India US Relations : ವಿಶ್ವ ಮಟ್ಟದಲ್ಲಿನ ಸಹಯೋಗಿ ಎಂದು ಭಾರತದೊಂದಿಗಿನ ನಮ್ಮ ಸಂಬಂಧ ಸುದೃಢ ! – ಅಮೇರಿಕಾ

ಅಮೇರಿಕಾದ ಉಪ ವಿದೇಶಾಂಗ ಸಚಿವ ಕರ್ಟ್ ಕ್ಯಾಂಪ್ಲಬೆಲ್

ವಾಷಿಂಗ್ಟನ್ (ಅಮೇರಿಕಾ) – ಭಾರತ ಇದು ಒಂದು ಮಹಾನ ಶಕ್ತಿಯಾಗಿದೆ. ಭಾರತ ಯಾವಾಗಲೂ ಅಮೆರಿಕಾದ ಔಪಚಾರಿಕ ಸ್ನೇಹಿತ ಅಥವಾ ಪಾಲುದಾರ ಅಲ್ಲ. ಆದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸಹಯೋಗಿ ಎಂದು ನಮ್ಮ ಸಂಬಂಧ ದೃಢವಾಗಿ ಇರಲಾರದು ಎಂದು ಹೇಳಲಾಗದು, ಎಂದು ಅಮೇರಿಕಾದ ಉಪ ವಿದೇಶಾಂಗ ಸಚಿವ ಕರ್ಟ್ ಕ್ಯಾಂಪ್ಲಬೆಲ್ ಇವರು ಹೇಳಿಕೆ ನೀಡಿದರು. ಇತ್ತೀಚೆಗೆ ನಡೆದಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಇವರ ಮಾಸ್ಕೋ ಪ್ರವಾಸದ ಬಗ್ಗೆ ಸಂಸದ ಜೇಮ್ಸ್ ರಿಶ್ ಇವರ ಪ್ರಶ್ನೆಗೆ ಉತ್ತರ ನೀಡುತ್ತಿದ್ದರು. ‘ಪ್ರಧಾನಮಂತ್ರಿ ನರೇಂದ್ರ ಮೋದಿ ರಷ್ಯಾದ ನಂತರ ಈ ತಿಂಗಳ ಕೊನೆಯಲ್ಲಿ ಉಕ್ರೇನಿನ ರಾಜಧಾನಿ ಕೀವ ನಗರಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ’, ಎಂದೂ ಕೂಡ ಕ್ಯಾಂಪಬೇಲ್ ಹೇಳಿದರು. ಕರ್ಟ್ ಕ್ಯಾಂಪಬೇಲ್ ಇವರು ಮಾತು ಮುಂದುವರೆಸಿ, ಜಗತ್ತಿನಲ್ಲಿ ‘ಗ್ಲೋಬಲ್ ಸೌಥ್’ ಹಾಗೆ ಕರೆ ನೀಡುವ ಬಹಳ ಕಡಿಮೆ ದೇಶಗಳಿವೆ. ಗ್ಲೋಬಲ್ ಸೌಥ್ ನಲ್ಲಿ ಭಾರತದ ಕ್ಷಮತೆ ಅತುಲನಿಯವಾಗಿದೆ. (ಗ್ಲೋಬಲ್ ಸೌಥ್ ಎಂದರೆ ದಕ್ಷಿಣ ಮತ್ತು ಮಧ್ಯ ಅಮೇರಿಕಾದಲ್ಲಿನ ದೇಶಗಳು, ಆಫ್ರಿಕಾದಲ್ಲಿನ ದೇಶಗಳು, ಭಾರತೀಯ ಉಪಖಂಡದಲ್ಲಿನ ದೇಶಗಳು, ಕೊಲ್ಲಿ ದೇಶಗಳು, ಚೀನಾ ಮುಂತಾದ ದೇಶಗಳ ಸಮೂಹ) ನಮಗೆ ಆಫ್ರಿಕಾ ಜೊತೆಗೆ ಕೂಡ ಕೆಲಸ ಮಾಡುವುದಿದೆ. ಆ ದೃಷ್ಟಿಯಿಂದ ಕೂಡ ಇದು ಅಮೆರಿಕಾಕ್ಕೆ ಎಲ್ಲಕ್ಕಿಂತ ಮಹತ್ವದ ವಿಷಯ ಇದೆ. ಭಾರತದಲ್ಲಿನ ಹೆಚ್ಚಿನ ಜನರಿಗೆ ಅಮೇರಿಕಾದ ಜೊತೆಗೆ ಉತ್ತಮ ಸಂಬಂಧ ಬೇಕಿದೆ. ನಮ್ಮ ದ್ವಿಪಕ್ಷಿಯ ಸಂಬಂಧಕ್ಕಾಗಿ ನಾನು ಕೃತಜ್ಞನಾಗಿದ್ದೇನೆ. ಶಿಕ್ಷಣ ಮತ್ತು ತಂತ್ರಜ್ಞಾನ ಇದರಲ್ಲಿ ನಾವು ಒಟ್ಟಾಗಿ ಕೆಲಸ ಮಾಡಲು ಅವರಿಗೆ ಹಿಡಿಸುತ್ತದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಸ್ವಂತ ಲಾಭಕ್ಕಾಗಿ ಅಮೇರಿಕಾಗೆ ಭಾರತದ ಜೊತೆಗೆ ಸಂಬಂಧ ಬೇಕಿದೆ; ಆದರೆ ಅಮೆರಿಕಾವು ಭಾರತದ ವಿರುದ್ಧ ಕಾರ್ಯಾಚರಣೆ ನಡೆಸುವ ಖಲಿಸ್ತಾನಿ ಭಯೋತ್ಪಾದಕರನ್ನು ರಕ್ಷಿಸುವ ಕೆಲಸ ಮಾಡುತ್ತಿದೆ. ಇದರಿಂದ ಅದರ ದ್ವಿಮುಖ ನೀತಿ ಗಮನಕ್ಕೆ ಬರುತ್ತದೆ !