ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಮಷ್ಟಿಯ ಬಗ್ಗೆ ಮಾಡುತ್ತಿರುವ ವಿಚಾರಗಳು
‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಸಂಗೀತದ ಮಾಧ್ಯಮದಿಂದ ‘ಈಶ್ವರಪ್ರಾಪ್ತಿಗಾಗಿ ಸಾಧನೆ ಮತ್ತು ಸಂಗೀತಕ್ಕೆ ಸಂಬಂಧಿಸಿದ ಇತರ ವಿಷಯ’ ಇವುಗಳ ಬಗೆಗಿನ ಸಂಶೋಧನೆ ಕಾರ್ಯ ನಡೆದಿದೆ. ಈ ಕಾರ್ಯದಲ್ಲಿ ಪಾಲ್ಗೊಳ್ಳಲು ಇದುವರೆಗೆ ಅನೇಕ ಕಲಾವಿದರು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದಾರೆ. ಆ ಸಮಯದಲ್ಲಿ ಆ ಕಲಾವಿದರಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸತ್ಸಂಗದ ಲಾಭ ಸಿಕ್ಕಿತು. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸತ್ಸಂಗ ಲಭಿಸುವುದು, ಇದು ಕಲಾವಿದರ ಭೇಟಿಯಲ್ಲಿನ ಪರಮೋಚ್ಚ ಆನಂದಬಿಂದು ಆಗಿರುವುದನ್ನು ಕಲಾವಿದರು ಅನುಭವಿಸಿದರು. ಈ ಸತ್ಸಂಗದ ಸಮಯದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಕಲಾವಿದರಿಗೆ ‘ಈಶ್ವರಪ್ರಾಪ್ತಿಗಾಗಿ ಸಂಗೀತ ಸಾಧನೆ’ ಈ ವಿಷಯದ ಬಗ್ಗೆ ಮಾರ್ಗದರ್ಶನ ಮಾಡಿದರು. ಈ ಮಾರ್ಗದರ್ಶನದ ಲಾಭವು ‘ಸಂಗೀತದಿಂದ ಸಾಧನೆ ಮಾಡಲು ಇಚ್ಛಿಸುವ ವ್ಯಕ್ತಿಗಳಿಗೆ ಆಗಬೇಕು’, ಎಂಬ ದೃಷ್ಟಿಕೋನದಿಂದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಹೇಳಿದ ಮಾರ್ಗದರ್ಶನದಲ್ಲಿನ ಅಂಶಗಳನ್ನು ಇಲ್ಲಿ ಕೊಡುತ್ತಿದ್ದೇವೆ.
(ಭಾಗ ೨)
ಹಿಂದಿನ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ: https://sanatanprabhat.org/kannada/122567.html |
ಕಲಾವಿದರ ವೈಶಿಷ್ಟ್ಯಗಳು ಗಮನಕ್ಕೆ ಬಂದ ನಂತರ ಸಮಷ್ಟಿಯ ದೃಷ್ಟಿಯಿಂದ ಈ ಅಂಶಗಳ ಮಹತ್ವವನ್ನು ಗಮನದಲ್ಲಿರಿಸಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಾಧಕರಿಗೆ ಕಲಾವಿದರ ಸಂದರ್ಶನವನ್ನು ತೆಗೆದುಕೊಳ್ಳಲು ಹೇಳುತ್ತಾರೆ.
ಮುಂದಿನ ಜನ್ಮದಲ್ಲಿಯೂ ‘ಕಲಾವಿದನ ಸಾಧನೆ ಮುಂದುವರಿಯಬೇಕು’, ಎಂದು ಮಾರ್ಗದರ್ಶನ ಮಾಡುವುದು
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸತ್ಸಂಗದಲ್ಲಿ ಓರ್ವ ಕಲಾವಿದನಿಗೆ ಅಧ್ಯಾತ್ಮದಲ್ಲಿನ ಸ್ವೇಚ್ಛೆ, ಪರೇಚ್ಛೆ, ಈಶ್ವರೇಚ್ಛೆ, ಹಾಗೆಯೇ ಪ್ರಾರಬ್ಧ, ಕ್ರಿಯಮಾಣ ಇತ್ಯಾದಿಗಳ ಬಗ್ಗೆ ಮಾರ್ಗದರ್ಶನ ಮಾಡಿದರು. ನಂತರ ಅವರು ಆ ಕಲಾವಿದನಿಗೆ, ”ನಿಮಗೆ ಈ ಎಲ್ಲ ವಿಷಯಗಳು ಈಗ ತಿಳಿಯದಿದ್ದರೂ, ಈಗಲೇ ಹೇಳಿಡುತ್ತೇನೆ ಏಕೆಂದರೆ ನಿಮಗೆ ಈ ಜನ್ಮದಲ್ಲಿ ಇಲ್ಲದಿದ್ದರೂ, ಮುಂದಿನ ಜನ್ಮದಲ್ಲಿ ಅವು ಉಪಯೋಗವಾಗುವವು’’ ಎಂದು ಹೇಳಿದರು.
(‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಕಲಾವಿದರಲ್ಲಿ ಆಧ್ಯಾತ್ಮಿಕ ಸಾಧನೆಯ ಬೀಜವನ್ನು ಬಿತ್ತಿಡುತ್ತಾರೆ. ಅವರು ಕಲಾವಿದರ ಈ ಜನ್ಮದ ವಿಚಾರವನ್ನು ಮಾತ್ರವಲ್ಲ ‘ಆ ಕಲಾವಿದರ ಮುಂದಿನ ಜನ್ಮದಲ್ಲಿಯೂ ಅವರ ಸಾಧನೆ ಮುಂದುವರಿಯಬೇಕು’, ಎಂದು ಅವರಿಗೆ ಮಾರ್ಗದರ್ಶನ ಮಾಡುತ್ತಾರೆ.’ – ಸಂಕಲನಕಾರರು)
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಕಲಾವಿದರಿಗೆ ಆಚಾರಧರ್ಮ ಪಾಲಿಸಲು ಹೇಳುವುದು
೧. ಕಲಾವಿದರು ಧರಿಸಿದ ‘ಕುರ್ತಾದ ಮುಂಭಾಗದಲ್ಲಿ ಕೆಳಗಿರುವ ಕಟ್ (ಕತ್ತರಿಸಿದ ಭಾಗ) ಸರಿ ಕಾಣಿಸುವುದಿಲ್ಲ’, ಎಂಬುದನ್ನು ಅವರಿಗೆ ದುಃಖವಾಗದಂತೆ ಅರಿವು ಮಾಡಿ ಕೊಡುವುದು ಮತ್ತು ಸಂಬಂಧಿತ ಕಲಾವಿದರಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಗ್ಗೆ ಕೃತಜ್ಞತೆ ಅನಿಸುವುದು :
ಓರ್ವ ಕಲಾವಿದನು ಧರಿಸಿದ ಕುರ್ತಾದ ಮುಂಭಾಗದಲ್ಲಿ ಕಟ್ (ಕತ್ತರಿಸಿದ ಭಾಗ) ಇತ್ತು. ‘ಆ ಕಲಾವಿದನು ಕುರ್ಚಿಯ ಮೇಲೆ ಕುಳಿತುಕೊಂಡಾಗ ಕುರ್ತಾಕ್ಕೆ ಇರುವ ಕಟ್‌ನಿಂದ ಅದು ಸರಿ ಕಾಣಿಸುತ್ತಿರಲಿಲ್ಲ’, ಎಂದು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಗಮನಕ್ಕೆ ಬಂದಿತು. ಅವರು ಓರ್ವ ಸಾಧಕನಿಗೆ ಆ ಕಲಾವಿದನು ಕುರ್ಚಿಯಲ್ಲಿ ಕುಳಿತಿರುವ ಛಾಯಾಚಿತ್ರವನ್ನು ತೆಗೆಯಲು ಹೇಳಿದರು. ಅವರು ಸಾಧಕನಿಗೆ ಆ ಛಾಯಾಚಿತ್ರಕ್ಕೆ ಸಂಬಂಧಿಸಿದ ಕಲಾವಿದನಿಗೆ ತೋರಿಸಲು ಹೇಳಿದರು. ಅವರು ಸಾಧಕನಿಗೆ, ”ಆ ಕಲಾವಿದನಿಗೆ ‘ಇಂತಹ ಕುರ್ತಾ ಧರಿಸಿ ಕುರ್ಚಿಯ ಮೇಲೆ ಅಥವಾ (ನೆಲದಲ್ಲಿ ಆಸನ ಹಾಕಿ) ಕುಳಿತುಕೊಂಡು ಗಾಯನ ಮತ್ತು ವಾದನ ಮಾಡುವಾಗ ನಾಲ್ಕು ಜನರ ಎದುರಿಗೆ ಸರಿ ಕಾಣಿಸುವುದಿಲ್ಲ’, ಎಂದು ಆ ಕಲಾವಿದನಿಗೆ ಹೇಳಬೇಕು’’ ಎಂದು ಹೇಳಿದರು. ಸಾಧಕನು ಸಂಬಂಧಿಸಿದ ಕಲಾವಿದನಿಗೆ ಈ ಬಗ್ಗೆ ಹೇಳಿದಾಗ ಆ ಕಲಾವಿದನಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಗ್ಗೆ ಕೃತಜ್ಞತೆ ಅನಿಸಿತು.
೨. ಓರ್ವ ಕಲಾಕಾರರ ಪತ್ನಿಯು ಕಾಲು ಮತ್ತು ತೊಡೆಗಳ ಮೇಲೆ ಹರಿದಂತಹ ಆಧುನಿಕ ಶೈಲಿಯ ‘ಜೀನ್ಸ್ ಪ್ಯಾಂಟ್’ಅನ್ನು ಧರಿಸಿದ್ದಳು. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಅವರಿಗೆ ಇಂತಹ ಪದ್ಧತಿಗಳ ಬಟ್ಟೆಗಳನ್ನು ಧರಿಸಬಾರದೆಂಬ ವಿಷಯದಲ್ಲಿ ಮಾರ್ಗದರ್ಶನ ಮಾಡಿದರು.
೩. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಕಲಾ ಕ್ಷೇತ್ರದ ಗುರುಗಳಿಗೆ ಕಲೆಯ ಜವಾಬ್ದಾರಿಯ ಬಗ್ಗೆ ಮಾಡಿದ ಮಾರ್ಗದರ್ಶನ : ‘ಕಲೆಯು ಸತ್ತ್ವಗುಣಿಯಾಗಿದೆ. ಕಲಾವಿದರು ಈ ರೀತಿಯ ಉಡುಪುಗಳನ್ನು ಧರಿಸುವುದರಿಂದ ಈ ಉಡುಪುಗಳಿಂದ ರಜ-ತಮಾತ್ಮಕ ಸ್ಪಂದನಗಳು ಪ್ರಕ್ಷೇಪಿಸುತ್ತವೆ. ಸಾಧನೆ ಮಾಡಿ ಸತ್ತ್ವಗುಣವನ್ನು ಪಡೆಯಲು ತುಂಬಾ ಪ್ರಯತ್ನಿಸಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುವಾಗ ಅವರಿಗೆ ‘ಸಾತ್ತ್ವಿಕ ಉಡುಪು ಮತ್ತು ಸಾತ್ತ್ವಿಕ ದೈನಂದಿನ ಕೃತಿ’ಗಳ ಬಗ್ಗೆ ಕಲಿಸುವ ಜವಾಬ್ದಾರಿಯು ಕಲಾ ಕ್ಷೇತ್ರದಲ್ಲಿನ ಗುರುಗಳದ್ದೇ ಆಗಿರುತ್ತದೆ’, ಎಂದು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಮಾರ್ಗದರ್ಶನವನ್ನು ಮಾಡಿದರು.’
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಕಲಾವಿದರಿಗೆ ‘ಅವರ ಸಾಧನೆ ಆಗುತ್ತಿದೆ’, ಎಂದು ಅರಿವು ಮಾಡಿಕೊಡುವುದು
ಅ. ‘ಕಲಾವಿದನು ಸಂಗೀತಕ್ಕೆ ಸಾಧನೆಯನ್ನು ಜೋಡಿಸಿದುದರಿಂದ ಅವರಲ್ಲಿ ಆನಂದ ವೃದ್ಧಿಯಾಗುತ್ತಿದೆ’, ಎಂದು ಹೇಳುವುದು : ಓರ್ವ ಕಲಾವಿದನು ಸಂಗೀತಕ್ಕೆ ಸಾಧನೆಯನ್ನು ಜೋಡಿಸಿದ್ದರಿಂದ ಅವನ ಮುಖವು ಅತ್ಯಂತ ಆನಂದವಾಗಿರುವುದು ಕಾಣಿಸುತ್ತಿತ್ತು. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಅಲ್ಲಿ ಕುಳಿತುಕೊಂಡಿರುವ ವ್ಯಕ್ತಿಗಳ ಎದುರಿಗೆ ನಿಂತುಕೊಳ್ಳಲು ಆ ಕಲಾವಿದನಿಗೆ ಹೇಳಿದರು ಮತ್ತು ಎಲ್ಲರಿಗೂ ‘ಅವರನ್ನು ನೋಡಿದಾಗ ಏನು ಅನಿಸುತ್ತದೆ ?’, ಎಂದು ಕೇಳಿದರು. ಆಗ ಕುಳಿತಿರುವ ವ್ಯಕ್ತಿಗಳು ‘ಕಲಾವಿದನ ಮುಖವು ಬಹಳ ಆನಂದ ಮತ್ತು ತೇಜಸ್ಸು ಕಾಣಿಸುತ್ತಿದೆ’, ಎಂದರು. ಆಗ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ”ಆ ಕಲಾವಿದನು ಸಂಗೀತಕ್ಕೆ ಸಾಧನೆಯನ್ನು ಜೋಡಿಸಿರುವುದರಿಂದ ಅವರಲ್ಲಿನ ಆನಂದ ಹೆಚ್ಚಾಗುತ್ತಿದೆ,’’ ಎಂದು ಹೇಳಿದರು.
ಆ. ‘ಓರ್ವ ಕಲಾವಿದನು ಸಂಗೀತದ ಗುರುಗಳಾಗಿರುವ ತನ್ನ ತಂದೆಯನ್ನು ಗುರುಗಳೆಂದು ನೋಡಿರುವುದರಿಂದ ಅವನು ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡನು, ಎಂದು ಹೇಳುವುದು : ಓರ್ವ ಕಲಾವಿದನ ತಂದೆಯು ಸಂಗೀತ ಕ್ಷೇತ್ರದ ಓರ್ವ ಪ್ರತಿಷ್ಠಿತ ಗೌರವಾನ್ವಿತ ಕಲಾವಿದರಾಗಿದ್ದರು. ಅವರು ಈ ಕಲಾವಿದನ ಸಂಗೀತದ ಗುರುಗಳೂ ಆಗಿದ್ದರು. ‘ಆ ಕಲಾವಿದನು ತಂದೆಯನ್ನು ಶಿಷ್ಯಭಾವದಿಂದ ಸಂಗೀತಸಾಧನೆಯನ್ನು ಕಲಿತಿರುವುದರಿಂದ ಮತ್ತು ಗುರುಗಳೆಂದು ತಂದೆಯವರ ಸೇವೆಯನ್ನು ಮಾಡಿದ್ದರಿಂದ ಈ ಕಲಾವಿದನು ಶೇ. ೬೨ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ತಲುಪಿ ಅವರು ಜನ್ಮ-ಮೃತ್ಯುವಿನ ಚಕ್ರದಿಂದ ಮುಕ್ತನಾಗಿದ್ದಾನೆ ಎಂದು ಘೋಷಿಸಲಾಯಿತು.
ಇ. ಓರ್ವ ಕಲಾವಿದನಿಗೆ ದೊರಕಿದ ‘ತಾಲಯೋಗಿ’ ಪದವಿ ಯೊಂದಿಗೆ ಈಗ ‘ಈಶ್ವರಯೋಗಿ’ ಈ ಪದವಿಯನ್ನು ಪಡೆಯುವ ಧ್ಯೇಯ ಮತ್ತು ಆಶೀರ್ವಾದ ನೀಡುವುದು: ಓರ್ವ ಪ್ರತಿಷ್ಠಿತ ತಬಲಾವಾದಕರಿಗೆ ತಬಲಾದಲ್ಲಿನ ಪರಿಣಿತಿಯಿಂದಾಗಿ ‘ತಾಲಯೋಗಿ’ ಎಂಬ ಪದವಿ ದೊರಕಿದೆ. ಅವರಿಗೆ ದೊರಕಿದ ಈ ಪದವಿಯ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಗೆ ಹೇಳಿದ ನಂತರ ಅವರು ಆ ತಬಲಾವಾದಕರಿಗೆ ‘ಈಗ ಅಧ್ಯಾತ್ಮವನ್ನು ಜೋಡಿಸಿ ಸಾಧನೆ ಮಾಡುತ್ತ ‘ಈಶ್ವರಯೋಗಿ’ ಆಗಬೇಕು’, ಎಂಬ ಧ್ಯೇಯ ಮತ್ತು ಆಶೀರ್ವಾದವನ್ನು ನೀಡಿದರು.
– ಸುಶ್ರೀ (ಕು.) ತೇಜಲ ಪಾತ್ರಿಕರ (ಸಂಗೀತ ವಿಶಾರದ ಮತ್ತು ಸಂಗೀತ ಸಮನ್ವಯಕರು, ಈಗಿನ ಆಧ್ಯಾತ್ಮಿಕ ಮಟ್ಟ ಶೇ. ೬೦), ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಫೊಂಡಾ, ಗೋವಾ. (೨೧.೫.೨೦೨೪)
(ಮುಂದುವರಿಯುವುದು)
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸಂದರ್ಭದಲ್ಲಿ ಕಲಾವಿದರಿಗೆ ಬಂದ ಆಧ್ಯಾತ್ಮಿಕ ಸ್ತರದ ಅನುಭೂತಿಗಳು ಮತ್ತು ಕಲಾವಿದರಿಗೆ ಅವರ ಬಗ್ಗೆ ಇರುವ ಭಾವ೧. ತನಗೆ ಶ್ರದ್ಧೆಯಿರುವ ಗುರುಗಳ ದರ್ಶನವನ್ನು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರಲ್ಲಿಪಡೆದ ಸೌ. ಮನಿಷಾ ಪಾತ್ರೀಕರ : ಗುರು ಮೆಹೆರಬಾಬಾ ಇವರು ಸೌ. ಮನಿಷಾ ಪಾತ್ರೀಕರ ಇವರ ಶ್ರದ್ಧಾಸ್ಥಾನವಾಗಿದ್ದಾರೆ. ಅವರು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಮೊದಲ ಭೇಟಿಯಲ್ಲಿಯೇ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕುಳಿತುಕೊಳ್ಳುವ ಪದ್ಧತಿ ಮತ್ತು ಅವರ ನಗು ನೋಡಿ ಸೌ. ಮನಿಷಾ ಪಾತ್ರೀಕರ ಇವರಿಗೆ ತಮ್ಮ ಶ್ರದ್ಧಾಸ್ಥಾನವಾಗಿರುವ ಗುರು ಮೆಹೆರಬಾಬಾ ಇವರ ದರ್ಶನವಾಯಿತು ಮತ್ತು ಅವರಿಗೆ ಭಾವಜಾಗೃತಿ ಆಯಿತು. (‘ಗುರುತತ್ತ್ವವು ಒಂದೇ ಆಗಿರುವ ಬಗ್ಗೆ ಸೌ. ಮನಿಷಾ ಪಾತ್ರೀಕರ ಇವರಿಗೆ ಅನುಭೂತಿ ಬಂದಿತು. ‘ಸಾಧನೆಯಲ್ಲಿ ಯೋಗ್ಯ ರೀತಿಯಲ್ಲಿ ಮುಂದೆ ಹೋಗುತ್ತಿರುವುದರ ಬಗ್ಗೆ ಭರವಸೆ ನೀಡಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸೂಕ್ಷ್ಮದಿಂದ ಕಲಾವಿದರಿಗೆ ಕಲಿಸುತ್ತಾರೆ’, ಎಂಬುದು ಗಮನಕ್ಕೆ ಬರುತ್ತದೆ.’ – ಸಂಕಲನಕಾರರು) ೨. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದಿವ್ಯ ಸತ್ಸಂಗದಲ್ಲಿ ಅರಿವಾದ ಆಧ್ಯಾತ್ಮಿಕ ಅಂಶಗಳ ಬಗ್ಗೆ ಇನ್ನೊಬ್ಬ ನರ್ತಕಿಯು ಮನೆಗೆ ಹೋದ ನಂತರ ಕೆಲವು ದಿನಗಳ ನಂತರ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ ಮತ್ತು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಗ್ಗೆ ಭಾವಪೂರ್ಣ ಕೃತಜ್ಞತೆಯ ಪತ್ರವನ್ನು ಬರೆದು ಕಳುಹಿಸಿದರು. |