‘ಹಣವು ಅಶಾಶ್ವತವಾಗಿದೆ. ಸಂತರು ನೀಡಿದ ಆಶೀರ್ವಾದವು ಶಾಶ್ವತವಾಗಿದೆ, ಅಂದರೆ ಅದು ಶಾಶ್ವತವಾಗಿ ಉಳಿಯುವುದಾಗಿದೆ. ಶಾಶ್ವತವೆಂದರೆ ಎಲ್ಲಿಯವರೆಗೆ ಚಂದ್ರ ಮತ್ತು ಸೂರ್ಯ ಇರುವರೋ, ಅಲ್ಲಿಯವರೆಗೆ ಉಳಿ ಯುವುದಾಗಿದೆ. ಅದು ಎಂದಿಗೂ ಭಂಗವಾಗುವುದಿಲ್ಲ ಮತ್ತು ಲೋಪವೂ ಆಗುವುದಿಲ್ಲ. ಸಮರ್ಥ ರಾಮದಾಸ ಸ್ವಾಮಿಯವರ ಆಶೀರ್ವಾದದಿಂದ ಛತ್ರಪತಿ ಶಿವಾಜಿ ಮಹಾರಾಜರು ಹಿಂದವಿ ಸ್ವರಾಜ್ಯದ ಸ್ಥಾಪನೆಯನ್ನು ಮಾಡಿದರು. ಸ್ವಾಮಿ ವಿವೇಕಾನಂದರು ಅಮೇರಿಕಾದ ಚಿಕಾಗೋದಲ್ಲಿನ ಪರಿಷತ್ತಿನಲ್ಲಿ ಹಿಂದೂ ಧರ್ಮದ ಶ್ರೇಷ್ಠತೆಯನ್ನು ಸಿದ್ಧ ಮಾಡಿದರು. ಇದು ಅವರ ಸದ್ಗುರುಗಳ ಆಶೀರ್ವಾದದಿಂದಾಗಿಯೇ ಆಯಿತು. ಸನಾತನದ ಶ್ರದ್ಧಾಸ್ಥಾನ ಪ.ಪೂ. ಭಕ್ತರಾಜ ಮಹಾರಾಜರ ಆಶೀರ್ವಾದದಿಂದಲೇ ಪರಾತ್ಪರ ಗುರು ಡಾ. ಆಠವಲೆಯವರು ಹಿಂದೂ ರಾಷ್ಟ್ರದ ಸ್ಥಾಪನೆಯ ಸಂಕಲ್ಪವನ್ನು ಮಾಡಿದ್ದಾರೆ. ಸದ್ಗುರುಗಳ ಆಶೀರ್ವಾದದಿಂದಲೇ ಧರ್ಮದ ಕಾರ್ಯವಾಗುತ್ತದೆ; ಆದುದರಿಂದ ಸದ್ಗುರುಗಳ ಆಶೀರ್ವಾದಕ್ಕೆ ಮಹತ್ವವಿದೆ.’
– ಪ.ಪೂ. ದಾಸ ಮಹಾರಾಜ (೨೮.೧೧.೨೦೨೦)