ಸಾಮಾನ್ಯವಾಗಿ ಸಚ್ಚಿದಾನಂದ ಪರಬ್ರಹ್ಮ ಗುರುದೇವರು ಅವರ ಸಂದರ್ಭದಲ್ಲಿ ಧಾರ್ಮಿಕ ವಿಧಿ ನಡೆಯುತ್ತಿರುವಾಗ ಅಥವಾ ಸಾಧಕರು ಅವರ ಬಗ್ಗೆ ಏನಾದರೂ ಹೇಳುತ್ತಿರುವಾಗ ಅಥವಾ ಸಪ್ತರ್ಷಿಗಳ ಆಜ್ಞೆಯಿಂದ ಅವರಿಗಾಗಿ ನೃತ್ಯ ಗಾಯನ ಏರ್ಪಡಿಸಿರುವಾಗ ಅವರು ಅತ್ಯಂತ ನಮ್ರತೆಯಿಂದ ಕೈಗಳನ್ನು ಜೋಡಿಸಿರುತ್ತಾರೆ. ಶಾರೀರಿಕ ಸ್ಥಿತಿಗನುಸಾರ ಸ್ವಲ್ಪ ಸಮಯದ ಬಳಿಕ ಕೈಗಳು ನೋಯತೊಡಗಿದಾಗ ಜೋಡಿಸಿರುವ ಕೈಗಳು ಕ್ರಮೇಣ ತಾವಾಗಿಯೇ ಕೆಳಗೆ ಬರತೊಡಗುತ್ತವೆ. ಅವರು ಎಷ್ಟು ಸಾಧ್ಯವೋ ಅಷ್ಟು ಹೊತ್ತು ಕೈಗಳನ್ನು ಜೋಡಿಸಿಟ್ಟಿರುತ್ತಾರೆ. ವಾಸ್ತವದಲ್ಲಿ ಅದು ನಮಸ್ಕಾರವೇ ಆಗಿದೆ; ಆದರೆ ಸ್ವಲ್ಪ ಸಮಯದ ಬಳಿಕ ಕೇವಲ ಕೈಗಳ ಬೆರಳುಗಳ ತುದಿಗಳು ಜೋಡಿಸಿರುವ ಸ್ಥಿತಿಯಲ್ಲಿರುತ್ತವೆ ಮತ್ತು ಎರಡೂ ಕೈಗಳ ಮಧ್ಯೆ ಟೊಳ್ಳು ನಿರ್ಮಾಣವಾಗುತ್ತದೆ.
೧. ಅತ್ಯಂತ ಶಾರೀರಿಕ ತೊಂದರೆಯಾಗುತ್ತಿದ್ದರೂ ಸ್ವಲ್ಪವೂ ಚಲನವಲನ ಮಾಡದೇ ಕುಳಿತುಕೊಳ್ಳುವುದು
ಅತ್ಯಧಿಕ ಶಾರೀರಿಕ ತೊಂದರೆಯಾಗುತ್ತಿರುವಾಗಲೂ ಸಪ್ತರ್ಷಿಗಳ ಆಜ್ಞೆಯಂತೆ ಅವರು ಧಾರ್ಮಿಕ ಸಮಾರಂಭಗಳಲ್ಲಿ ಭಾಗವಹಿಸುತ್ತಾರೆ. ಮುಂದಿನ ಪೀಳಿಗೆಯವರಿಗೆ ಗುರುದೇವರ ಈ ಅವತಾರಿ ಇತಿಹಾಸ ತಿಳಿಯಬೇಕು ಎಂದು ಈ ಸಮಾರಂಭದ ಚಿತ್ರೀಕರಣವನ್ನು ಮಾಡಲಾಗುತ್ತದೆ. ಹಾಗೆಯೇ ವಿವಿಧ ಕ್ಷಣಗಳ ಛಾಯಾಚಿತ್ರಗಳನ್ನು ತೆಗೆಯುವ ಸೇವೆಯೂ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಇದರಿಂದ ಸಮಾರಂಭದಲ್ಲಿ ಕುಳಿತು ಕೊಳ್ಳುವಾಗ ಚಿತ್ರೀಕರಣದಲ್ಲಿ ಸರಿಯಾಗಿ ಕಾಣಿಸುವ ಪದ್ಧತಿಯಲ್ಲಿ ಕುಳಿತುಕೊಳ್ಳಬೇಕಾಗುತ್ತದೆ. ಸಾಮಾನ್ಯ ವ್ಯಕ್ತಿಯು ಸ್ವಲ್ಪ ಸಮಯದ ವರೆಗೆ ಸತರ್ಕವಾಗಿ ಕುಳಿತುಕೊಳ್ಳಲು ಸಾಧ್ಯವಿದೆ. ಸ್ವಲ್ಪವಾದರೂ ಕಾಲುಗಳ ಚಲನವಲನ ಮಾಡುವುದು, ಬೆನ್ನಿಗೆ ಆಧಾರ ಪಡೆದು ಸ್ವಲ್ಪ ಸಹಜವಾಗಿ ಕುಳಿತುಕೊಳ್ಳುವುದು ಹೀಗೆ ಮಾಡಲಾಗುತ್ತದೆ. ಸಚ್ಚಿದಾನಂದ ಪರಬ್ರಹ್ಮ ಗುರುದೇವರು ಮಾತ್ರ ಸಮಷ್ಟಿಗಾಗಿ ಚಿತ್ರೀಕರಣವಾಗಬೇಕು, ಛಾಯಾಚಿತ್ರಗಳನ್ನು ಸರಿಯಾದ ರೀತಿಯಲ್ಲಿ ಸಂಗ್ರಹಿಸಲು ಸಾಧ್ಯವಾಗಬೇಕು ಎಂದು ಜಾಗರೂಕತೆಯಿಂದ ಕುಳಿತುಕೊಳ್ಳುತ್ತಾರೆ.
೨. ತಮ್ಮ ಪಂಚಪ್ರಾಣಗಳನ್ನು ಒಟ್ಟುಗೂಡಿಸಿ ಸಮಷ್ಟಿಗೆ ಸಮಾರಂಭದ ಆಧ್ಯಾತ್ಮಿಕ ಲಾಭವಾಗಲು ಪ್ರಯತ್ನಿಸುವುದು
ಕೆಲವೊಮ್ಮೆ ಅವರ ಪ್ರಾಣಶಕ್ತಿ ಅತ್ಯಲ್ಪವಿರುತ್ತದೆ. ಇಂತಹ ಸ್ಥಿತಿಯಲ್ಲಿ ಸಾಮಾನ್ಯ ವ್ಯಕ್ತಿಗೆ ಜೀವಂತವಿರಲು ಕೂಡ ಅಸಾಧ್ಯ ವಾಗಿರುವಾಗ ಸಚ್ಚಿದಾನಂದ ಪರಬ್ರಹ್ಮ ಗುರುದೇವರು ಅತ್ಯಂತ ನಮ್ರತೆಯಿಂದ ಕೈಗಳನ್ನು ಜೋಡಿಸಿ ಗಂಟೆಗಟ್ಟಲೆ ಕುಳಿತು ಕೊಳ್ಳುತ್ತಾರೆ. ಅವರ ಆ ಮುದ್ರೆಯಿಂದ ಸಮಷ್ಟಿಗೆ ಆಗುವ ಲಾಭವನ್ನು ನೋಡಿದಾಗ ‘ದಧೀಚಿ ಋಷಿಗಳು ಸಮಷ್ಟಿಯ ಕಲ್ಯಾಣಕ್ಕಾಗಿ ಯಾವ ರೀತಿ ತಮ್ಮ ಅಸ್ಥಿಗಳನ್ನು ದಾನ ಮಾಡಿದರೋ, ಅದರಂತೆ ಸಚ್ಚಿದಾನಂದ ಪರಬ್ರಹ್ಮ ಗುರುದೇವರು ತಮ್ಮ ಪಂಚಪ್ರಾಣವನ್ನು ಒಟ್ಟುಗೂಡಿಸಿ ಸಮಷ್ಟಿಗೆ ಧಾರ್ಮಿಕ ಸಮಾರಂಭದ ಹೆಚ್ಚೆಚ್ಚು ಆಧ್ಯಾತ್ಮಿಕ ಸ್ತರದಲ್ಲಿ ಲಾಭವನ್ನು ಮಾಡಿ ಕೊಡುತ್ತಿದ್ದಾರೆ’, ಎಂದು ಎನಿಸುತ್ತದೆ’.
– ಕು. ಸಾಯಲಿ ಡಿಂಗರೆ (ಈಗಿನ ಸೌ. ಸಾಯಲಿ ಲುಕತುಕೆ), ಮುಂಬೈ (೧೨.೪.೨೦೨೩)