ಸಮಷ್ಟಿ ಸಾಧನೆ, ಅಂದರೆ ಧರ್ಮಪ್ರಚಾರ ಮಾಡುವಾಗ ಕೆಟ್ಟ ಶಕ್ತಿಗಳಿಂದಾಗುವ ಆಕ್ರಮಣಗಳಿಂದ ರಕ್ಷಣೆ ಮಾಡಿದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು  !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಈಗಿನ ಕಾಲದಲ್ಲಿ ವ್ಯಷ್ಟಿ ಸಾಧನೆಗೆ (ನಾಮಜಪ ಇತ್ಯಾದಿ ವೈಯಕ್ತಿಕ ಸಾಧನೆಗೆ) ಶೇ. ೩೫ ರಷ್ಟು ಮಹತ್ವವಿದೆ, ಸಮಷ್ಟಿ ಸಾಧನೆಗೆ (ಧರ್ಮಪ್ರಚಾರ, ಧರ್ಮಶಿಕ್ಷಣ ಇತ್ಯಾದಿ) ಶೇ. ೬೫ ರಷ್ಟು ಮಹತ್ವವಿದೆ. ಶೀಘ್ರ ಆಧ್ಯಾತ್ಮಿಕ ಉನ್ನತಿಯಾಗಲು ವ್ಯಷ್ಟಿ ಸಾಧನೆಯೊಂದಿಗೆ ಸಮಷ್ಟಿ ಸಾಧನೆಯು ಆವಶ್ಯಕವಾಗಿರುತ್ತದೆ. ಸಮಷ್ಟಿ ಸಾಧನೆ, ಅಂದರೆ ‘ಸಮಾಜಕ್ಕೆ ಹೋಗಿ ಸಾಧನೆಯ ಪ್ರಚಾರ ಅಥವಾ ಧರ್ಮಪ್ರಚಾರ ಮಾಡುವುದು’, ಹೀಗಿರುವುದರಿಂದ ಈ ಕಾರ್ಯಕ್ಕೆ ಕೆಟ್ಟ ಶಕ್ತಿಗಳಿಂದ ಯಾವಾಗಲೂ ವಿರೋಧವಾಗುತ್ತದೆ. ಈ ವಿರೋಧವು ಸೂಕ್ಷ್ಮ ಸ್ತರದಲ್ಲಿರುವುದರಿಂದ ಅದು ಕೂಡಲೇ ಗಮನಕ್ಕೆ ಬರುವುದಿಲ್ಲ. ಸಮಷ್ಟಿ ಸಾಧನೆಯನ್ನು ಮಾಡುವ ಸಾಧಕನಲ್ಲಿ ಸೂಕ್ಷ್ಮದಿಂದ ತಿಳಿದು ಕೊಳ್ಳುವ ಕ್ಷಮತೆ ಇರುತ್ತದೆ ಎಂದೇನಿಲ್ಲ; ಆದರೆ ಗುರುಗಳು ಸರ್ವಜ್ಞರಾಗಿರುವುದರಿಂದ ಇಂತಹ ಸೂಕ್ಷ್ಮ ಸ್ತರದ ಆಕ್ರಮಣಗಳಿಂದ ಅವರು ಸಾಧಕರನ್ನು ರಕ್ಷಿಸುತ್ತಾರೆ. ‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸೂಕ್ಷ್ಮ ಸ್ತರದಲ್ಲಿ ನನ್ನನ್ನು ಹೇಗೆ ರಕ್ಷಿಸಿದರು’, ಎಂಬುದು ಮುಂದಿನ ಉದಾಹರಣೆಯಿಂದ ಗಮನಕ್ಕೆ ಬರಬಹುದು.       

(ಭಾಗ ೧೦)

ಹಿಂದಿನ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ: https://sanatanprabhat.org/kannada/112843.html
(ಸದ್ಗುರು) ಶ್ರೀ. ರಾಜೇಂದ್ರ ಶಿಂದೆ

೧. ನಾನು ಆಧ್ಯಾತ್ಮಿಕ ತೊಂದರೆಯಿರುವ ಸಾಧಕರೊಂದಿಗೆ ಅವರ ತೊಂದರೆ ಕಡಿಮೆ ಆಗುವವರೆಗೂ ಮಾತನಾಡುವುದು

೨೦೨೧ ರಲ್ಲಿ ನಾನು ಮಹಾರಾಷ್ಟ್ರದ ಪ್ರವಾಸದಲ್ಲಿದ್ದೆನು. ಈ ಪ್ರವಾಸದ ಅವಧಿಯಲ್ಲಿ ಕೆಲವು ತೀವ್ರ ಆಧ್ಯಾತ್ಮಿಕ ತೊಂದರೆಯಿರುವ ಸಾಧಕರು ನನಗೆ ಸಂಚಾರವಾಣಿ ಕರೆ ಮಾಡುತ್ತಿದ್ದರು. ಆಗ ಅವರಿಗೆ ಕೆಟ್ಟ ಶಕ್ತಿಗಳ ತೊಂದರೆ ತುಂಬಾ ಹೆಚ್ಚಾಗಿರುತ್ತಿತ್ತು. ಆ ಸ್ಥಿತಿಯಲ್ಲಿಯೇ ಅವರು ನನ್ನೊಂದಿಗೆ ಮಾತನಾಡುತ್ತಿದ್ದರು. ನನ್ನೊಂದಿಗೆ ಮಾತನಾಡಿದ ನಂತರ ಅವರಿಗೆ ಒಳ್ಳೆಯದೆನಿಸುತ್ತಿತ್ತು; ಆದ್ದರಿಂದ ನಾನು ಅವರೊಂದಿಗೆ ಮಾತನಾಡುತ್ತಿದ್ದೆನು. ೫-೧೦ ನಿಮಿಷಗಳಷ್ಟೇ ಈ ಮಾತುಕತೆಯಿರುತ್ತಿತ್ತು. ಸಾಧಕರ ತೊಂದರೆ ಹೆಚ್ಚಾಗಿರುವುದರಿಂದ ನಾನು ಅವರಿಗೆ ‘ಕೆಟ್ಟ ಶಕ್ತಿಗಳು ಏಕೆ ತೊಂದರೆಗಳನ್ನು ಕೊಡುತ್ತವೆ ?’, ಎಂದು ಹೇಳುತ್ತಿದ್ದೆನು. ಆಗ ಅವರು ನನಗೆ, ”ನಮಗೆ ಪ.ಪೂ. ಡಾಕ್ಟರ್‌ ಮತ್ತು ಪ.ಪೂ. ಭಕ್ತರಾಜ ಮಹಾರಾಜರ ಛಾಯಾಚಿತ್ರಗಳಲ್ಲಿನ ಚೈತನ್ಯ ಸಹನೆ ಯಾಗುವುದಿಲ್ಲ,” ಎಂದು ಹೇಳುತ್ತಿದ್ದರು. ನಾನು ಅವರಿಗೆ, ”ನೀವು ಗುರುದೇವರಿಗೆ ಪ್ರಾರ್ಥನೆ ಮಾಡಿ ನಾಮಜಪಿಸಿರಿ. ಅವರೇ ನಿಮ್ಮ ತೊಂದರೆಯನ್ನು ಕಡಿಮೆ ಮಾಡುವರು” ಎಂದು ಹೇಳುತ್ತಿದ್ದೆನು. ಹೀಗೆ ಆ ಸಾಧಕರೊಂದಿಗೆ ಮಾತನಾಡುತ್ತಿರುವಾಗ ಮತ್ತು ಅವರ ಮಾತುಗಳನ್ನು ಕೇಳುವುದರಲ್ಲಿ ನನ್ನ ಸಮಯ ಹೋಗುತ್ತಿತ್ತು; ಆದರೆ ‘ಆ ಸಾಧಕರಿಗೆ ಒಳ್ಳೆಯದೆನಿಸಬೇಕು’, ಎಂದು ನಾನು ಅವರಿಂದ ಕೆಲವು ಪ್ರಾರ್ಥನೆ ಮತ್ತು ನಾಮಜಪವನ್ನು ಮಾಡಿಸಿಕೊಳ್ಳುತ್ತಿದ್ದೆನು ಮತ್ತು ಅವರ ತೊಂದರೆ ಕಡಿಮೆ ಆಗುವವರೆಗೂ ಅವರೊಂದಿಗೆ ಮಾತನಾಡುತ್ತಿದ್ದೆನು.

೨. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಸಾಧಕರು ಆಧ್ಯಾತ್ಮಿಕ ತೊಂದರೆಯ ನಿವಾರಣೆಗಾಗಿ ಪೂ. ರಾಜೇಂದ್ರ ಶಿಂದೆ ಇವರಲ್ಲಿ ವಿಚಾರಿಸಬಾರದು, ಸ್ಥಳೀಯ ಸ್ತರದಲ್ಲಿ ಕೇಳಬೇಕು’, ಎಂಬ ಚೌಕಟ್ಟನ್ನು ‘ಸನಾತನ ಪ್ರಭಾತ’ದಲ್ಲಿ ಮುದ್ರಿಸುವುದು, ಅನಂತರ ತೊಂದರೆ ಇರುವ ಸಾಧಕರ ಸಂಚಾರವಾಣಿ ಕರೆಗಳು ಬರದಿರುವುದು

ಅನಂತರ ಒಂದು ದಿನ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಸನಾತನ ಪ್ರಭಾತ’ದಲ್ಲಿ ‘ಆಧ್ಯಾತ್ಮಿಕ ತೊಂದರೆ ಇರುವ ಸಾಧಕರು ತಮ್ಮ ಆಧ್ಯಾತ್ಮಿಕ ತೊಂದರೆಯನ್ನು ಹೇಳಲು ಪೂ. ರಾಜೇಂದ್ರ ಶಿಂದೆ ಇವರಿಗೆ ಸಂಚಾರವಾಣಿಕರೆಯನ್ನು ಮಾಡಬಾರದು. ಆ ಕುರಿತು ಏನಾದರೂ ಕೇಳುವುದಿದ್ದರೆ ಸ್ಥಳೀಯ ಮಟ್ಟದಲ್ಲಿ ಕೇಳಬೇಕು’, ಎಂಬ ಚೌಕಟ್ಟನ್ನು ಮುದ್ರಿಸಿದರು. ಅವರು ಒಮ್ಮಿಂದೊಮ್ಮೆಲೆ ‘ಈ ಚೌಕಟ್ಟನ್ನು ಏಕೆ ಮುದ್ರಿಸಿದರು ?’, ಎಂದು ನನಗೆ ತಿಳಿಯಲಿಲ್ಲ; ಆದರೆ ಅನಂತರ ತೊಂದರೆ ಇರುವ ಸಾಧಕರಿಂದ ನನಗೆ ಬರುವ ಎಲ್ಲಾ ಸಂಚಾರವಾಣಿ ಕರೆಗಳು ನಿಂತುಹೋದವು.

೩. ‘ನನ್ನ ಸಾಧನೆಯ ಸಮಯವು ವ್ಯರ್ಥವಾಗಿ ಆಧ್ಯಾತ್ಮಿಕ ತೊಂದರೆ ಹೆಚ್ಚಾಗಬೇಕು’, ಎಂದು ಕೆಟ್ಟ ಶಕ್ತಿಗಳು ಈ ರೀತಿ ಆಯೋಜನೆ ಮಾಡಿವೆ ಎಂದು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕೃಪೆಯಿಂದ ಗಮನಕ್ಕೆ ಬರುವುದು

ವಾಸ್ತವದಲ್ಲಿ ‘ನನ್ನ ಸಮಷ್ಟಿ ಸಾಧನೆಯ, ಅಂದರೆ ಪ್ರಚಾರದಲ್ಲಿನ ಸಮಯವು ವ್ಯರ್ಥವಾಗಬೇಕು’, ಎಂದು ಕೆಟ್ಟ ಶಕ್ತಿಗಳು ಸಾಧಕರ ಮಾಧ್ಯಮದಿಂದ ನನಗೆ ಸಂಚಾರವಾಣಿ ಕರೆಯಿಂದ ನನ್ನ ಸಮಯ ವನ್ನು ವ್ಯರ್ಥಗೊಳಿಸುತ್ತಿದ್ದವು ಮತ್ತು ಆ ಮಾಧ್ಯಮದಿಂದ ನನ್ನ ಮೇಲೆ ತೊಂದರೆದಾಯಕ (ಕಪ್ಪು) ಶಕ್ತಿಯನ್ನು ಪ್ರಕ್ಷೇಪಿಸಿ ನನಗೆ ತೊಂದರೆಯನ್ನು ಕೊಡುತ್ತಿದ್ದವು. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕೃಪೆಯಿಂದ ಇದು ನನ್ನ ಗಮನಕ್ಕೆ ಬಂದಿತು.

೪. ಕೆಟ್ಟ ಶಕ್ತಿಗಳ ಆಕ್ರಮಣದಿಂದ ಸಾಧಕನ ಸಾಧನೆ ಮತ್ತು ಕಾರ್ಯ ಈ ಎರಡಕ್ಕೂ ಹಾನಿಯಾಗುವ ಸಾಧ್ಯತೆಯಿದೆ

ಒಳ್ಳೆಯ ಸಾಧನೆ ಮಾಡುವ ಸಾಧಕನೇ ಶ್ರೀ ಗುರುಗಳ ಮಾರ್ಗದರ್ಶನದ ಅಡಿಯಲ್ಲಿ ಧರ್ಮಪ್ರಚಾರದ ಕಾರ್ಯವನ್ನು ಮಾಡಬಲ್ಲನು. ಇಲ್ಲದಿದ್ದರೆ ಕೆಟ್ಟ ಶಕ್ತಿಗಳ ಆಕ್ರಮಣಗಳಿಗೆ ಮೋಸ ಹೋಗಿ ಅವನ ಸಾಧನೆ ಮತ್ತು ಕಾರ್ಯ ಈ ಎರಡಕ್ಕೂ ಹಾನಿಯಾಗುವುದು; ಆದ್ದರಿಂದ ಧರ್ಮಪ್ರಚಾರದ ಕಾರ್ಯವನ್ನು ಮಾಡುವಾಗ ‘ಸೂಕ್ಷ್ಮದ ವಿಷಯಗಳನ್ನು ತಿಳಿದುಕೊಳ್ಳುವ ಕ್ಷಮತೆ ಇರುವುದು ಆವಶ್ಯಕವಾಗಿದೆ’, ಎಂಬುದು ಇದರಿಂದ ನನ್ನ ಗಮನಕ್ಕೆ ಬಂದಿತು.

೫. ಹಿಂದುತ್ವನಿಷ್ಠ ಸಂಘಟನೆಗಳ ಕಾರ್ಯಕರ್ತರು

ಶ್ರೀ ಗುರುಗಳ ಮಾರ್ಗದರ್ಶನಕ್ಕನುಸಾರ ಧರ್ಮಪ್ರಚಾರದ ಕಾರ್ಯವನ್ನು ಮಾಡುವುದು ಆವಶ್ಯಕವಾಗಿದೆ ಇದರಿಂದ ಧರ್ಮಪ್ರಚಾರದ ಕಾರ್ಯವನ್ನು ಮಾಡುವ ಎಲ್ಲ ಹಿಂದುತ್ವನಿಷ್ಠ ಸಂಘಟನೆಗಳ ಕಾರ್ಯಕರ್ತರು ಶ್ರೀ ಗುರುಗಳ ಮಾರ್ಗದರ್ಶನಕ್ಕನುಸಾರ ಧರ್ಮಪ್ರಚಾರದ ಕಾರ್ಯವನ್ನು ಮಾಡುವುದರ ಮಹತ್ವವು ಗಮನಕ್ಕೆ ಬರುತ್ತದೆ.

೬. ಕೃತಜ್ಞತೆ

‘ಸಾಕ್ಷಾತ್‌ ಶ್ರೀವಿಷ್ಣುವಿನ ಅಂಶಾವತಾರವಾಗಿರುವ ಸಚ್ಚಿದಾನಂದ ಪರಬ್ರಹ್ಮ ಗುರುದೇವರೇ ಸೂಕ್ಷ್ಮದಲ್ಲಿನ ಈ ವಿಷಯವನ್ನು ಗುರುತಿಸಿದರು ಮತ್ತು ಅವರು ಯೋಗ್ಯ ಸಮಯದಲ್ಲಿ ನನ್ನನ್ನು ಈ ತೊಂದರೆಗಳಿಂದ ರಕ್ಷಿಸಿದರು ಮತ್ತು ನನ್ನ ಸಾಧನೆಯಲ್ಲಿನ ಸಮಯವನ್ನೂ ಉಳಿಸಿದರು’, ಇದಕ್ಕಾಗಿ ಅವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು !

ಸಚ್ಚಿದಾನಂದ ಪರಬ್ರಹ್ಮ ಗುರುದೇವರು ಸೂಚಿಸಿದ ಶಬ್ದಪುಷ್ಪ ಗಳನ್ನು ಕೃತಜ್ಞತೆಯ ಭಾವದಿಂದ ಅವರ ಚರಣಗಳಲ್ಲಿಯೇ ಅರ್ಪಿಸುತ್ತೇನೆ !

ಇದಂ ನ ಮಮ |’ (ಈ ಬರವಣಿಗೆ ನನ್ನದಲ್ಲ !)

– (ಸದ್ಗುರು) ರಾಜೇಂದ್ರ ಶಿಂದೆ, ಸನಾತನ ಆಶ್ರಮ, ದೇವದ, ಪನವೇಲ. (೧.೧೦.೨೦೨೩)

(ಮುಂದುವರಿಯುವುದು)

* ಆಧ್ಯಾತ್ಮಿಕ ತೊಂದರೆ : ಇದರರ್ಥ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದು ಎಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ ೪೯ ರಷ್ಟು ಇರುವುದು ಎಂದರೆ ಮಧ್ಯಮ ತೊಂದರೆ, ಶೇ. ೩೦ ಕ್ಕಿಂತ ಕಡಿಮೆಯಿರುವುದು ಅಂದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದಾಗಿದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಕಂಡು ಹಿಡಿಯಬಲ್ಲರು.

*ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.

* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.