ಇರಾನ ಮತ್ತು ಭಾರತದ ಸ್ನೇಹದಲ್ಲಿ ಹುಳಿ ಹಿಂಡಲು ಪಾಕಿಸ್ತಾನದಿಂದ ಸಂಚು !

  • ಹಾನಿಯಾ ಹತ್ಯೆಯ ಹಿಂದೆ ಭಾರತದ ಕೈವಾಡ; ಪಾಕಿಸ್ತಾನ ದಾವೆ !

  • ಪಾಕಿಸ್ತಾನದ ಛಳಿ ಬಿಡಿಸಿದ ಪಾಕಿಸ್ತಾನಿ ಪತ್ರಕರ್ತ !

ಇಸ್ಲಾಮಾಬಾದ (ಪಾಕಿಸ್ತಾನ) – ಇರಾನ ರಾಜಧಾನಿ ಟೆಹ್ರಾನ್‌ನಲ್ಲಿ ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹಾನಿಯಾ ಹತ್ಯೆಯ ಬಳಿಕ ಕೊಲ್ಲಿ ರಾಷ್ಟ್ರಗಳಲ್ಲಿ ಉದ್ವಿಗ್ನತೆ ನಿರ್ಮಾಣವಾಗಿದೆ ಮತ್ತು ಯುದ್ಧದ ಅಪಾಯ ನಿರ್ಮಾಣವಾಗಿದೆ. ಈ ಉದ್ವಿಗ್ನ ವಾತಾವರಣದಲ್ಲಿ, ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐ.ಎಸ್.ಐ. ಭಾರತದಲ್ಲಿನ ಪಾಕಿಸ್ತಾನದ ಮಾಜಿ ರಾಯಭಾರಿ ಅಬ್ದುಲ ಬಾಸಿತ ಮೂಲಕ ಈ ಹತ್ಯೆ ಪ್ರಕರಣದಲ್ಲಿ ಭಾರತದ ಕಾಲೆಳೆಯಲು ಪ್ರಾರಂಭಿಸಿದೆ. ಅಬ್ದುಲ ಬಾಸಿತ ಅವರು ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿದ್ದು, ಇಸ್ರೇಲ್ ನ ಬೆಂಬಲವನ್ನು ಪಡೆಯಲು ಟೆಹ್ರಾನ್‌ನಲ್ಲಿ ಇಸ್ಮಾಯಿಲ್ ಹಾನಿಯಾ ಹತ್ಯೆಯಲ್ಲಿ ಭಾರತದ ಕೈವಾಡವನ್ನು ನಿರ್ಲಕ್ಷಿಸಲಾಗುವುದಿಲ್ಲ ಎಂದು ಆರೋಪಿಸಿದ್ದಾರೆ. ಭಾರತೀಯ ಗುಪ್ತಚರ ಸಂಸ್ಥೆ ‘ರಾ’ದ ಹಲವು ಗುಪ್ತ ಏಜೆಂಟರು ಇರಾನ್‌ನಲ್ಲಿದ್ದಾರೆ. ನಾವೆಲ್ಲರೂ ಕಮಾಂಡರ ಕುಲಭೂಷಣ ಜಾಧವ (ಜಾಧವ್ ಅವರನ್ನು ಬೇಹುಗಾರಿಕೆ ಆರೋಪದ ಮೇಲೆ ಪಾಕಿಸ್ತಾನ ಬಂಧಿಸಿದೆ). ಅವರನ್ನು ನೆನಪಿಸಿಕೊಳ್ಳಬೇಕು. ಬಾಸಿತ್ ನ ಈ ಹೇಳಿಕೆಯ ಬಳಿಕ ಮಾಧ್ಯಮಗಳು ಅವರನ್ನು ಟೀಕಿಸುತ್ತಿವೆ. ವಿಶೇಷವೆಂದರೆ ಸದ್ಯ ಅಮೇರಿಕದಲ್ಲಿ ನೆಲೆಸಿರುವ ಪಾಕಿಸ್ತಾನಿ ಪತ್ರಕರ್ತ ವಜಾಹತ್ ಸಯೀದ್ ಖಾನ ಇವರು ಬಸಿತ್ ರ ಬಣ್ಣ ಬಯಲು ಮಾಡಿದ್ದಾರೆ.

ಪತ್ರಕರ್ತ ವಜಾಹತ ಇವರು,

1. ಬಾಸಿತ್ ಐ.ಎಸ್‌.ಐ.ನ ಹೇಳಿದಂತೆ ಕೆಲಸ ಮಾಡುತ್ತಾನೆ. ಐ.ಎಸ್‌.ಐ.ನ ಆದೇಶದ ಮೇರೆಗೆ ಬಾಸಿತ್ ಭಾರತದ ಬಗ್ಗೆ ವಿಷಯ ಪ್ರಸ್ತಾಪಿಸಿದ್ದಾರೆ. ಇದೊಂದು ಬಾಲಿಶ ಹೇಳಿಕೆಯಾಗಿದ್ದು, ಹಾನಿಯಾ ಮೇಲೆ ಇಸ್ರೇಲ್ ದಾಳಿ ನಡೆಸಿರುವುದು ವಾಸ್ತವವಾಗಿದೆ.

2. ಪಾಕಿಸ್ತಾನವೂ ಭಾರತದ ಶತ್ರುಗಳಿಗೆ ಆಶ್ರಯ ನೀಡಿದೆ. ಇದರಲ್ಲಿ ಲಷ್ಕರ್-ಎ-ತೊಯ್ಬಾ ಮತ್ತು ಹಿಜ್ಬುಲ್ ಭಯೋತ್ಪಾದಕ ನಾಯಕರು ಸೇರಿದ್ದಾರೆ. ಪಾಕಿಸ್ತಾನದಲ್ಲಿ ಇಂತಹ 20 ಮಂದಿಯನ್ನು ಹತ್ಯೆ ಮಾಡಲಾಗಿದ್ದು, ಇದಕ್ಕೂ ಭಾರತವನ್ನೇ ಹೊಣೆ ಮಾಡಲಾಗುತ್ತಿದೆ.

3. ಭಾರತೀಯ ಸೇನೆ ಜಮ್ಮುವಿನಲ್ಲಿ ದೊಡ್ಡ ಸಿದ್ಧತೆ ಮಾಡುತ್ತಿದ್ದು, ಭಯೋತ್ಪಾದಕರ ವಿರುದ್ಧ ದೊಡ್ಡ ಕಾರ್ಯಾಚರಣೆ ಕೈಗೊಳ್ಳಲಿದೆ.

4. ಪಾಕಿಸ್ತಾನವು ಇರಾನ್‌ನ ರಣತಂತ್ರವನ್ನು ಅನುಸರಿಸುತ್ತಿದ್ದೂ ಅನೇಕ ಭಯೋತ್ಪಾದಕ ಗುಂಪುಗಳನ್ನು ಬೆಂಬಲಿಸುತ್ತಿದೆ. ಇರಾನಿನ ಅನೇಕ ಶಿಯಾ ಗುಂಪುಗಳು ಪಾಕಿಸ್ತಾನದಲ್ಲಿ ಸಕ್ರಿಯವಾಗಿವೆ. ಇದೀಗ ಪಾಕಿಸ್ತಾನ ಇವರನ್ನು ಗುರಿಯಾಗಿಸಿದೆ. ಇರಾನ್‌ನ ಗುಪ್ತಚರ ಸಂಸ್ಥೆ ಪಾಕಿಸ್ತಾನಿ ಶಿಯಾ ಯುವಕರನ್ನು ನೇಮಿಸಿಕೊಳ್ಳುತ್ತದೆ. ಈಗ ಪಾಕಿಸ್ತಾನವು ಇರಾನ್ ವಿರುದ್ಧ ಸೌದಿ ಗುಂಪಿಗೆ ಸೇರುತ್ತದೆಯೇ ಅಥವಾ ಇಲ್ಲವೇ ಎಂದು ನೋಡಬೇಕಾಗಿದೆ.

5. ಭಾರತ ಮತ್ತು ಇರಾನ್ ನಡುವೆ ಸ್ನೇಹ ಬೆಳೆಯುತ್ತಿರುವ ಸಂದರ್ಭದಲ್ಲಿ ಐ.ಎಸ್‌.ಐ.ನ ಬೇಹುಗಾರ (ಬಾಸಿತ್) ಈ ಆರೋಪ ಮಾಡಿದ್ದಾರೆ. ಭಾರತವು ಇರಾನ್‌ನ ಚಾಬಹಾರ್‌ನಲ್ಲಿ ಬಂದರನ್ನು ನಿರ್ಮಿಸುತ್ತಿದೆ. ಇದು ಪಾಕಿಸ್ತಾನದ ಗ್ವಾದರ್ ಬಂದರಿಗೆ ಉತ್ತರವೆಂದು ಪರಿಗಣಿಸಲಾಗಿದೆ. ಇದರಿಂದ ಪಾಕಿಸ್ತಾನವು ಕೆರಳಿದೆ. ಭಾರತವು ಇಸ್ರೇಲ್ ಜೊತೆ ನಿಕಟ ಸ್ನೇಹವನ್ನು ಹೊಂದಿದೆ ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಪಾಕಿಸ್ತಾನ ಎಷ್ಟೇ ಆರೋಪ ಮಾಡಿದರೂ ಸತ್ಯ ಜಗತ್ತಿಗೆ ಗೊತ್ತಿದೆ. ಇದಕ್ಕೆ ವ್ಯತಿರಿಕ್ತವಾಗಿ, ಅಂತಹ ಹೇಳಿಕೆಗಳಿಂದಾಗಿ ಪಾಕಿಸ್ತಾನವೇ ಪ್ರಪಂಚದಾದ್ಯಂತ ನಗೆಗೀಡಾಗುತ್ತಿದೆ !