(ಮಾಲ್ ಎಂದರೆ ದೊಡ್ಡ ವ್ಯಾಪಾರಿ ಸಂಕಿರಣ)
ಕರಾಚಿ (ಪಾಕಿಸ್ತಾನ) – ಇಲ್ಲಿ ಹೊಸದಾಗಿ ತೆರೆದಿರುವ ‘ಡ್ರೀಮ್ ಬಾಜಾರ್’ ಹೆಸರಿನ ಮಾಲ್ ಮೊದಲ ದಿನವೇ ಸ್ಥಳೀಯ ಜನರಿಂದ ಕೇವಲ ಅರ್ಧ ಗಂಟೆಯಲ್ಲಿ ಲೂಟಿ ಮಾಡಲಾಯಿತು. ವಿಶೇಷ ಎಂದರೆ ಈ ಮಾಲ್ ನಲ್ಲಿನ ಪ್ರತಿಯೊಂದು ವಸ್ತುವಿನ ಬೆಲೆ ೫೦ ರೂಪಾಯಿಗಿಂತಲೂ ಕಡಿಮೆ ಇರಿಸಲಾಗಿತ್ತು. ಈ ಘಟನೆಯ ನಂತರ ಈ ಮಾಲ್ ಅನಿಶ್ಚಿತ ಸಮಯಕ್ಕಾಗಿ ಮುಚ್ಚಲಾಗಿದೆ.
Karachi, Pakistan : Just half an hour after the mall’s opening, people looted it!
Pakistani Looters ! This incident shows the mentality of Pakistani people, who roam around the world with a begging bowl#Pakistan #DreamBazaar#KarachiMall pic.twitter.com/cz3ZSoNBfq
— Sanatan Prabhat (@SanatanPrabhat) September 3, 2024
‘ಡ್ರೀಮ್ ಬಾಜಾರ್’ದ ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡ ಪ್ರಸಾರ ಪ್ರಚಾರ ಮಾಡಲಾಗಿತ್ತು. ಅನೇಕ ವಸ್ತುಗಳು ಕಡಿಮೆ ಬೆಲೆಗೆ ಸಿಗುವುದೆಂದು ಉದ್ಘಾಟನೆಯ ದಿನದಂದು ಸಾವಿರಾರು ಜನರು ಮಾಲ್ ಹೊರಗೆ ಸೇರಿದರು. ಮಾಲ್ ನ ಸುರಕ್ಷಾ ಸಿಬ್ಬಂದಿಗಳು ಜನರ ಗದ್ದಲವನ್ನು ಹಿಡಿತಕ್ಕೆ ತರುವಲ್ಲಿ ವಿಫಲವಾಗಿರುವುದರಿಂದ ಕೆಲವೇ ಸಮಯದಲ್ಲಿ ಜನರು ಅಂಗಡಿಗೆ ನುಗ್ಗುಬಾರದೆಂದು ಮಾಲ್ ನ ಬಾಗಿಲು ಮುಚ್ಚಲಾಯಿತು, ಹೊರಗಿನ ಗುಂಪು ಬಾಗಿಲು ಮುರಿದು ಒಳಗೆ ಪ್ರವೇಶಿಸಿದರು. ಅಲ್ಲಿಯ ಪರಿಸ್ಥಿತಿ ಕೈ ಮೀರಿ ಹೋಗಿರುವುದರಿಂದ ಕೆಲವು ಸಮಯ ಸಾರಿಗೆ ದಟ್ಟಣೆ ಕೂಡ ಆಗಿತ್ತು.
ಮಾಲ್ ನ ಮಾಲಿಕ, ನಾವು ಈ ಮಾಲ್ ಕರಾಚಿಯ ಜನರೆ ಲಾಭಕ್ಕಾಗಿಯೇ ಆರಂಭಿಸಿದ್ದೆವು. ವರ್ಷಪೂರ್ತಿ ವಸ್ತುಗಳ ಬೆಲೆ ಅಷ್ಟೇ ಇರುತ್ತಿತ್ತು. ಈ ಮಾಲ್ ಆರಂಭ ಮಾಡುವುದರ ಹಿಂದೆ ನಾವು ಬಹಳಷ್ಟು ಪರಿಶ್ರಮ ತೆಗೆದುಕೊಂಡಿದ್ದೆವು; ಆದರೆ ಜನರು ನಮ್ಮ ಜೊತೆ ಈ ರೀತಿ ವರ್ತಿಸಿದರು. ಪಾಕಿಸ್ತಾನದಲ್ಲಿ ಬಹಳ ಕಡಿಮೆ ಜನರು ಹೂಡಿಕೆ ಮಾಡುತ್ತಾರೆ. ಜನರ ಹಿತಕ್ಕಾಗಿ ಇಲ್ಲಿ ಯಾರಾದರೂ ಏನಾದರೂ ಹೂಡಿಕೆ ಮಾಡುತ್ತಿದ್ದರೆ, ಆಗ ಜನರು ಕೂಡ ಸಾಮರಸ್ಯ ತೋರಿಸಬೇಕು ಎಂದು ಹೇಳಿದರು.
ಸಂಪಾದಕೀಯ ನಿಲುವುದರೋಡೆಕೋರ ಪಾಕಿಸ್ತಾನಿ ! ಜಗತ್ತಿನಲ್ಲಿ ಭಿಕ್ಷಾ ಪಾತ್ರೆ ಹಿಡಿದು ತಿರುಗುವ ಪಾಕಿಸ್ತಾನಿ ಜನರ ಮನಸ್ಸಿನ ಸ್ಥಿತಿ ಹೇಗೆ ಆಗಿದೆ ? ಇದು ಈ ಘಟನೆಯಿಂದ ತಿಳಿದು ಬರುತ್ತದೆ ? |