Bangladesh Hindus Meet Shankaracharya : ಭಾರತದಲ್ಲಿನ ಮುಸಲ್ಮಾನರಿಗೆ ಬಾಂಗ್ಲಾದೇಶಕ್ಕೆ ಕಳುಹಿಸಿ ಮತ್ತು ಅಲ್ಲಿಯ ಹಿಂದುಗಳನ್ನು ಭಾರತಕ್ಕೆ ಕರೆತನ್ನಿ ! – ಬಾಂಗ್ಲಾದೇಶಿ ಹಿಂದೂಗಳ ಬೇಡಿಕೆ

ವಾರಾಣಸಿ (ಉತ್ತರಪ್ರದೇಶ) – ಬಾಂಗ್ಲಾದೇಶದಿಂದ ಇಲ್ಲಿ ಬಂದಿರುವ ೧೨ ಬಾಂಗ್ಲಾದೇಶಿ ಹಿಂದುಗಳು ಜ್ಯೋತಿಷ್ಯ ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕೇಶ್ವರನಂದ ಸರಸ್ವತಿ ಇವರನ್ನು ಭೇಟಿ ಮಾಡಿ ಅವರ ಹತ್ತಿರ ಕೆಲವು ಬೇಡಿಕೆಗಳು ಸಲ್ಲಿಸಿದ್ದಾರೆ. ಅವರು, ಭಾರತದ ಗಡಿಗೆ ಅಂಟಿಕೊಂಡಿರುವ ಬಾಂಗ್ಲಾದೇಶದಲ್ಲಿ ಹಿಂದೂಗಳಿಗಾಗಿ ಸ್ವತಂತ್ರ ಭೂಮಿ ನೀಡಬೇಕು. ಅದರ ಜೊತೆಗೆ ಭಾರತ ಮತ್ತು ಬಾಂಗ್ಲಾದೇಶ ಇವರಲ್ಲಿ ಜನಸಂಖ್ಯೆಯ ಅದಾನ ಪ್ರದಾನವಾಗುವ ಅಗತ್ಯವಿದೆ. ಬಾಂಗ್ಲಾದೇಶದಿಂದ ಎಷ್ಟು ಹಿಂದುಗಳು ಭಾರತಕ್ಕೆ ಬರುತ್ತಾರೆ, ಅಷ್ಟು ಮುಸಲ್ಮಾನರನ್ನು ಅಲ್ಲಿಗೆ ಕಳುಹಿಸಬೇಕು. ಜಗತ್ತಿನ ಯಾವುದೇ ಮೂಲೆಯಲ್ಲಿ ಜನಿಸಿರುವ ಹಿಂದೂಗೆ ಇಸ್ರೇಲ್ ನಂತೆ ಭಾರತದ ನೈಸರ್ಗಿಕ ನಾಗರೀಕನೆಂದು ತಿಳಿಯಬೇಕು. ಹಾಗೂ ಆಗಸ್ಟ್ ೫, ೨೦೨೪ ರಂದು ಅಧಿಕಾರ ಬದಲಾವಣೆ ಆಗುವ ಮೊದಲು ಭಾರತಕ್ಕೆ ಬಂದಿರುವ ಬಾಂಗ್ಲಾದೇಶಿ ಹಿಂದೂಗಳ ವೀಸಾ ಅವಧಿ ಹೆಚ್ಚಿಸಬೇಕು ಮತ್ತು ಅವರನ್ನು ಬಲವಂತವಾಗಿ ಬಾಂಗ್ಲಾದೇಶಕ್ಕೆ ಕಳುಹಿಸಬಾರದು. ಅವರಿಗೆ ಭಾರತದಲ್ಲಿ ಉದ್ಯೋಗ ನೀಡಬೇಕು ಎಂದು ಹೇಳಿದ್ದಾರೆ.

ಬಾಂಗ್ಲಾದೇಶಕ್ಕೆ ‘ಇಸ್ಲಾಮಿ ರಾಷ್ಟ್ರ’ ಘೋಷಿಸುವ ಪ್ರಯತ್ನ

ಬಾಂಗ್ಲಾದೇಶ ಹಿಂದುಗಳು, ಬಾಂಗ್ಲಾದೇಶದಲ್ಲಿ ಈಗ ಒಂದೇ ನೀತಿ ಇದೆ ಅದು ಎಂದರೆ ಬಾಂಗ್ಲಾದೇಶಕ್ಕೆ ಇಸ್ಲಾಮಿ ರಾಷ್ಟ್ರ ಎಂದು ಘೋಷಿಸುವುದು. ಬಾಂಗ್ಲಾದೇಶದಲ್ಲಿ ಎಲ್ಲಿ ಹಿಂದುಗಳು ಕಾಣುತ್ತಾರೆ ಅಲ್ಲಿ ಅವರ ಮೇಲೆ ದೌರ್ಜನ್ಯ ನಡೆಯುತ್ತಿವೆ. ದೇವಸ್ಥಾನಗಳನ್ನು ವಶಕ್ಕೆ ಪಡೆಯಲಾಗುತ್ತಿದೆ. ಅಲ್ಲಿಯ ಮುಸಲ್ಮಾನರು ಮನೆಗೆ ನುಗ್ಗಿ ಹಿಂದೂ ಮಹಿಳೆಯರನ್ನು ಥಳಿಸಿ ಬಲಾತ್ಕಾರ ಮಾಡುತ್ತಿದ್ದಾರೆ.

ಸಂಪಾದಕೀಯ ನಿಲುವು

ಭಾರತ ಇಂತಹ ಧೈರ್ಯ ತೋರುವ ಸಾಧ್ಯತೆ ಕಡಿಮೆ. ಭಾರತದಲ್ಲಿ ನುಸುಳಿರುವ ಬಾಂಗ್ಲಾದೇಶ ಮುಸಲ್ಮಾನರನ್ನು ಕಳೆದ ೨೫ ವರ್ಷಗಳಿಂದ ಓಡಿಸಲು ಸಾಧ್ಯವಾಗದಿರುವ ಎಲ್ಲಾ ಪಕ್ಷದ ರಾಜಕಾರಣಿಗಳು ಭಾರತಕ್ಕಾಗಿ ಲಜ್ಜಾಸ್ಪದವಾಗಿದ್ದಾರೆ !