‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ‘ಯು.ಎ.ಎಸ್. (ಯುನಿವರ್ಸಲ್ ಔರಾ ಸ್ಕ್ಯಾನರ್)’ ಈ ಉಪಕರಣದಿಂದ ಮಾಡಿದ ವೈಜ್ಞಾನಿಕ ಪರೀಕ್ಷಣೆ
‘ಮೊದಲು ಸ್ತ್ರೀಯರು ಪ್ರತಿದಿನ ಸೀರೆಯನ್ನು ಉಡುತ್ತಿದ್ದರು ಮತ್ತು ಸೀರೆಯ ಸೆರಗನ್ನು ಎಡ ಭುಜದ ಮೇಲಿನಿಂದ ತೆಗೆದುಕೊಂಡು ನಂತರ ಅದನ್ನು ಬಲಬದಿಯಿಂದ ತೆಗೆದುಕೊಂಡು ಸೆರಗಿನ ತುದಿಯನ್ನು ಹೊಟ್ಟೆಯ ಹತ್ತಿರ ಹೊಕ್ಕಳದ ಸಮೀಪ ಸಿಕ್ಕಿಸುತ್ತಿದ್ದರು. ಈಗಿನ ಒತ್ತಡದ ಜೀವನದಲ್ಲಿ ಮಹಿಳೆಯರು ವ್ಯವಸಾಯ ಅಥವಾ ನೌಕರಿಯ ನಿಮಿತ್ತದಿಂದ ಮನೆಯ ಹೊರಗೆ ಹೋಗುತ್ತಾರೆ. ಆದ್ದರಿಂದ ಮಹಿಳೆಯರು ಸೀರೆ ಉಡುವ ಪ್ರಮಾಣ ಕಡಿಮೆಯಾಗಿದೆ, ಹಾಗೆಯೇ ಇತ್ತೀಚೆಗೆ ಸೀರೆಯನ್ನು ಉಡುವಾಗ ಸೀರೆಯ ಸೆರಗು ಎಡಭುಜದ ಮೇಲಿನಿಂದ ತೆಗೆದುಕೊಂಡು ನಂತರ ಅದನ್ನು ಹಾಗೆಯೇ ಬಿಡುವ ಪದ್ಧತಿಯು ಎಲ್ಲೆಡೆ ರೂಢಿಯಾಗಿದೆ.
‘ಸ್ತ್ರೀಯರು ಸೀರೆಯ ಸೆರಗನ್ನು ಹಾಗೆಯೇ ಬಿಡುವುದು ಅಥವಾ ಅದನ್ನು ಸೊಂಟಕ್ಕೆ ಸಿಕ್ಕಿಸಿಕೊಳ್ಳುವುದು ಈ ಕೃತಿಯನ್ನು ಮಾಡಿದ್ದರಿಂದ ಅವರ ಸೂಕ್ಷ್ಮ-ಊರ್ಜೆಯ ಮೇಲೆ (‘ಔರಾ’ದ ಮೇಲೆ) ಏನು ಪರಿಣಾಮವಾಗುತ್ತದೆ ?’,ಎಂಬುದರ ಅಧ್ಯಯನಕ್ಕಾಗಿ ‘ಯುನಿವರ್ಸಲ್ ಔರಾ ಸ್ಕ್ಯಾನರ್’ ಈ ಉಪಕರಣದಿಂದ ಒಂದು ಸಂಶೋಧನಾತ್ಮಕ ಪರೀಕ್ಷಣೆಯನ್ನು ಮಾಡಲಾಯಿತು. ಈ ಪರೀಕ್ಷಣೆಯಲ್ಲಿ ಮುಂದಿನ ೨ ಪ್ರಯೋಗಗಳನ್ನು ಮಾಡಲಾಯಿತು. ಈ ಪ್ರಯೋಗದಲ್ಲಿ ಆಧ್ಯಾತ್ಮಿಕ ತೀವ್ರ ತೊಂದರೆಯಿರುವ ಓರ್ವ ಮಹಿಳೆ ಮತ್ತು ಆಧ್ಯಾತ್ಮಿಕ ತೊಂದರೆ ಇಲ್ಲದಿರುವ ಓರ್ವ ಮಹಿಳೆ ಪಾಲ್ಗೊಂಡರು.
ಪ್ರಯೋಗ ೧. ಸೀರೆಯ ಸೆರಗನ್ನು ಹಾಗೆಯೇ ಹಿಂದೆ ಬಿಡುವುದು : ಈ ಪ್ರಯೋಗದಲ್ಲಿ ಸ್ತ್ರೀಯರು ೬ ಗಜದ ಸೀರೆಯನ್ನು ಉಟ್ಟುಕೊಂಡು ಸೆರಗನ್ನು ಹಾಗೆಯೇ ಬಿಟ್ಟ ನಂತರ ೧೦ ನಿಮಿಷಗಳ ನಂತರ ‘ಯುನಿವರ್ಸಲ್ ಔರಾ ಸ್ಕ್ಯಾನರ್’ ನಿಂದ ಅವರ ಪರೀಕ್ಷಣೆಯನ್ನು ಮಾಡಲಾಯಿತು.
ಪ್ರಯೋಗ ೨. ಸೀರೆಯ ಸೆರಗನ್ನು ಸೊಂಟಕ್ಕೆ ಸಿಕ್ಕಿಸಿಕೊಳ್ಳುವುದು : ಈ ಪ್ರಯೋಗದಲ್ಲಿ ಸ್ತ್ರೀಯರು ೬ ಗಜದ ಸೀರೆಯ ಸೆರಗನ್ನು ಸೊಂಟಕ್ಕೆ ಸಿಕ್ಕಿಸಿಕೊಂಡ ನಂತರ ೧೦ ನಿಮಿಷಗಳ ನಂತರ ಅವರ ಪರೀಕ್ಷಣೆಯನ್ನು ಮಾಡಲಾಯಿತು.
ಈ ಪರೀಕ್ಷಣೆಗಳಲ್ಲಿನ ನಿರೀಕ್ಷಣೆಗಳ ವಿವೇಚನೆ ಮತ್ತು ನಿಷ್ಕರ್ಷವನ್ನು ಮುಂದೆ ಕೊಡಲಾಗಿದೆ.
೧. ಸ್ತ್ರೀಯರು ಸೀರೆಯ ಸೆರಗನ್ನು ಸೊಂಟಕ್ಕೆ ಸಿಕ್ಕಿಸಿಕೊಂಡ ನಂತರ ಅವರ ಸೂಕ್ಷ್ಮ-ಊರ್ಜೆಯಲ್ಲಿ ತುಂಬಾ ಸಕಾರಾತ್ಮಕ ಪರಿಣಾಮವಾಗುವುದು
ಮೊದಲನೇ ಪ್ರಯೋಗದಲ್ಲಿ ಸ್ತ್ರೀಯರು ಸೀರೆಯ ಸೆರಗನ್ನು ಹಾಗೆಯೇ ಬಿಟ್ಟಿರುವುದರಿಂದ ಅವರಲ್ಲಿ ಹೆಚ್ಚು ಪ್ರಮಾಣದಲ್ಲಿ ನಕಾರಾತ್ಮಕ ಊರ್ಜೆ ಮತ್ತು ಕಡಿಮೆ ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆ ಕಂಡುಬಂದಿತು. ಇನ್ನೊಂದು ಪ್ರಯೋಗದಲ್ಲಿ ಅವರು ಸೀರೆಯ ಸೆರಗನ್ನು ಸೊಂಟಕ್ಕೆ ಸಿಕ್ಕಿಸಿಕೊಂಡ ನಂತರ ೧೦ ನಿಮಿಷಗಳ ನಂತರ ಪುನಃ ಅವರ ಪರೀಕ್ಷಣೆಯನ್ನು ಮಾಡಿದಾಗ ಅವರಲ್ಲಿನ ನಕಾರಾತ್ಮಕ ಊರ್ಜೆ ತುಂಬಾ ಕಡಿಮೆಯಾಗಿ ಅವರಲ್ಲಿನ ಸಕಾರಾತ್ಮಕ ಊರ್ಜೆ ತುಂಬಾ ಹೆಚ್ಚಾಗಿರುವುದು ಕಂಡು ಬಂದಿತು. ಇದನ್ನು ಮುಂದಿನ ಕೋಷ್ಟಕದಲ್ಲಿ ಕೊಡಲಾಗಿದೆ.
ಟಿಪ್ಪಣಿ – ಸದ್ಯದ ಕಾಲವು ಅತ್ಯಂತ ರಜ-ತಮಪ್ರಧಾನವಾಗಿರುವುದರಿಂದ ವ್ಯಕ್ತಿಯ ಮನಸ್ಸು, ಬುದ್ಧಿ ಮತ್ತು ಶರೀರದ ಮೇಲೆ ರಜ-ತಮಾತ್ಮಕ (ತೊಂದರೆದಾಯಕ) ಸ್ಪಂದನಗಳ ಆವರಣ ಬರುತ್ತದೆ. ಆದ್ದರಿಂದ ಪರೀಕ್ಷಣೆಯಲ್ಲಿನ ಆಧ್ಯಾತ್ಮಿಕ ತೊಂದರೆ ಇಲ್ಲದಿರುವ ಸ್ತ್ರೀಯಲ್ಲಿಯೂ ತೊಂದರೆದಾಯಕ ಸ್ಪಂದನಗಳು ಕಂಡುಬಂದವು. ಈ ತೊಂದರೆದಾಯಕ ಸ್ಪಂದನಗಳಿಂದ ರಕ್ಷಣೆಯಾಗಲು ಪ್ರತಿಯೊಬ್ಬರೂ ಪ್ರತಿದಿನ ತಮ್ಮ ಮೇಲಿನ ಆವರಣವನ್ನು ಮೇಲಿಂದ ಮೇಲೆ ತೆಗೆಯುವುದು ಆವಶ್ಯಕವಾಗಿರುತ್ತದೆ. ಆವರಣವನ್ನು ತೆಗೆಯಲು ವಿವಿಧ ಪದ್ಧತಿಗಳ ಉಪಯೋಗವನ್ನು ಮಾಡಬಹುದು, ಉದಾ. ವಿಭೂತಿ ಹಚ್ಚುವುದು, ಗೋಮೂತ್ರವನ್ನು ಸಿಂಪಡಿಸುವುದು, ಸ್ತೋತ್ರಗಳನ್ನು ಹೇಳುವುದು ಅಥವಾ ಕೇಳುವುದು, ನಾಮಜಪವನ್ನು ಮಾಡುವುದು ಇತ್ಯಾದಿ.
೨. ನಿಷ್ಕರ್ಷ
ಸ್ತ್ರೀಯರು ಸೀರೆಯ ಸೆರಗನ್ನು ಸೊಂಟಕ್ಕೆ ಸಿಕ್ಕಿಸಿಕೊಳ್ಳುವುದು, ಆಧ್ಯಾತ್ಮಿಕ ದೃಷ್ಟಿಯಿಂದ ಲಾಭದಾಯಕವಾಗಿದೆ, ಎಂಬುದು ಈ ಪ್ರಯೋಗದಿಂದ ಗಮನಕ್ಕೆ ಬಂದಿತು.
ಸ್ತ್ರೀಯರು ಕನಿಷ್ಠ ಮನೆಯಲ್ಲಿರುವಾಗಲಾದರೂ ಸೀರೆಯನ್ನು ಉಡಬೇಕು, ಹಾಗೆಯೇ ಮನೆಯಲ್ಲಿನ ವಿವಿಧ ಕೆಲಸಗಳನ್ನು ಮಾಡುವಾಗ ಸೀರೆಯ ಸೆರಗನ್ನು ಹಾಗೆಯೇ ಬಿಡದೇ, ಅದನ್ನು ಸೊಂಟಕ್ಕೆ ಸಿಕ್ಕಿಸಿಕೊಳ್ಳಬೇಕು. ಇದರಿಂದ ಅವರಿಗೆ ಕೆಲಸಗಳನ್ನು ಮಾಡಲು ಆವಶ್ಯಕವಾಗಿರುವ ಊರ್ಜೆ ಸಿಗುವುದು ಮತ್ತು ತೊಂದರೆದಾಯಕ ಸ್ಪಂದನಗಳಿಂದ ಅವರ ರಕ್ಷಣೆಯಾಗುವುದು.’
– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧೧.೧೨.೨೦೨೩)
ವಿ-ಅಂಚೆ ವಿಳಾಸ : [email protected]
* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ. ಆಧ್ಯಾತ್ಮಿಕ ತೊಂದರೆ : ಇದರರ್ಥ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದು ಎಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ ೪೯ ರಷ್ಟು ಇರುವುದು ಎಂದರೆ ಮಧ್ಯಮ ತೊಂದರೆ, ಶೇ. ೩೦ ಕ್ಕಿಂತ ಕಡಿಮೆಯಿರುವುದು ಅಂದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದಾಗಿದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಕಂಡು ಹಿಡಿಯಬಲ್ಲರು. |