ ನಿಜ ಸ್ವರೂಪವನ್ನು ತೋರಿಸಿ ಇರಾನ್‌ನ ಕೈಗೊಂಬೆಯಾಗಿರುವ ‘ಹೌತಿ’ ಮತ್ತು ‘ಹಮಾಸ’ ನಂತಹ ಜಿಹಾದಿ ಸಂಘಟನೆಗಳೊಂದಿಗೆ ಸೇರಿ ಇಸ್ರೈಲ್‌ ವಿರುದ್ಧ ಪುನಃ ದೊಣ್ಣೆ ಬೀಸಿತು. ಲೆಬನಾನ್‌ನ ನಿಷ್ಕ್ರಿಯ ಸರಕಾರದ ಹಾಗೆಯೆ, ಯೆಮೆನ್‌ ಮತ್ತು ಪ್ಯಾಲೆಸ್ಟೆನ್‌ನಲ್ಲಿನ ಸರಕಾರಗಳು ತಮ್ಮ ಭಯೋತ್ಪಾದಕ ಸಂಘಟನೆಗಳು ಮಾಡಿದ ಹಿಂಸಾಚಾರದ ನಗ್ನ ನೃತ್ಯದ ಸಾಕ್ಷಿದಾರರಾದರು, ಇದರ ಪರಿಣಾಮ ಈಗ ಎಲ್ಲರ ಮುಂದಿದೆ.

೧. ಭಯೋತ್ಪಾದನೆ ವಿರುದ್ಧದ ಇಸ್ರೈಲ್‌ ನೀತಿ ಭಾರತಕ್ಕೆ ಮಾರ್ಗದರ್ಶಕ

ನ್ಯಾಯವಾದಿ (ಡಾ.) ಎಚ್‌.ಸಿ. ಉಪಾಧ್ಯಾಯ

ಇಸ್ರೈಲ್‌ ವಿರುದ್ಧ ಹಮಾಸ, ಹೌತಿ ಹಾಗೂ ಹಿಜ್ಬುಲ್ಲಾ ಈ ‘೩ ಎಚ್’ ಜಿಹಾದಿ ಸಂಘಟನೆಗಳಲ್ಲಿ ನಡೆಯುತ್ತಿರುವ ಯುದ್ಧದ ವಿಶ್ಲೇಷಣೆ ನಮ್ಮ ದೇಶಕ್ಕೆ ಮಾರ್ಗದರ್ಶಕವಾಗಲಿಕ್ಕಿದೆ; ಏಕೆಂದರೆ ಭಾರತದ ಸ್ಥಿತಿ ಇಸ್ರೈಲ್‌ನಂತಿದೆ. ಆದರೂ ಇಸ್ರೈಲ್‌ ಮತ್ತು ಭಾರತದ ನಡುವೆ ಭೂಮ್ಯಾಕಾಶದಷ್ಟು ವ್ಯತ್ಯಾಸವಿದೆ. ಇಸ್ರೈಲ್‌ ಸೈನ್ಯದ ದೃಷ್ಟಿಯಿಂದ ನಮಗಿಂತ ತುಂಬಾ ಪ್ರಬಲವಾಗಿದೆ. ಭಾರತದಲ್ಲಿ ಯುದ್ಧ ಸಿದ್ಧತೆ ಇದ್ದರೂ ನಾವು ಅಷ್ಟು ಸುಸಜ್ಜಿತವಾಗಿಲ್ಲ. ‘೩ ಎಚ್’ ಎಂಬ ಹೆಸರಿನ ಜಿಹಾದಿಗಳನ್ನು ನಾವು ಮುಗಿಸಿ ಬಿಡುವೆವು’, ಎಂದು ಹೇಳುವ ಧೈರ್ಯ ಇಸ್ರೈಲ್‌ಗೆ ಇದೆ; ಆದರೆ ದುರದೃಷ್ಠವಶಾತ್‌ ನಮ್ಮಲ್ಲಿ ಆ ದೃಢನಿಶ್ಚಯದ ಕೊರತೆಯಿದೆ. ಇನ್ನೊಂದು ವಿಷಯವೆಂದರೆ, ಇಸ್ರೈಲ್‌ ಹೆಚ್ಚು ಕಡಿಮೆ ಎಲ್ಲ ನಾಗರಿಕರು ಯುದ್ಧದ ತರಬೇತಿ ಹೊಂದಿರುವ ಸೈನಿಕರಾಗಿದ್ದಾರೆ, ತದ್ವಿರುದ್ಧ ನಾವು ಕೇವಲ ಸಮೂಹದಲ್ಲಿ ಶಾಂತಿ ಗೀತೆ ಹಾಡುತ್ತೇವೆ.

೨. ಎಲ್ಲಿ ಯುದ್ಧಸ್ಥಿತಿಯನ್ನು ಬೆಂಬಲಿಸುವ ಇಸ್ರೈಲ್‌ನ ವಿಪಕ್ಷ ಹಾಗೂ ಎಲ್ಲಿ ದೇಶವಿರೋಧಿ ಕುತಂತ್ರ ಮಾಡುವ ಭಾರತದ ವಿಪಕ್ಷ !

ಇನ್ನೊಂದು ಮಹತ್ವದ ಅಂಶವೆಂದರೆ, ಇಸ್ರೈಲ್‌ನ ವಿಪಕ್ಷವು ಜವಾಬ್ದಾರಿಯಿಂದ ವರ್ತಿಸುತ್ತಿದೆ ಹಾಗೂ ಇಂದು ಅದು ಯುದ್ಧಮಂತ್ರಿಮಂಡಲದ ಭಾಗವಾಗಿದೆ. ಈ ಯುದ್ಧದ ವಿಷಯದಲ್ಲಿ ಮಂತ್ರಿಮಂಡಲವು ಪ್ರಧಾನಮಂತ್ರಿ ಬೆಂಜಾಮಿನ್‌ ನೆತಾನ್ಯಾಹೂ ಇವರ ಯುದ್ಧದ ವ್ಯವಸ್ಥಾಪನೆಯನ್ನು ಮನಃಪೂರ್ವಕ ಬೆಂಬಲಿಸುತ್ತದೆ. ತದ್ವಿರುದ್ಧ ಭಾರತದಲ್ಲಿನ ವಿಪಕ್ಷಗಳು ಅಧಿಕಾರಾರೂಢ ಪಕ್ಷದ ನಿಜವಾದ ಶತ್ರುವಿನ ಹಾಗೆ ವರ್ತಿಸುತ್ತಾ ದೇಶವಿರೋಧಿ ಕೃತ್ಯಗಳನ್ನು ಮಾಡುತ್ತಿವೆ. ಈ ವಿಪಕ್ಷಗಳ ಮುಖಂಡರು ಬಹಿರಂಗವಾಗಿ ಸಮಾಜದಲ್ಲಿ ಕೋಮುವಾದ ಹಾಗೂ ಪ್ರಾದೇಶಿಕ ಸಮಸ್ಯೆ ನಿರ್ಮಾಣವಾಗುವಂತಹ ಹೇಳಿಕೆಗಳನ್ನು ನೀಡುತ್ತಾರೆ, ಅವರಲ್ಲಿ ಕೆಲವರು ವಿದೇಶ ಪ್ರವಾಸದಲ್ಲಿದ್ದು ಅಲ್ಲಿ ಭಾರತ ಹಾಗೂ ಅದರ ಸಾಂಸ್ಕೃತಿಕ ಹಾಗೂ ಸಾಮಾಜಿಕ ಅಧಿಕಾರದ ವಿಷಯದಲ್ಲಿ ದ್ವೇಷ ಕಾರುತ್ತಿದ್ದಾರೆ. ದುರದೃಷ್ಟವಶಾತ್‌ ವಿವಿಧ ರೀತಿಯ ಜಿಹಾದ್, ವಿದೇಶಿಯರ ದೊಡ್ಡ ಪ್ರಮಾಣದ ನುಸುಳುವಿಕೆ ಹಾಗೂ ಭಯೋತ್ಪಾದನೆಯಂತಹ ಎಲ್ಲಕ್ಕಿಂತ ಗಂಭೀರ ಸಮಸ್ಯೆಗಳನ್ನು ನಿವಾರಿಸುವ ಹೊಣೆಯನ್ನು ಸರಕಾರವೇ ವಹಿಸಿಕೊಳ್ಳುತ್ತದೆ. ಜನರಲ್ಲಿ ಯಾವುದೇ ಶಸ್ತ್ರಗಳಿರುವುದಿಲ್ಲ ಅಥವಾ ಸಶಸ್ತ್ರ ಗುಂಪುಗಳ ಆಕ್ರಮಣಗಳನ್ನು ಎದುರಿಸಲು ಯಾವುದೇ ತರಬೇತಿ ಇರುವುದಿಲ್ಲ. ಆದ್ದರಿಂದ ಜನಸಾಮಾನ್ಯರು ಇಂತಹ ಹಿಂಸೆಗಳಿಗೆ ಬಲಿಯಾಗುತ್ತಾರೆ.

೩. ಸಂಕಟಕಾಲದಲ್ಲಿ ತಮ್ಮ ರಕ್ಷಣೆಯನ್ನು ಮಾಡಿಕೊಳ್ಳಲು ಒಗ್ಗಟ್ಟಾಗಿ ಧ್ವನಿಯೆತ್ತುವ ಅವಶ್ಯಕತೆಯಿದೆ !

ಭಾರತೀಯ ಸಂವಿಧಾನದ ಒಳ್ಳೆಯ ವೈಶಿಷ್ಟ್ಯಗಳು ಮತ್ತು ಕೊರತೆಗಳ ಜೊತೆಗೆ ಪ್ರಾಮುಖ್ಯವಾಗಿ ಶಾಸಕಾಂಗ, ಆಡಳಿತ ಹಾಗೂ ನ್ಯಾಯಾಂಗ ಸಂಸ್ಥೆ ಈ ೩ ಸಂಸ್ಥೆಗಳು ದೇಶದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯ ಜೀವನ ಮತ್ತು ಆಸ್ತಿಗಳ ರಕ್ಷಣೆ ಮಾಡಬೇಕೆಂಬುದು ಕಡ್ಡಾಯವಾಗಿದೆ. ಆದ್ದರಿಂದ ಈ ಸಂಸ್ಥೆಗಳು ಜನಸಾಮಾನ್ಯರ ಮೂಲಭೂತ ಅಧಿಕಾರಗಳ ರಕ್ಷಣೆ ಮಾಡಬೇಕು. ಇನ್ನಿತರ ವಿಷಯಗಳನ್ನು ನಿರೀಕ್ಷಣೆ ಮಾಡಬಹುದು; ಆದರೆ ಜೀವನ ಹಾಗೂ ಆಸ್ತಿಗಳ ರಕ್ಷಣೆ ಮಾಡಲು ನಿರೀಕ್ಷಣೆ ಮಾಡಲು ಸಾಧ್ಯವಿಲ್ಲ. ಈ ವಿಷಯದಲ್ಲಿ ನಾವು ಇಸ್ರೈಲ್‌ನಿಂದ ಪಾಠ ಕಲಿಯಬೇಕು. ಮೋಪಲಾದ ಹಿಂದೂ ನರಸಂಹಾರದಿಂದ ಹಿಡಿದು ವಿಭಜನೆಯ ನಂತರದ ಸಾಮೂಹಿಕ ಹತ್ಯೆಗಳ ವರೆಗೆ ಹಾಗೂ ಅನಂತರ ನಮ್ಮ ಪ್ರಜಾಪ್ರಭುತ್ವದ ಈ ಮೇಲಿನ ೩ ಅಂಗಗಳ ಉದಾಸೀನ ವೃತ್ತಿಯಿಂದ ಪ್ರಾಮುಖ್ಯವಾಗಿ ಹಿಂದೂಗಳು ಅಪಾರ ಕಷ್ಟನಷ್ಟಗಳನ್ನು ಎದುರಿಸಬೇಕಾಗಿದೆ. ಈ ೩ ಸಂವಿಧಾನಾತ್ಮಕ ಅಂಗಗಳ ಸಹಾಯದ ಪರಿವೆಯಿಲ್ಲದೆ ಈಗ ಭಾರತೀಯರು ಒಗ್ಗಟ್ಟಾಗಿ ಧ್ವನಿಯೆತ್ತಿ ಸಂಕಟಕಾಲದಲ್ಲಿ ತಮ್ಮನ್ನು ತಾವೆ ರಕ್ಷಿಸಿಕೊಳ್ಳುವ ಕಾಲ ಬಂದಿದೆ !

– ನ್ಯಾಯವಾದಿ (ಡಾ.) ಎಚ್‌.ಸಿ. ಉಪಾಧ್ಯಾಯ, ಭಾಗ್ಯನಗರ ತೆಲಂಗಾಣ.