‘ಸಂಗೀತದಿಂದ ಈಶ್ವರಪ್ರಾಪ್ತಿಗಾಗಿ ಸಾಧನೆ’ ಎಂಬ ವಿಷಯದ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಅಮೂಲ್ಯ ಮಾರ್ಗದರ್ಶನ !

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಸಂಗೀತದಿಂದ ‘ಈಶ್ವರಪ್ರಾಪ್ತಿಗಾಗಿ ಸಾಧನೆ ಮತ್ತು ಸಂಗೀತಕ್ಕೆ ಸಂಬಂಧಿಸಿದ ಇತರ ವಿಷಯಗಳು’ ಇವುಗಳ ಮೇಲೆ ಸಂಶೋಧನಾಕಾರ್ಯ ನಡೆಯುತ್ತಿದೆ. ಈ ಕಾರ್ಯದಲ್ಲಿ ಪಾಲ್ಗೊಳ್ಳಲು ಇದುವರೆಗೆ ಅನೇಕ ಕಲಾವಿದರು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದಾರೆ. ಆ ಸಮಯದಲ್ಲಿ ಆ ಕಲಾವಿದರಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸತ್ಸಂಗದ ಲಾಭವಾಯಿತು. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸತ್ಸಂಗ ಲಭಿಸುವುದೆಂದರೆ, ಕಲಾವಿದರು ಭೇಟಿಯಲ್ಲಿನ ಪರಮೋಚ್ಚ ಆನಂದವೆಂಬಂತೆ ಸಾಧಕರು ಅದನ್ನು ಅನುಭವಿಸುತ್ತಿರುತ್ತಾರೆ. ಈ ಸತ್ಸಂಗದ ಸಮಯದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಕಲಾವಿದರರಿಗೆ ‘ಸಂಗೀತದಿಂದ ಈಶ್ವರಪ್ರಾಪ್ತಿಗಾಗಿ ಸಾಧನೆ’ ಎಂಬ ವಿಷಯದಲ್ಲಿ ಮಾರ್ಗದರ್ಶನ ಮಾಡಿದರು. ‘ಸಂಗೀತದಿಂದ ಸಾಧನೆಯನ್ನು ಮಾಡಲು ಬಯಸುವ ವ್ಯಕ್ತಿಗಳಿಗೆ ಆಗಬೇಕು’, ಈ ಮಾರ್ಗದರ್ಶನದ ಲಾಭವಾಗಬೇಕು ಎಂಬ ದೃಷ್ಟಿಯಿಂದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಮಾರ್ಗದರ್ಶನದ ಅಂಶಗಳನ್ನು ಇಲ್ಲಿ ಕೊಡಲಾಗಿದೆ. 

(ಭಾಗ ೧)

ಎಡದಿಂದ ಮಾರ್ಗದರ್ಶನ ಮಾಡುತ್ತಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ, ಸುಶ್ರೀ (ಕು.) ತೇಜಲ ಪಾತ್ರೀಕರ,   ಮುಂಬೈಯ ಗಂಧರ್ವ ವಿದ್ಯಾಲಯದ ಪ್ರಬಂಧಕ (ರಿಜಿಸ್ಟಾರ್) ಶ್ರೀ. ವಿಶ್ವಾಸ ಜಾಧವ, ತಬಲಾವಾದಕ,    ಪುಣೆಯ ಗಾಯನಗುರು ಡಾ. ವಿಕಾಸ ಕಶಾಳಕರ,  ಪುಣೆಯ ತಬಲಾವಾದಕ ತಾಲಯೋಗಿ ‘ಪದ್ಮಶ್ರೀ’ ಪಂಡಿತ ಸುರೇಶ ತಳವಲಕರ

೧. ಕಲಾವಿದನು ಸಂಗೀತದಿಂದ ಸಾಧನೆಯಾಗಬೇಕಾದರೆ ಹೇಗೆ ಪ್ರಯತ್ನಿಸಬೇಕು ಎಂಬ ಬಗೆಗಿನ ಮಾರ್ಗದರ್ಶನ

೧ ಅ. ಸ್ವಭಾವದೋಷ ಮತ್ತು ಅಹಂನ ನಿರ್ಮೂಲನೆ ಮಾಡಿ ಸಾಧನೆಯ ಅಡಿಪಾಯವನ್ನು ಗಟ್ಟಿಗೊಳಿಸಿದ ನಂತರವೇ ಕಲೆಯಿಂದ ಸಾಧನೆಯ ಕಟ್ಟಡವನ್ನು ನಿರ್ಮಿಸಲು ಸುಲಭವಾಗುವುದು ಕಲಾವಿದರರ ಪ್ರಶ್ನೆ : ಸಂಗೀತದ ಸಾಧನೆ ಮತ್ತು ಅಧ್ಯಾತ್ಮದ ಉಪಾಸನೆಯನ್ನು ಪರಸ್ಪರ ಜೋಡಿಸಿ ಕಲಾವಿದನು ಹೇಗೆ ಮುಂದೆ ಹೋಗಬಹುದು ?

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ವ್ಯಕ್ತಿಯು ಈಶ್ವರಪ್ರಾಪ್ತಿಗಾಗಿ ತನ್ನಲ್ಲಿನ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಮಾಡುವುದು, ಇದು ಮೊದಲನೇ ಹೆಜ್ಜೆಯಾಗಿದೆ. ಅದರಿಂದ ಸಾಧನೆಯ ಅಡಿಪಾಯವು ಗಟ್ಟಿಯಾಗುತ್ತದೆ. ಸಾಧಕರಲ್ಲಿ ಸ್ವಭಾವ ದೋಷವಿದ್ದರೆ, ಅವರಿಗೆ ಈಶ್ವರನೊಂದಿಗೆ ಮಾತನಾಡಲು ಸಾಧ್ಯ ವಾಗುವುದಿಲ್ಲ ಮತ್ತು ಅಧ್ಯಾತ್ಮದಲ್ಲಿ ಹೆಜ್ಜೆಹೆಜ್ಜೆಗೂ ಈಶ್ವರನು ಹೇಳಿದಂತೆಯೇ ಮಾಡಬೇಕು. ಆದ್ದರಿಂದ ಸಾಧಕನು ಮೊದಲಿನ ೩-೪ ವರ್ಷಗಳವರೆಗೆ ಸಾಧನೆಗಾಗಿಯೇ ಸಮಯವನ್ನು ಕೊಡ ಬೇಕು. ಸಾಧನೆಯಿಂದ ಜೀವದಲ್ಲಿ ಸಾತ್ತ್ವಿಕತೆ ಹೆಚ್ಚಾದಾಗ ಅವನಿಗೆ ಆಧ್ಯಾತ್ಮಿಕ ಸ್ತರದಲ್ಲಿ ಸಂಗೀತ, ನೃತ್ಯ ಮತ್ತು ನಾಟ್ಯ ಈ ಕಲೆಗಳನ್ನು ಸಹಜವಾಗಿ ಕಲಿಯಲು ಸಾಧ್ಯವಾಗುತ್ತದೆ.

೧ ಆ. ಶಿಷ್ಯನ ಸಾಧನೆಯ ಅಡಿಪಾಯವನ್ನು ಗಟ್ಟಿಗೊಳಿಸಿದ ನಂತರವೇ ಗುರುಗಳು ಶಿಷ್ಯನಿಗೆ ಅವನ ಸಾಧನೆಯ ಮಾರ್ಗವನ್ನು ತೋರಿಸುವುದು : ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಯನ್ನು ಮಾಡಿ ಸಾಧಕನ ಸಾಧನೆಯ ಅಡಿಪಾಯವು ಗಟ್ಟಿಯಾದಾಗ, ಆಧ್ಯಾತ್ಮಿಕ ಗುರುಗಳು ಅವನಿಗೆ, ”ನೀನು ಈ ಕಲೆಯ ಮಾಧ್ಯಮದಿಂದ ಸಾಧನೆಯಲ್ಲಿ ಮುಂದೆ ಹೋಗುವೆ” ಎಂದು ಹೇಳುತ್ತಾರೆ. ಕಲೆಯನ್ನು ಕಲಿಯಲು ಬರುವ ಶಿಷ್ಯನಿಗೆ ಮಾರ್ಗದರ್ಶನವನ್ನು ಮಾಡಬೇಕಾದರೆ ಆ ಕಲೆಯನ್ನು ಕಲಿಸುವ ಗುರುಗಳದ್ದೂ ಸಾಧನೆಯಾಗಿರಬೇಕು. ಸಾಧನೆಯಿಂದ ಗುರುಗಳ ಆಧ್ಯಾತ್ಮಿಕ ಮಟ್ಟ ಉತ್ತಮವಿರುವುದರಿಂದ ಆ ಶಿಷ್ಯನು ‘ಯಾವ ಮಾರ್ಗದಿಂದ ಮುಂದೆ ಹೋಗುವುದು ಯೋಗ್ಯವಾಗಿದೆ’, ಎಂಬುದನ್ನು ಹೇಳಬಲ್ಲರು.

ಈಗಿನ ಕಾಲದಲ್ಲಿ ವಿದ್ಯಾರ್ಥಿಯು, ‘ನಾನು ಆಧುನಿಕ ವೈದ್ಯ, ಇಂಜನಿಯರ್‌ ಅಥವಾ ನ್ಯಾಯವಾದಿಯಾಗಬೇಕು’ ಎಂದು ನಿರ್ಧರಿಸುತ್ತಾನೆ. ಬದಲಾಗಿ ಅಧ್ಯಾತ್ಮದಲ್ಲಿ ಗುರುಗಳು ‘ಶಿಷ್ಯನಿಗೆ ಯಾವ ಮಾರ್ಗದಿಂದ ಸಾಧನೆ ಮಾಡಿದರೆ ಅವನ ಪ್ರಗತಿಯಾಗಲಿದೆ’, ಎಂಬುದನ್ನು ಹೇಳುತ್ತಾರೆ. ‘ಹೀಗೆ ಹೇಳುವ ಗುರುಗಳು ಭಾರತದಲ್ಲಿದ್ದಾರೆ’, ಇದು ಭಾರತದ ವೈಶಿಷ್ಟ್ಯವಾಗಿದೆ.

೧ ಇ. ಕಲೆಯನ್ನು ಕಲಿಯುವ ಜೊತೆಗೆ ಆಧ್ಯಾತ್ಮಿಕ ಗುರುಗಳು ಹೇಳಿದಂತೆ ಸಾಧನೆ ಮಾಡಿ ಕಲೆಗೆ ಸಾಧನೆಯ ಜೊತೆಯನ್ನು ನೀಡಿ ! : ಕಲಾವಿದರಿಗೆ ಆಧ್ಯಾತ್ಮಿಕ ಗುರುಗಳಿದ್ದರೆ ಅವರು ಗುರುಗಳು ಹೇಳಿದಂತೆ ಸಾಧನೆಯನ್ನು ಮಾಡಬೇಕು. ಗುರುಗಳು ನಿಮ್ಮಿಂದ ಸಾಧನೆಯನ್ನು ಮಾಡಿಸಿಕೊಳ್ಳುವರು. ‘ಶಿಷ್ಯನನ್ನು ಈಶ್ವರನ ಬಳಿ ಒಯ್ಯುವುದು’, ಇದು ಗುರುಗಳ ಕಾರ್ಯವೇ ಆಗಿದೆ. ಗುರುಗಳು ಏನು ಕಲಿಸುತ್ತಾರೆಯೋ, ಅದನ್ನು ಕಲಿಯಬೇಕು. ಗುರುಗಳ ಸಂಕಲ್ಪದಿಂದಲೇ ಶಿಷ್ಯನ ಪ್ರಗತಿಯಾಗುತ್ತಿರುತ್ತದೆ. ಕಲಾವಿದನ ಸಾಧನೆಯ ಅಡಿಪಾಯವು ಗಟ್ಟಿಯಾಗಿರಬೇಕು. ಅವನ ಸಾಧನೆಯ ಅಡಿಪಾಯವು ಗಟ್ಟಿಯಾದ ನಂತರ ಅವನಿಗೆ ಕಲೆಯ ಮಾಧ್ಯಮದಿಂದ ಸಾಧನೆಯಲ್ಲಿ ಮುಂದೆ ಹೋಗಲು ಸುಲಭವಾಗುತ್ತದೆ.

೧ ಈ. ಕಲೆಗೆ ಸಾಧನೆಯನ್ನು ಜೋಡಿ ಸಿರುವುದರಿಂದ ಕಲೆಯಲ್ಲಿ ಪ್ರಾವೀಣ್ಯ ಪಡೆಯುವುದು ಮತ್ತು ಸಾಧನೆಯಾಗುವುದು, ಈ ಎರಡೂ ಸಾಧ್ಯವಾಗುತ್ತದೆ ! : ಈ ಒಂದು ಜನ್ಮದಲ್ಲಿ ಮೊದಲು ೧೪ ವಿದ್ಯೆ ಮತ್ತು ೬೪ ಕಲೆಗಳಲ್ಲಿನ ಯಾವುದೇ ಒಂದು ಕಲೆಯನ್ನು ಕಲಿಯುವುದು ಮತ್ತು ಅದರಿಂದ ಈಶ್ವರಪ್ರಾಪ್ತಿಯನ್ನು ಮಾಡಿಕೊಳ್ಳಲು ಸಾಧ್ಯವಿಲ್ಲ. ಕಲೆ ಮತ್ತು ವಿದ್ಯೆಯನ್ನು ಕಲಿಯುತ್ತಿರುವಾಗ ಸಾಧನೆಯನ್ನು ಮಾಡಿದರೆ ಕಲೆಯಲ್ಲಿಯೂ ಪ್ರಾವೀಣ್ಯತೆ ಸಿಗುತ್ತದೆ ಮತ್ತು ಸಾಧನೆಯಲ್ಲಿಯೂ ಪ್ರಗತಿಯಾಗುತ್ತದೆ. ‘ಯಾವ ವ್ಯವಸಾಯವನ್ನು ಮಾಡಲಿ ?’, ಎಂಬ ಪ್ರಶ್ನೆಯನ್ನು ಬಂದಿರುವ ವ್ಯಕ್ತಿಗಳು ‘ಮೊದಲು ಹಣವನ್ನು ಹೇಗೆ ಗಳಿಸುವುದು ?’, ಎಂಬುದನ್ನು ಕಲಿಯಬೇಕು. ನಂತರ ಆ ವ್ಯಕ್ತಿಯು ಯಾವುದೇ ವ್ಯವಸಾಯವನ್ನು ಮಾಡಬಹುದು, ಅದೇ ರೀತಿ ಕಲಾವಿದನು ಸಾಧನೆಯ ಅಡಿಪಾಯವನ್ನು ಗಟ್ಟಿ ಮಾಡಿದರೆ ಅವನಿಗೆ ಯಾವುದೇ ಕಲೆಯಿಂದ ಸಾಧನೆಯನ್ನು ಮಾಡಿ ಈಶ್ವರಪ್ರಾಪ್ತಿಯಾಗಬಹುದು.

೧ ಉ. ಕಲಾವಿದನು ಕಲೆಯನ್ನು ಪ್ರಸ್ತುತಪಡಿಸುವಾಗ ‘ನಾನು ಕೇವಲ ಭಗವಂತನಿಗಾಗಿಯೇ ಕಲೆಯನ್ನು ಪ್ರಸ್ತುತಪಡಿಸುತ್ತಿದ್ದೇನೆ’, ಎಂಬ ಭಾವವನ್ನು ಆಂತರ್ಯದಲ್ಲಿಡುವುದು ಆವಶ್ಯಕವಾಗಿದೆ ! : ಕಲಾವಿದನಲ್ಲಿ ‘ಪ್ರೇಕ್ಷಕರಿಗಾಗಿ ಅಲ್ಲ, ಈಶ್ವರನಿಗಾಗಿ ಕಲೆಯನ್ನು ಪ್ರಸ್ತುತ ಪಡಿಸುತ್ತಿದ್ದೇನೆ’, ಎಂಬ ಭಾವವಿರಬೇಕು. ಕಲಾವಿದನಲ್ಲಿರುವ ಈ ಭಾವದಿಂದ ಅವನಿಗೆ ‘ಎದುರಿಗೆ ಪ್ರೇಕ್ಷಕರು ಇದ್ದಾರೆಯೋ ಇಲ್ಲವೋ’, ಎಂಬ ಅರಿವೇ ಇರುವುದಿಲ್ಲ. ಅವನಲ್ಲಿ ‘ನಾನು ಕೇವಲ ಭಗವಂತನಿಗಾಗಿ ಕಲೆಯನ್ನು ಪ್ರಸ್ತುತಪಡಿಸುತ್ತಿದ್ದೇನೆ. ಅವನೇ ಸಾಕ್ಷಾತ್‌ ನನ್ನ ಮುಂದೆ ಇದ್ದಾನೆ’, ಎಂಬ ಭಾವವೇ ಇರುತ್ತದೆ. ‘ಭಾವವಿದ್ದಲ್ಲಿ ದೇವರು !’ ಎಂದು ಹೇಳುತ್ತಾರಲ್ಲವೇ. ಕಲಾವಿದನಿಗೆ ಕಲೆಯಿಂದ ಸಾಧನೆಯಲ್ಲಿ ಪ್ರಗತಿ ಮಾಡಿಕೊಳ್ಳುವುದಿದ್ದರೆ, ‘ನಿರಂತರ ಭಗವಂತನ ಅನುಸಂಧಾನದಲ್ಲಿರುವುದು’, ಇದರತ್ತ ಅವನ ಗಮನವಿರಬೇಕು.

೧ ಊ. ಕಲೆಯನ್ನು ಪ್ರಸ್ತುತಪಡಿಸುವಾಗ ಮಾತ್ರ ತನ್ನನ್ನು ಮರೆಯುವುದು, ಅಂದರೆ ‘ಕಲೆಯಿಂದ ಸಾಧನೆ’, ಎಂದಲ್ಲ; ದಿನವಿಡಿ ಆ ಸ್ಥಿತಿಯಲ್ಲಿರಲು ಪ್ರಯತ್ನಿಸುವುದಕ್ಕೆ ಕಲೆಯ ಮಾಧ್ಯಮ ದಿಂದಾಗುವ ಸಾಧನೆ ಎನ್ನುತ್ತಾರೆ ಕಲಾವಿದರ ಪ್ರಶ್ನೆ : ಕಲೆಯನ್ನು ಪ್ರಸ್ತುತಪಡಿಸುವಾಗ ಕಲಾವಿದನು ತನ್ನನ್ನು ಮರೆತು ಬೇರೆ ಸ್ಥಿತಿಯಲ್ಲಿದ್ದು ಹಾಡುತ್ತಾನೆ, ಹೀಗೆ ನಾವು ಅನುಭವಿಸಿದ್ದೇವೆ. ಕಲಾವಿದನ ಇಂತಹ ಸ್ಥಿತಿ, ಅಂದರೆ ಅವನು ಕಲೆಯ ಮಾಧ್ಯಮದಿಂದ ಸಾಧನೆ ಮಾಡುತ್ತಾನೆ, ಎಂದಾಗುತ್ತದೆಯೇ ?

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಕಲಾವಿದನು ಕಲೆಯನ್ನು ಪ್ರಸ್ತುತಪಡಿಸುವಾಗ, ಅಂದರೆ ಗಾಯನ, ವಾದನ, ನೃತ್ಯವನ್ನು ಮಾಡುವಾಗ ತನ್ನನ್ನು ಮರೆಯುತ್ತಾನೆ; ಆದರೆ ಅವನ ಈ ಸ್ಥಿತಿಯು ಆ ಸಮಯಕ್ಕಷ್ಟೇ ಇರುತ್ತದೆ. ಅವನು ದಿನವಿಡಿ ಇತರ ಸಮಯದಲ್ಲಿ ‘ತನ್ನ ಅಸ್ತಿತ್ವವನ್ನು ಮರೆತು ಕೃತಿಯನ್ನು ಮಾಡುತ್ತಿದ್ದಾನೆ’, ಎಂದಿರುವುದಿಲ್ಲ. ಸಾಧನೆಯಲ್ಲಿ ಅಖಂಡತೆ ಮಹತ್ವದ್ದಾಗಿದೆ. ಭಕ್ತಿಮಾರ್ಗದಿಂದ ಸಾಧನೆಯನ್ನು ಮಾಡುವ ಸಾಧಕನ ನಾಮಜಪವೂ ಸತತವಾಗಿ ನಡೆಯುತ್ತಿರುತ್ತದೆ. ಮಲಗಿದ್ದಾಗಲೂ ಅವನಿಂದ ನಾಮಜಪವಾಗುತ್ತಿರುತ್ತದೆ. ಆದ್ದರಿಂದ ಸಾಧಕನು ನಿರಂತರ ಭಗವಂತನ ಅನುಸಂಧಾನದಲ್ಲಿರುತ್ತಾನೆ. ‘ಕಲಾವಿದನು ಕಲೆಯಲ್ಲಿ ಮಗ್ನನಾಗುವುದು’, ಇದು ಆ ತುಲನೆಯಲ್ಲಿ ಸೀಮಿತವಾಗಿದೆ.

ಕು. ತೇಜಲ್ ಪಾತ್ರಿಕರ್

೧ ಎ. ಸಂಗೀತವು ಆಕಾಶತತ್ತ್ವಕ್ಕೆ ಸಂಬಂಧಿಸಿದೆ ಮತ್ತು ಈಶ್ವರನು ಪಂಚಮಹಾಭೂತಗಳ ಆಚೆಗೆ ಇರುವುದರಿಂದ ಕಲಾವಿದನು ಸಂಗೀತಕ್ಕೆ ಸಾಧನೆಯನ್ನು ಜೊತೆಗೂಡಿಸಿ ಮುಂದಿನ ಹಂತದ ಸಾಧನೆ ಮಾಡುವುದು ಆವಶ್ಯಕ : ಸಂಗೀತವು ಆಕಾಶತತ್ತ್ವಕ್ಕೆ ಸಂಬಂಧಿಸಿದೆ. ಆಕಾಶತತ್ತ್ವವು ಪಂಚಮಹಾಭೂತಗಳಲ್ಲಿ ಒಂದಾಗಿದೆ. ನಮಗೆ ಪಂಚಮಹಾಭೂತಗಳ ಆಚೆಗೆ ಹೋಗಲಿಕ್ಕಿದೆ. ಈಶ್ವರನು ಪಂಚಮಹಾಭೂತಗಳ ಆಚೆಗೆ ಇರುತ್ತಾನೆ. ಕಲಾವಿದನು ಜೀವನವಿಡಿ ಕೇವಲ ಸಂಗೀತವನ್ನು ಪ್ರಸ್ತುತಪಡಿಸುತ್ತಿದ್ದರೆ ಅವನಿಂದ ಕೇವಲ ಆಕಾಶತತ್ತ್ವಕ್ಕೆ ಸಂಬಂಧಿತ ಸಾಧನೆ ಆಗುವುದು. ಅವನು ಅದರ ಮುಂದೆ ಹೇಗೆ ಹೋಗುವನು ? ಸಂಗೀತದ ಮಹತ್ವದ ವಿಷಯವೆಂದರೆ ಸಂಗೀತವು ಪಂಚಮಹಾಭೂತಗಳಲ್ಲಿನ ಪೃಥ್ವಿ, ಆಪ, ತೇಜ ಮತ್ತು ವಾಯು ಈ ತತ್ತ್ವಗಳಿಗಿಂತಲೂ ಮುಂದಿನ ಹಂತದ, ಅಂದರೆ ಆಕಾಶತತ್ತ್ವಕ್ಕೆ ಸಂಬಂಧಿಸಿರುವುದರಿಂದ ಅದು ಹೆಚ್ಚು ಮುಂದಿನ ಹಂತದ್ದಾಗಿದೆ. ಆದ್ದರಿಂದ ಸಂಗೀತಕಲೆಯನ್ನು ಬೆಳೆಸುವ ಕಲಾವಿದನು ಮುಂದಿನ ಹಂತಕ್ಕೆ ಈ ಮೊದಲೇ ತಲುಪಿರುತ್ತಾನೆ. ಅವನು ಸಂಗೀತಕ್ಕೆ ಸಾಧನೆಯನ್ನು ಜೊತೆಗೂಡಿಸಿ ಆಕಾಶತತ್ತ್ವಕ್ಕಿಂತಲೂ ಮುಂದೆ ಹೋಗಿ ಈಶ್ವರಪ್ರಾಪ್ತಿಯನ್ನು ಮಾಡಿಕೊಳ್ಳಬಹುದು. ಕಲೆಯಿಂದ ಸಾಧನೆಯನ್ನು ಮಾಡುವಾಗ ‘ಕಲಾವಿದನ ತನು, ಮನ ಮತ್ತು ಧನ ಇವುಗಳ ತ್ಯಾಗ ಎಷ್ಟಾಗಿದೆ ? ಕಲಾವಿದನು ಭಗವಂತನಿಗೆ ಸರ್ವಸ್ವವನ್ನು ಅರ್ಪಿಸಿದ್ದಾನೆಯೇ ?’, ಎಂಬುದೂ ಅಷ್ಟೇ ಮಹತ್ವದ್ದಾಗಿದೆ.

೧ ಐ. ಕಲೆಯ ಆರಾಧನೆಯನ್ನು ಮಾಡುವಾಗ ಕಲಾವಿದನಲ್ಲಿ ‘ಈಶ್ವರಪ್ರಾಪ್ತಿ’ಯ ಧ್ಯೇಯವಿಲ್ಲದಿದ್ದರೆ, ಕಲಾವಿದನು ಅಹಂಕಾರದ ಜಾಲದಲ್ಲಿ ಸಿಲುಕುವುದು : ವಿದ್ಯಾರ್ಥಿಗಳು ವಿವಿಧ ಕಲೆಗಳಲ್ಲಿನ ಶಿಕ್ಷಣವನ್ನು ಪಡೆಯುತ್ತಾರೆ. ಕಲೆಯ ಕ್ಷೇತ್ರದಲ್ಲಿನ ಗುರುಗಳು ವಿದ್ಯಾರ್ಥಿಗೆ ‘ಈಶ್ವರಪ್ರಾಪ್ತಿಯೇ ಕಲೆಯನ್ನು ಕಲಿಯುವುದರ ಹಿಂದಿನ ಉದ್ದೇಶವಾಗಿದೆ’ ಎಂಬುದನ್ನು ತಿಳಿಸುವುದಿಲ್ಲ. ‘ಸ್ವಭಾವದೋಷ ಮತ್ತು ಅಹಂ ಇವುಗಳ ನಿರ್ಮೂಲನೆ ಮಾಡಲು ಕಲಿಸುವುದಂತೂ ದೂರದ ಮಾತಾಗಿದೆ. ವಿದ್ಯಾರ್ಥಿಯು ಕೇವಲ ಕಲೆಯ ಬಗ್ಗೆ ಕಲಿಯುತ್ತಾನೆ. ವಿದ್ಯಾರ್ಥಿಗಳಿಗೆ ಸ್ವಭಾವದೋಷ ಮತ್ತು ಅಹಂ ಇವುಗಳನ್ನು ಹೇಗೆ ನಿರ್ಮೂಲನೆ ಮಾಡಬೇಕು, ಎಂಬುದನ್ನು ಕಲಿಸದೇ ಅವರಿಗೆ ಅದನ್ನು ಮಾಡುವುದು ಕಠಿಣವಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯಲ್ಲಿ ಅಹಂ ಇರುತ್ತದೆ. ಕಲಾವಿದನಲ್ಲಿ ಅಹಂ ಬೆಳೆಯುವ ಅಪಾಯ ಹೆಚ್ಚಿರುತ್ತದೆ. ಕಲಾವಿದರು ಸ್ವಭಾವದೋಷ ಮತ್ತು ಅಹಂ ಇವುಗಳ ನಿರ್ಮೂಲನೆ ಪ್ರಕ್ರಿಯೆಯನ್ನು ಮಾಡದಿದ್ದರೆ, ಕಲಾವಿದರು ಅಹಂನಲ್ಲಿಯೇ ಸಿಲುಕುತ್ತಾರೆ. ಕಲಾವಿದನ ಅಹಂ ಹೆಚ್ಚಾದರೆ ಅವನ ಸಾಧನೆಯಲ್ಲಿ ಹಾನಿಯಾಗುತ್ತದೆ.

೧ ಓ. ಕಲಾವಿದರಿಗೆ ಬರುತ್ತಿರುವ ಅನುಭೂತಿಗಳ ಸಂದರ್ಭದ ಮಾರ್ಗದರ್ಶನ

೧ ಓ ೧. ಕಲಾವಿದನಿಗೆ ‘ಟೊಳ್ಳಿನ ಕಡೆಗೆ ನೋಡಿ ನೃತ್ಯ ಮಾಡಬೇಕು’, ಎಂದೆನಿಸುವುದು, ಇದು ನಿರ್ಗುಣದೆಡೆಗೆ ಕಡೆಗೆ ಅವನ ಮಾರ್ಗಕ್ರಮಣವಾಗುತ್ತಿದೆ’, ಎಂಬುದರ ದರ್ಶಕವಾಗಿದೆ ಕಲಾವಿದರ ಪ್ರಶ್ನೆ : ನನಗೆ ‘ಟೊಳ್ಳಿನ ಕಡೆಗೆ ನೋಡಿ ನೃತ್ಯ ಮಾಡಬೇಕು’, ಎಂದೆನಿಸುತ್ತದೆ. ಇದು ನನ್ನ ಭ್ರಮೆಯೇ ? ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಸಾಧನೆಯಲ್ಲಿ ಪ್ರಗತಿಯಾಗುವಾಗ ಸಾಧಕನಿಗೆ ಈ ರೀತಿಯ ಅನುಭೂತಿಗಳು ಬರುತ್ತವೆ. ಆ ಸಮಯದಲ್ಲಿ, ‘ಇದು ಯೋಗ್ಯವಾಗಿದೆಯೇ ?’ ಎಂದು ಅವರ ಮನಸ್ಸಿನಲ್ಲಿ ವಿಚಾರ ಬರುತ್ತದೆ. ‘ಟೊಳ್ಳಿನ ಕಡೆಗೆ ನೋಡಿ ನೃತ್ಯವನ್ನು ಮಾಡಬೇಕು’, ಎಂದೆನಿಸುವುದು’, ಇದು ‘ನಿರ್ಗುಣದ ಕಡೆಗೆ ಮಾರ್ಗಕ್ರಮಣವಾಗುತ್ತಿದೆ’, ಎಂಬುದನ್ನು ತೋರಿಸುತ್ತದೆ. ಹೀಗೆ ಅರಿವಾಗುವುದು ಸರಿಯಿದೆ. ಕಲಾವಿದನು ಈ ಸ್ಥಿತಿಯನ್ನು ಅನುಭವಿಸಿದ ನಂತರ ನಿರಂತರ ಆ ಸ್ಥಿತಿಯಲ್ಲಿರಲು ಪ್ರಯತ್ನಿಸಬೇಕು. ಈ ಸ್ಥಿತಿಯು ಕೇವಲ ನೃತ್ಯವನ್ನು ಪ್ರಸ್ತುತಪಡಿಸುವಾಗ ಮಾತ್ರವಲ್ಲ, ಸಾಧಕನು ೨೪ ಗಂಟೆಗಳ ಕಾಲ ಈ ಸ್ಥಿತಿಯಲ್ಲಿರಲು ಪ್ರಯತ್ನಿಸಬೇಕು.’ (ಮುಂದುವರಿಯುವುದು)

– ಸುಶ್ರೀ (ಕು.) ತೇಜಲ ಪಾತ್ರೀಕರ (ಸಂಗೀತ ವಿಶಾರದ ಮತ್ತು ಸಂಗೀತ ಸಮನ್ವಯಕರು, ಆಧ್ಯಾತ್ಮಿಕ ಮಟ್ಟ ಶೇ. ೬೦), ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಫೋಂಡಾ, ಗೋವಾ.