ಉಚ್ಚ ಲೋಕದಿಂದ ಪೃಥ್ವಿಯಲ್ಲಿ ಜನಿಸಿದ ದೈವೀ (ಸಾತ್ತ್ವಿಕ) ಮಕ್ಕಳು ಎಂದರೆ ಮುಂದೆ ಹಿಂದೂ ರಾಷ್ಟ್ರ (ಸನಾತನ ಧರ್ಮ ರಾಜ್ಯ) ಮುನ್ನಡೆಸುವ ಪೀಳಿಗೆ, ಕು. ವೈ.ಜಿ. ಪ್ರಣವಿ ಈ ಪೀಳಿಗೆಯಲ್ಲಿ ಒಬ್ಬಳಾಗಿದ್ದಾಳೆ
‘ಸನಾತನದಲ್ಲಿ ಬಂದಿರುವ ದೈವಿಕ ಮಕ್ಕಳಿಂದಾಗಿ ‘ನಾನು ಸಾಧಕರನ್ನು ನಿರ್ಮಿಸಿದ್ದೇನೆ’, ಈ ಅಹಂಕಾರ ನನ್ನಲ್ಲಿ ನಿರ್ಮಾಣವಾಗಲಿಲ್ಲ.’ – ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ
ಪಾಲಕರೇ, ಇದನ್ನು ಗಮನದಲ್ಲಿರಿಸಿನಿಮ್ಮ ಮಕ್ಕಳಲ್ಲಿ ಇಂತಹ ರೀತಿಯ ವೈಶಿಷ್ಟ್ಯಗಳಿದ್ದಲ್ಲಿ ಅವರು ಉಚ್ಚ ಲೋಕದಿಂದ ಪೃಥ್ವಿಯಲ್ಲಿ ಜನಿಸಿದ್ದಾರೆ ಎಂಬುದನ್ನು ಗಮನದಲ್ಲಿರಿಸಿ ಅವರು ಮಾಯೆಯಲ್ಲಿ ಸಿಲುಕಲಾರರು, ಬದಲಾಗಿ ಅವರಲ್ಲಿ ಸಾಧನೆಗೆ ಪೂರಕ ವಾದಂತಹ ಸಂಸ್ಕಾರ ಮಾಡಿ. ಇದರಿಂದ ಅವರ ಜನ್ಮದ ಕಲ್ಯಾಣವಾಗುವುದು ಮತ್ತು ನಿಮ್ಮ ಸಾಧನೆಯೂ ಆಗುವುದು’ – (ಪರಾತ್ಪರ ಗುರು) ಡಾ. ಆಠವಲೆ |
ಆಷಾಢ ಶುಕ್ಲ ನವಮಿ (೧೫.೭.೨೦೨೪) ರಂದು ಮಂಗಳೂರಿನ ಕು. ವೈ.ಜಿ. ಪ್ರಣವಿ ಇವಳ ೧೦ ನೆಯ ಹುಟ್ಟುಹಬ್ಬವಿತ್ತು. ಆ ನಿಮಿತ್ತ ಅವಳ ತಾಯಿಗೆ ಅವಳಲ್ಲಿ ಅರಿವಾದ ಗುಣವೈಶಿಷ್ಟ್ಯಗಳನ್ನು ಮುಂದೆ ಕೊಡಲಾಗಿದೆ.
೧. ಜನ್ಮದಿಂದ ಒಂದು ವರ್ಷದ ತನಕ
೧ ಅ. ‘ಕು. ಪ್ರಣವಿ ಚಿಕ್ಕವಳಿದ್ದಾಗ ಶಾಂತವಾಗಿ ಮಲಗುತ್ತಿದ್ದಳು, ಯಾವುದಕ್ಕೂ ಹಠ ಮಾಡುತ್ತಿರಲಿಲ್ಲ.
೧ ಆ. ತೊಟ್ಟಿಲಿನ ಒಂದು ಕೊಂಡಿ ತುಂಡಾಗಿದ್ದರೂ ತೊಟ್ಟಿಲಿನಲ್ಲಿ ಮಲಗಿದ್ದ ಪ್ರಣವಿ ದೇವರ ಕೃಪೆಯಿಂದ ಕ್ಷೇಮವಾಗಿದ್ದಳು : ೪ ತಿಂಗಳ ಮಗು ಇರುವಾಗ ಒಮ್ಮೆ ಮಗುವನ್ನು ತೊಟ್ಟಿಲಿನಲ್ಲಿ ಮಲಗಿಸಿ ನಾನು ಬಟ್ಟೆ ಒಗೆಯಲು ಹೋಗಿದ್ದೆ. ಬಟ್ಟೆ ಒಗೆಯುತ್ತಿರುವಾಗ ಅರ್ಧ ಗಂಟೆ ಬಿಟ್ಟು ‘ಮಗು ಎದ್ದಿದೆಯೇ’ ಎಂದು ನೋಡಲು ಹೋದಾಗ ತೊಟ್ಟಿಲಿನ ಒಂದು ಕೊಂಡಿ ತುಂಡಾಗಿತ್ತು. ಪ್ರಣವಿ ತೊಟ್ಟಿಲಿನಲ್ಲಿ ಇರಲಿಲ್ಲ. ಆಗ ಮಗು ತೊಟ್ಟಿಲಿನ ಅಡಿಯಲ್ಲಿ ಹಾಸಿಗೆ ಸಮೇತ ಮಲಗಿದ್ದಳು. ತುಂಬಾ ಆಶ್ಚರ್ಯ ಅನಿಸಿತು. ದೇವರ ಕೃಪೆಯಿಂದ ಮಗು ಕ್ಷೇಮವಾಗಿತ್ತು.
೨. ಒಂದರಿಂದ ಎರಡು ವರ್ಷದ ತನಕ
ಅ. ದೇವರ ಭಜನೆ ಹಾಕಿದರೆ ಇಷ್ಟವಾಗುತ್ತಿತ್ತು.
೩. ೨ ರಿಂದ ೬ ವರ್ಷ
ಅ. ಆಕೆ ನನಗೆ ಕೃಷ್ಣನ ಅಥವಾ ಪಾರ್ವತಿಯಂತೆ ಉಡುಗೆತೊಡುಗೆ ಹಾಕುವಂತೆ ಹೇಳುತ್ತಿದ್ದಳು. ಶಾಲೆಯಲ್ಲಿ ಛದ್ಮವೇಷ ಹಾಕಲು ಇದ್ದಾಗ ಆಕೆ ‘ನನಗೆ ಕೃಷ್ಣನಂತೆ ಅಲಂಕಾರ ಮಾಡು’, ಎಂದು ಹೇಳುತ್ತಿದ್ದಳು. ಆಕೆ ಕೃಷ್ಣನ ಸ್ಮರಣೆಯಲ್ಲಿ ತನ್ನನ್ನು ಮರೆಯುತ್ತಿದ್ದಳು.
೪. ೭ ರಿಂದ ೮ ವರ್ಷ
೪ ಅ. ಸಾತ್ತ್ವಿಕತೆಯ ಸೆಳೆತ
೧. ಆಕೆಗೆ ಚಿತ್ರಕಲೆಯಲ್ಲಿ ಹೆಚ್ಚು ಆಸಕ್ತಿ ಇದೆ. ದೇವರ ಚಿತ್ರ ಬಿಡಿಸುತ್ತಾಳೆ. ಇದುವರೆಗೆ ಕೃಷ್ಣನ ಮತ್ತು ಇತರ ದೇವರುಗಳ ಚಿತ್ರ ಬಿಡಿಸಿದ್ದಾಳೆ.
೨. ಆಕೆಗೆ ಧಾರವಾಹಿಯಲ್ಲಿನ ‘ಮಹಾಭಾರತ’ ಮತ್ತು ‘ರಾಮಾಯಣ’ ವೀಕ್ಷಿಸಲು ತುಂಬಾ ಇಷ್ಟವಾಗುತ್ತಿತ್ತು. ಇತರರಿಗೆ ಅದರ ಕಥೆ ಹೇಳುತ್ತಿದ್ದಳು.
೩. ಆಕೆ ೮ ವರ್ಷದವಳಿದ್ದಾಗ ಗೊಂಬೆಯನ್ನು ಕೃಷ್ಣನಂತೆ ಅಲಂಕರಿಸುತ್ತಿದ್ದಳು ಹಾಗೂ ತಾನು ಕೃಷ್ಣನ ತಾಯಿಯಾಗಿ ಆಟವಾಡುತ್ತಿದ್ದಳು.
೫. ೯ ವರ್ಷ
೫ ಅ. ವ್ಯವಸ್ಥಿತತನ : ಆಕೆ ಮನೆಯನ್ನು ಸ್ವಚ್ಛವಾಗಿ ಇಡುತ್ತಾಳೆ, ಶಾಲೆಯಿಂದ ಬಂದ ಕೂಡಲೇ ವಸ್ತುಗಳನ್ನು ಆಯಾ ಜಾಗದಲ್ಲಿ ಇಡುತ್ತಾಳೆ. ಆಕೆ ತನ್ನ ಬಟ್ಟೆಗಳನ್ನು ಒಳ್ಳೆಯದಾಗಿ ಮಡಚಿಡುತ್ತಾಳೆ. ಈ ಬಗ್ಗೆ ಆಕೆಯಲ್ಲಿ ವಿಚಾರಿಸಿದಾಗ ಆಕೆ ”ಪ್ರತಿಯೊಂದು ಕೃತಿ ವ್ಯವಸ್ಥಿತವಾಗಿ ಮಾಡಬೇಕು” ಎಂದು ಪೂ. ರಮಾನಂದಣ್ಣ (ಪೂ. ರಮಾನಂದ ಗೌಡ (ಸನಾತನದ ೭೫ ನೇ ಸಂತರು ವಯಸ್ಸು ೪೮) ಇವರು) ಹೇಳಿದ್ದಾರೆ” ಎಂದು ಹೇಳುತ್ತಾಳೆ.
೫. ಆ. ಪ್ರೇಮಭಾವ : ಆಕೆ ಕುಟುಂಬದವರೆಲ್ಲರನ್ನೂ ಪ್ರೀತಿಸುತ್ತಾಳೆ. ಒಂದು ಹಣ್ಣು ಅಥವಾ ತಿಂಡಿಯನ್ನು ಎಲ್ಲರಿಗೂ ಕೊಟ್ಟು ತಿನ್ನುತ್ತಾಳೆ. ತನ್ನ ಅಕ್ಕ ಮನೆಯ ಕೆಲಸ ಮಾಡುವಾಗ ಅವಳಿಗೆ ಸಹಾಯ ಮಾಡುತ್ತಾಳೆ.
೫ ಇ. ಧರ್ಮಾಚರಣೆ ಮಾಡುವುದು
೧. ೯ ವರ್ಷದವಳಿದ್ದಾಗ ನಾವು ಸನಾತನ ಸಂಸ್ಥೆಯೊಂದಿಗೆ ಜೋಡಣೆಯಾಗಿ ಸತ್ಸಂಗಕ್ಕೆ ಹೋಗಲು ಶುರುವಾದ ನಂತರ ಹಣೆಗೆ ಕುಂಕುಮ ತಪ್ಪಿಸುವುದಿಲ್ಲ. ಆಕೆಗೆ ಆಧುನಿಕ ಬಟ್ಟೆ ಧರಿಸಲು ಇಷ್ಟವಾಗುವುದಿಲ್ಲ.
೨. ಆಕೆ ತನ್ನ ಮಿತ್ರರಿಗೆ, ‘ಹಣೆಗೆ ಕುಂಕುಮ ಹಚ್ಚುವುದು ಒಳ್ಳೆಯದು’ ದೇವರು ನಮ್ಮ ರಕ್ಷಣೆ ಮಾಡುತ್ತಾರೆ” ಎಂದು ಹೇಳುತ್ತಾಳೆ. ಆಕೆ ತನ್ನ ಸ್ನೇಹಿತರನ್ನು ಸೇವಾಕೇಂದ್ರಕ್ಕೆ ಕರೆದುಕೊಂಡು ಹೋಗುತ್ತಾಳೆ.
೫ ಈ. ಆಕೆ ಪ್ರತಿದಿನ ತಪ್ಪದೇ ೧ ಗಂಟೆ ನಾಮಜಪ ಮಾಡುತ್ತಾಳೆ. ಅಧ್ಯಯನದ ಮೊದಲು ಪ್ರಾರ್ಥನೆ ಹಾಗೂ ಕೃತಜ್ಞತೆ ವ್ಯಕ್ತ ಮಾಡುತ್ತಾಳೆ.
೫ ಉ. ಆಕೆಯಿಂದ ತಪ್ಪಾದರೆ ಕೂಡಲೇ ಕ್ಷಮೆ ಕೇಳುತ್ತಾಳೆ.
೫ ಊ. ಆಕೆ ಪ್ರತಿಯೊಂದು ಸೇವೆಯನ್ನು ತಳಮಳದಿಂದ ಮಾಡುತ್ತಾಳೆ. ಇತರರಿಗೆ ಸಾಧನೆ ಹೇಳಲು ಪ್ರಯತ್ನಿಸುತ್ತಾಳೆ.
೫ ಎ. ಪ್ರತಿದಿನ ಪರಾತ್ಪರ ಗುರು ಡಾ. ಆಠವಲೆ ಇವರ ಭಾವಚಿತ್ರಕ್ಕೆ ಹೂವು ಇಟ್ಟು ಶಾಲೆಗೆ ಹೋಗುತ್ತಾಳೆ. ಗುರುಗಳ ಸ್ಮರಣೆ ಮಾಡುತ್ತಿರುತ್ತಾಳೆ.
೫ ಏ. ಪೂ. ರಮಾನಂದಣ್ಣ ಇವರು ಹೇಳಿದ ಸಾಧನೆಯ ಬಗೆಗಿನ ಅಂಶವನ್ನು ಕೃತಿಯಲ್ಲಿ ತರಲು ಪ್ರಯತ್ನಿಸುತ್ತಾಳೆ.
೬. ಸ್ವಭಾವದೋಷ : ಸಿಟ್ಟು ಬರುವುದು
– ಸೌ. ಗೀತಾ ಯೋಗೀಶ (ತಾಯಿ) ಮಂಗಳೂರು (೨೩.೫.೨೦೨೪)