ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ

ಶಾಶ್ವತವಾಗಿರುವ ಧರ್ಮ ಮತ್ತು ನಿರಂತರ ಬದಲಾಗುವ ಬುದ್ಧಿಪ್ರಾಮಾಣ್ಯವಾದ !

‘ಧರ್ಮದಲ್ಲಿ ಚಿರಂತನ ಸತ್ಯವನ್ನು ಹೇಳಿರುವುದರಿಂದಾಗಿ ಮುಂದಿನ ಪೀಳಿಗೆಯು ಹಿಂದಿನ ಪೀಳಿಗೆಯನ್ನು ಮೂರ್ಖ ಎಂದು ಪರಿಗಣಿಸುವುದಿಲ್ಲ. ತದ್ವಿರುದ್ಧ ಬುದ್ಧಿಮತ್ತೆ ಹೆಚ್ಚಾಗುತ್ತಾ ಹೋದಂತೆ ಹಿಂದಿನ ಪೀಳಿಗೆಯ ಬುದ್ಧಿವಂತರನ್ನು ‘ಮೂರ್ಖ’ ಅಥವಾ ‘ಸನಾತನಿ’ ಎಂದು ಪರಿಗಣಿಸಲಾಗುತ್ತದೆ.

ಇಂದಿನ ಮಹಿಳೆಯರು ಅಂತರ್ಮುಖರಾಗುವುದು ಅವಶ್ಯಕ !

‘ಎಲ್ಲಿ ಪತಿಯೊಂದಿಗೆ ಸ್ವಲ್ಪ ವಾದವಾದ ಕೂಡಲೇ ವಿವಾಹ ವಿಚ್ಛೇದನೆಯನ್ನು ಮಾಡಿಕೊಳ್ಳುವ ಇಂದಿನ ಕಾಲದ ಪತ್ನಿಯರು ಮತ್ತು ಎಲ್ಲಿ ಪತಿಯ ನಿಧನದ ನಂತರ, ಅವರೊಂದಿಗೆ ಏಕರೂಪವಾಗಿರುವ ಕಾರಣ ಜೋಹಾರ ಮಾಡಿದ ಅರ್ಥಾತ್‌ ದೇಹವನ್ನು ಅಗ್ನಿಗೆ ಸಮರ್ಪಿಸಿಕೊಂಡ ಪದ್ಮಾವತಿ ರಾಣಿ ಮತ್ತು ೧೬ ಸಾವಿರ ರಜಪೂತ ಸ್ತ್ರೀಯರು !

ಹಿಂದೂ ಧರ್ಮದಲ್ಲಿನ ಜ್ಞಾನದ ಅದ್ವಿತೀಯತೆ !

‘ಪಾಶ್ಚಾತ್ಯ ಜ್ಞಾನವು ಕೇವಲ ತಾತ್ಕಾಲಿಕ ಸುಖವನ್ನು ಪಡೆಯುವ ದಿಶೆಯನ್ನು ತೋರಿಸುತ್ತದೆ, ಆದರೆ ಹಿಂದೂ ಧರ್ಮದಲ್ಲಿನ ಜ್ಞಾನವು ಚಿರಂತನ ಆನಂದವನ್ನು ಪಡೆದುಕೊಳ್ಳುವ ದಿಶೆಯನ್ನು ತೋರಿಸುತ್ತದೆ !’

ಅಧ್ಯಯನ ಮಾಡದ ಬುದ್ಧಿಜೀವಿಗಳು !

‘ಕತ್ತೆಗೇನು ಗೊತ್ತು ಕಸ್ತೂರಿ ಪರಿಮಳ ?’, ಈ ಉಕ್ತಿಯನ್ನು ಸಾರ್ಥಕಗೊಳಿಸುವ ಬುದ್ಧಿಜೀವಿಗಳು ಅಧ್ಯಾತ್ಮದ ಅಧ್ಯಯನ ಮಾಡದೆ, ‘ಯಜ್ಞದಲ್ಲಿ  ವಸ್ತುಗಳನ್ನು ಏಕೆ ಸುಡುತ್ತೀರಿ ?’ ಎಂದು ಕೇಳುತ್ತಾರೆ.

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ