ಚೀನಾ ವಿರುದ್ಧದ ನಮ್ಮ ಹೋರಾಟಕ್ಕೆ ಭಾರತಕ್ಕೆ ಯಾವುದೇ ಸಂಬಂಧವಿಲ್ಲ

‘ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ’ದ ಹಿರಿಯ ಕಮಾಂಡರ್ ಮೌಲ್ವಿ ಮನ್ಸೂರನ ಗೌಪ್ಯ ಬಹಿರಂಗ !

ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನದಲ್ಲಿ ಚೀನಾದ ಯೋಜನೆಗಳು ಮತ್ತು ಅದರ ನಾಗರಿಕರ ಮೇಲಿನ ದಾಳಿಗಳ ಬಗ್ಗೆ ಹೊಸ ವಿಷಯ ಬಹಿರಂಗವಾಗಿದೆ. ಪಾಕಿಸ್ತಾನಿ ಗುಪ್ತಚರ ಸಂಸ್ಥೆ ಮತ್ತು ಅದರ ನಾಯಕರಾದ ‘ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್’ (ಟಿಟಿಪಿ) ಅಥವಾ ಭಯೋತ್ಪಾದಕ ಸಂಘಟನೆಯ ಹಿರಿಯ ಕಮಾಂಡರ್ ನಸ್ರುಲ್ಲಾ, ಅಲಿಯಾಸ್ ಮೌಲ್ವಿ ಮನ್ಸೂರ್ ಅವರು ಈ ಗೌಪ್ಯವನ್ನು ಬಹಿರಂಗ ಪಡಿಸಿದ್ದಾರೆ. ಪಾಕಿಸ್ತಾನದಲ್ಲಿ ಭಯೋತ್ಪಾದಕ ಘಟನೆಯನ್ನು ನಡೆಸುವುದರೊಂದಿಗೆ ಟಿಟಿಪಿ ಮತ್ತು ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (ಬಿಎಲ್ಎ) ಈ ಎರಡೂ ಭಯೋತ್ಪಾದಕ ಸಂಘಟನೆಗಳು ಚೀನಾದ ನಾಗರಿಕರ ಮೇಲೆ ದಾಳಿ ನಡೆಸಲು ಕೈಜೋಡಿಸಿವೆ. ಟಿಟಿಪಿಗೆ ಭಾರತೀಯ ಗುಪ್ತಚರ ಸಂಸ್ಥೆಯಿಂದ ಆರ್ಥಿಕ ನೆರವಾಗಲಿ ಅಥವಾ ಶಸ್ತ್ರಾಸ್ತ್ರಗಳಾಗಲಿ ಸಿಗುತ್ತಿಲ್ಲ, ನಮ್ಮ ಹೋರಾಟವನ್ನು ನಾವು ಸ್ವತಃ ನಡೆಸುತ್ತಿದ್ದೇವೆ ಎಂದವರು ಹೇಳಿದ್ದಾರೆ.

1. ಪಾಕಿಸ್ತಾನಿ ಸೈನ್ಯವು ಇತ್ತೀಚೆಗೆ ಮೌಲ್ವಿ ಮನ್ಸೂರನನ್ನು ಬಲೂಚಿಸ್ತಾನದಲ್ಲಿ ಬಂಧಿಸಿದ್ದರು. ಪಾಕಿಸ್ತಾನದ ಸೇನೆಯ ಪ್ರಕಾರ ಟಿಟಿಪಿ ಮತ್ತು ಬಿಎಲ್ಎ ಸಂಘಟನೆಗಳು ಸೇರಿ ಅಪಹರಣದ ಯೋಜನೆಯನ್ನು ರೂಪಿಸುತ್ತಾರೆ ಮತ್ತು ಬಂಧಸಿದವರನ್ನು ಅಫಘಾನಿಸ್ತಾನಕ್ಕೆ ಕಳುಹಿಸಿದ ಬಳಿಕ ಅವರು ನಾಪತ್ತೆಯಾಗಿದ್ದಾರೆಂದು ಘೋಷಿಸುತ್ತಾರೆ.

2. ಚೀನಾದ ನಾಗರಿಕರ ಮೇಲಿನ ದಾಳಿಯಲ್ಲಿ ಪಾಕಿಸ್ತಾನವು ಪೋಷಿಸಿದ ಭಯೋತ್ಪಾದಕ ಸಂಘಟನೆಗಳ ಹೆಸರು ಬಹಿರಂಗವಾಗುತ್ತಲೇ, ಶಹಾಬಾಜ್ ಶರೀಫ್ ಸರಕಾರವು ತನ್ನ ಹೊಣೆಯನ್ನು ಝಾಡಿಸಿಕೊಂಡು ಪ್ರತಿ ಬಾರಿಯೂ ಭಾರತದ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದರು. ತೆಹ್ರೀಕ್-ಎ-ತಾಲಿಬಾನ್, ಪಾಕಿಸ್ತಾನ ಮತ್ತು ಬಲೂಚಿಸ್ತಾನ್ ಲಿಬರೇಶನ್ ಆರ್ಮಿ ಭಯೋತ್ಪಾದಕ ಸಂಘಟನೆಗಳಿಗೆ ಭಾರತವು ಆರ್ಥಿಕ ನೆರವು ನೀಡುತ್ತಿದೆ ಎಂದು ಬಲೂಚಿಸ್ತಾನ್ ಗೃಹ ಸಚಿವ ಜಿಯಾವುಲ್ಲಾ ಲಾಂಗಾವೂ ಅವರು ಹೇಳಿದ್ದರು.

3. ಕೇವಲ 2024 ರ ಮೊದಲ ನಾಲ್ಕು ತಿಂಗಳಲ್ಲಿಯೇ ಭಯೋತ್ಪಾದಕರ ದಾಳಿಯಲ್ಲಿ , 281 ನಾಗರಿಕರು ಮತ್ತು ಭದ್ರತಾ ಪಡೆಗಳ ಸೈನಿಕರು ಸಾವನ್ನಪ್ಪಿದ್ದರು. ಈ ನಿಟ್ಟಿನಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು ಪಾಕ್ ಪ್ರಧಾನಿ ಶಹಬಾಜ್ ಷರೀಫ್ ಅವರಿಗೆ, ಎಲ್ಲಿಯವರೆಗೆ ಪಾಕಿಸ್ತಾನದಲ್ಲಿ ಸ್ಥಿರತೆ ಬರುವುದಿಲ್ಲವೋ, ಅಲ್ಲಿಯವರೆಗೆ ಚೀನಾ 50 ಲಕ್ಷ ರೂಪಾಯಿ ಕೂಡ ನೀಡುವುದಿಲ್ಲವೆಂದು ಖಡಕ್ ಆಗಿ ಹೇಳಿದ್ದರು.

ಸಂಪಾದಕೀಯ ನಿಲುವು

ಪಾಕಿಸ್ತಾನದಲ್ಲಿ ಚೀನಾದ ಇಂಜಿನಿಯರಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂದು ಹೇಳುವ ಪಾಕಿಸ್ತಾನ ಈಗ ಈ ಹೇಳಿಕೆಯ ಹಿಂದೆಯೂ ಭಾರತವೇ ಇದೆಯೆಂದು ಹೇಳಿದರೆ ಆಶ್ಚರ್ಯ ಪಡಬಾರದು.