ಪಾಕಿಸ್ತಾನ: ದರೋಡೆಕೋರರಿಂದ ರಾಕೆಟ್ ದಾಳಿ; ೧೧ ಪೊಲೀಸರ ಸಾವು

ಕೆಲವು ಪೊಲೀಸರನ್ನು ಓತ್ತೆಯಾಳಾಗಿ ಇಟ್ಟುಕೊಳ್ಳಲಾಗಿದೆ !

ಇಸ್ಲಾಮಬಾದ್(ಪಾಕಿಸ್ತಾನ) – ಪಾಕಿಸ್ತಾನದ ಪಂಜಾಬ್ ಪ್ರದೇಶದಲ್ಲಿರುವ ರಹೀಮ್ ಯಾರ ಖಾನ್ ಜಿಲ್ಲೆಯಲ್ಲಿ ಆಗಸ್ಟ್ ೨೧ ರಾತ್ರಿ ದರೋಡೆಕೋರರಿಂದ ಪೊಲೀಸ್ ಪಡೆಯ ಮೇಲೆ ರಾಕೆಟ್ ದಾಳಿ ನಡೆಸಲಾಗಿದೆ. ಈ ದಾಳಿಯಲ್ಲಿ ೧೧ ಪೊಲೀಸರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ, ಹಾಗೂ ಅನೇಕ ಜನರು ಗಾಯಗೊಂಡಿದ್ದಾರೆ. ಕೆಲವು ಪೊಲೀಸರನ್ನು ದರೋಡೆಕೋರರು ಒತ್ತೆಯಾಳಾಗಿ ಕೂಡ ಇರಿಸಿಕೊಂಡಿದ್ದಾರೆ. ಮೃತರ ಸಂಖ್ಯೆಯಲ್ಲಿ ಹೆಚ್ಚಳವಾಗುವ ಸಾಧ್ಯತೆ ಕೂಡ ಹೇಳಲಾಗುತ್ತಿದೆ. ಪಂಜಾಬ್ ಪೊಲೀಸ್ ವಕ್ತಾರರು ಈ ಮಾಹಿತಿ ನೀಡಿದರು.

ಈ ಘಟನೆ ಮಾಚಾ ಪಾಯಿಂಟ್ ಈ ಪ್ರದೇಶದಲ್ಲಿ ನಡೆದಿದೆ. ಪೊಲೀಸರ ಎರಡು ವಾಹನಗಳು ಕೆಸರಿನಲ್ಲಿ ಸಿಲುಕಿದ್ದವು. ಅಷ್ಟರಲ್ಲಿ ಅಲ್ಲಿ ಕೆಲವು ದರೋಡೆಕೋರರು ಬಂದರು ಮತ್ತು ಅವರು ಪೊಲೀಸರ ಮೇಲೆ ರಾಕೆಟ್ ದಾಳಿ ನಡೆಸಿದರು. ಪಂಜಾಬದ ಮುಖ್ಯಮಂತ್ರಿ ಮರಿಯಮ್ ನವಾಜ್ ಅವರು ಈ ದಾಳಿಯು ಗಂಭೀರವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ ಹಾಗೂ ಪೊಲೀಸ್ ಅಧಿಕಾರಿ ಡಾ. ಉಸ್ಮಾನ್ ಅನ್ವರ್ ಅವರು ಘಟನಾ ಸ್ಥಳಕ್ಕೆ ತಲುಪಿ ದರೋಡೆಕೋರರು ಒತ್ತೆಯಾಳಾಗಿ ಇರಿಸಿಕೊಂಡಿರುವ ಪೊಲೀಸರನ್ನು ಬಿಡುಗಡೆಗೊಳಿಸುವ ಅಭಿಯಾನ ಕೈಗೆತ್ತಿಕೊಂಡಿದ್ದಾರೆ.

ಸಂಪಾದಕೀಯ ನಿಲುವು

ಆರ್ಥಿಕವಾಗಿ ದಿವಾಳಿಯಾಗಿರುವ ಪಾಕಿಸ್ತಾನದಲ್ಲಿ ದರೋಡೆಕೋರರು ಪೊಲೀಸರ ಮೇಲೆ ರಾಕೆಟ್ ದಾಳಿ ನಡೆಸುತ್ತಾರೆ, ಇದರಿಂದ ಅಲ್ಲಿಯ ಸುರಕ್ಷಾ ವ್ಯವಸ್ಥೆಯು ಎಷ್ಟು ಹದಗೆಟ್ಟಿದೆ ಎಂಬುದು ಇದರಿಂದ ತಿಳಿದು ಬರುತ್ತದೆ.