ಮಹಿಳೆಯರಿಗಿರುವ ಮೀಸಲಾತಿಯನ್ನೂ ರದ್ದುಗೊಳಿಸುವ ಬೇಡಿಕೆ
ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ ಕಾಲೇಜು ವಿದ್ಯಾರ್ಥಿಗಳು ರಾಜಕೀಯಕ್ಕೆ ಇಳಿಯಲು ನಿಷೇಧಿಸುವ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಹಾಗೆಯೇ ಯಾವುದೇ ಶಿಕ್ಷಕ ಅಥವಾ ವಿದ್ಯಾರ್ಥಿ ಪಕ್ಷವನ್ನು ಸ್ಥಾಪಿಸಲು ಸಾಧ್ಯವಾಗುವುದಿಲ್ಲ. ಅವರು ರಾಜಕೀಯದಲ್ಲಿ ಭಾಗವಹಿಸಿದರೆ ಅವರಿಗೆ ಕಠಿಣ ಕಾನೂನುಗಳನ್ನು ಎದುರಿಸಬೇಕಾಗುತ್ತದೆ ಎಂದೂ ಈ ಪ್ರಸ್ತಾವನೆಯಲ್ಲಿ ಹೇಳಲಾಗಿದೆ. ಶೇಖ ಹಸೀನಾರ ಪದತ್ಯಾಗದ ನಂತರದ ಪಲಾಯನದ ಬಳಿಕ ನಿವೃತ್ತ ಸೇನಾಧಿಕಾರಿಗಳು ಸಂವಿಧಾನ ಮತ್ತು ಆಡಳಿತ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆಯ ಪ್ರಸ್ತಾಪನೆ ಮಾಡಿದ್ದಾರೆ. ಇದರಲ್ಲಿ ಮೇಲಿನ ಅಂಶಗಳಿವೆ. ಹಾಗೆಯೇ ಸಂಸತ್ತಿನ ಕಾಲಾವಧಿ 5 ವರ್ಷಗಳಿಂದ 4 ಅಥವಾ 6 ವರ್ಷಗಳಿಗೆ ಬದಲಾಯಿಸುವುದಾಗಿ ಹೇಳಲಾಗಿದೆ.
Bangladesh To Ban Students from Politics : Proposal to ban the entry of students into politics in Bangladesh
Demand to remove reservation for women#BangladeshBleeding #BangladeshCrisis pic.twitter.com/VT0FX5akJH
— Sanatan Prabhat (@SanatanPrabhat) September 1, 2024
ನಿವೃತ್ತ ಮೇಜರ ಜನರಲ ಮಹಮ್ಮದ ಮೆಹಬೂಬ ಅಲ್-ಆಲಮ್ ಇವರ ನೇತೃತ್ವದ ಸಮಿತಿಯು ಪ್ರಸ್ತಾಪನೆಗಳನ್ನು ನೀಡಿದೆ. ಇದರಲ್ಲಿ, ಬಾಂಗ್ಲಾದೇಶಕ್ಕೆ ಎಲ್ಲರೊಂದಿಗೆ ಸ್ನೇಹವಿದೆ, ಯಾರೊಂದಿಗೂ ಶತ್ರುತ್ವವಿಲ್ಲ ಎನ್ನುವ ನಿಲುವನ್ನು ಬಿಡಬೇಕಾಗುವುದು. ದೇಶಕ್ಕೆ ಸುದೃಢ ಮತ್ತು ಕ್ರಿಯಾತ್ಮಕ ವಿದೇಶಾಂಗ ನೀತಿಯನ್ನು ಸ್ವೀಕರಿಸಬೇಕಾಗುವುದು. ಹಾಗೆಯೇ ರಾಷ್ಟ್ರೀಯ ಹಿತಾಸಕ್ತಿಯಂತೆ ಸ್ನೇಹ ಹಸ್ತವನ್ನು ಮುಂದೆ ಮಾಡಬೇಕಾಗಿದೆ. ಸಂಸತ್ತಿನಲ್ಲಿ ಮಹಿಳೆಯರಿಗೆ ಸಿಗುವ ಮೀಸಲಾತಿಯನ್ನು ರದ್ದುಗೊಳಿಸಿ ಸಂಸತ್ತಿನಲ್ಲಿ ಸ್ಥಾನವನ್ನು ಹೆಚ್ಚಿಸಬೇಕು. ಸಧ್ಯದ 350 ಸ್ಥಳವಿದ್ದು, ಅದನ್ನು ಹೆಚ್ಚಿಸಿ 500 ಮಾಡಬೇಕು. ಸಂಸತ್ತಿನಲ್ಲಿ ಮಹಿಳೆಯರಿಗೆ ಇರುವ ಮೀಸಲಾತಿಯ 45 ಸ್ಥಾನವನ್ನೂ ರದ್ದುಗೊಳಿಸಬೇಕು. ಸ್ಥಳೀಯ ಚುನಾವಣೆಯಲ್ಲಿ ಮಹಿಳೆಯರಿಗೆ ಇರುವ ಮೀಸಲಾತಿ ಶೇ. 33 ರಷ್ಟು ಸ್ಥಾನವನ್ನು ರದ್ದುಗೊಳಿಸಬೇಕು. ಮುಖ್ಯ ನ್ಯಾಯಮೂರ್ತಿ ಮತ್ತು ನ್ಯಾಯಾಧೀಶರ ನಿಯೋಜನೆಯು ಕಾನೂನು ಸಚಿವಾಲಯದ ಬದಲಿಗೆ ಸ್ವತಂತ್ರ ಆಯ್ಕೆ ಸಮಿತಿ ನೇಮಿಸಬೇಕು. ಎಲ್ಲಾ ನ್ಯಾಯಾಧೀಶರು ನಿಯೋಜನೆಯ ಮೊದಲು ತಮ್ಮ ಆಸ್ತಿ ಮತ್ತು ಹಣಕಾಸಿನ ವಿವರಗಳನ್ನು ಸಲ್ಲಿಸುವುದು ಕಡ್ಡಾಯಗೊಳಿಸುವುದು.