Bangladesh Hindu Women Gang Raped Killed : ಬಾಂಗ್ಲಾದೇಶದಲ್ಲಿ ಹಿಂದೂ ಮಹಿಳೆ ಮೇಲೆ ಸಾಮೂಹಿಕ ಬಲಾತ್ಕಾರ: ಮಹಿಳೆ ಸಾವು

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂ ಸಮುದಾಯದ ವಿರುದ್ಧ ಹಿಂಸಾಚಾರ ಮುಂದುವರಿದಿದೆ. ಕೇವಲ ಹಿಂದೂ ಧಾರ್ಮಿಕ ಸ್ಥಳಗಳನ್ನು ಗುರಿ ಮಾಡಲಾಗುತ್ತಿಲ್ಲ, ಮಹಿಳೆಯರ ಹತ್ಯೆ ಮತ್ತು ಬಲಾತ್ಕಾರವನ್ನೂ ಮಾಡಲಾಗುತ್ತಿದೆ. ಇದೀಗ ನರೇಲ್ ನಲ್ಲಿ 52 ವರ್ಷದ ಹಿಂದೂ ಮಹಿಳೆಯೊಬ್ಬರು ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಅವರ ಮೇಲೆ ಸಾಮೂಹಿಕ ಬಲಾತ್ಕಾರ ನಡೆದಿದೆ.  ಅದೇ ಸಮಯದಲ್ಲಿ, ಭಾರತಕ್ಕೆ ಬಂದ ಕೆಲವು ಬಾಂಗ್ಲಾದೇಶಿ ಹಿಂದೂಗಳು ಹಿಂಸಾಚಾರದ ನೋವಿನ ಘಟನೆಗಳನ್ನು ವಿವರಿಸಿದರು.  ಸಂತ್ರಸ್ತೆಯ ಕುಟುಂಬದವರ ಹೇಳಿಕೆಯಂತೆ, ಸಂತ್ರಸ್ತೆ ಡಿಸೆಂಬರ್ 24 ರಂದು ರಾತ್ರಿ 8 ಗಂಟೆಗೆ ಮನೆಗೆ ಮರಳಿದರು. ಅಂದಿನಿಂದ ನಿರಂತರವಾಗಿ ವಾಂತಿ ಮಾಡಿಕೊಳ್ಳುತ್ತಿದ್ದಳು. ಅಂದು ರಾತ್ರಿ ಊಟ ಮಾಡಿ ಮನೆಯವರಿಗೆ ಏನೂ ಹೇಳದೆ ಮಲಗಿದಳು. ಮರುದಿನ ಡಿಸೆಂಬರ್ 25 ರಂದು ಮಹಿಳೆಯ ಆರೋಗ್ಯಸ್ಥಿತಿ ಹದಗೆಟ್ಟಿತು. ಇದಾದ ನಂತರ ಅವರನ್ನು ಜೆಸೋರ್ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಯೇ ಡಿಸೆಂಬರ್ 26ರ ರಾತ್ರಿ ಮೃತಪಟ್ಟಿದ್ದಾಳೆ. ಈ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಹಿಂದೂಗಳಲ್ಲಿ ಆಕ್ರೋಶದ ವಾತಾವರಣವಿದೆ.

1. ಭಯದಿಂದ ಹೆಸರು ಹೇಳಲು ಇಚ್ಛಿಸದ ಸ್ಥಳೀಯ ಯುವಕನೋರ್ವ ಷರತ್ತಿನ ಮೇರೆಗೆ, ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಹೇಳಿದನು. ಇದರಿಂದಾಗಿ ಆಕೆ ದೈಹಿಕ ಹಾಗೂ ಮಾನಸಿಕ ಹಿಂಸೆಗೆ ಒಳಗಾಗಿದ್ದಳು, ಇದರಿಂದಾಗಿ ಆಕೆ ನಿರಂತರ ಒತ್ತಡಕ್ಕೆ ಒಳಗಾಗಿದ್ದಳು. ಇದರಿಂದ ಅವಮಾನ ಹಾಗೂ ಒತ್ತಡದಿಂದ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ’, ಎಂದು ಹೇಳಿದರು.

2. ಮೃತಪಟ್ಟ ತಾಯಿಯ ಬಗ್ಗೆ ಮಗನು, ತನ್ನ ತಾಯಿಯನ್ನು ತುಂಬಾ ಕೊಳಕು ರೀತಿಯಲ್ಲಿ ನಡೆಸಿಕೊಳ್ಳುತ್ತಿದ್ದರು. ಇದರಿಂದ ಅವಳು ಬಹಳ ಘಾಸಿಗೊಂಡಿದ್ದಳು ಎಂದು ಹೇಳಿದನು.

ಹಿಂದೂ ಮಹಿಳೆಯನ್ನು ಚಾರಿತ್ರ್ಯಹೀನಳನ್ನಾಗಿ ಬಿಂಬಿಸುವ ಹೇಯ ಪ್ರಯತ್ನ

ಸ್ಥಳೀಯ ಪೊಲೀಸ್ ಠಾಣೆಯ ಅಧಿಕಾರಿ ಮಹಮ್ಮದ್ ಸಾಜೆದುಲ ಇಸ್ಲಾಂ ಮಾತನಾಡಿ, ಮಹಿಳೆಗೆ ಅದೇ ಗ್ರಾಮದ ಹುಡುಗನೊಂದಿಗೆ ಸಂಬಂಧವಿದೆ ಎಂದು ಕೆಲವರು ಹೇಳಿದ್ದಾರೆ. ಅಂದು ರಾತ್ರಿ ಸ್ಥಳೀಯರು ಆತನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದರು’, ಎಂದು ಹೇಳಿದ್ದಾರೆ. (ಬಾಂಗ್ಲಾದೇಶದ ಮತಾಂಧ ಮುಸ್ಲಿಮರಂತೆ ವರ್ತಿಸುವ ಮತಾಂಧ ಮುಸಲ್ಮಾನ ಪೊಲೀಸರು ! – ಸಂಪಾದಕರು)

ಸಂಪಾದಕೀಯ ನಿಲುವು

ಬಾಂಗ್ಲಾದೇಶದ ಹಿಂದೂಗಳಿಗೆ ಯಾರೂ ರಕ್ಷಕರಿಲ್ಲದ್ದರಿಂದ ಅವರ ನರಸಂಹಾರ ನಿಶ್ಚಿತ !