ಹಗೆತನದ ಉದ್ದೇಶದಿಂದ ಕ್ರಮ ಕೈಗೊಂಡರೆ, ಬೆಲೆ ತೆತ್ತಬೇಕಾದಿತು; ಪಾಕಿಸ್ತಾನದಿಂದ ಭಾರತಕ್ಕೆ ಬೆದರಿಕೆ !

ಇಸ್ಲಾಮಾಬಾದ್ – ಭಾರತದ ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ ಇವರ ಎಚ್ಚರಿಕೆ ಪಾಕಿಸ್ತಾನಕ್ಕೆ ಚೆನ್ನಾಗಿಯೇ ನಾಟಿದೆ. ಡಾ. ಜೈಶಂಕರ ಇವರು ಇಲ್ಲಿನ ಒಂದು ಕಾರ್ಯಕ್ರಮದಲ್ಲಿ ಮಾತನಾಡುವಾಗ `ಪಾಕಿಸ್ತಾನದೊಂದಿಗೆ ಚರ್ಚೆ ನಡೆಸುವ ಕಾಲ ಮುಗಿದಿದೆ. ಈಗ ಪಾಕಿಸ್ತಾನಕ್ಕೆ ಅದರದೇ ಭಾಷೆಯಲ್ಲಿ ಪ್ರತ್ಯುತ್ತರ ಸಿಗುವುದು’ ಎಂದು ಹೇಳಿದ್ದರು. ಈ ವಿಷಯದಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸುವಾಗ `ಕಾಶ್ಮೀರವು ಅಂತರರಾಷ್ಟ್ರೀಯ ಮಟ್ಟದಲ್ಲಿ ವಿವಾದಿತ ವಿಷಯವಾಗಿದೆ. ಪಾಕಿಸ್ತಾನ ರಾಜತಾಂತ್ರಿಕ ಮತ್ತು ಚರ್ಚೆಗೆ ಬದ್ಧವಾಗಿದೆ; ಆದರೆ ನೀವು ಹಗೆತನದಿಂದ ಕ್ರಮ ಕೈಗೊಂಡರೆ, ನಾವು ಅದಕ್ಕೆ ತಕ್ಕ ಉತ್ತರ ನೀಡುತ್ತೇವೆ’ ಎಂದು ಪಾಕಿಸ್ತಾನ ಹೇಳಿದೆ.

ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರೆ ಮುಮತಾಜ ಜಹರಾ ಬಲೂಚ ಮಾತನಾಡಿ, ಜಮ್ಮು ಮತ್ತು ಕಾಶ್ಮೀರ ವಿವಾದದ ಮೇಲೆ ಏಕಪಕ್ಷೀಯವಾಗಿ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಿಲ್ಲ. ‘ಭದ್ರತಾ ಮಂಡಳಿಯ ಪ್ರಸ್ತಾವನೆ ಮತ್ತು ಕಾಶ್ಮೀರದ ಜನರ ಇಚ್ಛೆಯಂತೆ ಇದರ ಮೇಲೆ ಪರಿಹಾರವನ್ನು ಕಂಡುಹಿಡಿಯಬೇಕು’ ಎಂದು ಹೇಳಿದರು.

ಸಂಪಾದಕೀಯ ನಿಲುವು

ಭಾರತಕ್ಕೆ ಆಗಾಗ ಬೆದರಿಕೆ ಹಾಕುವ ಪಾಕಿಸ್ತಾನಕ್ಕೆ ಅರ್ಥವಾಗುವ ಭಾಷೆಯಲ್ಲಿಯೇ ಭಾರತ ಯಾವಾಗ ಪ್ರತ್ಯುತ್ತರ ನೀಡುವುದು ?