ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಮತ್ತೊಮ್ಮೆ ಭಾರತದಿಂದ ಛೀಮಾರಿ
ನ್ಯೂಯಾರ್ಕ್ (ಅಮೇರಿಕಾ) – ಪಾಕಿಸ್ತಾನವು ಇಡೀ ಜಗತ್ತಿಗೆ ಅಪಾಯಕಾರಿಯಾಗಿದೆ. ಜಗತ್ತಿನ ಭದ್ರತೆಗೆ ಇದು ದೊಡ್ಡ ಸವಾಲಾಗಿದೆ. ಗಡಿಯಾಚೆಯಿಂದ ಕುಕೃತ್ಯಗಳನ್ನು ನಡೆಸುವುದು, ಅದರ ಒಂದು ಭಾಗವಾಗಿದೆ ಎಂದು ಭಾರತವು ವಿಶ್ವಸಂಸ್ಥೆಯಲ್ಲಿ ಮತ್ತೊಮ್ಮೆ ಪಾಕ್ ಗೆ ಛೀಮಾರಿ ಹಾಕಿತು.
ಭಾರತ ಹೇಳಿದ್ದು,
1. ಭಯೋತ್ಪಾದನೆ ವಿರುದ್ಧ ಹೇಗೆ ಹೋರಾಡಬೇಕು ಎನ್ನುವುದರ ಬಗ್ಗೆ ಜಗತ್ತಿನಲ್ಲಿ ಇನ್ನೂ ಒಮ್ಮತವಿಲ್ಲ.
2. ಅಮೇರಿಕೆಯ ವರ್ಲ್ಡ್ ಟ್ರೇಡ್ ಸೆಂಟರ್ ಕಟ್ಟಡದ ಮೇಲಿನ ದಾಳಿಯ ನಂತರ ಜಗತ್ತಿನ ದೇಶಗಳು ಭಯೋತ್ಪಾದನೆಯ ಬಗ್ಗೆ ಎಚ್ಚರಗೊಂಡವು. ನವೆಂಬರ 1996 ರಲ್ಲಿ ಭಾರತವು ಮೊದಲ ಬಾರಿಗೆ ಜಾಗತಿಕ ಭಯೋತ್ಪಾದನೆಯ ಬಗ್ಗೆ ಒಂದು ವ್ಯಾಪಕ ಚರ್ಚೆಗಾಗಿ ಮುಂದಾಳತ್ವವನ್ನು ವಹಿಸಿತ್ತು. ಸುಮಾರು 30 ವರ್ಷಗಳು ಕಳೆದರೂ ಕೂಡ ಈಗಲೂ ಈ ಬಗ್ಗೆ ಒಮ್ಮತ ಬಂದಿಲ್ಲ.
3. ಜಗತ್ತಿನ ದೇಶಗಳು ಭಯೋತ್ಪಾದನೆಯನ್ನು ಗಂಭೀರವಾಗಿ ಪರಿಗಣಿಸದ ಕಾರಣ ಭಾರತವು ಗಡಿಯಾಚೆಗಿನ ಭಯೋತ್ಪಾದನೆಯನ್ನು ಎದುರಿಸುತ್ತಿದೆ. ಕಳೆದ ಮೂರು ದಶಕಗಳಲ್ಲಿ ಭಾರತದಲ್ಲಿ ಭಯೋತ್ಪಾದಕ ದಾಳಿಗಳಿಂದಾಗಿ ಸಾವಿರಾರು ಜನರು ಸಾವನ್ನಪ್ಪಿದ್ದಾರೆ. ಭಾರತವು ಶೂನ್ಯ ಸಹಿಷ್ಣುತೆ ನೀತಿಯನ್ನು ಅನುಸರಿಸಿ ಭಯೋತ್ಪಾದನೆ ವಿರುದ್ಧ ಹೋರಾಡುವುದು.
4. ಕೆಲವು ದೇಶಗಳು ತಮ್ಮ ರಾಜಕೀಯ ನೀತಿಯನ್ನು ಕಣ್ಣೆದುರಿಗೆ ಇಟ್ಟುಕೊಂಡು ಭಯೋತ್ಪಾದನೆಯನ್ನು ಸಮರ್ಥಿಸಲು ಪ್ರಯತ್ನಿಸುತ್ತಿರುವುದು ದುರದೃಷ್ಟಕರವಾಗಿದೆ. ಅಂತಹ ದೇಶಗಳಿಂದಾಗಿ, ಭಯೋತ್ಪಾದನೆಯೊಂದಿಗೆ ಹೋರಾಡುವ ಸಂಕಲ್ಪನೆಗೆ ಆಘಾತವಾಗುತ್ತದೆ. 15 ವರ್ಷಗಳ ಬಳಿಕವೂ ಮುಂಬಯಿ ದಾಳಿಯ ಸೂತ್ರಧಾರ ಇಂದಿಗೂ ಆ ದೇಶದ ಸರಕಾರಿ ಸೌಲಭ್ಯಗಳನ್ನು ಪಡೆದು ವಿವಿಧ ದೇಶಗಳಲ್ಲಿ ತಿರುಗಾಡುತ್ತಾನೆ. ಆ ದೇಶವು ಕೇವಲ ಭಯೋತ್ಪಾದನೆಗೆ ಪ್ರೋತ್ಸಾಹವನ್ನು ನೀಡುವುದಷ್ಟೇ ಅಲ್ಲ, ಅವರಿಂದ ತಮ್ಮ ಸರಕಾರ ಮತ್ತು ಆಡಳಿತಾತ್ಮಕ ನೀತಿಗಳನ್ನು ಕೂಡ ರಚಿಸುತ್ತಿದೆ.
5. ತಮ್ಮ ಸ್ವಂತ ನೀತಿಗಳಡೆಗೆ ಜಾಗತಿಕ ದೃಷ್ಟಿ ಬೀಳಬಾರದೆಂದು ಜನರ ದಾರಿ ತಪ್ಪಿಸಿ ನಾವು ಸ್ವತಃ ಭಯೋತ್ಪಾದನೆಗೆ ಗುರಿಯಾಗಿದ್ದೇವೆ ಎಂದು ಆ ದೇಶವು ಜಗತ್ತಿಗೆ ತೋರಿಸುತ್ತದೆ. ಸಂಯುಕ್ತ ರಾಷ್ಟ್ರದಿಂದ ನಿರ್ಬಂಧಿಸಲಾಗಿದ್ದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ- ತೋಯಬಾ ಮತ್ತು ಜೈಶ್-ಎ- ಮಹಮ್ಮದ ಭಾರತದ ಮೇಲೆ ದಾಳಿ ನಡೆಸುತ್ತಿರುತ್ತಾರೆ. ಅವುಗಳ ವಿರುದ್ಧ ಕ್ರಮ ಕೈಕೊಳ್ಳುವುದು ಇಂದಿನ ಕಾಲದ ಆವಶ್ಯಕತೆಯಾಗಿದೆ.
ಸಂಪಾದಕೀಯ ನಿಲುವುನಾಚಿಕೆಯಿಲ್ಲದ ಪಾಕಿಸ್ತಾನವು ಕಠೋರ ಶಬ್ದಗಳಿಂದಲ್ಲ, ಆಯುಧಗಳ ಭಾಷೆಯನ್ನೇ ಅರ್ಥಮಾಡಿಕೊಳ್ಳುವುದರಿಂದ ಭಾರತವು ಅದೇ ಭಾಷೆಯಲ್ಲಿ ಅದಕ್ಕೆ ಉತ್ತರಿಸುವ ಆವಶ್ಯಕತೆಯಿದೆ. |