‘ಗುರುಗಳು ವಿಶ್ವಾಸದ ಮೇಲಿದ್ದಾರೆ. ನಮ್ಮ ವಿಶ್ವಾಸದ ಮೇಲೆ ಗುರುಗಳ ಹಿರಿಮೆ ಅವಲಂಬಿಸಿದೆ. ಗುರುಗಳು ನಿಮ್ಮ ವಿಶ್ವಾಸದ ಮೇಲೆಯೂ ಇದ್ದಾರೆ. ನಿಮ್ಮ ವಿಶ್ವಾಸದಲ್ಲೇ ಗುರುಗಳಿದ್ದಾರೆ. – ಸಂತ ಭಕ್ತರಾಜ ಮಹಾರಾಜರು.
ಭಾವಾರ್ಥ : ‘ಗುರುಗಳು ವಿಶ್ವಾಸದ ಮೇಲಿದ್ದಾರೆ. ನಮ್ಮ ವಿಶ್ವಾಸದ ಮೇಲೆ ಗುರುಗಳ ಹಿರಿಮೆ ಅವಲಂಬಿಸಿದೆ, ಇದರಲ್ಲಿನ ‘ಗುರು ಶಬ್ದವನ್ನು ಬಾಹ್ಯ ಗುರುಗಳ ಬಗ್ಗೆ ಉಪಯೋಗಿಸಲಾಗಿದೆ. ಗುರುಗಳ ಮೇಲೆ ವಿಶ್ವಾಸವಿದ್ದರೆ ಮಾತ್ರ ಗುರುಗಳು ‘ಗುರು ಎಂದು ಕಾರ್ಯವನ್ನು ಮಾಡಬಲ್ಲರು. ‘ಗುರುಗಳು ನಿಮ್ಮ ವಿಶ್ವಾಸದ ಮೇಲೆಯೂ ಇದ್ದಾರೆ. ನಿಮ್ಮ ವಿಶ್ವಾಸದಲ್ಲಿಯೇ ಗುರುಗಳಿದ್ದಾರೆ ಇದರಲ್ಲಿ ‘ಗುರು ಶಬ್ದವು ಅಂತರ್ಯಾಮಿ ಗುರುವಾಗಿದೆ.