UK Leeds Riots : ಬ್ರಿಟನ್‌ನ ಲೀಡ್ಸ್ ನಗರದಲ್ಲಿ ವಲಸಿಗರಿಂದ ಭಾರೀ ಹಿಂಸಾಚಾರ !

  • ಪೋಲಿಸರ ವಾಹನಗಳು ಬೆಂಕಿಗಾಹುತಿ

  • ದೊಡ್ಡ ಮಟ್ಟದಲ್ಲಿ ಗಲಭೆ

ಲಂಡನ್ (ಬ್ರಿಟನ್) – ಬ್ರಿಟನ್‌ನ ಲೀಡ್ಸ್ ನಗರದಲ್ಲಿ ಜುಲೈ 18ರ ಸಂಜೆ ವಲಸಿಗರಿಂದ ದೊಡ್ಡ ಪ್ರಮಾಣದಲ್ಲಿ ಹಿಂಸಾಚಾರ ನಡೆಯಿತು. ಈ ಹಿಂಸಾಚಾರದಲ್ಲಿ ಪೊಲೀಸರ ವಾಹನಗಳ ಜೊತೆಗೆ ಸಾರ್ವಜನಿಕ ಬಸ್‌ಗಳು ಮತ್ತು ಖಾಸಗಿ ವಾಹನಗಳು ಬೆಂಕಿಗಾಹುತಿಯಾದವು. ಅಲ್ಲದೇ ಅಂಗಡಿಗಳನ್ನು ಕೂಡ ಧ್ವಂಸಗೊಳಿಸಲಾಯಿತು. ಈ ಹಿಂಸಾಚಾರದಲ್ಲಿ ಯಾವುದೇ ಜೀವ ಹಾನಿಯಾಗಿಲ್ಲ ಎಂದು ವರದಿಯಾಗಿದೆ.

1. ಪೊಲೀಸ್ ಅಧಿಕಾರಿಗಳು ಈ ಬಗ್ಗೆ ಮಾತನಾಡಿ, ಜುಲೈ 18 ರಂದು ಸ್ಥಳೀಯ ಸಮಯಾನುಸಾರ ಸಾಯಂಕಾಲ 5 ಗಂಟೆಗೆ ಲೀಡ್ಸ್‌ನ ಹೇರ್‌ಹಿಲ್ಸ್ ಪ್ರದೇಶದ ಲಕ್ಸರ್ ಸ್ಟ್ರೀಟ್‌ನಲ್ಲಿ ಜನರ ಗುಂಪೊಂದು ಜಮಾಯಿಸಿತು. ತದನಂತರ ಸ್ವಲ್ಪ ಸಮಯದ ನಂತರ ಈ ಗುಂಪು ಉದ್ರಿಕ್ತಗೊಂಡಿತು. ಈ ಗಲಭೆ ನಡೆಸಿದ ಗುಂಪಿನಲ್ಲಿ ಚಿಕ್ಕ ಮಕ್ಕಳೂ ಸೇರಿದ್ದರು. ಸದ್ಯ ಪರಿಸ್ಥಿತಿ ಹತೋಟಿಯಲ್ಲಿದೆ; ಅನಾವಶ್ಯಕವಾಗಿ ಯಾರೂ ಮನೆಯಿಂದ ಹೊರಗೆ ಬರದಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

2. ಬ್ರಿಟಿನ್ ಗೃಹ ಸಚಿವ ಯೆವೆಟ್ ಕೂಪರ್ ಈ ಬಗ್ಗೆ ಮಾತನಾಡಿ, ಈ ಹಿಂಸಾಚಾರದಿಂದ ನಾನು ಆಘಾತಕ್ಕೊಳಗಾಗಿದ್ದೇನೆ. ಸ್ಥಳೀಯ ಪೊಲೀಸರಿಂದ ವರದಿ ಪಡೆದುಕೊಳ್ಳುತ್ತಿದ್ದೇನೆ. ಈ ರೀತಿಯ ಹಿಂಸಾಚಾರಕ್ಕೆ ಬ್ರಿಟನ್‌ನಲ್ಲಿ ಯಾವುದೇ ಸ್ಥಾನವಿಲ್ಲವೆಂದು ಖಡಕ್ ಆಗಿ ಹೇಳಿದ್ದಾರೆ.

ಹಿಂಸಾಚಾರಕ್ಕೆ ಕಾರಣವೇನು ?

ಬ್ರಿಟನ್ ಗೆ ಬಂದ ವಲಸಿಗರು ಈ ಪ್ರದೇಶದಲ್ಲಿ ವಾಸಿಸುತ್ತಾರೆ. ಈ ವಲಸಿಗರ ಆರ್ಥಿಕ ಸ್ಥಿತಿ ಹದಗೆಟ್ಟಿರುವ ಕಾರಣ ಅವರು ತಮ್ಮ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲವೆಂದು ಬ್ರಿಟನ್ ನ `ಚೈಲ್ಡ ಕೇರ್’ ಇಲಾಖೆಗೆ ಅನುಮಾನವಿದೆ. ಹಾಗಾಗಿ ಇಲಾಖೆಯು ಈ ಮಕ್ಕಳನ್ನು ಅವರ ಪೋಷಕರಿಂದ ಪ್ರತ್ಯೇಕಿಸಿ ಬಾಲಾಪರಾಧ ಕೇಂದ್ರಗಳಲ್ಲಿಡಲು ಯತ್ನಿಸಿತು; ಆದರೆ ಅದಕ್ಕೆ ಪೋಷಕರು ಮತ್ತು ಮಕ್ಕಳು ತಯಾರಿರಲಿಲ್ಲ. ಇಲಾಖೆಯ ಅಧಿಕಾರಿಗಳು ಈ ಮಕ್ಕಳನ್ನು ಬಾಲಾಪರಾಧ ಗೃಹಕ್ಕೆ ಕರೆದೊಯ್ಯಲು ಯತ್ನಿಸಿದಾಗ ವಲಸಿಗರು ಅದನ್ನು ವಿರೋಧಿಸಿ ಹಿಂಸಾಚಾರ ನಡೆಸಿದರು.

ಸಂಪಾದಕೀಯ ನಿಲುವು

  • ಬ್ರಿಟನ್‌ನಲ್ಲಿ ವಲಸಿಗರು ಅಂದರೆ ಮತಾಂಧರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದಲೇ ಈ ಪರಿಸ್ಥಿತಿ ಉದ್ಭವಿಸಿದೆ. ಈಗ ಸಂಪೂರ್ಣ ಯುರೋಪ್ ವಲಸಿಗರ ಸಂದರ್ಭದಲ್ಲಿ ಯುದ್ಧೋಪಾದಿಯಲ್ಲಿ ನಿಲುವನ್ನು ಹೊಂದಿ, ತಮ್ಮ ದೇಶಗಳ ರಕ್ಷಣೆಯ ವಿಚಾರ ಮಾಡುವುದು ಅವಶ್ಯಕವಾಗಿದೆಯೆನ್ನುವುದು ಇದರಿಂದ ಗಮನಕ್ಕೆ ಬರುತ್ತದೆ !
  • ಮತಾಂಧರ ಹಿಂಸಾಚಾರದ ಬಗ್ಗೆ ಭಾರತಕ್ಕೆ ಸಲಹೆ ನೀಡುವ ಪಾಶ್ಚಿಮಾತ್ಯ ದೇಶಗಳು ಈಗ ತಾವೇ ಅದನ್ನು ಅನುಭವಿಸುತ್ತಿರುವುದರಿಂದ ಅವರಿಗೆ ಭಾರತದ ದುಃಖ ಗಮನಕ್ಕೆ ಬಂದಿರಬಹುದು ಎಂದು ಅಪೇಕ್ಷಿಸಬಹುದು.