ಇಸ್ರೇಲ್ ನ ಕಂಪನಿಯ ಜೊತೆಗೆ ಒಪ್ಪಂದದ ಸಾಧ್ಯತೆ
ಮುಂಬಯಿ – ಮುಂಬಯಿಯಲ್ಲಿ ಸಮುದ್ರದ ಅಲೆಗಳಿಂದ ವಿದ್ಯುತ್ ನಿರ್ಮಾಣ ಮಾಡಲಾಗುವುದು. ಕೇಂದ್ರ ಸರಕಾರದ ವ್ಯಾಪ್ತಿಯಲ್ಲಿರುವ ‘ಭಾರತ್ ಪೆಟ್ರೋಲಿಯಂ ಕಂಪನಿ ಲಿಮಿಟೆಡ್’ (ಬಿ.ಪಿ.ಸಿ.ಎಲ್.) ಕಂಪನಿ ಈ ಯೋಜನೆ ಆರಂಭಿಸಲಿದೆ. ಇದಕ್ಕಾಗಿ ಇಸ್ರೇಲ್ ಕಂಪನಿಯ ಸಹಾಯ ಪಡೆಯಲಾಗುವುದು. ಸಮುದ್ರದ ಅಲೆಗಳಿಂದ ವಿದ್ಯುತ್ ನಿರ್ಮಾಣ ಇದು ದೇಶದಲ್ಲಿನ ಪ್ರಾಯೋಗಿಕವಾಗಿ ಆರಂಭಿಸಿರುವ ಮೊದಲ ಯೋಜನೆ ಆಗಿರಲಿದೆ.
೧. ದೆಹಲಿಯಲ್ಲಿ ‘ಇಂಡಿಯಾ ಎನರ್ಜಿ ವೀಕ್’ ಕಾರ್ಯಕ್ರಮ ನಡೆಯಿತು. ಅದರಲ್ಲಿ ದೇಶದಲ್ಲಿನ ಹೆಚ್ಚುತ್ತಿರುವ ಇಂಧನ ಮತ್ತು ವಿದ್ಯುತ್ತಿನ ಅವಶ್ಯಕತೆ ಪೂರ್ಣಗೊಳಿಸುವುದಕ್ಕಾಗಿ ಒತ್ತು ನೀಡಲಾಗಿದೆ. ಪರಿಸರಕ್ಕೆ ಅನುಗುಣ ಮತ್ತು ಸ್ವಚ್ಛ ವಿದ್ಯುತ್ ನಿರ್ಮಾಣದ ಬಗ್ಗೆ ಗಮನ ಕೇಂದ್ರೀಕರಿಸಲಾಗಿದೆ. ಇದರ ಅಡಿಯಲ್ಲಿ ‘ಬಿ.ಪಿ.ಸಿ.ಎಲ್.’ ಮುಂಬಯಿ ಮಹಾಸಾಗರದಂತಹ ಸಮುದ್ರದಡದಲ್ಲಿ ಅಕ್ಷಯ ಉರ್ಜಾ ಸ್ರೋತಗಳ ಮೂಲಕ ವಿದ್ಯುತ್ ನಿರ್ಮಾಣದ ಆಯೋಜನೆ ಮಾಡಲಾಗಿದೆ.
೨. ‘ಬಿ.ಪಿ.ಸಿ.ಎಲ್.’ ಮತ್ತು ಇಸ್ರೇಲಿನ ‘ಈಕೋ ವೇವ್ ಪವರ್’ ಕಂಪನಿ ಇವರಲ್ಲಿ ಇದರ ಸಂದರ್ಭದಲ್ಲಿ ಒಪ್ಪಂದ ಆಗುವುದು. ಮುಂಬಯಿ ಸಮುದ್ರ ದಡದಲ್ಲಿ ೧೦೦ ಕಿಲೋ ವ್ಯಾಟ್ ವಿದ್ಯುತ್ ನಿರ್ಮಿತಿಯ ಯೋಜನೆ ಆರಂಭಿಸಲಾಗುವುದು. ಇಸ್ರೇಲ್ ನಲ್ಲಿ ಸಂಬಂಧಿತ ಕಂಪನಿಯು ಈ ಯೋಜನೆ ಯಶಸ್ವಿಗೊಳಿಸಿದೆ. ಈ ಸಂದರ್ಭದಲ್ಲಿನ ಒಪ್ಪಂದದ ಮೇಲೆ ಈ ವಾರದಲ್ಲಿ ಸಹಿ ಆಗುವ ಸಾಧ್ಯತೆ ಇದೆ.