ನ್ಯೂಯಾರ್ಕ್ (ಅಮೇರಿಕ) – ಇಲ್ಲಿ ಆಗಸ್ಟ್ ೧೮ ರಂದು ನಡೆಯುವ ೪೨ ನೆಯ ವಾರ್ಷಿಕ ಭಾರತ ದಿನದ ಸಂಚಲನದಲ್ಲಿ ಅಯೋಧ್ಯೆಯ ಶ್ರೀರಾಮ ಮಂದಿರದ ಪ್ರತಿ ಕೃತಿಯ ಸಮಾವೇಶದ ನಿರ್ಣಯ ತೆಗೆದುಕೊಳ್ಳಲಾಗಿದೆ. ಇದರ ಬಗ್ಗೆ ಹಿಂದೂದ್ವೇಷಿಗಳಿಂದ ಟಿಕೆ ಟಿಪ್ಪಣಿಗಳಾಗುತ್ತಿವೆ, ಎಂದು ಆಯೋಜಕರು ಹೇಳಿದರು.
ಸಂಚಲನದ ಆಯೋಜಕರಾಗಿರುವ ‘ಫೆಡರೇಶನ್ ಆಫ್ ಇಂಡಿಯನ್ ಅಸೋಸಿಯೇಷನ್’ ದಿಂದ ಒಂದು ಮನವಿ ಪ್ರಸಾರ ಮಾಡುತ್ತಾ, ನಾವು ಶಾಂತಿಯುತವಾಗಿ ಸಾರ್ವಜನಿಕ ಉತ್ಸವ ಆಯೋಜಿಸಿದ್ದೇವೆ; ಆದರೆ ನಮ್ಮನ್ನು ತೀವ್ರ ಪರಿಶೀಲನೆಗೆ ಒಳಪಡಿಸಲಾಗುತ್ತಿದೆ. ನಮ್ಮ ಸಮರ್ಪಿತ ಸ್ವಯಂಸೇವಕರು ಭಾರತ ದಿನದ ಸಿದ್ಧತೆಗಾಗಿ ಕಠಿಣ ಪರಿಶ್ರಮ ವಹಿಸಿದ್ದಾರೆ, ಆದರೂ ಪರಿಶೀಲನೆ ನಡೆಸುತ್ತಿರುವುದು ದುರದೃಷ್ಟಕರ ಮತ್ತು ದ್ವೇಷಪೂರಿತವಾಗಿದೆ. ಕೋಟಿಗಟ್ಟಲೆ ಹಿಂದುಗಳಿಗಾಗಿ ಮಹತ್ವ ಪಡೆದಿರುವ ಪವಿತ್ರ ಧಾರ್ಮಿಕ ಸ್ಥಳದ ಪ್ರತಿಕೃತಿಯನ್ನು ಸಂಚಲನದಲ್ಲಿ ಸಮಾವೇಶಗೊಳಿಸುವುದು ಅವಮಾನಕಾರಕ ಎಂದು ಹೇಳಲಾಗುತ್ತಿದೆ, ನಮ್ಮ ಪ್ರಶ್ನೆ ಏನೆಂದರೆ, ಇತರ ಯಾವುದೇ ಜನಾಂಗದ ಧಾರ್ಮಿಕ ಸ್ಥಳದ ಅವಮಾನ ಸಹಿಸಲಾಗುವುದೇ ? ಅದಕ್ಕೆ ಸ್ಪಷ್ಟವಾದ ಉತ್ತರ ‘ಇಲ್ಲ’ ಅಂತಾನೇ ಇರುವುದು ಎಂದು ಹೇಳಿದರು.