‘ದತ್ತ ಸಂಪ್ರದಾಯದ ಕಾಶಿ’ ಎಂದು ಗಾಣಗಾಪುರ ತೀರ್ಥದ ಮಹತ್ವವಿದೆ ! ಶ್ರೀ ನೃಸಿಂಹಸರಸ್ವತಿಯವರು ತಮ್ಮ ೮೦ ವರ್ಷಗಳ ಅವಧಿಯಲ್ಲಿ ೧೨ ವರ್ಷಗಳ ಕಾಲ ನರಸೋಬಾನವಾಡಿ ಕ್ಷೇತ್ರದಲ್ಲಿ ನೆಲೆಸಿದ್ದರು ಮತ್ತು ಅತ್ಯಂತ ಪ್ರಿಯವಾಗಿರುವ ಕೃಷ್ಣಾ ನದಿಯನ್ನು ಬಿಟ್ಟು ನೃಸಿಂಹಸರಸ್ವತಿಯವರು ಭೀಮಾ-ಅಮರಜಾ ಸಂಗಮದಲ್ಲಿನ ಗಾಣಗಾಪುರ ಈ ಕ್ಷೇತ್ರದಲ್ಲಿ ೨೦ ವರ್ಷಗಳ ವರೆಗೆ ನೆಲೆಸಿದರು ! ಕೊನೆಗೆ ನಿಜಧಾಮಕ್ಕೆ ಹೋಗುವಾಗ ಪುನಃ ಅವರು ಶ್ರೀಶೈಲ್ಯ ಕರ್ದಳಿಯ ಅರಣ್ಯದಲ್ಲಿ ಹೋಗಲು ಕೃಷ್ಣಾ ನದಿಯ ತೀರಕ್ಕೆ ಹೋದರು. ದತ್ತ ಸಂಪ್ರದಾಯದಲ್ಲಿ ಗಾಣಗಾಪುರ ಕ್ಷೇತ್ರವೆಂದರೆ ಸರ್ವಸ್ವವಾಗಿದೆ. ನರಸೊಬಾನವಾಡಿ ಮತ್ತು ಗಾಣಗಾಪುರ ಈ ೨ ಸ್ಥಳಗಳು ಪಂಢರಾಪುರದಂತಿವೆ. ದತ್ತಭಕ್ತರು ಯಾವಾಗಲೂ ಇಲ್ಲಿಗೆ ಬರುತ್ತಾರೆ.
ಅತ್ಯಂತ ಪ್ರಾಚೀನ ಮತ್ತು ಪವಿತ್ರವಾಗಿರುವ ಗಾಣಗಾಪುರ ಕ್ಷೇತ್ರದ ಮಹತ್ವವನ್ನು ಹೆಚ್ಚಿಸಬೇಕು. ಈ ಪರಿಸರದಲ್ಲಿನ ತೀರ್ಥಕ್ಷೇತ್ರಗಳನ್ನು ಶುದ್ಧಗೊಳಿಸಬೇಕು, ಅವುಗಳ ಪಾವಿತ್ರ್ಯವನ್ನುನ್ನು ಹೆಚ್ಚಿಸಬೇಕು, ಹಾಗೆಯೇ ಈ ಪರಿಸರದಲ್ಲಿನ ಭಕ್ತರಿಗೆ ಮುಕ್ತಿ ಸಿಗಬೇಕು, ಅವರ ಸಂಕಟಗಳನ್ನು ದೂರಗೊಳಿಸಬೇಕು, ಇದು ಗಾಣಗಾಪುರ ಕ್ಷೇತ್ರದಲ್ಲಿ ಅವರು ನೆಲೆಸುವ ಉದ್ದೇಶವಾಗಿತ್ತು. ಇಷ್ಟೇ ಅಲ್ಲದೇ ನೃಸಿಂಹಸರಸ್ವತಿಯವರು ಭಕ್ತರಿಗೆ, ‘ನಾವು ನಿತ್ಯ ಗಾಣಗಾಪುರದಲ್ಲಿ ಇರಲಿದ್ದೇವೆ. ಮಠದಲ್ಲಿ ನಮ್ಮ ನಿವಾಸ ಇರುವುದು. ಇಷ್ಟ ಭಕ್ತರಿಗೆ ನಾವು ದರ್ಶನವನ್ನು ನೀಡಿ ಅವರ ಇಚ್ಛೆಗಳನ್ನು ಪೂರ್ಣಗೊಳಿಸುವೆವು.’ ಎಂಬ ವಚನವನ್ನು ನೀಡಿದ್ದಾರೆ. ನೃಸಿಂಹಸರಸ್ವತಿಯವರು ಮಧ್ಯಾಹ್ನ ಭೀಮಾತೀರದಲ್ಲಿ ಭಿಕ್ಷೆಗಾಗಿ ಬರುತ್ತಿದ್ದುದರಿಂದ ಗಾಣಗಾಪುರದಲ್ಲಿ ಭಿಕ್ಷೆಗೆ ಅತ್ಯಂತ ಮಹತ್ವವಿದೆ. ಎಲ್ಲ ಭಕ್ತರು ಭಿಕ್ಷೆ ಬೇಡುತ್ತಾರೆ. ಗಾಣಗಾಪುರದ ಈ ತೀರ್ಥದ ಇನ್ನೊಂದು ವಿಶೇಷವೆಂದರೆ ಭೂತಬಾಧೆ, ಮಾನಸಿಕ ರೋಗ, ಎಲ್ಲ ತೊಂದರೆಗಳು ಈ ಪರಿಸರದಲ್ಲಿ ದತ್ತಾತ್ರೆಯನ ಸಾನಿಧ್ಯದಿಂದ ಇಂತಹ ಶಕ್ತಿಗಳು ಈ ಸ್ಥಳಕ್ಕೆ ಬರುವುದಿಲ್ಲ. ಪಿತೃದೋಷ, ಪಿಶಾಚಿ ದೋಷಗಳ ನಿವಾರಣೆಯೂ ಈ ಸ್ಥಳದಲ್ಲಿ ಆಗುತ್ತದೆ. ನೃಸಿಂಹಸರಸ್ವತಿಯವರು ‘ಗಾಣಗಾಪುರ ಪರಿಸರದಲ್ಲಿಯೇ ಎಲ್ಲ ತೀರ್ಥಗಳಿವೆ’, ಎಂದು ಹೇಳಿ ಇಲ್ಲಿನ ತೀರ್ಥಗಳ ಮಹಿಮೆಯನ್ನು ಹೇಳಿದರು.
೧. ಠಾರಕೂಲ ತೀರ್ಥ
‘ಇಲ್ಲಿ ಭೀಮಾ ಮತ್ತು ಅಮರಜಾ ಈ ಎರಡು ನದಿಗಳ ಸಂಗಮವಿದೆ. ಈ ಸಂಗಮದಲ್ಲಿ ಠಾರಕೂಲ ಈ ತೀರ್ಥವಿದೆ. ಈ ಸ್ಥಳದಲ್ಲಿ ಭೀಮಾ ನದಿಯು ಉತ್ತರವಾಹಿನಿ ಆಗಿದೆ. ಭೀಮಾ, ಅಮರಜಾ ಈ ನದಿಗಳೆಂದರೆ ಗಂಗಾ ಮತ್ತು ಯಮುನೆಯೇ ಆಗಿವೆ. ‘ಈ ಸ್ಥಳದಲ್ಲಿ ಸ್ನಾನವನ್ನು ಮಾಡಿದರೆ ನೂರುಪಟ್ಟು ಪುಣ್ಯ ಸಿಗುತ್ತದೆ’, ಎಂದು ಹೇಳಿ ನೃಸಿಂಹಸರಸ್ವತಿಯವರು ಅಮರಜಾ ನದಿಯ ಕಥೆಯನ್ನು ಭಕ್ತರಿಗೆ ಹೇಳಿದರು.
೨. ಮನೋರಥ ತೀರ್ಥ
ಮೇಲಿನ ಸಂಗಮದ ಮುಂದೆ ಮತ್ತು ಅರಳಿ ಮರದ ಮುಂದೆ ‘ಮನೋರಥ’ತೀರ್ಥವಿದೆ. ಮನೋರಥವೆಂದರೆ ಇಚ್ಛೆಯನ್ನು ಪೂರ್ಣಗೊಳಿಸುವುದಾಗಿದೆ. ಈ ತೀರ್ಥದಲ್ಲಿ ಸ್ನಾನ ಮಾಡಿದರೆ, ಇಷ್ಟಾರ್ಥ ಸಿದ್ಧಿಯಾಗುತ್ತದೆ. ಇದು ಕಾಮ್ಯಕ ತೀರ್ಥವಾಗಿದೆ. ಕಲ್ಪವೃಕ್ಷದಂತೆ ಈ ತೀರ್ಥದ ಫಲವಾಗಿದೆ; ಏಕೆಂದರೆ ‘ಅಶ್ವತ್ಥ’ (ಅರಳಿಮರ) ಕಲ್ಪವೃಕ್ಷವು ಈ ಸ್ಥಳದಲ್ಲಿದೆ. ಗುರುಚರಿತ್ರೆಯಲ್ಲಿ ಅಶ್ವತ್ಥಮಹಿಮೆಯ ಬಗ್ಗೆ ವಿವರವಾಗಿ ಕೊಡಲಾಗಿದೆ. ನೃಸಿಂಹಸರಸ್ವತಿಯವರು ನಿತ್ಯ ಈ ಸ್ಥಳದಲ್ಲಿ ವಾಸ ಮಾಡುತ್ತಾರೆ. ಇಲ್ಲಿ ಗರುಡ ಹಾಗೆಯೇ ರಣಹದ್ದುಗಳು ಕಾಣಸಿಗುತ್ತವೆ.
೩. ಸಂಗಮೇಶ್ವರ
ಕಲ್ಪವೃಕ್ಷದ ಪೂಜೆಯನ್ನು ಮಾಡಿ ಮತ್ತು ಮನೋಹರ ತೀರ್ಥದಲ್ಲಿ ಸ್ನಾನ ಮಾಡಿ ಸಂಗಮೇಶ್ವರಕ್ಕೆ ಬರುತ್ತಾರೆ. ಇಲ್ಲಿ ಶಿವಮಂದಿರವಿದೆ. ನಂದಿಗೆ ನಮಸ್ಕಾರ ಮಾಡಿ ಈ ಶಿವನಿಗೆ ಪ್ರದಕ್ಷ್ಷಿಣೆಗಳನ್ನು ಹಾಕಬೇಕು. ‘ಶ್ರೀಶೈಲ ಪರ್ವತದ ಮೇಲಿನ ‘ಮಲ್ಲಿಕಾರ್ಜುನ’ ಎಂದು ತಿಳಿದು ಅರ್ಚನೆ ಮಾಡಿದರೆ ಇಂದ್ರ ಪದವಿ ಸಿಗುತ್ತದೆ’, ಎಂದು ಇದರ ಮಹತ್ವವನ್ನು ಹೇಳಲಾಗಿದೆ.
೪. ವಾರಾಣಸಿ ತೀರ್ಥ
ಸಂಗಮೇಶ್ವರನ ಪೂಜೆಯನ್ನು ಮಾಡುತ್ತಾರೆ. ೧-೨ ಕೋಸು ದೂರದಲ್ಲಿ ನಾಗೇಶಿ ಎಂಬ ಊರು ಇದೆ. ಈ ಸ್ಥಳದಲ್ಲಿ ವಾರಾಣಸಿ ತೀರ್ಥವಿದೆ. ನೃಸಿಂಹಸರಸ್ವತಿಯವರು, ‘ಇದು ಕಾಶಿ ಮತ್ತು ವಾರಾಣಸಿಯಂತಹ ತೀರ್ಥವಾಗಿದೆ. ನಿಃಸಂದೇಹವಾಗಿ ಇಲ್ಲಿ ಸ್ನಾನವನ್ನು ಮಾಡಿರಿ ಮತ್ತು ಮುಕ್ತರಾಗಿರಿ’ ಎಂದು ಹೇಳಿದ್ದಾರೆ.
೫. ಪಾಪವಿನಾಶಿನಿ ತೀರ್ಥ
ಗಾಣಗಾಪುರ ಕ್ಷೇತ್ರದ ಮಹತ್ವದ ತೀರ್ಥವಾಗಿದೆ. ಹೆಸರಿನಂತೆ ಈ ತೀರ್ಥದಲ್ಲಿ ಸ್ನಾನ ಮಾಡಿದರೆ ಪಾಪನಾಶವಾಗುತ್ತದೆ. ನೃಸಿಂಹಸರಸ್ವತಿಯವರು ತಮ್ಮ ಸಹೋದರಿ ರಾನಾಯಿ ಇವಳಿಗೆ ಅವರು ಈ ತೀರ್ಥಕ್ಷೇತ್ರದಲ್ಲಿ ಸ್ನಾನ ಮಾಡಲು ಹೇಳಿದರು. ತದನಂತರ ಅವಳ ಕುಷ್ಟರೋಗವು ದೂರವಾಯಿತು.
೬. ಕೋಟಿ ತೀರ್ಥ
ಪರ್ವಕಾಲದಲ್ಲಿ ಸ್ನಾನ ಮಾಡಬೇಕು, ದಾನಾದಿ ಕಾರ್ಯಗಳನ್ನು ಮಾಡುವುದೇ ಈ ತೀರ್ಥದ ಮಹತ್ವವಾಗಿದೆ. ಇದು ದಾನದಿಂದ ಕೋಟಿ ಪಟ್ಟುಗಳಷ್ಟು ದಾನದ ಫಲವನ್ನು ಪಡೆಯಬಹುದಾದ ತೀರ್ಥವಾಗಿದೆ.
೭. ರುದ್ರಪಾದ ತೀರ್ಥ
ರುದ್ರಪಾದ ತೀರ್ಥದ ಮಹತ್ವವು ಗಯಾ ತೀರ್ಥದಂತಿದೆ. ಇಲ್ಲಿ ಪಿತೃಕರ್ಮದಂತಹ ವಿಧಿಗಳನ್ನು ಮಾಡಿದರೆ ಕೋಟಿ ಗುಣಗಳ ಲಾಭವಾಗುತ್ತದೆ. ಕೋಟಿ ಜನ್ಮಗಳ ಪಾಪ ನಷ್ಟವಾಗುತ್ತದೆ.
೮. ಚಕ್ರ ತೀರ್ಥ
ಈ ಅತ್ಯಂತ ವಿಶೇಷವಾಗಿರುವ ತೀರ್ಥದ ಹತ್ತಿರ ಕೇಶವನ ಸಾನಿಧ್ಯವಿದೆ. ಈ ಸ್ಥಳದಲ್ಲಿ ಸ್ನಾನ ಮಾಡಿದರೆ ಜ್ಞಾನವೃದ್ಧಿಯಾಗುತ್ತದೆ. ಇಲ್ಲಿ ಅಸ್ತಿವಿಸರ್ಜನೆ ಮಾಡಿದರೆ ಅವು ಚಕ್ರ ಗಳಂತೆ ಆಗುತ್ತವೆ. ಮೃತನಿಗೆ ಮೋಕ್ಷಪ್ರಾಪ್ತಿಯಾಗುತ್ತದೆ. ನೃಸಿಂಹ ಸರಸ್ವತಿಯವರು ಎಲ್ಲರಿಗೂ ಈ ತೀರ್ಥದಲ್ಲಿ ಸ್ನಾನವನ್ನು ಮಾಡಲು ಹೇಳಿದರು.
೯. ಮನ್ಮಥ ತೀರ್ಥ
ಪೂರ್ವಕ್ಕೆ ಕಲ್ಲೇಶ್ವರ ಮಹಾದೇವನ ಸ್ಥಾನವಿದೆ. ಇದರ ಮಹಾತ್ಮೆಯು ಗೋಕರ್ಣದ ಮಹಾಬಲೇಶ್ವರದಷ್ಟಿದೆ. ಮನ್ಮಥ ತೀರ್ಥದಲ್ಲಿ ಸ್ನಾನ ಮಾಡಿ ಕಲ್ಲೇಶ್ವರನ ದರ್ಶನವನ್ನು ಪಡೆಯಬೇಕು ಮತ್ತು ಅವನ ಪೂಜೆಯನ್ನು ಮಾಡಬೇಕು. ಭಕ್ತನಿಗೆ ಪ್ರಜಾವೃದ್ಧಿ ಮತ್ತು ಅಷ್ಟ ಐಶ್ವರ್ಯದ ಪ್ರಾಪ್ತಿಯಾಗುತ್ತದೆ, ಹೀಗೆ ಈ ಪುಣ್ಯಪ್ರದ ತೀರ್ಥವಾಗಿದೆ.
‘ದತ್ತ ಸಂಪ್ರದಾಯದ ಪಂಢರಿ’ ಎಂದು ಕರೆಯಲ್ಪಡುವ ಈ ತೀರ್ಥಕ್ಷೇತ್ರವು ಶ್ರೀಕ್ಷೇತ್ರ ನೃಸಿಂಹವಾಡಿ ಎಂದು ಜನಪ್ರಿಯವಾಗಿದೆ. ಪ್ರಾಚೀನ ಕಾಲದಿಂದ ದಂಡಕಾರಣ್ಯದಲ್ಲಿನ ಈ ಕ್ಷೇತ್ರವು ಅತ್ಯಂತ ಪವಿತ್ರವಾಗಿದೆ. ಆದ್ದರಿಂದಲೇ ನೃಸಿಂಹಸರಸ್ವತಿಯವರು ಈ ಸ್ಥಳದಲ್ಲಿ ೧೨ ವರ್ಷಗಳ ವರೆಗೆ ವಾಸಿಸಿದರು. ಅವರ ವಾಸ್ತವ್ಯದಿಂದ ಅದು ‘ಅವಿಮುಕ್ತ’ವಾಗಿರುವ ಕಾಶಿಪುರ, ಅಂದರೆ ‘ದಕ್ಷಿಣ ಕಾಶಿ’ ಎಂದು ಪ್ರಸಿದ್ಧವಾಯಿತು.
೧೦. ಶ್ರೀ ಕ್ಷೇತ್ರ ನೃಸಿಂಹವಾಡಿ (ನರಸೋಬಾನವಾಡಿ)
‘ದತ್ತ ಸಂಪ್ರದಾಯದ ಪಂಢರಿ’ ಎಂದು ಕರೆಯಲ್ಪಡುವ ಈ ತೀರ್ಥಕ್ಷೇತ್ರವು ಶ್ರೀಕ್ಷೇತ್ರ ನೃಸಿಂಹವಾಡಿ ಎಂದು ಜನಪ್ರಿಯವಾಗಿದೆ. ಪ್ರಾಚೀನ ಕಾಲದಿಂದ ದಂಡಕಾರಣ್ಯದಲ್ಲಿನ ಈ ಕ್ಷೇತ್ರವು ಅತ್ಯಂತ ಪವಿತ್ರವಾಗಿದೆ. ಆದ್ದರಿಂದಲೇ ನೃಸಿಂಹಸರಸ್ವತಿಯವರು ಈ ಸ್ಥಳದಲ್ಲಿ ೧೨ ವರ್ಷಗಳವರೆಗೆ ವಾಸಿಸಿದರು. ಅವರ ವಾಸ್ತವ್ಯದಿಂದ ಅದು ‘ಅವಿಮುಕ್ತ’ವಾಗಿರುವ ಕಾಶಿಪುರ, ಅಂದರೆ ‘ದಕ್ಷಿಣ ಕಾಶಿ’ ಎಂದು ಪ್ರಸಿದ್ಧವಾಯಿತು. ಇಂತಹ ಶ್ರೇಷ್ಠ ಪುಣ್ಯಕ್ಷೇತ್ರವಾಗಿದೆ. ನೃಸಿಂಹಸರಸ್ವತಿಯವರ ವಾಸ್ತವ್ಯದಿಂದ ಪಾವನವಾದ ಇಲ್ಲಿನ ಪಂಚಗಂಗಾ ಸಂಗಮವು ಪ್ರಯಾಗದಂತಿರುವ ಪವಿತ್ರ ಸಂಗಮವೆಂದು ಖ್ಯಾತಿ ಪಡೆದಿದೆ.
ವಾರಾಣಸಿಯಲ್ಲಿ ಪಂಚಗಂಗೆ ಸಹಿತ ಭಾಗೀರಥಿ ನದಿ ಇದೆ ಮತ್ತು ನೃಸಿಂಹವಾಡಿಯಲ್ಲಿ ಪಂಚಗಂಗೆ ಸಹಿತ ಕೃಷ್ಣಾ ನದಿ ಇದೆ; ಆದ್ದರಿಂದ ದಕ್ಷಿಣ ಭಾಗದ ಕೃಷ್ಣಾ ನದಿಯು ಸಾಕ್ಷಾತ್ ಭಾಗೀರಥಿ ಗಂಗೆಯಾಗಿದೆ. ದತ್ತಾತ್ರೇಯ ದೇವತೆ ಮತ್ತು ಕೃಷ್ಣಾ ನದಿಯ ಅನ್ಯೋನ್ಯ ಸಂಬಂಧವಿದೆ. ಕೃಷ್ಣಾ ನದಿ ಎಂದರೆ ಸಾಕ್ಷಾತ್ ತ್ರಿಮೂರ್ತಿ ದತ್ತಾತ್ರೆಯರು ಜಲಸ್ವರೂಪದಲ್ಲಿದ್ದಾರೆ. ಶ್ರೀಪಾದ ಶ್ರೀವಲ್ಲಭರು ಕುರವಪುರದಲ್ಲಿ ೧೩ ವರ್ಷಗಳವರೆಗೆ ನೆಲೆಸಿದ್ದರು. ಆ ಕುರುವಪುರ ಕ್ಷೇತ್ರವು ಕೃಷ್ಣಾತೀರದಲ್ಲಿದೆ. ನೃಸಿಂಹಸರಸ್ವತಿಯವರು ಈ ಸ್ಥಳದಲ್ಲಿ ಇರುವುದರಿಂದ ಮುಂದೆ ಈ ಸ್ಥಾನಕ್ಕೆ ‘ನೃಸಿಂಹವಾಡಿ’ ಅಥವಾ ‘ನರಸೊಬಾನ ವಾಡಿ’, ಎಂದು ಹೆಸರುವಾಸಿಯಾಯಿತು. ಮುಂದೆ ಅನೇಕ ಸಿದ್ಧ ಯೋಗಿಗಳು ಈ ಸ್ಥಳದಲ್ಲಿ ತಪಶ್ಚರ್ಯವನ್ನು ಮಾಡಿರುವ ಈ ತಪೋಭೂಮಿಯು ನೃಸಿಂಹವಾಡಿ ಎಂದು ಪ್ರಸಿದ್ಧವಾಯಿತು.
ದತ್ತಾತ್ರೇಯರ ನಿಜಸ್ಥಾನವೆಂದು ಶ್ರೀ ಕ್ಷೇತ್ರ ವಾಡಿಯಲ್ಲಿನ ಕೃಷ್ಣಾ-ಪಂಚಗಂಗೆಯ ಸಂಗಮವಿದೆ. ಸ್ವತಃ ಶ್ರೀ ನೃಸಿಂಹಸರಸ್ವತಿಯವರು, “ನಾವು ನಿತ್ಯ ಔದುಂಬರ, ನೃಸಿಂಹವಾಡಿ ಮತ್ತು ಗಾಣಗಾಪುರದಲ್ಲಿ ವಾಸಿಸುತ್ತೇವೆ !” ಎಂದು ಹೇಳುತ್ತಾರೆ ಮತ್ತು ಈ ಸ್ಥಳದಲ್ಲಿ ಅವರ ನಿತ್ಯ ಮತ್ತು ನಿರಂತರ ಗುಪ್ತರೂಪದಲ್ಲಿ ವಾಸವಿರುವುದನ್ನು ಅನೇಕ ಜನರು ಅನುಭವಿಸಿದ್ದಾರೆ.
ಪೂಜಾರಿ ಜೇರೆ ಇವರ ಕುಲದ ಉದ್ಧಾರ !
ನೃಸಿಂಹಸರಸ್ವತಿಯವರು ಇಲ್ಲಿ ವಾಸ್ತವವಾಗಿ ಇಲ್ಲಿನ ಪರಂಪರೆಯಿಂದ ಬಂದ ಅರ್ಚಕರಾದ ಜೇರೆ ಕುಲದ ಉದ್ಧಾರವನ್ನು ಮಾಡಲು ಬಂದಿದ್ದರು ! ಶ್ರೀಪಾದ ಭಟ್ ಜೇರೆ ಇವರು ಅಲಾಸದಿಂದ ಪ್ರತಿದಿನ ನೃಸಿಂಹಸ್ವಾಮಿಗಳ ದರ್ಶನಕ್ಕೆ ಬರುತ್ತಿದ್ದರು. ಶ್ರೀಪಾದಶಾಸ್ತ್ರಿ ಜೇರೆ ಇವರ ಪುತ್ರ ಭೈರವಭಟ್ ಇವರು ಅರ್ಚಕರೆಂದು ಇಲ್ಲಿ ಇದ್ದರು. ಭೈರವಭಟ್ಟರು ಸ್ವತಃ ವೇದಾಂತಿಯಾಗಿದ್ದರು. ಸುತ್ತಮುತ್ತಲಿನ ಪ್ರದೇಶದಲ್ಲಿ ಅವರಿಗೆ ಗೌರವ ಇತ್ತು. ಅವರು ಪೌರೋಹಿತ್ಯವನ್ನು ಮಾಡುತ್ತಿದ್ದರು. ಪಂಚಕೋಶದಲ್ಲಿ ಅವರಿಗೆ ಮಾನ-ಸನ್ಮಾನ ಇತ್ತು. ಅವರು ಪೌರೋಹಿತ್ಯವನ್ನು ಮಾಡುತ್ತಿದ್ದರು ಅವರ ಪತ್ನಿಯು ಸಹ ಸುಶೀಲ ಮತ್ತು ಪತಿವ್ರತೆಯಾಗಿದ್ದಳು. ಅವರು ತಮ್ಮ ತಂದೆಯಿಂದ ವೇದ-ಶಾಸ್ತವನ್ನು ಅನುವಂಶಿಕವಾಗಿ ಪಡೆದಿದ್ದರು. ಅರ್ಚಕರೆಂದು ‘ಮನೋಹರ’ ಪಾದಪೂಜೆಯ ಸೇವೆಯು ಅವರ ಬಳಿಗೆ ಬಂದಿತು.
ನೃಸಿಂಹಸರಸ್ವತಿಯವರು ಭೈರವಭಟ್ಟರಿಗೆ, “ಒಂದು ಶಿಲೆಯ ಮೇಲೆ ಪಾದುಕಗಳು ಪ್ರಕಟ ಆಗುವವು. ನೀವು ಪೀಳಿಗೆಯಿಂದ ಪೀಳಿಗೆಗೆ ಆ ಪಾದುಕಗಳ ಪೂಜೆ ಮಾಡಬೇಕು. ನಾವು ಗಂಧರ್ವನಗರಿ ಅಂದರೆ ಗಾಣಗಾಪುರಕ್ಕೆ ಹೋಗಲಿದ್ದೇವೆ; ಆದರೆ ‘ಮನೋಹರ’ ಪಾದುಕಗಳ ರೂಪದಲ್ಲಿ ನಾವು ಇಲ್ಲಿ ನಿತ್ಯ ವಾಸ ಮಾಡುವೆವು.” ಎಂದು ಹೇಳಿ ನೃಸಿಂಹಸರಸ್ವತಿಯವರು ಔದುಂಬರ ವೃಕ್ಷದ ಕೆಳಗೆ ಕಪ್ಪು ಶಿಲೆಯ ಮೇಲೆ ಕಮಂಡಲುನಲ್ಲಿನ ನೀರು ಕೃಷ್ಣಜಲವನ್ನು ಸಿಂಪಡಿಸಿದರು. ಅನಂತರ ತಮ್ಮ ಬೆರಳುಗಳಿಂದ ಓಂಕಾರವನ್ನು ಬರೆದರು ಮತ್ತು ಮನುಷ್ಯನ ಹೆಜ್ಜೆಗಳ ಆಕೃತಿಯನ್ನು ಬಿಡಿಸಿದರು. ಶೀಘ್ರದಲ್ಲಿಯೇ ಶುಭಚಿಹ್ನೆಗಳೊಂದಿಗೆ ಪದಯುಗುಲ ಇವು ಶಿಲೆಯ ಮೇಲೆ ಪ್ರಕಟವಾದವು. ನೃಸಿಂಹಸರಸ್ವತಿಯವರು, “ತಾವು ತಂದಿರುವ ಅನ್ನಸಾಮಗ್ರಿಗಳನ್ನು ಈ ಪಾದುಕಗಳ ಹತ್ತಿರ ಇಡಿ. ಜಗದಂಬಾ ಅನ್ನಪೂರ್ಣೆಯು ಅವತರಿಸಲಿದ್ದಾಳೆ. ಅವಳ ಪೂಜೆಯನ್ನು ಮಾಡಿರಿ.” ಎಂದು ಹೇಳಿದರು. ಅನ್ನಪೂಣೇಶ್ವರಿಯು ಪ್ರಕಟಳಾದಳು. ಭೈರವಭಟ್ಟರು ಆ ಸ್ಥಳದಲ್ಲಿ ಕುಟೀರವನ್ನು ಕಟ್ಟಿ ಇದ್ದರು. ಅವರಿಗೆ ೬೪ ಯೋಗಿನಿಯರು ದರ್ಶನವನ್ನು ನೀಡಿದರು. ‘ಕಾಶೀಕ್ಷೇತ್ರದಲ್ಲಿ ವಾಸಿಸುವ ಈ ದೇವಕನ್ಯೆ ಯೋಗಿನಿ ದೇವತೆಗಳು ಕೃಷ್ಣೆಯ ಪೂರ್ವಕಡಲಿನಲ್ಲಿ ವಾಸ ಮಾಡಿದ್ದಾರೆ”, ಎಂದು ನೃಸಿಂಹಸರಸ್ವತಿಯವರು ಹೇಳಿದರು. ಸ್ವತಃ ಅನ್ನಪೂರ್ಣೆ ಮಾತೆಯು ನೃಸಿಂಹಸರಸ್ವತಿಯವರಿಗೆ ಭಿಕ್ಷೆ ನೀಡುತ್ತಿದ್ದಳು. ರಾಮಚಂದ್ರ ಯೋಗಿನಿಗಳು ಸಹ ಭೈರವಭಟ್ಟರನ್ನು ವಿಚಾರಿಸುತ್ತಿದ್ದರು. ತಮ್ಮ ಅದೃಷ್ಟದ ಬಗ್ಗೆ ಅವರಿಗೆ ಪ್ರಶಂಸೆ ಮತ್ತು ಆನಂದವೆನಿಸಿತು. ಅವರು ಭೈರವಭಟ್ಟರಿಗೆ ಶ್ರೀಪಾದ ಶ್ರೀವಲ್ಲಭ ಮತ್ತು ನೃಸಿಂಹಸರಸ್ವತಿ ಇವರ ಅವತಾರದ ಬಗ್ಗೆ ಮಾಹಿತಿಯನ್ನು ನೀಡಿದರು. ನೃಸಿಂಹಸರಸ್ವತಿಯವರು ಸ್ವತಃ ಪೂಜೆಯ ವಿಧಾನವನ್ನು ಹೇಳಿದರು.
ನೃಸಿಂಹಸರಸ್ವತಿಯವರು ಕೈಯಲ್ಲಿ ದಂಡಕಮಂಡಲವನ್ನು ಹಿಡಿದಿದ್ದಾರೆ. ಭೈರವಭಟ್ಟರು ಮಹಾರಾಜರ ಚರಣಗಳನ್ನು ಗಟ್ಟಿ ಹಿಡಿದಿಟ್ಟರು. ಆಗ ನೃಸಿಂಹಸರಸ್ವತಿಯವರು, “ನಾವು ಇಲ್ಲಿಯೇ ಇದ್ದೇವೆ.” ಎಂದು ಹೇಳಿದರು. ಅವರು ಪೂರ್ವಕ್ಕೆ ತಿರುಗಿದರು. ಕೃಷ್ಣಾನದಿಯ ಬಳಿ ಬಂದರು. ಪ್ರವಾಹ ಎರಡು ಭಾಗವಾಯಿತು. ಹೂವುಗಳ ಎರಡು ಮಾರ್ಗಗಳು ನಿರ್ಮಾಣವಾದವು. ಮಹಾರಾಜರು ಮುಂದೆ ಹೋದರು ಮತ್ತು ಗುಪ್ತರಾದರು. ಅವರು ತಮ್ಮ ಪ್ರವಾಸವನ್ನು ಗಾಣಗಾಪುರದ ದಿಶೆಯಲ್ಲಿ ಪ್ರಾರಂಭಿಸಿದರು. ಭೈರವಭಟ್ಟರಿಗೆ ಪ್ರತ್ಯಕ್ಷ ನೃಸಿಂಹಸರಸ್ವತಿಯವರ ಸಾನಿಧ್ಯ ಲಭಿಸಿತು.
ಭೈರಬಭಟ್ಟರಿಗೆ ನರಹರಭಟ್, ಜಾವಣಭಟ್, ಶ್ರೀಪಾದಭಟ್ ಮತ್ತು ಸಖಾರಾಮಭಟ್ಟ ಎಂಬ ನಾಲ್ಕು ಮಕ್ಕಳಾದರು. ಇವರಿಂದಲೇ ಮುಂದೆ ಪೂಜಾರಿಗಳ (ಅರ್ಚಕರ) ವಂಶವು ಬೆಳೆಯಿತು. ಇದುವರೆಗೆ ಈ ವಂಶಜರು ಮಹಾರಾಜರ ಸೇವೆಯನ್ನು ಮಾಡುತ್ತಿದ್ದಾರೆ. ಸಂಪೂರ್ಣ ಕುಲದ ಮೇಲೆ ಅವರ ಕೃಪಾಶೀರ್ವಾದವಿದೆ. ಈ ಜೇರೆ ಮನೆತನವು ವೇದವಿದರಾಗಿದ್ದಾರೆ.
ಪ.ಪ. ಟೆಂಬೆಸ್ವಾಮಿಯವರು ನೃಸಿಂಹಸರಸ್ವತಿಯವರ ಪೂಜೆಯ ಶಿಸ್ತನ್ನು ಹೇಳಿಕೊಟ್ಟರು. ಕಾಕಡ ಆರತಿಯಿಂದ ಶೇಜಾರತಿವರೆಗೆ ಪೂಜೆಯಾಗುತ್ತದೆ. ಪ್ರತಿದಿನ ಪಲ್ಲಕ್ಕಿ ಇರುತ್ತದೆ. ಭಜನೆ, ಅಭಂಗಗಳನ್ನು ಹಾಡಲಾಗುತ್ತದೆ, ಈ ಕಾರ್ಯಕ್ರಮವು ಅದ್ಭುತವಾಗಿರುತ್ತದೆ.’
೧೧. ಶ್ರೀ ಕ್ಷೇತ್ರ ಔಂದುಂಬರ
‘೧೪೨೬ ರಲ್ಲಿ ನೃಸಿಂಹಸರಸ್ವತಿ ಇವರು ಔದುಂಬರ ಈ ಕ್ಷೇತ್ರದಲ್ಲಿ ಭುವನೇಶ್ವರಿಯ ಸಾನಿಧ್ಯದಲ್ಲಿ ಬಂದರು. ಈ ಕ್ಷೇತ್ರಕ್ಕೆ ‘ಔದುಂಬರ ಕ್ಷೇತ್ರ’ವೆಂದು ನಂತರ ಹೆಸರಬಂದಿತು. ಈ ಮೊದಲು ಈ ಪರಿಸರವನ್ನು ಭಿಲ್ಲವಾಡಿ ಎಂದು ಕರೆಯಲಾಗುತ್ತಿತ್ತು.
‘ದತ್ತಪಾದುಕಗಳ ಮೇಲೆ ಗಂಧದ ಲೇಪನ ಹಚ್ಚುವುದು’, ಇದು ಔದುಂಬರ ಕ್ಷೇತ್ರದಲ್ಲಿನ ದತ್ತ ಪಾದುಕಗಳ ವಿಶೇಷ ಸ್ವರೂಪವಾಗಿದೆ. ಅದರ ಹೊರತು ಚೈತ್ರಮಾಸದಲ್ಲಿ ಕೃಷ್ಣಾಬಾಯಿ ಉತ್ಸವ, ಶ್ರೀಪಾದವಲ್ಲಭ ಮತ್ತು ನೃಸಿಂಹಸರಸ್ವತಿ ಜನ್ಮೋತ್ಸವ, ದತ್ತಜಯಂತಿ, ಹೀಗೆ ಅನೇಕ ಕಾರ್ಯಮಗಳಿರುತ್ತವೆ. ನಿತ್ಯ ಆರತಿ, ಪೂಜೆ, ಅನ್ನದಾನ ಇವುಗಳು ನಡೆಯುತ್ತವೆ.
ಸಂತ ಜನಾರ್ದನಸ್ವಾಮಿ ಮತ್ತು ಸಂತ ಏಕನಾಥ ಮಹಾರಾಜರಿಗೆ ಈ ಸ್ಥಳದಲ್ಲಿ ದತ್ತದರ್ಶನವಾಗಿತ್ತು. ಇದೇ ಸ್ಥಳದಲ್ಲಿ ನೃಸಿಂಹಸರಸ್ವತಿಯವರು ಔದುಂಬರ ವೃಕ್ಷದ ಮಹಿಮೆಯನ್ನು ಹೇಳಿದ್ದರು, ‘ನನ್ನ ನಿತ್ಯ ವಾಸವು ಈ ವೃಕ್ಷದಲ್ಲಿದೆ. ಈ ವೃಕ್ಷದ ನಿತ್ಯ ಪೂಜೆ ಮತ್ತು ವೃಕ್ಷದ ಕೆಳಗೆ ಗುರುಚರಿತ್ರೆ ಪಾರಾಯಣವನ್ನು ಯಾರು ಮಾಡುತ್ತಾರೆಯೋ, ಅಂತಹ ಭಕ್ತನಿಗೆ ಖಂಡಿತವಾಗಿ ಅನುಭೂತಿ ಬರುವುದು ಮತ್ತು ನೂರುಗುಣಗಳಿಂದ ಫಲ ಪ್ರಾಪ್ತಿಯಾಗುವುದು.’ ಇಂತಹ ಈ ಔದುಂಬರ ಕ್ಷೇತ್ರದಲ್ಲಿ ೪ ತಿಂಗಳಿದ್ದು, ನೃಸಿಂಹಸರಸ್ವತಿಯವರು ವಾರಣಾಸಂಗಮದಲ್ಲಿ ಬಂದರು. ಸಾಂಗಲಿಯ ಹತ್ತಿರ ಹರಿಪುರ ಈ ಸ್ಥಳದಲ್ಲಿ ವಾರಣಾ ಮತ್ತು ವಾರುಣಿ ನದಿ ಮತ್ತು ಕೃಷ್ಣಾ ನದಿಯ ಸಂಗಮವಿದೆ. ಸಂಗಮೇಶ್ವರದಲ್ಲಿ ಮಹಾದೇವನ ಸ್ಥಾನ ಮತ್ತು ಅರಳಿಮರವಿದೆ. ನೃಸಿಂಹಸರಸ್ವತಿಯವರು ಕೆಲವು ಕಾಲದವರೆಗೆ ಇಲ್ಲಿ ಉಳಿದುಕೊಂಡು ಮುಂದೆ ನರಸೋಬಾ ವಾಡಿ ಕ್ಷೇತ್ರಕ್ಕೆ ಹೋದರು. ಭುವನೇಶ್ವರಿ ಮತ್ತು ದತ್ತಾತ್ರೆಯ, ಇವರ ಪವಿತ್ರ ಮತ್ತು ಸಿದ್ಧವಾಗಿರುವ ಈ ಸ್ಥಾನವು ತಪೋಭೂಮಿ ಅಂದರೆ ‘ಕ್ಷೇತ್ರ ಔದುಂಬರ’ವಾಗಿದೆ. ಕೃಷ್ಣಾ ನದಿಯ ಪಾತ್ರದಲ್ಲಿ ಪವಿತ್ರ ತೀರ್ಥಗಳಿವೆ. ಪ್ರತ್ಯಕ್ಷ ಭುವನೇಶ್ವರಿ ಮಾತೆ, ಹಾಗೆಯೇ ಅನೇಕ ಸಿದ್ಧರು ಈ ಸ್ಥಳದಲ್ಲಿ ನೆಲೆಸಿ ತೀರ್ಥಕ್ಷೇತ್ರಗಳನ್ನು ನಿರ್ಮಾಣ ಮಾಡಿದ್ದಾರೆ.’
ದತ್ತಾತ್ರೆಯರ ಇತರ ತೀರ್ಥಕ್ಷೇತ್ರಗಳು
ಮಾಹೂರ (ಜಿ. ನಾಂದೇಡ, ಮಹಾರಾಷ್ಟ್ರ) ೨. ಗಿರನಾರ (ಸೌರಾಷ್ಟ್ರ, ಗುಜರಾತ) ೩. ಕಾರಂಜಾ (ಮಹಾರಾಷ್ಟ್ರ) ೪. ಕುರವಪುರ, (ಕರ್ನಾಟಕ) ೫. ಪಿಠಾಪುರ (ಆಂಧ್ರಪ್ರದೇಶ) ೬. ವಾರಾಣಸಿ (ಉತ್ತರಪ್ರದೇಶ) ೭. ಶ್ರೀಶೈಲ್ಯ (ಹೈದ್ರಾಬಾದ್ ಹತ್ತಿರ, ತೇಲಂಗಣ) ೮. ಭಟ್ಟಗಾವ (ಭಡಗಾವ್) (ಕಾಠಮಾಂಡು, ನೇಪಾಳ) ೩೫ ಕಿ.ಮೀ. ದೂರದಲ್ಲಿದೆ. ೯. ಪಾಂಚಾಳೇಶ್ವರ : (ಬೀಡ್ ಜಿಲ್ಲೆ, ಮಹಾರಾಷ್ಟ್ರ)
– ಶ್ರೀ. ಗಣೇಶ ಹರಿ ಕುಲಕರ್ಣಿ, ಡೊಂಬಿವಲಿ, (ಆಧಾರ : ‘ಗುರುತತ್ತ್ವ- ಓರ್ವ ಮಾರ್ಗದರ್ಶಕರು’, ಫೆಬ್ರುವರಿ ೨೦೨೦)