೧. ಇದನ್ನು ಭಾರತದಾದ್ಯಂತ ಏಕೆ ಮಾಡುತ್ತಿಲ್ಲ ?
ಉತ್ತರಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ¸ರಕಾರಿ ಭೂಮಿ ಒತ್ತುವರಿ ಅಭಿಯಾನದ ಮೂಲಕ ಕಳೆದ ೭ ವರ್ಷಗಳಲ್ಲಿ ೬೭ ಸಾವಿರ ಎಕರೆ ಭೂಮಿಯನ್ನು ಮುಕ್ತಗೊಳಿಸಿದ್ದು, ಇಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳೂ ನಿಂತಿವೆ.
೨. ಇಂತಹ ಹೇಳಿಕೆ ನೀಡುವವರನ್ನೂ ಜೈಲಿಗೇಕೆ ಹಾಕುವುದಿಲ್ಲ ?
ದೇಶದ ಗಡಿಯಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಿದ್ದರೂ ಒಳನುಸುಳುವಿಕೆ ಹೇಗೆ ನಡೆಯುತ್ತದೆ ? ಸೇನೆ ಮತ್ತು ಭಯೋತ್ಪಾದಕರ ನಡುವೆ ಒಪ್ಪಂದವಾಗಿದೆ, ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಹೇಳಿಕೆ ನೀಡಿದ್ದಾರೆ.
೩. ಅವರನ್ನು ಜೀವನಮಾನವಿಡಿ ಜೈಲಿಗೆ ಹಾಕಬೇಕು !
ಹಾಸ್ಯನಟ ಮುನವ್ವರ್ ಫಾರೂಕಿ ಅವರು ಕಾರ್ಯಕ್ರಮವೊಂದರಲ್ಲಿ ‘ಕೊಂಕಣಿ ಜನರು ಇತರರನ್ನು ಮೂರ್ಖರನ್ನಾಗಿಸುತ್ತಾರೆ’ ಎಂದು ಹೇಳಿಕೆ ನೀಡಿದ್ದರು; ಆದರೆ ನಂತರ ಮರಾಠಿ ಮತ್ತು ಕೊಂಕಣಿ ಜನರ ಭಾರಿ ಪ್ರತಿಭಟನೆಯ ನಂತರ ಅವರು ಕ್ಷಮೆ ಕೇಳಬೇಕಾಯಿತು.
೪. ಇದು ಹಿಂದೂ ಮತ್ತು ಸರ್ವಪಕ್ಷ ಸರಕಾರಗಳಿಗೆ ಲಜ್ಜಾಸ್ಪದ !
ಬಂಗಾಳದ ನಿಮತಾ ಪೈಕಪಾರಾ ಗ್ರಾಮದಲ್ಲಿ ೨೦೦ ರೋಹಿಂಗ್ಯಾ ಮುಸಲ್ಮಾನರು ಓರ್ವ ಹಿಂದೂ ಕುಟುಂಬದ ಸದಸ್ಯರನ್ನು ಥಳಿಸಿ ಅವರ ಮನೆಯಲ್ಲಿದ್ದ ದೇವತೆಗಳ ವಿಗ್ರಹಗಳನ್ನು ಒಡೆದಿದ್ದಾರೆ. ‘ಸಲಾಮ್ ವಾಲೇಕುಮ್’ (ನಿಮಗೆ ಶಾಂತಿ ಸಿಗಲಿ) ಹೇಳಿದಾಗ ‘ಜೈ ಶ್ರೀರಾಮ್’ ಎಂದು ಹಿಂದೂ ಹೇಳಿದ್ದರಿಂದ ಈ ದಾಳಿಯನ್ನು ನಡೆಸಲಾಗಿದೆ.
೫. ಭಾರತವನ್ನು ಬಾಂಗ್ಲಾದೇಶವಾಗಲು ಬಿಡಬೇಡಿ !
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯವನ್ನು ವಿರೋಧಿಸಿ ನಾಸಿಕ್‌ನಲ್ಲಿ ಸಮಸ್ತ ಹಿಂದೂ ಸಮಾಜವು ಆಯೋಜಿಸಿದ್ದ ಮೆರವಣಿಗೆಯ ಮೇಲೆ ಮುಸಲ್ಮಾನರು ಕಲ್ಲು ತೂರಾಟ ನಡೆಸಿದರು. ಇದರಲ್ಲಿ ಕೆಲವು ಹಿಂದೂಗಳು ಮತ್ತು ಪೊಲೀಸರು ಗಾಯಗೊಂಡರು.
೬. ಮತಾಂಧರು ‘ಬಾಂಗ್ಲಾದೇಶ’ ಮಾಡುವುದಾಗಿ ನೀಡಿದ ಬೆದರಿಕೆಯನ್ನು ತಿಳಿಯಿರಿ !
ಉತ್ತರಪ್ರದೇಶದ ಬರೇಲಿಯಲ್ಲಿ, ಮೀನಾ ಗುಪ್ತಾ ಎಂಬ ವೃದ್ಧೆಯು ತನ್ನ ನೆರೆಯವನಾದ ಅಲಿ ಮಹಮ್ಮದ್ ವಿರುದ್ಧ ವಾಮಾಚಾರದ ಮಾಡಿದ ಬಗ್ಗೆ ಪೊಲೀಸರಿಗೆ ದೂರು ನೀಡಿದ ನಂತರ ಅತನು ಗುಪ್ತಾ ಇªರನ್ನು ಅಮಾನವೀಯವಾಗಿ ಥಳಿಸಿದ್ದಾನೆ. ಹಾಗೆಯೇ ‘ಬರೇಲಿ ಬಿಟ್ಟು ತೊಲಗು, ಇಲ್ಲದಿದ್ದರೆ ಬಾಂಗ್ಲಾದೇಶ ಮಾಡುತ್ತೇನೆ’ ಎಂದು ಬೆದರಿಕೆಯೊಡ್ಡಿದ್ದಾನೆ.
೭. ಇಂತಹ ಅಧಿಕಾರಿಗಳ ಮೇಲೆ ಕಠಿಣ ಕ್ರಮಕೈಗೊಳ್ಳಬೇಕು !
ಸಿಂದಗಿ ನಗರದಲ್ಲಿ ಪುರಸಭೆ ಅಧಿಕಾರಿಗಳು ಆಗಸ್ಟ್ ೧೫ ರಂದು ಧ್ವಜವನ್ನು ಉಲ್ಟಾ ಹಾರಿಸಿ ಧ್ವಜಕ್ಕೆ ಅವಮಾನ ಮಾಡಿದ್ದಾರೆ. ಇದು ಸುಮಾರು ೧೦ ಗಂಟೆಗಳ ನಂತರ ಗಮನಕ್ಕೆ ಬಂದಾಗ ಕೆಳಗಿಳಿಸಲಾಯಿತು.