ಸಾಧನೆಯ ಮಹತ್ವ !
ಚುನಾವಣೆಯಲ್ಲಿ ಆಯ್ಕೆಯಾಗಲು ರಾಜಕಾರಣಿಗಳು ಜನರನ್ನು ಸಂತೋಷ ಪಡಿಸಬೇಕಾಗುತ್ತದೆ. ಆದರೆ ಸಾಧನೆ ಮಾಡುವವನನ್ನು ಭಗವಂತನು ಸ್ವತಃ ಆಯ್ಕೆ ಮಾಡಿಕೊಳ್ಳುತ್ತಾನೆ !’
ಚುನಾವಣೆಯಲ್ಲಿ ಸ್ಫರ್ಧಿಸುವವರೇ, ಇದನ್ನು ಗಮನದಲ್ಲಿಡಿ !
‘ಅನಂತ ಕೋಟಿ ಬ್ರಹ್ಮಾಂಡವನ್ನು ಆಳುವ ಈಶ್ವರನು ಚುನಾವಣೆಯಲ್ಲಿ ಸ್ಪರ್ಧಿಸಬೇಕಾಗಿಲ್ಲ !’
ಹಿಂದೂ ರಾಷ್ಟ್ರದ ಸ್ಥಾಪನೆಗೆ ಸಮಷ್ಟಿ ಸಾಧನೆ ಅವಶ್ಯಕ !
‘ವ್ಯಷ್ಟಿ ಸಾಧನೆಯಲ್ಲಿ ಒಂದೇ ದೇವತೆಯ ಉಪಾಸನೆ ಇರುತ್ತದೆ; ಆದರೆ ಸಮಷ್ಟಿ ಸಾಧನೆಯಲ್ಲಿ ಅನೇಕ ದೇವತೆಗಳ ಉಪಾಸನೆ ಇರುತ್ತದೆ. ಸೈನ್ಯದಲ್ಲಿ ಭೂಸೇನೆ, ಯುದ್ಧ ಟ್ಯಾಂಕ್ ಗಳು, ವಾಯುಪಡೆ, ಜಲಪಡೆ ಮುಂತಾದ ಹಲವು ವಿಭಾಗಗಳಿರುತ್ತವೆ. ಅಂತೆಯೇ ಹಿಂದೂ ರಾಷ್ಟ್ರ ಸ್ಥಾಪನೆಯ ಸಮಷ್ಟಿ ಕಾರ್ಯದಲ್ಲಿ ಅನೇಕ ದೇವತೆಗಳ ಉಪಾಸನೆ, ಯಜ್ಞಯಾಗ ಮುಂತಾದವು ಗಳನ್ನು ಮಾಡಬೇಕಾಗುತ್ತದೆ !’
ವೈಯಕ್ತಿಕ ಸ್ವಾತಂತ್ರ್ಯದ ಸಮರ್ಥಕರಿಗೆ ಇದು ಲಜ್ಜಾಸ್ಪದವೇ !
‘ವೈಯಕ್ತಿಕ ಸ್ವಾತಂತ್ರ್ಯಕ್ಕಿಂತ ಸಮಾಜ ಮತ್ತು ರಾಷ್ಟ್ರದ ಹಿತಾಸಕ್ತಿ ಹೆಚ್ಚು ಮುಖ್ಯ ಎಂಬುದು ವೈಯಕ್ತಿಕ ಸ್ವಾತಂತ್ರ್ಯದ ಸಮರ್ಥಕರಿಗೆ ಏಕೆ ತಿಳಿಯುವುದಿಲ್ಲ ? ನಾಳೆ, ವೈಯಕ್ತಿಕ ಸ್ವಾತಂತ್ರ್ಯದ ಹೆಸರಿನಲ್ಲಿ ಕಳ್ಳತನ, ಅತ್ಯಾಚಾರ, ಭ್ರಷ್ಟಾಚಾರ ಇತ್ಯಾದಿ ಮಾಡುವವರನ್ನು ಸಮರ್ಥಿಸಿದರೆ ಆಶ್ಚರ್ಯವಿಲ್ಲ.’
ರಾಜಕಾರಣ ಮತ್ತು ಸಾಧನೆ
‘ಇಂದಿನ ರಾಜಕಾರಣ ರಸಾತಳಕ್ಕೆ ಕರೆದೊಯ್ಯುತ್ತದೆ ಆದರೆ ಸಾಧನೆಯು ಈಶ್ವರನ ಕಡೆಗೆ ಕರೆದೊಯ್ಯುತ್ತದೆ !’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ