ಗುರುಗಳಿಲ್ಲದೇ ಜನ್ಮವೇ ವ್ಯರ್ಥ

ಪ್ರಸ್ತುತ ಜನ್ಮದಲ್ಲಿನ ಸಣ್ಣ ಸಣ್ಣ ವಿಷಯಗಳಿಗೂ ಪ್ರತಿಯೊಬ್ಬರು ಶಿಕ್ಷಕ, ವೈದ್ಯ (ಡಾಕ್ಟರ) ಮುಂತಾದವರ ಮಾರ್ಗದರ್ಶನ ಪಡೆಯುತ್ತಾರೆ. ಆದರೆ ‘ಜನ್ಮ-ಮೃತ್ಯುವಿನ ಚಕ್ರದಿಂದ ಮುಕ್ತಿ ನೀಡುವ ಗುರುಗಳ ಮಹತ್ವ ಎಷ್ಟಿರಬಹುದು, ಎಂಬುದರ ಕಲ್ಪನೆ ಮಾಡಲು ಸಾಧ್ಯವಿಲ್ಲ !

ಯಾರ ಬಳಿ ಗುರುಗಳ ಜ್ಞಾನವಿಲ್ಲ | ಅವನಿಗೆ ಪರಿಹಾರವೇ ಇಲ್ಲ | ಆತ ಶ್ರೀಹರಿಗೂ ಇಷ್ಟವಾಗುವುದಿಲ್ಲ | ಅವನ ಜನ್ಮ ವ್ಯರ್ಥವಾಗುವುದು || – ಜ್ಞಾನದೇವಗಾಥಾ, ಅಭಂಗ ೬೯೮, ಸಾಲು ೧

ಅರ್ಥ : ಯಾರಿಗೆ ಶ್ರೀ ಗುರುಗಳಿಂದ ಜ್ಞಾನಪ್ರಾಪ್ತಿ ಆಗಿರುವುದಿಲ್ಲವೋ, ಅವನನ್ನು ಕಾಪಾಡಲು ಯಾವುದೇ ಉಪಾಯ ಇರುವುದಿಲ್ಲ. ಅವನು ಶ್ರೀಹರಿಗೂ ಇಷ್ಟವಾಗದಿರುವುದರಿಂದ ಅವನ ಜನ್ಮವು ವ್ಯರ್ಥವಾದಂತೆ ಇದೆ.