ಪಿತೃದೋಷದ ಕಾರಣಗಳು ಮತ್ತು ಅದರ ಉಪಾಯ

೧. ಪಿತೃದೋಷ

ಪಿತೃದೋಷವನ್ನು ದೇವರ ಕೋಪದಷ್ಟೇ ದೃಢವೆಂದು ತಿಳಿಯಲಾಗುತ್ತದೆ. ದೇವರು ಕೋಪಿಸಿದರೆ ಬರಗಾಲ ಬರುವುದು; ಆದರೆ ಪಿತೃರು ಕೋಪಿಸಿಕೊಂಡರೆ, ಮನೆಯಲ್ಲಿ ಬರಗಾಲ ಬರುವುದು, ಅನಾರೋಗ್ಯ, ಅನಾವಶ್ಯಕ ಅಸಹನೆ, ಊಟ ಮಾಡುವಾಗ ಜಗಳ ಹಾಗೂ ಊಟ ಮಾಡಲು ಬಿಡದಿರುವುದು ಮುಂತಾದ ತೊಂದರೆಗಳನ್ನು ಕೊಡುತ್ತಾರೆ. ಒಬ್ಬರು ಭ್ರಮಿಷ್ಟರಾಗುವರು. ಮಕ್ಕಳಾಗದಿರುವುದು ಅಥವಾ ಪ್ರಖರ ಪಿತೃ ದೋಷವಿದ್ದರೆ, ಅಂಗವಿಕಲ ಮಕ್ಕಳು ಜನಿಸುವರು. ಮಕ್ಕಳು ಯೋಗ್ಯ ರಿತಿಯಲ್ಲಿ ವರ್ತಿಸುವುದಿಲ್ಲ, ತಂದೆ-ತಾಯಿಯರ ಮಾತು ಕೇಳುವುದಿಲ್ಲ ಮುಂತಾದ ತೊಂದರೆಗಳಾಗುತ್ತವೆ. ಅದಕ್ಕಾಗಿ ಪ್ರತಿಯೊಬ್ಬರೂ ವರ್ಷಕ್ಕೊಮ್ಮೆ ತಪ್ಪದೆ ಪಿತೃರ ಹೆಸರಿನಲ್ಲಿ ಶ್ರಾದ್ಧವನ್ನು ಮಾಡಬೇಕು. ಶ್ರಾದ್ಧವನ್ನು ಮಾಡಲು ಆಗದಿದ್ದರೆ ನದಿಯ ನೀರಿನಲ್ಲಿ ಮೊಸರನ್ನವನ್ನು ಅರ್ಪಿಸಬೇಕು ಅಥವಾ ಮನೆಯಲ್ಲಿಯೇ ಭೋಜನದ ಮೊದಲು ಅನ್ನದ ತುತ್ತನ್ನು ಇಟ್ಟು ನಮ್ರತೆಯಿಂದ ಕೈಜೋಡಿಸಿ ಪ್ರಾರ್ಥನೆ ಮಾಡಬೇಕು.

ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಮಾತೃ-ಪಿತೃ ಪೂಜೆಗೆ ಅಪಾರ ಮಹತ್ವವಿದೆ. ಅದರಲ್ಲಿ ಹಿಂದಿನ ೨ ಪೀಳಿಗೆಗಳನ್ನೂ ಸ್ಮರಿಸಬೇಕು. ಪಿತೃವರ್ಗದವರು ಯಾವ ಲೋಕದಲ್ಲಿರುತ್ತಾರೋ, ಅದಕ್ಕೆ ಪಿತೃಲೋಕವೆನ್ನುತ್ತಾರೆ ಅವರು ಯಾವಾಗಲೂ ಮುಕ್ತಿಯ ದಾರಿಕಾಯುತ್ತಾ ಅಲ್ಲಿ ಅಲೆದಾಡುತ್ತಿರುತ್ತಾರೆ. ಅವರನ್ನು ಸ್ಮರಿಸಿ ಶ್ರಾದ್ಧಕ್ಕನುಸಾರ ಯಾರು ಅನ್ನದಾನ ಮಾಡುತ್ತಾರೆಯೋ, ಅವರ ಕಲ್ಯಾಣವಾಗುತ್ತದೆ. ತಾಯಿ-ಅಜ್ಜಿ-ಮುತ್ತಜ್ಜಿ ಇವರಿಗಾಗಿ ವೃದ್ಧ ಸ್ತ್ರೀಗೆ ಅನ್ನ ಮತ್ತು ಸೀರೆ-ಕಣವನ್ನು ದಾನ ನೀಡಬೇಕು ಮತ್ತು ಹಸುವಿಗೆ ಹುಲ್ಲು ತಿನ್ನಿಸಬೇಕು. ಕೆಲವು ಪೂರ್ವಜರು ಯಾರಿಗಾದರೂ ನೋಯಿಸಿರುತ್ತಾರೆ. ಅವರ ಮನೆ, ಆಸ್ತಿ-ಪಾಸ್ತಿ ಅಥವಾ ಹಣವನ್ನು ಕಬಳಿಸುವುದು, ಸ್ತ್ರೀಯರ ಅತ್ಯಾಚಾರ, ಯಾರಿಗಾದರೂ ಮೋಸ ಮಾಡಿ ಅವನಿಗೆ ಹೊಟ್ಟೆಗಿಲ್ಲದಂತೆ ಮಾಡುವುದು, ಯಾರದ್ದಾದರೂ ಅಜ್ಜಿಗೆ ಅನ್ನ-ನೀರು ಮತ್ತು ಔಷಧೋಪಚಾರವಿಲ್ಲದೆ ಚಡಪಡಿಸಿ ಸಾಯಲು ಬಿಡುವುದು, ಇಂತಹ ತೊಂದರೆಗಳನ್ನು ನೀಡಿರುತ್ತಾರೆ. ಆ ಎಲ್ಲ ಶಾಪವೂ ಮುಂದಿನ ಜನ್ಮ ಪಡೆದಿರುವ ಪೀಳಿಗೆಯವರೆಗೆ ತೊಂದರೆ ಹಾಗೂ ಭೋಗದ ಸ್ವರೂಪದಲ್ಲಿ ಬರುತ್ತವೆ. ಮನೆತನದಲ್ಲಿ ಯಾರಾದರೂ ನೀರಿನಲ್ಲಿ ಮುಳುಗಿ ಸತ್ತರು, ಯಾರಾದರೂ ನೇಣುಹಾಕಿಕೊಂಡು, ಹತ್ಯೆ ಅಥವಾ ಅಪಘಾತವಾಗಿರಬಹುದು, ಇಂತಹವರ ಮನೆಯಲ್ಲಿ ಒಂದು ಪೀಳಿಗೆಯನ್ನು ಬಿಟ್ಟು ಮುಂದಿನ ಪೀಳಿಗೆಯು ಭಯಂಕರ ಕಷ್ಟವನ್ನು ಸಹಿಸಬೇಕಾಗುತ್ತದೆ. ಇವೆಲ್ಲವೂ ಪಿತೃದೋಷಗಳಾಗಿವೆ. ಅದು ಕರ್ಮವಾಗಿ ಅಡ್ಡ ಬರುತ್ತಾ ಇರುತ್ತವೆ ಹಾಗೂ ಪ್ರಗತಿಗೆ ಅಡಚಣೆಯಾಗುತ್ತದೆ. ಪ್ರಾಮಾಣಿಕ ಮನುಷ್ಯರ ಅಂತರಂಗ ಪಿತೃಗಳಿಗೆ ಕಾಣಿಸುತ್ತದೆ. ಆದ್ದರಿಂದ ಅವರ ವಿಷಯದಲ್ಲಿ ಅಯೋಗ್ಯವಾಗಿ ಮಾತನಾಡಬಾರದು. ಯಾರಾದರೊಬ್ಬರ ಮೇಲೆ ಪಿತೃರು ಪ್ರಸನ್ನರಾದರೆ ಅವರ ಉದ್ಧಾರವಾಗಬಹುದು.

೨. ಜಾತಕದಲ್ಲಿನ ಪಿತೃದೋಷದ ಲಕ್ಷಣಗಳು 

ಮುಂದಿನ ಲಕ್ಷಣಗಳಿದ್ದರೆ ಪಿತೃದೋಷವಿರುತ್ತದೆ.

೨ ಅ. ಶಾರೀರಿಕ

೧. ಶರೀರಕ್ಕೆ ತೀವ್ರ ಅನಾರೋಗ್ಯ, ಮನೆಯಲ್ಲಿ ಯಾರಿಗಾದರೂ ಕಾಯಿಲೆ ಬರುವುದು

೨. ವಿಷಯುಕ್ತ ಸರ್ಪದಂಶ ಆಗುವುದು

೨ ಆ. ಮಾನಸಿಕ

೧. ಮನಸ್ಸು ಮತ್ತು ಶರೀರದ ಅನಾರೋಗ್ಯ

೨. ಮನಸ್ಸು ಅಶಾಂತ, ಭಯಭೀತ, ಬಡಬಡಿಸುವುದು, ಭ್ರಮೆ

೩. ನದಿ ಅಥವಾ ಸಮುದ್ರವನ್ನು ನೋಡಿ ತೊಂದರೆಯಾಗುವುದು

೪. ಕೆಟ್ಟ ಕನಸು, ನಿದ್ರಾನಾಶ, ರಾತ್ರಿ ಭಯಗೊಳ್ಳುವುದು

೫. ಪೂಜೆಅರ್ಚನೆ, ದಾನಧರ್ಮ, ಕುಲಧರ್ಮ, ಕುಲಾಚಾರದಲ್ಲಿ ಅಡಚಣೆ ಬರುವುದು, ಅವುಗಳಲ್ಲಿ ಮನಸ್ಸು ಇಲ್ಲದಿರುವುದು. ಅವುಗಳ ಬಗ್ಗೆ ಅವಿಶ್ವಾಸ

೨ ಇ. ಕೌಟುಂಬಿಕ 

೧. ಮನೆಗೆ ನೀರಿನ ಪೂರೈಕೆ ಕಡಿಮೆಯಾಗುವುದು

೨. ದಾಂಪತ್ಯ ಜೀವನದಲ್ಲಿ ಸುಖ-ಸಮಾಧಾನ ಇಲ್ಲದಿರುವುದು

೩. ಮನೆಯಲ್ಲಿ ಶುಭಕಾರ್ಯಗಳು ಆಗದಿರುವುದು ಅಥವಾ ಲಗ್ನಕಾರ್ಯದಲ್ಲಿ ಅಡಚಣೆ ಬರುತ್ತಾ ಇರುವುದು

೪. ಅನುವಂಶಿಕ ಹಕ್ಕು ಕಳೆದುಕೊಳ್ಳುವುದು

೫. ಜನರೊಂದಿಗೆ ಜಗಳ ಅಥವಾ ವಿವಾದ

೬. ಕೋರ್ಟ್ ಕಚೇರಿಯ ತೊಂದರೆ ಆರಂಭವಾಗುವುದು

೭. ಪರಿವಾರದಲ್ಲಿ ಯಾರಿಗಾದರೂ ಅನಿರೀಕ್ಷಿತ ಬಾಧೆಯಾಗುವುದು, ಭೂತ-ಪ್ರೇತದ ತೊಂದರೆಯ ಅನುಭವವಾಗುವುದು.

೨ ಈ. ಆರ್ಥಿಕ

೧. ನೌಕರಿಯಲ್ಲಿ ಅಥವಾ ವ್ಯವಸಾಯದಲ್ಲಿ ಸ್ಥಿರತೆ ಇರದೆ ಪದೇ ಪದೇ ಬದಲಾವಣೆಯಾಗುವುದು

೨. ಸಾಲ, ಹಣ ಸಾಕಾಗದಿರುವುದು, ಮನೆಯಲ್ಲಿ ಧನ-ಧಾನ್ಯಗಳ ಕೊರತೆ

೩. ಕುಟುಂಬದ ಪೋಷಣೆಯ ಕಾಳಜಿ ಎನಿಸುವುದು

೩. ಪಿತೃ ಉಪಾಸನೆ ಹೇಗೆ ಮಾಡಬೇಕು ?

೩ ಅ. ಶ್ರಾದ್ಧ ಮಾಡುವುದು 

ಶ್ರದ್ಧಯಾ ಕ್ರಿಯತೆ ತತ್‌ ಶ್ರಾದ್ಧಮ್‌ | ಅಂದರೆ ಶ್ರದ್ಧೆಯಿಂದ ಪಿತೃರನ್ನು ಉದ್ದೇಶಿಸಿ ವಿಧಿಪೂರ್ವಕ ಹವಿರ್ಯುಕ್ತ ಪಿಂಡದಾನ ಇತ್ಯಾದಿ ಕರ್ಮ ಮಾಡುವುದಕ್ಕೆ ಶ್ರಾದ್ಧವೆಂದು ಹೇಳುತ್ತಾರೆ. ಶ್ರಾದ್ಧದಲ್ಲಿ ಸಮಂತ್ರ ಪಿಂಡದಾನ ಮತ್ತು ಸಜ್ಜನರಿಗೆ ಭೋಜನ ಈ ಕರ್ಮಗಳು ಮುಖ್ಯವಾಗಿರುತ್ತವೆ.

೩ ಆ. ನಾರಾಯಣ ನಾಗಬಲಿ, ತ್ರಿಪಿಂಡಿ ಹಾಗೂ ತೀರ್ಥಶ್ರಾದ್ಧ

ಅಖಂಡ ೫ ವರ್ಷಗಳ ವರೆಗೆ ಮನೆಯಲ್ಲಿ ಪೂರ್ವಜರ ಶ್ರಾದ್ಧವಾಗದಿದ್ದರೆ ನಾರಾಯಣ ನಾಗಬಲಿ, ತ್ರಿಪಿಂಡಿ ಶ್ರಾದ್ಧ (ಮೂರು ಪೀಳಿಗೆಗಳ ಶ್ರಾದ್ಧವಿಧಿ) ಮತ್ತು ತೀರ್ಥಶ್ರಾದ್ಧ ಮಾಡಿದರೆ ಪಿತೃದೋಷದ ಶಾಂತಿಯಾಗಿ ಪಿತೃಗಣಗಳ ಶುಭಾಶೀರ್ವಾದ ಮತ್ತು ಪುಣ್ಯ ಲಭಿಸುತ್ತದೆ.

೩ ಇ. ನಿಯಮಿತ ಶ್ರಾದ್ಧಕರ್ಮಗಳಿಂದಾಗುವ ಲಾಭಗಳು

ಯಾರು ನಿಯಮಿತವಾಗಿ ಶ್ರಾದ್ಧಾದಿ ಕರ್ಮಗಳನ್ನು ಮಾಡುತ್ತಾರೋ, ಅವರಿಗೆ ಪಿತೃರ ತೃಪ್ತಿಯಿಂದ ಆಯುಷ್ಯ, ಕೀರ್ತಿ, ಬಲ, ತೇಜ, ಧನ, ಸಂತಾನ, ಸಂಸಾರಸುಖ, ಆರೋಗ್ಯ, ಸನ್ಮಾನ ಇವೆಲ್ಲ ಪ್ರಾಪ್ತಿಯಾಗುತ್ತವೆ. ಪಿತೃರೇ ಆದಿಭೌತಿಕ ಸ್ಥೂಲರಾಜ್ಯದ ಸಂಚಾಲಕ ಮತ್ತು ನಿತ್ಯ ಕುಲರಕ್ಷಕರಾಗಿದ್ದಾರೆ. ಆದ್ದರಿಂದ ಪಿತೃರ ತೃಪ್ತಿಯಿಂದ ಐಹಿಕ ಸುಖದ ಲಾಭವಾಗುತ್ತದೆ. ಪಿತೃರ ಆಶೀರ್ವಾದದ ಹೊರತು ಆಧ್ಯಾತ್ಮಿಕ ಪ್ರಗತಿ ಮತ್ತು ಇಷ್ಟ ದೇವತೆಗಳ ಕೃಪಾಪ್ರಾಪ್ತಿಯಲ್ಲಿಯೂ ಅಡಚಣೆ ಉಂಟಾಗುತ್ತದೆ; ಆದ್ದರಿಂದ ಪಿತೃರ ತೃಪ್ತಿಗೆ ಮೊದಲ ಪ್ರಾಶಸ್ತ್ಯವಿದೆ. ಮೊದಲು ಪಿತೃರಿಗೆ ನಂತರ ಕುಲದೇವಿ-ದೇವತೆಗೆ, ಅನಂತರ ಇಷ್ಟದೇವತೆಗಳ ಕೃಪೆ ಹೀಗೆ ಕ್ರಮವಿದೆ. ಸಂಕ್ಷಿಪ್ತದಲ್ಲಿ ಮಹತ್ವದ್ದೆಂದರೆ, ಪಾರಲೌಕಿಕ ಸುಖವನ್ನು ನೀಡಲು ಸಹ ಮೂಲ ಪಿತೃರೆ ಕಾರಣವಾಗಿರುತ್ತಾರೆ.

೩ ಈ. ಋಣಗಳು

ದೇವ, ಋಷಿ, ಪಿತೃ, ಮನುಷ್ಯ ಮತ್ತು ಭೂತಋಣ,

೩ ಈ ೧. ಪಂಚಮಹಾಯಜ್ಞ : ಪ್ರತಿಯೊಬ್ಬ ವ್ಯಕ್ತಿ (ಜೀವಾತ್ಮ) ಜನ್ಮ ತಾಳುವಾಗ ಅದು ೫ ಋಣಗಳನ್ನು (ಸಾಲ) ಜೊತೆ ಯಲ್ಲಿಟ್ಟುಕೊಂಡೇ ಜನಿಸುತ್ತಾನೆ. ಪಡೆದಿರುವ ಈ ಜನ್ಮದಲ್ಲಿಯೆ ಈ ೫ ಋಣಗಳನ್ನು ತೀರಿಸಬೇಕಾಗುತ್ತದೆ. ಈ ೫ ಋಣಗಳಿಂದ ಮುಕ್ತರಾಗಲು ಪಂಚಮಹಾಯಜ್ಞವನ್ನು ಈ ಕೆಳಗಿನಂತೆ ಮಾಡಲಿಕ್ಕಿರುತ್ತದೆ. ಕುಟುಂಬದಲ್ಲಿನ ಯಾವುದೇ ಸ್ತ್ರೀ, ಪುರುಷ ಅಥವಾ ಮಗ ಇವರು ಸಂಪೂರ್ಣ ಕುಟುಂಬಕ್ಕಾಗಿ ಈ ಕಾರ್ಯಕ್ರಮವನ್ನು ಮಾಡಿದರೂ ನಡೆಯುತ್ತದೆ.

೩ ಈ ೧ ಅ. ದೇವಯಜ್ಞ : ಪ್ರತಿದಿನ ಬೆಳಿಗ್ಗೆ ಒಂದು ಚಮಚ ಹಸುವಿನ ಶುದ್ಧ ತುಪ್ಪ ಹಾಕಿ ನೀಲಾಂಜನ ಅಥವಾ ಕಾಲುದೀಪವನ್ನು ದೇವರ ಮುಂದೆ ಹಚ್ಚಬೇಕು, ದೀಪವನ್ನು ಮೃತ ವ್ಯಕ್ತಿಯ ಛಾಯಾಚಿತ್ರದ ಮುಂದೆಯೂ ಹಚ್ಚಬೇಕು ಅಥವಾ ಹಸುವಿನ ಗೋಮಯದ ಬೆರಣಿ, ತುಪ್ಪ, ಕರ್ಪೂರ, ಧೂಪ, ಲೊಭಾನ, ಸ್ವಲ್ಪ ಅಕ್ಕಿ ಇತ್ಯಾದಿಗಳಿಂದ ಸಣ್ಣ ಯಜ್ಞ ಮಾಡಬೇಕು.

೩ ಈ ೧ ಆ. ಋಷಿಗಣ : ನಿತ್ಯನೇಮದಿಂದ ಮಂತ್ರಜಪ, ನಾಮಸ್ಮರಣೆ, ಭಜನೆ, ಹರಿಪಾಠಕ್ಕನುಸಾರ ಪಠಣ, ಶ್ಲೋಕಪಠಣ, ಗ್ರಂಥಪಾರಾಯಣ ಮಾಡಬೇಕು. ಪ್ರತಿದಿನ ಹಸುವಿಗೆ ಹುಲ್ಲು ಮತ್ತು ಅನ್ನದ ತುತ್ತು ನೀಡಬೇಕು

೩ ಈ ೧ ಇ. ಪಿತೃಯಜ್ಞ : ಒಂದು ವರ್ಷದವರೆಗೆ ಪ್ರತಿದಿನ ಊಟದ ಮೊದಲು ಮಧ್ಯಾಹ್ನ ೧೨ ಗಂಟೆಯ ಮೊದಲು ಕಾಗೆ, ಹಸು ಅಥವಾ ನಾಯಿಗೆ ಒಂದು ತುತ್ತು ಅನ್ನದಾನ ಮಾಡಬೇಕು. ಹಸಿದವರಿಗೆ ಅನ್ನದಾನ ಮಾಡಬೇಕು.

೩ ಈ ೧ ಈ. ಮನುಷ್ಯಯಜ್ಞ : ಮನೆಗೆ ಬರುವ ನೆಂಟರಿಗೆ ನೀರು, ಶರಬತ್ತು ಅಥವಾ ಅನ್ನವನ್ನು ಕೊಡಬೇಕು.

೩ ಈ ೧ ಉ. ಭೂತಯಜ್ಞ : ಪಶು-ಪಕ್ಷಿ, ಇರುವೆ, ಗುಬ್ಬಚ್ಚಿ, ಪಾರಿವಾಳ ಮುಂತಾದ ಹಕ್ಕಿಗಳಿಗೆ ಅನ್ನ-ಧಾನ್ಯವನ್ನು ನೀಡಬೇಕು. ಇವೆಲ್ಲ ಯಜ್ಞಗಳನ್ನು ಮಾಡಿದರೆ ಎಲ್ಲ ದೋಷಗಳು ಕಡಿಮೆಯಾಗುತ್ತವೆ. ಪ್ರತಿದಿನ ಪಿತೃ ಉಪಾಸನೆಯಾಗುತ್ತದೆ. ಜನ್ಮಲಗ್ನ ಅಗರ-ರಾಶಿಕುಂಡಲಿಯಲ್ಲಿ ಪಂಚಮದಲ್ಲಿ ಅಥವಾ ನವಮಿಯಲ್ಲಿ ಕೇತು, ಅಷ್ಟಮದಲ್ಲಿ ಅಥವಾ ದ್ವಾದಶದಲ್ಲಿ ಗುರು ಅಥವಾ ಪೀಡಿತ ರವಿ ಅಥವಾ ಚಂದ್ರ ಈ ಪ್ರಕಾಶಿತ ಗ್ರಹಗಳು, ಜಾತಕದಲ್ಲಿ ರವಿಯು-ಕೇತುವಿನಿಂದ, ಗುರುವು-ರಾಹುವಿನಿಂದ ಪೀಡಿತರಾದಂತಹ ಲಕ್ಷಣಗಳು ಪಿತೃದೋಷವನ್ನು ಜಾತಕದಲ್ಲಿ ತೋರಿಸುತ್ತವೆ. ಪ್ರಖರ ಪಿತೃದೋಷದಿಂದ ಮುಖದಲ್ಲಿ ಕಳೆ ಇರುವುದಿಲ್ಲ. ಕಣ್ಣುಗಳ ಕೆಳಗೆ ಕಪ್ಪಾಗುತ್ತದೆ ಹಾಗೂ ತುಟಿ ನಿಸ್ತೇಜ ಅಥವಾ ಕಪ್ಪಾಗಿ ಕಾಣುತ್ತದೆ. ಅಮವಾಸ್ಯೆಯ ಹತ್ತಿರ ಬರುವಾಗ ೧-೨ ದಿನ ಹಿಂದೆ ಮುಂದೆ ಇರುವ ಮನೆಯಲ್ಲಿ ಒಂದು ರೀತಿಯ ಹೊಗೆ, ಉದಾಸೀನತೆ ಅಥವಾ ಅಸ್ವಸ್ಥತೆ ಎನಿಸುತ್ತದೆ. ಮಧ್ಯಾಹ್ನ ೧೨ ರಿಂದ ೧ ಈ ಅವಧಿಂಇÀಲ್ಲಿ ಮನೆಯ ಸಮೀಪ ಕಾಗೆಗಳು ತುಂಬಾ ಕಾವ ಕಾವ ಮಾಡುತ್ತಾ ಬಾಗಿಲಿನ ಮುಂದೆ ಬರುತ್ತವೆ. ಆಗ ಪಿತೃದೋಷಕ್ಕಾಗಿ ಉಪಾಸನೆ ಮಾಡಬೇಕು.

೪. ಪಿತೃದೋಷಕ್ಕಾಗಿ ಉಪಾಸನೆಯಿಂದಾಗುವ ಲಾಭ

ಪಿತೃದೋಷದಿಂದಾಗುವ ತೊಂದರೆಗಳು ದೂರವಾಗುತ್ತವೆ. ಸುಂದರ, ಸುಶಿಕ್ಷಿತ ಹುಡುಗಿಗೆ ತಾಯಿ-ತಂದೆಯರ ಆರ್ಥಿಕ ಸ್ಥಿತಿ ಚೆನ್ನಾಗಿದ್ದರೂ, ಎಷ್ಟು ಪ್ರಯತ್ನಿಸಿದರೂ ವಿವಾಹ ಕೂಡಿ ಬರುವುದಿಲ್ಲ.

ಕುಲದೇವಿಯ ಸೇವೆ ಮಾಡಿಯೂ ಮಾರ್ಗ ಸಿಗುವುದಿಲ್ಲ, ಇಂತಹ ಸಮಯದಲ್ಲಿ ಮುಖ್ಯವಾಗಿ ಪಿತೃದೋಷ ಕಾರಣವಾಗಿರುತ್ತದೆ. ಈ ಪಿತೃದೋಷವು ನಾರಾಯಣ ನಾಗಬಲಿ ಮಾಡಿಸುವುದರಿಂದ ಅಪೇಕ್ಷೆಗಿಂತ ಉತ್ತಮ ಸ್ಥಳ ಲಭಿಸಿ ಕಡಿಮೆ ಖರ್ಚಿನಲ್ಲಿ ವಿವಾಹವಾಗುತ್ತದೆ.

ಪ್ರತಿದಿನ ರಾಮರಕ್ಷಾ, ಮಾರುತಿ ಸ್ತೋತ್ರ, ಶ್ಲೋಕ, ಪ್ರಾರ್ಥನೆ, ಹರಿಪಾಠ, ಗ್ರಂಥಪಠಣವನ್ನೂ ಮಾಡಬೇಕು. ಅದರಿಂದ ಮಾನಸಿಕ ಸಮಾಧಾನ ಮತ್ತು ಸ್ವಾಸ್ಥ್ಯ ಲಭಿಸುತ್ತದೆ. – ಜ್ಯೋತಿಷಿ ಬ.ವಿ. ತಥಾ ಚಿಂತಾಮಣಿ ದೇಶಪಾಂಡೆ (ಗುರೂಜಿ) (ಆಧಾರ : ಶ್ರೀಧರ ಸಂದೇಶ)

(ಸೌಜನ್ಯ : ಸನಾತನ ಸಂಸ್ಥೆಯ ಸಂಕೇತಸ್ಥಳ sanatan.org)