S Jayshankar : ಚೀನಾದ ವಿದೇಶಾಂಗ ಸಚಿವರನ್ನು ಭೇಟಿಯಾದ ಡಾ.ಎಸ್.ಜೈಶಂಕರ್

ಗಡಿ ವಿವಾದ ಬಗೆಹರಿಸುವ ಪ್ರಯತ್ನ ತೀವ್ರಗೊಳಿಸಲು ಇಬ್ಬರ ಸಹಮತ

ಅಸ್ತಾನಾ (ಕಝಾಕಿಸ್ತಾನ) – ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಅವರು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರನ್ನು ಭೇಟಿಯಾದರು. ವಾಸ್ತವಿಕ ನಿಯಂತ್ರಣ ರೇಖೆಯನ್ನು (ಎಲ್‌ಎಸಿ) ಗೌರವಿಸುವುದು ಮತ್ತು ಗಡಿ ಪ್ರದೇಶಗಳಲ್ಲಿ ಶಾಂತಿಯನ್ನು ಖಚಿತಪಡಿಸುವುದು ಅಗತ್ಯ ಎಂದು ಡಾ. ಜೈಶಂಕರ್ ವಾಂಗ್‌ಗೆ ತಿಳಿಸಿದರು. ಉಭಯ ದೇಶಗಳ ನಡುವಿನ ಸಂಬಂಧಗಳು ಪರಸ್ಪರ ಗೌರವ, ಆಸಕ್ತಿ ಮತ್ತು ಸೂಕ್ಷ್ಮತೆಯ ಆಧಾರದ ಮೇಲೆ ಇರಬೇಕು ಎಂದು ಜೈಶಂಕರ್ ಹೇಳಿದರು.

ಡಾ. ಜೈಶಂಕರ್ ಅವರು ‘ಎಕ್ಸ್’ ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿ, ಇಂದು ಬೆಳಗ್ಗೆ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರನ್ನು ಭೇಟಿಯಾಗಿರುವುದಾಗಿ ತಿಳಿಸಿದರು. ಉಳಿದ ಗಡಿ ಪ್ರದೇಶದಲ್ಲಿನ ಸಮಸ್ಯೆಗಳ ಬಗ್ಗೆ ಶೀಘ್ರ ಪರಿಹಾರದ ಕುರಿತು ಚರ್ಚಿಸಲಾಗಿದೆ. ರಾಜತಾಂತ್ರಿಕ ಮತ್ತು ಮಿಲಿಟರಿ ವಿಧಾನಗಳ ಮೂಲಕ ಈ ದಿಕ್ಕಿನಲ್ಲಿ ಪ್ರಯತ್ನಗಳನ್ನು ದ್ವಿಗುಣಗೊಳಿಸಲು ಎರಡೂ ದೇಶಗಳು ಒಪ್ಪಿಕೊಂಡಿವೆ ಎಂದಿದ್ದಾರೆ.

ಸಂಪಾದಕೀಯ ನಿಲುವು

ಚೀನಾ ಎಷ್ಟೇ ಸಹಮತ ತೋರಿಸಿದರೂ, ಅದನ್ನು ಯಾರೂ ನಂಬಿಕೆ ಇಡುವುದಿಲ್ಲ ಎಂಬುದು ಭಾರತಕ್ಕೆ ಈಗ ಗಮನಕ್ಕೆ ಬಂದಿದೆ!