ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ ಕಟ್ಟರ ಇಸ್ಲಾಂನ ಬೆಂಬಲಿಗ ಜಮಾತ್-ಎ-ಇಸ್ಲಾಂ ಪಕ್ಷವು ರವೀಂದ್ರನಾಥ ಟಾಗೋರ ಬರೆದಿರುವ ‘ಅಮಾರ ಸೋನಾರ ಬಾಂಗಲ’ ಈ ರಾಷ್ಟ್ರಗೀತೆ ಬದಲಾಯಿಸಲು ಆಗ್ರಹಿಸುತ್ತಿದೆ; ಆದರೆ ಸರಕಾರದ ಧಾರ್ಮಿಕ ವಿಷಯದ ಪ್ರಕರಣದ ಸಚಿವ ಖಾಲಿದ ಹುಸೈನ್ ಇವರು ರಾಷ್ಟ್ರಗೀತೆ ಬದಲಾವಣೆಯ ಬೇಡಿಕೆ ತಳ್ಳಿ ಹಾಕಿದ್ದಾರೆ, ಹಿಗಿದ್ದರೂ ಮಧ್ಯಂತರ ಸರಕಾರವು ಸಂವಿಧಾನ ಬದಲಾಯಿಸುವುದಕ್ಕಾಗಿ ಸೈನ್ಯಾಧಿಕಾರಿಯ ಸಮಿತಿ ಸ್ಥಾಪಿಸಿದೆ.
ರಾಷ್ಟ್ರಗೀತೆ ಬದಲಾಯಿಸುವ ಬೇಡಿಕೆಗೆ ವಿರೋಧ
ಸಪ್ಟೆಂಬರ್ ೪ ರಂದು ಜಮಾತ್-ಎ-ಇಸ್ಲಾಂನ ಮಾಜಿ ಮುಖ್ಯಸ್ಥ ಗುಲಾಂ ಆಝಮ ಪುತ್ರ ಅಬ್ದುಲ್ಲ ಅಮನ್ ಆಝಮಿ ಇವರು ಬಾಂಗ್ಲಾದೇಶದ ರಾಷ್ಟ್ರಗೀತೆ, ರಾಷ್ಟ್ರಧ್ವಜ ಮತ್ತು ಸಂವಿಧಾನ ಬದಲಾಯಿಸುವ ಆವಶ್ಯಕತೆ ಇದೆ’, ಎಂದು ಹೇಳಿಕೆ ನೀಡಿದರು. ಕಟ್ಟರವಾದಿ ಜನಾಂಗದವರ ಈ ಅಭಿಯಾನಕ್ಕೆ ಬಾಂಗ್ಲಾದೇಶದಲ್ಲಿ ವಿರೋಧವಾಗುತ್ತಿದೆ. ಕಲಾವಿದರ ಗುಂಪು ‘ಉದಿಚಿ’ಯ ನೂರಾರು ಕಲಾವಿದರು ಬಾಂಗ್ಲಾದೇಶದ ರಾಷ್ಟ್ರಗೀತೆ ಬದಲಾವಣೆಯ ವಿರುದ್ಧ ರಸ್ತೆಗೆ ಇಳಿದು ಸಾಮೂಹಿಕ ರಾಷ್ಟ್ರಗೀತೆ ಹೇಳಿದರು ಹಾಗೂ ರಾಷ್ಟ್ರಧ್ವಜ ಕೂಡ ಹಾರಿಸಿದರು.
ಸರಕಾರದಲ್ಲಿನ ಅನೇಕರ ವರ್ಗಾವಣೆ
ಮಧ್ಯಂತರ ಸರಕಾರ ಸ್ಥಾಪನೆಯಾದ ನಂತರ ವಿವಿಧ ಸಚಿವಾಲಯದ ೩೦ ಸಚಿವರ ವರ್ಗಾವಣೆ ಮಾಡಲಾಗಿದೆ. ಅನೇಕ ದೇಶದಲ್ಲಿನ ಬಾಂಗ್ಲಾದೇಶದ ರಾಯಭಾರಿಗಳನ್ನು ಹಿಂದೆ ಕರೆಸಿಕೊಳ್ಳಲಾಗಿದೆ ಹಾಗೂ ಕೆಲವರ ಸೇವೆ ಕಡಿತಗೊಳಿಸಲಾಗಿದೆ. ಸುಮಾರು ೫೦ ಕೂ ಹೆಚ್ಚಿನ ವಿದ್ಯಾಪೀಠದ ಕುಲುಗುರು, ರಜಿಸ್ಟಾರ್, ಹಾಗೂ ೧೪೭ ಶಾಲೆಗಳು ಮತ್ತು ಕಾಲೇಜಗಳ ಪ್ರಾಂಶುಪಾಲರ ಜಾಗದಲ್ಲಿ ಹೊಸ ಪ್ರಾಂಶುಪಾಲರ ನೇಮಕ ಮಾಡಲಾಗಿದೆ.
ಸಂಪಾದಕೀಯ ನಿಲುವುಬಾಂಗ್ಲಾದೇಶದಲ್ಲಿ ಕೆಲವು ದಿನದಲ್ಲಿ ಶರಿಯಾ ಕಾನೂನು ಜಾರಿಗೊಳಿಸಿದರೆ ಮತ್ತು ಅದರ ಉಪಯೋಗ ಹಿಂದೂಗಳ ವಿರೋಧದಲ್ಲಿ ಮಾಡಿ ಅವರ ಸರ್ವ ನಾಶ ಮಾಡಿದರೆ ಆಶ್ಚರ್ಯ ಅನಿಸಬಾರದು ! |