‘ನಮ್ಮ ಶತ್ರುಗೆ ಸಹಾಯ ಮಾಡಿದರೆ, ಸಂಬಂಧ ಹದಗೆಡಬಹುದು !’ – ಗಯೇಶ್ವರ್ ರಾಯ್ ಇವರಿಂದ ಬೆದರಿಕೆ

ಶೇಖ್ ಹಸೀನಾಗೆ ಆಶ್ರಯ ನೀಡಿದ ಭಾರತ; ಬಾಂಗ್ಲಾದೇಶ ನ್ಯಾಷನಲ್ ಪಾರ್ಟಿಯ ಜನ್ಮ-ಹಿಂದೂ ನಾಯಕ ಗಯೇಶ್ವರ್ ರಾಯ್ ರಿಂದ ಭಾರತಕ್ಕೆ ಬೆದರಿಕೆ !

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶ ನ್ಯಾಷನಲ್ ಪಾರ್ಟಿಯ ಬಾಂಗ್ಲಾದೇಶ ಮತ್ತು ಭಾರತದ ನಡುವಿನ ಪರಸ್ಪರ ಸಹಕಾರವನ್ನು ಬೆಂಬಲಿಸುತ್ತದೆ; ಆದರೆ ನೀವು ನಮ್ಮ ಶತ್ರುವಿಗೆ (ಶೇಖ್ ಹಸೀನಾ) ಸಹಾಯ ಮಾಡುತ್ತಿದ್ದರೆ, ಈ ಪರಸ್ಪರ ಸಹಕಾರವನ್ನು ಗೌರವಿಸುವುದು ಕಷ್ಟವಾಗಲಿದೆ ಎಂದು ‘ಬಾಂಗ್ಲಾದೇಶ ನ್ಯಾಷನಲ್ ಪಾರ್ಟಿ’ಯ ಹಿರಿಯ ನಾಯಕ ಗಯೇಶ್ವರ್ ರಾಯ್ ಅವರು ಭಾರತದ ಇಂಗ್ಲಿಷ್ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಬೆದರಿಕೆ ಹಾಕಿದ್ದಾರೆ. ಬಾಂಗ್ಲಾದೇಶ ನ್ಯಾಷನಲ್ ಪಾರ್ಟಿ (BNP) ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಪಕ್ಷವಾಗಿದೆ. ಬಾಂಗ್ಲಾದೇಶದಲ್ಲಿ ಹೊಸದಾಗಿ ರಚನೆಯಾದ ಮಧ್ಯಂತರ ಸರಕಾರಕ್ಕೆ ಬಿ.ಎನ್.ಪಿ. ಸಮರ್ಥನೆ ನೀಡಿದೆ.

ಭಾರತ ಈಗ ಶೇಖ್ ಹಸೀನಾ ಅವರ ಜವಾಬ್ದಾರಿಯನ್ನು ತೆಗೆದುಕೊಂಡಿದೆ ಎಂದು ರಾಯ್ ಹೇಳಿದರು. ಭಾರತ ಮತ್ತು ಬಾಂಗ್ಲಾದೇಶದ ಜನರು ಪರಸ್ಪರ ಯಾವುದೇ ದ್ವೇಷವನ್ನು ಹೊಂದಿಲ್ಲ; ಆದರೆ ಇಡೀ ದೇಶವನ್ನು ಬೆಂಬಲಿಸುವ ಬದಲು ಭಾರತವು ಕೇವಲ ಒಂದೇ ಪಕ್ಷವನ್ನು (ಶೇಖ್ ಹಸಿನ್ ಅವರ ಆವಾಮಿ ಲೀಗ್) ಬೆಂಬಲಿಸುವುದು ಸರಿಯೇ? ಎಂದು ರಾಯ್ ಪ್ರಶ್ನಿಸಿದ್ದಾರೆ.

ಸಂಪಾದಕೀಯ ನಿಲುವು

ಬಾಂಗ್ಲಾದೇಶದಲ್ಲಿ ನಡೆದ ಹಿಂದೂಗಳ ಹತ್ಯಾಕಾಂಡದ ಬಗ್ಗೆ ಗಯೇಶ್ವರ್ ರಾಯ್ ಅವರು ಇಲ್ಲಿಯವರೆಗೆ ಬಾಯಿ ಬಿಡಲಿಲ್ಲ. ರಾಯ್‌ ಹಿಂದೂ ಎಂಬ ಕಾರಣಕ್ಕೆ ನಾಳೆ ಅವರು ಶೋಷಣೆಗೆ ಒಳಗಾದರೆ ಭಾರತದ ಹಿಂದೂಗಳಿಗೆ ಆಶ್ಚರ್ಯವಾಗಲ್ಲ !

‘ಬಾಂಗ್ಲಾದೇಶದಲ್ಲಿ ಹಿಂದೂಗಳ ಕಗ್ಗೊಲೆ ನಡೆಯುತ್ತಿರುವುದರಿಂದ ನಾವು ಬಾಂಗ್ಲಾದೇಶವನ್ನು ಗೌರವಿಸುವುದಿಲ್ಲ’, ಎಂಬ ದಿಟ್ಟ ಪ್ರತ್ತ್ಯುತ್ತರವನ್ನು ಭಾರತ ಎಂದಾದರೂ ನೀಡುವುದೇ ?