|
ವಾಷಿಂಗ್ಟನ್ (ಅಮೇರಿಕಾ) – ‘ಯುನೈಟೆಡ್ ಸ್ಟೇಟ್ಸ್ ಕಮಿಷನ್ ಆನ್ ಇಂಟರ್ನ್ಯಾಷನಲ್ ರಿಲಿಜಿಯಸ್ ಫ್ರೀಡಂ’ ಎಂದರೆ ಅಮೆರಿಕಾದ ಅಂತರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ಆಯೋಗವು ಮತ್ತೊಮ್ಮೆ ಹಿಂದೂ ದ್ವೇಷದ ವರದಿ ಪ್ರಸಾರ ಮಾಡಿದೆ. ‘ಇಂಡಿಯಾ ಕಂಟ್ರಿ ಅಪ್ಡೇಟ್’ ಹೆಸರಿನ ಈ ಸುಳ್ಳು ವರದಿಯಲ್ಲಿ ಭಾರತದಲ್ಲಿನ ಅಲ್ಪಸಂಖ್ಯಾತರ ಧಾರ್ಮಿಕ ಸ್ವಾತಂತ್ರ್ಯ ಅಪಾಯದಲ್ಲಿದೆ ಎಂದು ಹೇಳಲಾಗಿದೆ. ವರದಿಯಲ್ಲಿ, ಕೆಲವು ಸಂಘಟನೆಗಳಿಂದ (ಹಿಂದುತ್ವ ನಿಷ್ಠರಿಂದ) ಅಲ್ಪಸಂಖ್ಯಾತರನ್ನು ಥಳಿಸುವುದು, ಅವರ ಸಮೂಹದ ಮೂಲಕ ಹತ್ಯೆ (ಮಾಬ್ ಲೀಚಿಂಗ್), (ಮುಸಲ್ಮಾನ) ನಾಯಕರನ್ನು ಕಾರಣವಿಲ್ಲದೇ ಬಂಧಿಸುವುದು, ಅವರ ಮನೆಗಳು ಮತ್ತು ಪ್ರಾರ್ಥನಾ ಸ್ಥಳಗಳನ್ನು ನೆಲೆಸಮ ಮಾಡುವುದು. ಈ ಘಟನೆಗಳು ವಿಶೇಷವಾಗಿ ಧಾರ್ಮಿಕ ಸ್ವಾತಂತ್ರ್ಯದ ಗಂಭೀರ ಉಲ್ಲಂಘನೆ ಮಾಡುತ್ತಾವೆ. ಈ ಆಯೋಗ ಅಮೇರಿಕಾದ ವಿದೇಶಾಂಗ ನೀತಿಯ ಸಂದರ್ಭದಲ್ಲಿ ಅಮೆರಿಕ ಸರಕಾರಕ್ಕೆ ಶಿಫಾರಸ್ಸು ಮಾಡುತ್ತಿರುತ್ತದೆ.
“Religious freedom in India is under threat, and attacks on minorities are on the rise!” – The U.S. Commission on International Religious Freedom (#USCIRF) once again pushes its usual anti-Hindu narrative!
False accusations are made, claiming that minorities are being targeted… pic.twitter.com/4r7ieYyqu8
— Sanatan Prabhat (@SanatanPrabhat) October 4, 2024
ವರದಿಯಲ್ಲಿ ಆಯೋಗವು,
೧. ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಅವರ ಪ್ರಾರ್ಥನಾ ಸ್ಥಳಗಳು ಇವುಗಳ ಮೇಲೆ ಹಿಂಸಾತ್ಮಕ ದಾಳಿಗಳು ಪ್ರಚೋದಿಸುವುದಕ್ಕಾಗಿ ಸರಕಾರಿ ಅಧಿಕಾರಿಗಳಿಂದ ದ್ವೇಷಪೂರಿತ ಭಾಷಣ ಸಹಿತ ತಪ್ಪಾದ ಮಾಹಿತಿ ಪ್ರಸ್ತುತಪಡಿಸಲಾಗುತ್ತದೆ.
೨. ನಾಗರಿಕತ್ವ ಸುಧಾರಣೆ ಕಾನೂನು, ಸಮಾನ ನಾಗರಿಕ ಸಂಹಿತೆ ಹಾಗೂ ಅನೇಕ ರಾಜ್ಯಮಟ್ಟದಲ್ಲಿನ ಮತಾಂತರ ಮತ್ತು ಗೋಹತ್ಯೆ ವಿರೋಧಿ ಕಾನೂನು ಸಹಿತ ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿ ಮಾಡುವುದಕ್ಕಾಗಿ ಮತ್ತು ಅವರನ್ನು ಅವರ ಅಧಿಕಾರದಿಂದ ವಂಚಿಸುವುದಕ್ಕಾಗಿ ಭಾರತದಲ್ಲಿನ ಕಾನೂನಿನ ಚೌಕಟ್ಟಿನಲ್ಲಿ ಬದಲಾವಣೆ ಮಾಡಲಾಗಿದೆ. ಈ ಕ್ರಮ ಕೂಡ ಅದೇ ದಿಕ್ಕಿನತ್ತ ಹೋಗುತ್ತಿದೆ.
೩. ಇದರಿಂದ ಆಯೋಗ ಅಮೇರಿಕಾದ ವಿದೇಶಾಂಗ ಸಚಿವಾಲಯಕ್ಕೆ ಶಿಫಾರಸು ಮಾಡುತ್ತಾ, ಅದು ಭಾರತಕ್ಕೆ ‘ವಿಶೇಷ ಆತಂಕದ ದೇಶ’ ಎಂದು ಘೋಷಿಸಬೇಕು. ಹಾಗೂ ಭಾರತ ಇದು ಧಾರ್ಮಿಕ ಸ್ವಾತಂತ್ರ್ಯದ ವ್ಯವಸ್ಥಿತ ಮತ್ತು ಗಂಭೀರ ಉಲ್ಲಂಘನೆಯಲ್ಲಿ ತೊಡಗಿದೆ, ಈ ದೃಷ್ಟಿಯಿಂದಲೇ ಅದನ್ನು ನೋಡಬೇಕು ಎಂದು ಹೇಳಿದೆ.
ನಾವು ಈ ವರದಿಯನ್ನು ನಿರಾಕರಿಸುತ್ತೇವೆ ! – ಭಾರತ
ನವ ದೆಹಲಿ – ಯು.ಎಸ್.ಸಿ.ಐ.ಆರ್.ಎಫ್. ಇದು ಧಾರ್ಮಿಕ ಪ್ರಕರಣಗಳ ಮೇಲೆ ಅಮೆರಿಕಿ ಆಯೋಗ ನಿಷ್ಪಕ್ಷವಾಗಿ ಇಲ್ಲ. ಭಾರತದ ಕುರಿತು ತಪ್ಪಾದ ಮಾಹಿತಿಗಳನ್ನು ಮಂಡಿಸಿ ಈ ಆಯೋಗವು ನಮ್ಮ ಪ್ರತಿಮೆಯನ್ನು ಕಳಂಕಿತಗೊಳಿಸಿದೆ. ನಾವು ಅದರ ವರದಿ ನಿರಾಕರಿಸುತ್ತೇವೆ, ಎಂದು ಭಾರತದ ವಿದೇಶಾಂಗ ಸಚಿವಾಲಯವು ಪ್ರತಿಕ್ರಿಯೆ ವ್ಯಕ್ತಪಡಿಸಿದೆ.
ವಿದೇಶಾಂಗ ಸಚಿವಾಲಯದ ವಕ್ತಾರರು ರಣಧೀರ ಜಯಸ್ವಾನ್ ಇವರು, ಆಯೋಗವು ನೀತಿಯ ಆಧಾರಿತ ವರದಿ ಪ್ರಸಾರ ಮಾಡುವುದನ್ನು ತಪ್ಪಿಸಬೇಕು. ಅದು ಅದರ ಸಮಯ ಅಮೆರಿಕದಲ್ಲಿನ ಮಾನವೀಯ ಹಕ್ಕುಗಳಿಗೆ ಸಂಬಂಧಿತ ಅಂಶಗಳು ಮಂಡಿಸುವುದಕ್ಕಾಗಿ ಉಪಯೋಗಿಸಬೇಕು ಎಂದು ಹೇಳಿದರು.
ಸಂಪಾದಕೀಯ ನಿಲುವು
|