Shringeri Math Shankaracharya To Visit Mahakumbh : ಮಹಾಕುಂಭಮೇಳಕ್ಕೇ ಇದೇ ಮೊದಲಬಾರಿಗೆ ಶೃಂಗೇರಿ ಪೀಠದ ಶಂಕರಾಚಾರ್ಯರ ಆಗಮನ !

ಪ್ರಯಾಗರಾಜ ಮಹಾಕುಂಭ ಮೇಳ ೨೦೨೫

ಪ್ರಯಾಗರಾಜ – ಇಲ್ಲಿಯ ಮಹಾ ಕುಂಭಮೇಳಕ್ಕೆ ಇದೇ ಮೊದಲ ಬಾರಿ ಶೃಂಗೇರಿ ಪೀಠದ ಶಂಕರಾಚಾರ್ಯ ಸ್ವಾಮಿ ಭಾರತತೀರ್ಥರು ಬರುವರು, ಎಂದು ಮೇಳದ ಅಧಿಕಾರಿ ವಿಜಯ ಕಿರಣ ಆನಂದ ಇವರು ಮಾಹಿತಿ ನೀಡಿದರು. ಶಂಕರಾಚಾರ್ಯರು ಆಮಂತ್ರಣ ಸ್ವೀಕರಿಸಿದ್ದು ಅವರಿಗೆ ಶಂಕರಾಚಾರ್ಯ ಮಾರ್ಗದಲ್ಲಿ ಸ್ಥಳ ನೀಡಲಾಗಿದೆ. ಇತಿಹಾಸದಲ್ಲಿ ಮೊಟ್ಟಮೊದಲು ಬಾರಿಗೆ ಮಹಾಕುಂಭ ಮೇಳದಲ್ಲಿ ಶೃಂಗೇರಿ ಮಠದ ಟೆಂಟ್ ಹಾಕಲಾಗುವುದು. ಶಂಕರಾಚಾರ್ಯ ಸ್ವಾಮಿ ಭಾರತಿ ತೀರ್ಥ ಇವರು ಜನವರಿ ೨೫ ರಿಂದ ೩೦ ಈ ಕಾಲಾವಧಿಯಲ್ಲಿ ಕುಂಭ ಕ್ಷೇತ್ರದಲ್ಲಿ ವಾಸ ಮಾಡುವರು. ಅವರು ಮೌನಿ ಅಮಾವಾಸ್ಯೆಯ ದಿನದಂದು ಎಂದರೆ ಜನವರಿ ೨೯ ರಂದು ಪವಿತ್ರ ತ್ರಿವೇಣಿ ಸಂಗಮದಲ್ಲಿ ಅಮೃತ ಸ್ನಾನ ಮಾಡುವರು. ಈ ೫ ದಿನದಲ್ಲಿ ಅವರ ದರ್ಶನ, ಸತ್ಸಂಗ ಮತ್ತು ಮಾರ್ಗದರ್ಶನ ನಡೆಯುವುದು. ಮಹಾಕುಂಭಮೇಳಕ್ಕೆ ಇಲ್ಲಿಯವರೆಗೆ ಶಾರದ, ಜ್ಯೋತಿಷ್ಯ ಮತ್ತು ಪುರಿ ಪೀಠದ ಶಂಕರಾಚಾರ್ಯರು ಕುಂಭ ಮೇಳದಲ್ಲಿ ಸಹಭಾಗಿದ್ದಾರೆ; ಆದರೆ ಶೃಂಗೇರಿ ಪೀಠದ ಶಂಕರಚಾರ್ಯರು ಕುಂಭಮೇಳದಲ್ಲಿ ಸಹಭಾಗಿ ಆಗುವುದು ಇದು ಮೊದಲ ಬಾರಿಯಾಗಿದೆ.

ಅಮಿತಾ ಶಹಾ, ಜೆ.ಪಿ. ನಡ್ಡ ಇವರಿಗೂ ಆಮಂತ್ರಣ

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು ಕೇಂದ್ರ ಗೃಹ ಸಚಿವ ಅಮಿತ ಶಹಾ, ಭಾಜಪದ ಅಧ್ಯಕ್ಷ ಜೆ.ಪಿ. ನಡ್ದ, ಮಿಜೋರಾಂ ರಾಜ್ಯಪಾಲ ಜನರಲ್ ವಿ.ಕೆ. ಸಿಂಗ, ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ, ಸಹಿತ ಅನೇಕ ಗಣ್ಯರಿಗೆ ಭೇಟಿ ಮಾಡಿ ಮಹಾಕುಂಭ ಮೇಳಕ್ಕೆ ಆಮಂತ್ರಣ ನೀಡಿದ್ದಾರೆ.