ಡೊನಾಲ್ಡ್ ಟ್ರಂಪ್ ಕೊಲೆಗೆ ಸಂಚು ಪ್ರಕರಣ; ಪಾಕಿಸ್ತಾನಿ ಪ್ರಜೆಯ ಬಂಧನ

ವಾಷಿಂಗ್ಟನ್ (ಅಮೇರಿಕಾ) – ಅಮೆರಿಕಾದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹತ್ಯೆಗೆ ಸಂಚು ರೂಪಿಸಿದ ಆರೋಪದ ಮೇಲೆ ಪಾಕಿಸ್ತಾನಿ ವ್ಯಕ್ತಿಯೊಬ್ಬನನ್ನು ಅಮೆರಿಕದಲ್ಲಿ ಬಂಧಿಸಲಾಗಿದೆ. ಆತನ ಹೆಸರು ಆಸಿಫ್ ಮರ್ಚೆಂಟ್ (ವಯಸ್ಸು 46 ವರ್ಷ) ಎಂದಿದೆ. ಇರಾನ್‌ನ ರೆವಲ್ಯೂಷನರಿ ಗಾರ್ಡ್‌ಗಳ ಸರ್ವೋಚ್ಚ ಕಮಾಂಡರ್ ಕಾಸಿಮ್ ಸುಲೆಮಾನಿ ಹತ್ಯೆಗೆ ಸೇಡು ತೀರಿಸಿಕೊಳ್ಳಲು ಆಸಿಫ್ ಮರ್ಚೆಂಟ್ ವರ್ಷ 2020 ರಲ್ಲಿ ಅಮೇರಿಕಾದ ನಾಯಕರ ಹತ್ಯೆಗೆ ಸಂಚು ರೂಪಿಸಿದ್ದನು. ಈ ಮಾಹಿತಿ ಬೆಳಕಿಗೆ ಬಂದ ನಂತರ, ಅಮೆರಿಕಾ ಸರಕಾರವು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇತರ ಅಧಿಕಾರಿಗಳ ಭದ್ರತೆಯನ್ನು ಹೆಚ್ಚಿಸಿದೆ.

ಅಮೆರಿಕಕ್ಕೆ ಹೋಗುವ ಮುನ್ನ ಆಸಿಫ್ ಮರ್ಚಂಟ್ ಅನೇಕ ದಿನಗಳ ಕಾಲ ಇರಾನ್ ನಲ್ಲಿ ವಾಸಿಸುತ್ತಿದ್ದನು. ಅವನು ಏಪ್ರಿಲ್‌ನಲ್ಲಿ ಪಾಕಿಸ್ತಾನದಿಂದ ಅಮೆರಿಕಾಕ್ಕೆ ಬಂದಿದ್ದಾನೆ. ಇಲ್ಲಿಗೆ ಬಂದ ನಂತರ ಅವನು ನ್ಯೂಯಾರ್ಕ್‌ನಲ್ಲಿ ಹತ್ಯೆಗಾಗಿ ಶೂಟರ್ ನನ್ನು ಹುಡುಕುವ ಪ್ರಯತ್ನ ಮಾಡಿದ್ದನು.

ಸಂಪಾದಕೀಯ ನಿಲುವು

ಪಾಕಿಸ್ತಾನಿ ಪ್ರಜೆಗಳು ವಿಶ್ವದಲ್ಲಿ ಎಲ್ಲೇ ಹೋದರೂ ಅವರು ಅಲ್ಲಿನ ಸಮಾಜಕ್ಕೆ ಮತ್ತು ರಾಜಕಾರಣಿಗಳಿಗೆ ಅಪಾಯಕಾರಿಗಳಾಗಿರುತ್ತಾರೆ ಅನ್ನುವುದಕ್ಕೆ ಇದೇ ಉದಾಹರಣೆ !