‘ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯದ ಮಾಧ್ಯಮದಿಂದ ಸಾಧನೆಯನ್ನು ಹೇಗೆ ಮಾಡಬೇಕು ?, ಈ ಬಗ್ಗೆ ಹಿಂದುತ್ವನಿಷ್ಠರಿಗೆ ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನ !
೧. ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಪ್ರಯತ್ನಿಸದಿದ್ದರೆ ಮನುಷ್ಯಜನ್ಮವು ಹೇಗೆ ಸಾರ್ಥಕವಾಗಬಲ್ಲದು ?
‘ಪ್ರತಿಯೊಂದು ಯುಗದಲ್ಲಿ ಯಾವಾಗ ಏನಾಗುತ್ತದೆ ?, ಎಂಬುದರ ವೇಳಾಪತ್ರಿಕೆ ನಿರ್ಧರಿಸಲ್ಪಟ್ಟಿರುತ್ತದೆ. ಅದರ ಸಾಂಗತ್ಯ ಇಟ್ಟುಕೊಂಡು ಮತ್ತು ಕಾಲದ ಆವಶ್ಯಕತೆ ಇರುವವರೆಗೆ ನಾವು ಕಾರ್ಯ ಮಾಡಬೇಕಾಗಿದೆ. ‘ಈಶ್ವರನು ನಮಗೆ ಸಾಧನೆ ಮತ್ತು ಧರ್ಮಸೇವೆಯನ್ನು ಮಾಡಲು ಎಷ್ಟೊಂದು ಸಮಯವನ್ನು ನೀಡಿದ್ದಾನೆ, ಎಂಬುದಕ್ಕಾಗಿ ಅವನ ಬಗ್ಗೆ ಕೃತಜ್ಞತೆ ಅನಿಸಬೇಕು. ಹಿಂದೂರಾಷ್ಟ್ರ ಸ್ಥಾಪನೆ ಆಗಲಿಕ್ಕೇ ಇದೆ; ಆದರೆ ನಾವು ಅದಕ್ಕಾಗಿ ಏನೂ ಮಾಡದಿದ್ದರೆ, ನಮ್ಮ ಸಾಧನೆ ಮತ್ತು ಸೇವೆ ಹೇಗೆ ಆಗಲು ಸಾಧ್ಯ ? ಈ ಮನುಷ್ಯಜನ್ಮವು ಹೇಗೆ ಸಾರ್ಥಕವಾಗಬಲ್ಲದು ?
೨. ಪೂ. (ನ್ಯಾಯವಾದಿ) ಹರಿ ಶಂಕರ ಜೈನ ಇವರು ‘ನನಗೆ ಮೋಕ್ಷ ಬೇಡ, ‘ಪ್ರತಿ ಜನ್ಮದಲ್ಲಿ ಹಿಂದೂ ರಾಷ್ಟ್ರದ ಸೇವೆ ಮಾಡಲು ಆಗಬೇಕು, ಎಂದು ಹೇಳುವುದು
ಈಶ್ವರನ ಪ್ರತಿಯೊಂದು ಆಯೋಜನೆ ಪರಿಪೂರ್ಣ ವಾಗಿರುತ್ತದೆ. ನಾವು ಕೇವಲ ಅದಕ್ಕನುಸಾರ ಕೃತಿ ಮಾಡಬೇಕು, ಸಾಧನೆಯಲ್ಲಿ ಮುಂದಿನ ಹಂತಕ್ಕೆ ಹೋದಾಗ, ‘ಏಕೆ ಮತ್ತು ಹೇಗೆ ಮಾಡಬೇಕು ?, ಎಂಬ ಪ್ರಶ್ನೆಯೇ ಮನಸ್ಸಿನಲ್ಲಿ ಉಳಿಯುವುದಿಲ್ಲ. ಶ್ರದ್ಧೆಯನ್ನಿಟ್ಟು ಮಾಡಿದ ಕಾರ್ಯ ದಿಂದಲೇ ಬಹಳ ಆನಂದ ಸಿಗ ತೊಡಗುತ್ತದೆ. ಕೆಲವು ದಿನಗಳ ಹಿಂದೆ ದೆಹಲಿಯ ಪೂ. (ನ್ಯಾಯವಾದಿ) ಹರಿ ಶಂಕರ ಜೈನ ಇವರು ಬಂದಿದ್ದರು. ಅವರು, “ನನಗೆ ಮೋಕ್ಷ ಇತ್ಯಾದಿ ಏನೂ ಬೇಡ. ‘ಪ್ರತಿಯೊಂದು ಜನ್ಮದಲ್ಲಿ ಹಿಂದೂ ರಾಷ್ಟ್ರದ ಕಾರ್ಯವನ್ನು ಸೇವೆಯೆಂದು ಮಾಡಲು ಸಾಧ್ಯವಾಗಬೇಕು, ಇಷ್ಟೇ ನನ್ನ ಇಚ್ಛೆಯಾಗಿದೆ !, ಎಂದರು. ಅವರ ವಿಚಾರ ಎಷ್ಟು ಸುಂದರವಾಗಿದೆ ! ಇತರ ಕೆಲವು ಜನರು, ‘ನಮಗೆ ಮೋಕ್ಷ ಬೇಕು, ನಾವು ಅದಕ್ಕಾಗಿಯೇ ಕಾರ್ಯ ಮಾಡುವೆವು, ಎನ್ನುತ್ತಾರೆ. ಪೂ. (ನ್ಯಾಯವಾದಿ) ಹರಿ ಶಂಕರ ಜೈನರು ಕಾರ್ಯದ್ದಲ್ಲ, ಸೇವೆಯಲ್ಲಿನ ಆನಂದವನ್ನು ಪಡೆಯುತ್ತಾರೆ. ಅದರಂತೆ ಎಲ್ಲರೂ ಪಡೆಯಬೇಕು !
೩. ಸಮಾಜಸೇವೆಯಿಂದ ಧರ್ಮಸೇವೆ ಮತ್ತು ಸಾಧನೆ ಆಗದಿದ್ದರೆ ಮನಸ್ಸು ಮತ್ತು ಬುದ್ಧಿಯ ಲಯವಾಗುವುದಿಲ್ಲ
ಸಮಾಜಸೇವಕರು ಮಾಡುವ ಕಾರ್ಯದಿಂದ ಧರ್ಮದ ಸೇವೆ ಮತ್ತು ಸಾಧನೆಯಾಗುವುದಿಲ್ಲ. ಧರ್ಮಸೇವೆ ಮಾಡುವುದರಿಂದ ವ್ಯಕ್ತಿಯ ಮನಸ್ಸು ಮತ್ತು ಬುದ್ಧಿಯ ಲಯವಾಗುತ್ತದೆ. ಒಬ್ಬ ನೌಕರನಿಗೆ ಒಂದರ ಹಿಂದೆ ಒಂದು ಕೆಲಸವನ್ನು ಹೇಳಿದರೆ, ಅವನು ಏನೂ ಹೇಳದೇ ಆ ಕೆಲಸಗಳನ್ನು ಮಾಡುತ್ತಿರುತ್ತಾನೆ. ಇದರಿಂದ ಅವನ ‘ಮನೋಲಯವಾಗತೊಡಗುತ್ತದೆ. ಇದರಲ್ಲಿ ಅವನು ತನ್ನ ಬುದ್ಧಿಯ ಬಳಕೆಯನ್ನೇ ಮಾಡುವುದಿಲ್ಲ. ‘ತೀರಾ ಅದೇ ರೀತಿ ‘ಹಿಂದೂ ರಾಷ್ಟ್ರದ ಸ್ಥಾಪನೆ ಮಾಡುವುದು, ಈ ಕಾರ್ಯವನ್ನು ಮಾಡಿ ನಮಗೆ ಮನೋಲಯ ಮತ್ತು ಬುದ್ಧಿಲಯ ಮಾಡಿಕೊಳ್ಳಬೇಕಾಗಿದೆ. ಈ ರೀತಿ ಸಾಧನೆಯನ್ನು ಮಾಡಿ ನಮಗೆ ಈಶ್ವರನೊಂದಿಗೆ ಏಕರೂಪವಾಗಬೇಕಾಗಿದೆ.