ಹುಣ್ಣಿಮೆಯಂದು ಯಜ್ಞದ ಸಮಯದಲ್ಲಿ ಯಜ್ಞಜ್ವಾಲೆಯಿಂದ ಪ್ರತ್ಯಕ್ಷನಾದ ಸಾಕ್ಷಾತ್ ಅಗ್ನಿ ನಾರಾಯಣನು ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರಿಗೆ ಶ್ರೀ ಪರಶುರಾಮರ ತೇಜಾಂಶದಿಂದ ಕೂಡಿರುವ ದೈವೀಶಕ್ತಿಯ ಕುಂಭ ನೀಡುವುದು ಮತ್ತು ಅದರಿಂದ ಪೃಥ್ವಿಯಲ್ಲಿ ಮೊದಲು ಸೂಕ್ಷ್ಮದಿಂದ ಬಳಿಕ ಸ್ಥೂಲದಲ್ಲಿ ಹಿಂದೂ ರಾಷ್ಟ್ರ ಬರಲಿರುವುದು : ೧೭ ಜನವರಿ ೨೦೨೩ ರ ಹುಣ್ಣಿಮೆಯಂದು ಗೋವಾದಲ್ಲಿ ಯಜ್ಞ ಜರುಗಿತು. ಈ ಶುಭ ಪ್ರಸಂಗದಲ್ಲಿ ಸನಾತನ ಸಂಸ್ಥೆಯ ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ ಉಪಸ್ಥಿತರಿದ್ದರು. ಆಗ ಅವರು ಯಜ್ಞದ ಪವಿತ್ರ ಅಗ್ನಿಯ ದರ್ಶನ ಪಡೆದರು. ಆಗ ಯಜ್ಞಜ್ವಾಲೆಯಿಂದ ಸಾಕ್ಷಾತ್ ಅಗ್ನಿ ನಾರಾಯಣನು ಪ್ರತ್ಯಕ್ಷನಾದನು. ಅವನು ಶ್ರೀ ಪರಶುರಾಮರ ತೇಜಾಂಶ, ಎಂದರೆ ಬ್ರಾಹ್ಮತೇಜ ಮತ್ತು ಕ್ಷಾತ್ರತೇಜ ಇವುಗಳಿಂದ ತುಂಬಿರುವ ದೈವಿಶಕ್ತಿಯ ಕುಂಭವನ್ನು ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರಿಗೆ ನೀಡಿದನು. ಆದ್ದರಿಂದ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳ ಮತ್ತು ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ದೈವೀಶಕ್ತಿಯಲ್ಲಿ ವೃದ್ಧಿ ಆಗುವುದು. ಸಂಪೂರ್ಣ ಪೃಥ್ವಿಯಲ್ಲಿ ಮೊದಲು ಸೂಕ್ಷ್ಮದಲ್ಲಿ ಬಳಿಕ ಸ್ಥೂಲದಲ್ಲಿ ಹಿಂದೂ ರಾಷ್ಟ್ರ ಸ್ಥಾಪಿಸಲಾಗುವುದು.
– ಕು. ಮಧುರಾ ಭೋಸಲೆ (ಈಗಿನ ಆಧ್ಯಾತ್ಮಿಕ ಮಟ್ಟ ಶೇಕಡ ೬೫) (ಸೂಕ್ಷ್ಮದಿಂದ ದೊರೆತ ಜ್ಞಾನ), ಸನಾತನ ಆಶ್ರಮ, ರಾಮನಾಥಿ, ಗೋವಾ. (೩೧.೧.೨೦೨೩)