ಪ್ರಧಾನಮಂತ್ರಿ ಮೋದಿ ಮತ್ತು ರಷ್ಯಾ ರಾಷ್ಟ್ರಾಧ್ಯಕ್ಷ ಪುತಿನ್ ಭೇಟಿಯ ಕುರಿತು ಅಂತರಾಷ್ಟ್ರೀಯ ಮಾಧ್ಯಮಗಳ ಆಲಾಪ !
ನವದೆಹಲಿ – ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಸ್ಕೋದಲ್ಲಿ ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾದಿಮಿರ್ ಪುತಿನ್ ಅವರ ಭೇಟಿ ಮಾಡಿದ್ದನ್ನು ಜಾಗತಿಕ ಮಾಧ್ಯಮಗಳು ದೊಡ್ಡ ಪ್ರಸಿದ್ಧಿ ನೀಡಿವೆ. ಪ್ರತಿಯೊಬ್ಬರೂ ಈ ಘಟನೆಯನ್ನು ಬೇರೆ ಬೇರೆ ದೃಷ್ಟಿಯಿಂದ ನೋಡಿದ್ದಾರೆ. ಬಹುತೇಕರು ಭಾರತ ಮತ್ತು ರಷ್ಯಾ ನಡುವಿನ ಸಂಬಂಧ ಹೆಚ್ಚು ದೃಢವಾಗುತ್ತಿದ್ದು ಅಮೇರಿಕಾ ಮತ್ತು ಯುರೋಪ್ ರಾಷ್ಟ್ರಗಳು ರಷ್ಯಾವನ್ನು ಬಹಿಷ್ಕರಿಸುವ ಪ್ರಯತ್ನಕ್ಕೆ ಕೊಳ್ಳಿ ಇಟ್ಟಂತಾಗಿದೆ ಎಂದು ಹೇಳಿವೆ.
Relationship between India and Russia, stronger than ever, while the United State’s attempt to isolate Russia, seems failing.
Inference by the world media after the meeting between #PMModi and President #Putin.#Diplomacy #WorldNews pic.twitter.com/3J3QJxVaww
— Sanatan Prabhat (@SanatanPrabhat) July 10, 2024
ಬೇರೆ ಬೇರೆ ಸಮಾಚಾರ ಪತ್ರಗಳಿಂದ ತಯಾರಿಸಿರುವ ವರದಿ !
೧.ನ್ಯೂಯಾರ್ಕ್ ಟೈಮ್ಸ್ (ಅಮೇರಿಕಾ) : ಪ್ರಧಾನಮಂತ್ರಿ ಮೋದಿ ಅವರ ರಷ್ಯಾದ ಪ್ರವಾಸದಿಂದ ಪುತಿನ್ ಅವರನ್ನು ಏಕಾಂಗಿ ಮಾಡುವ ಪ್ರಯತ್ನ ವಿಫಲವಾಗಿದೆ. ಅದರ ಜೊತೆಗೆ ಇದರಿಂದ ಯುಕ್ರೇನಿನ ಅಸಮಾಧಾನ ಹೆಚ್ಚಾಗಿದೆ. ಭಾರತವು ಅಮೇರಿಕಾದ ಜೊತೆಗಿನ ಸಂಬಂಧ ದೃಢವಾಗಿದ್ದರೂ ಸಹ, ರಷ್ಯಾ ಮತ್ತು ಭಾರತ ನಡುವಿನ ಆಳವಾದ ಸಂಬಂಧ ಶಾಶ್ವತವಾಗಿದೆ ಎಂದು ಜಗತ್ತಿಗೆ ತೋರಿಸುವ ಅವಕಾಶ ಪುತಿನ್ ಅವರಿಗೆ ಸಿಕ್ಕಿದೆ. ಪಶ್ಚಿಮಾತ್ಯ ದೇಶಗಳು ರಷ್ಯಾವನ್ನು ನಿಶಕ್ತ ಗೊಳಿಸುವ ಪ್ರಯತ್ನ ಮಾಡುತ್ತಿದ್ದರು, ರಷ್ಯಾ ಯಾವ ರೀತಿ ಇತರ ದೇಶಗಳ ಜೊತೆಗೆ ಸಂಬಂಧ ಬೆಳೆಸುತ್ತಿದೆ, ಅದರಿಂದ ಅದರ ಆರ್ಥಿಕ ಸ್ಥಿತಿ ಸಶಕ್ತವಾಗಿದೆ.
೨.ದ ವಾಷಿಂಗ್ಟನ್ ಪೋಸ್ಟ್ (ಅಮೇರಿಕಾ) : ಮೋದಿ ಅವರ ಈ ಭೇಟಿಯಿಂದ ಭಾರತ ಪಶ್ಚಿಮಾತ್ಯ ದೇಶಗಳ ಪರವಾಗಿ ಇಲ್ಲದಿರುವುದು ಕಾಣುತ್ತಿದೆ. ಯುಕ್ರೇನ್ ಯುದ್ಧ ಪ್ರಾರಂಭವಾದ ನಂತರ ಈ ಭೇಟಿ ಸ್ಪಷ್ಟವಾಗಿ ತೋರಿಸುತ್ತಿದೆ. ಅಮೇರಿಕಾದ ಒತ್ತಡವನ್ನು ಲೆಕ್ಕಿಸದೆ ಭಾರತ ರಷ್ಯಾದ ಜೊತೆಗೆ ಅದರ ದೃಢವಾದ ಸಂಬಂಧ ಶಾಶ್ವತವಾಗಿ ಇರಿಸುತ್ತಿದೆ. ಅಧಿಕಾರಕ್ಕೆ ಬಂದ ಒಂದೇ ತಿಂಗಳಲ್ಲಿ ಮೋದಿ ಅವರು ರಷ್ಯಾಗೆ ಭೇಟಿ ನೀಡಿದ್ದಾರೆ. ಭಾರತ-ಅಮೇರಿಕಾದ ಸಂಬಂಧ ಬಹಳ ಪ್ರಗತಿ ಸಾಧಿಸಿದ್ದರೂ ಸಹ ಭಾರತ ಈಗಲೂ ಪಾಶ್ಚಿಮಾತ್ಯ ದೇಶದ ಪರವಾಗಿ ನಿಂತಿಲ್ಲ ಎಂದು ಮೋದಿ ಅವರು ಈ ಮೂಲಕ ಸಂಕೇತ ನೀಡಿದ್ದಾರೆ.
೩. ವಾಯ್ಸ್ ಆಫ್ ಅಮೇರಿಕಾ: ಪುತಿನ್ ಅವರಿಗೆ ಈ ಭೇಟಿ ಮಹತ್ವದ್ದಾಗಿದೆ; ಏಕೆಂದರೆ ರಷ್ಯಾ ಮೇಲೆ ಹೇರಿರುವ ನಿರ್ಬಂಧದಿಂದ ರಷ್ಯಾಗೆ ಯಾವುದೇ ಪರಿಣಾಮವಾಗಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಈ ಭೇಟಿಯ ಮೂಲಕ ಅವರು ಪಶ್ಚಿಮಾತ್ಯ ದೇಶಗಳಿಗೆ ನೀಡುತ್ತಿದ್ದಾರೆ.
೪. ಬಿಬಿಸಿ ಹಿಂದಿ. (ಬ್ರಿಟನ್) : ನಾಟೊ ದೇಶಗಳು (ನಾಟೊ ಎಂದರೆ ನಾರ್ಥ ಅಟಲಾಂಟಿಕ್ ಟ್ರಿಟಿ ಆರ್ಗನೈಸೇಷನ್ ಹೆಸರಿನ ಜಗತ್ತಿನಲ್ಲಿನ ೨೯ ದೇಶಗಳ ಸಹಭಾಗ ಇರುವ ಒಂದು ಸೈನಿಕ ಸಂಘಟನೆ) ಯುಕ್ರೇನ್ ಮೇಲಿನ ಮಾಸ್ಕೋದ ಕಾರ್ಯಾಚರಣೆಯನ್ನು ಕಟುವಾದ ಶಬ್ದಗಳಿಂದ ನಿಷೇಧಿಸಿರುವಾಗ ಮೋದಿ ಅವರು ವ್ಲಾದಿಮಿರ್ ಪುತಿನ್ ಅವರನ್ನು ಇಲ್ಲಿಯವರೆಗೆ ಸ್ಪಷ್ಟ ಶಬ್ದಗಳಲ್ಲಿ ಟೀಕಿಸಿಲ್ಲ. ವಿವಿಧ ನಿರ್ಬಂಧಗಳನ್ನು ಹೇರಿ ಪಾಶ್ಚಿಮಾತ್ಯ ದೇಶಗಳು ರಷ್ಯಾವನ್ನು ನಿಶಕ್ತಗೊಳಿಸುವ ಪ್ರಯತ್ನ ಮಾಡುತ್ತಿದೆ ; ಆದರೆ ಪುತಿನ್ ಭಾರತ ಮತ್ತು ಚೀನಾ ದೇಶದ ನಾಯಕರ ಜೊತೆಗೆ ಸಂಬಂಧ ದೃಢವಾಗಿಸುವುದರಲ್ಲಿ ವ್ಯಸ್ತವಾಗಿದ್ದಾರೆ.
೫. ಗಾರ್ಡಿಯನ್ (ಬ್ರಿಟನ್) – ಯುಕ್ರೇನ್ ಯುದ್ಧದ ಸಂಕಷ್ಟದ ಕಾಲದಲ್ಲಿಯೂ ಕೂಡ ಮೋದಿ ಮತ್ತು ಪುತಿನ್ ತಮ್ಮ ಸ್ನೇಹವನ್ನು ಇನ್ನಷ್ಟು ಗಟ್ಟಿಮಾಡಿಕೊಂಡಿದ್ದಾರೆ. ಮೋದಿ ಅವರು ಪುತಿನ್ ಅವರಿಗೆ ‘ಶಾಂತಿಯ ಮಾರ್ಗ ಯುದ್ಧ ಭೂಮಿಯಿಂದ ಹೋಗುವುದಿಲ್ಲ’ ಎಂದು ಸಲಹೆ ನೀಡಿದ್ದಾರೆ. ಆದರೆ ಮೋದಿ ಅವರ ಈ ಸಲಹೆಯ ಪರಿಣಾಮ ಪುತಿನ್ ಅವರ ಮಹತ್ವಾಕಾಂಕ್ಷೆಯ ಮೇಲೆ ಆಗುವುದು ಎಂದು ಅನಿಸುವುದಿಲ್ಲ.
೬. ಗ್ಲೋಬಲ್ ಟೈಮ್ಸ್ (ಚೀನಾ) : ಭಾರತದ ಈ ನಿರ್ಣಯದಿಂದ ಪಾಶ್ಚಿಮಾತ್ಯ ದೇಶಗಳಿಗೆ ನಿರಾಸೆ ಆಗಿದೆ. ಭಾರತದ ಸಂಬಂಧ ರಷ್ಯಾದ ಜೊತೆಗೆ ದೃಢವಾಗುತ್ತಿರುವುದರಿಂದ ಹೆಚ್ಚು ಆತಂಕಕ್ಕೆ ಒಳಗಾಗಿರುವುದು ಕಾಣುತ್ತಿದೆ. ಚೀನಾ, ರಷ್ಯಾ-ಭಾರತ ನಡುವಿನ ಸಂಬಂಧವನ್ನು ಅಪಾಯದ ದೃಷ್ಟಿಯಿಂದ ನೋಡುತ್ತಿಲ್ಲ, ಆದರೆ ಪಶ್ಚಿಮಾತ್ಯ ದೇಶಗಳು ಭಾರತ-ರಷ್ಯಾ ಜೊತೆಗಿನ ಸಂಬಂಧದಿಂದ ಅಸಮಾಧಾನಗೊಂಡಿರುವುದು ಕಾಣುತ್ತಿದೆ. ಪಾಶ್ಚಿಮಾತ್ಯ ದೇಶಗಳು ಭಾರತಕ್ಕೆ ಅದರ ತೆಕ್ಕೆಗೆ ಎಳೆಯುವ ಪ್ರಯತ್ನ ಮಾಡುತ್ತಿವೆ ಮತ್ತು ಚೀನಾದ ಪ್ರಭಾವ ಸಂತುಲಿತ ಗೊಳಿಸಲು ಪ್ರಯತ್ಮಾಡುತ್ತಿವೆ. ಭಾರತವು ರಷ್ಯಾದ ವಿರುದ್ಧ ನಿಲ್ಲುವುದು ಮತ್ತು ಅವರ ಜೊತೆ ಮೈತ್ರಿ ಮಾಡಿಕೊಳ್ಳುವುದು ಎಂದು ಪಾಶ್ಚಿಮಾತ್ಯ ದೇಶಗಳ ಆಸೆಯಾಗಿತ್ತು; ಆದರೆ ಭಾರತದ ಈ ನಡೆಯಿಂದ ಅವರಿಗೆ ನಿರಾಸೆ ಆಗಿದೆ.