ಭಾರತ ಸರಕಾರವು ಬಾಂಗ್ಲಾದೇಶದಲ್ಲಿನ ಹಿಂದುಗಳ ರಕ್ಷಣೆಗಾಗಿ ಕ್ರಮ ಕೈಗೊಳ್ಳಬೇಕು ! – ವಿಶ್ವ ಹಿಂದೂ ಪರಿಷತ್

ನವ ದೆಹಲಿ – ಹಿಂದೆ ಬಾಂಗ್ಲಾದೇಶದಲ್ಲಿ ಶೇಕಡ ೩೨ ರಷ್ಟು ಹಿಂದುಗಳು ಇದ್ದರು; ಆದರೆ ಇಂದು ಅಲ್ಲಿ ಶೇಕಡ ೮ ರಷ್ಟು ಹಿಂದುಗಳು ಇದ್ದಾರೆ. ಅವರ ಮೇಲೆ ದಾಳಿಗಳು ನಡೆದಿವೆ, ಆದ್ದರಿಂದ ಸಂಪೂರ್ಣ ಜಗತ್ತು ಇದರ ಕುರಿತು ಯೋಚಿಸಬೇಕು. ಹಸ್ತಕ್ಷೇಪ ಮಾಡಬೇಕು. ಭಾರತ ಇದು ಅದರ ನೆರೆಯ ದೇಶವಾಗಿದೆ. ನಮ್ಮ ಜವಾಬ್ದಾರಿ ಹೆಚ್ಚಾಗಿದೆ. ನಾವು ಕಣ್ಣು ಮುಚ್ಚಿ ಕೂರಲು ಸಾಧ್ಯವಿಲ್ಲ. ಭಾರತ ಸರಕಾರವು ಸಾಧ್ಯ ವಾಗುವಂತಹ ಎಲ್ಲಾ ಕ್ರಮ ಕೈಗೊಳ್ಳಬೇಕು ಮತ್ತು ಹಿಂದುಗಳ ರಕ್ಷಣೆಯನ್ನು ದೃಢಪಡಿಸಬೇಕು. ಬಾಂಗ್ಲಾದೇಶದಲ್ಲಿ ಮಧ್ಯಂತರ ಸರಕಾರ ಕೂಡ ಕರ್ತವ್ಯ ನಿರ್ವಹಿಸಬೇಕು, ಎಂದು ನಾವು ಅಪೇಕ್ಷೆ ಮಾಡಬಹುದು, ಎಂದು ವಿಶ್ವ ಹಿಂದೂ ಪರಿಷತ್ತಿನ(VHP) ಅಂತರಾಷ್ಟ್ರೀಯ ಅಧ್ಯಕ್ಷ ಅಲೋಕ್ ಕುಮಾರ್(Alok Kumar) ಇವರು ಪ್ರತಿಕ್ರಿಯೆ ವ್ಯಕ್ತಪಡಿಸಿದರು.

ಆಲೋಕ ಕುಮಾರ್(Alok Kumar) ಇವರು ಮಾತು ಮುಂದುವರಿಸಿ, ಶೇಖ ಹಸೀನಾ ಇವರ ಸರಕಾರ ಪತನವಾಯಿತು, ಅವರು ದೇಶ ತೊರೆಯಬೇಕಾಯಿತು. ಪ್ರತಿಭಟನೆಯ ಉದ್ದೇಶ ಸಫಲವಾಯಿತು; ಆದರೆ ಐ.ಎಸ್.ಐ.ಯ ಕೆಲವು ಜನರಿಗೆ ಈ ಪ್ರತಿಭಟನೆ ಅಲ್ಪಸಂಖ್ಯಾತರ ಕಡೆಗೆ ತಿರುಗಿಸುವುದಿದೆ ಮತ್ತು ಅದರ ಅಂತರ್ಗತ ಅವರು ಬಾಂಗ್ಲಾದೇಶದಲ್ಲಿನ ಪ್ರತಿಯೊಂದು ಜಿಲ್ಲೆಯಲ್ಲಿನ ಅಲ್ಪಸಂಖ್ಯಾತರ ವ್ಯಾವಸಾಯಿಕ ಕಟ್ಟಡ, ಮನೆ ಮತ್ತು ಪ್ರಾರ್ಥನಾ ಸ್ಥಳಗಳಿಗೆ ಹಾನಿ ಉಂಟು ಮಾಡಿದ್ದಾರೆ. ಇಬ್ಬರು ಹಿಂದೂ ಕಾರ್ಪೊರೇಟರ್ ಗಳ ಹತ್ಯೆ, ಕಾಳಿ ಮಂದಿರಕ್ಕೆ ಬೆಂಕಿ, ಇಸ್ಕಾನ್(ISKON) ದೇವಸ್ಥಾನ ಕೂಡ ಸುಟ್ಟು ಹಾಕಿದ್ದಾರೆ ಇದು ಒಳ್ಳೆಯದಲ್ಲ ಎಂದೂ ಸಹ ಅವರು ಹೇಳಿದರು.

ಸಂಪಾದಕೀಯ ನಿಲುವು

ಭಾರತ ಸರಕಾರದ ಮೇಲೆ ಹಿಂದೂ ಸಂಘಟನೆಗಳು ಒತ್ತಡ ನಿರ್ಮಾಣ ಹೇರುವುದು ಕೂಡ ಅಷ್ಟೇ ಆವಶ್ಯಕವಾಗಿದೆ ಕೇವಲ ಬಾಂಗ್ಲಾದೇಶ ಅಷ್ಟೇ ಅಲ್ಲದೆ, ಭಾರತದಲ್ಲಿನ ಹಿಂದುಗಳ ರಕ್ಷಣೆಗಾಗಿ ಕೂಡ ಕ್ರಮ ಕೈಗೊಳ್ಳುವುದು ಆವಶ್ಯಕವಾಗಿದೆ !