ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು
ಇದು ಶಾಲೆಗಳಿಗೆ ಲಜ್ಜಾಸ್ಪದ !
‘ವಿದ್ಯಾರ್ಥಿಗಳು ಖಾಸಗಿ ಶಿಕ್ಷಣವರ್ಗಗಳಿಗೆ (ಟ್ಯೂಶನ್‌ಗೆ) ಹೋಗಬೇಕಾಗುವುದು ಶಾಲೆಗಳಿಗೆ ಲಜ್ಜಾಸ್ಪದವಾಗಿದೆ ! ಗುರುಕುಲ ಕಾಲದಲ್ಲಿ ಖಾಸಗಿ ಶಿಕ್ಷಣವರ್ಗಗಳಿರಲಿಲ್ಲ.’
ಜ್ಞಾನ ಮತ್ತು ಅಧ್ಯಾತ್ಮದಲ್ಲಿನ ವ್ಯತ್ಯಾಸ !
‘ವಿಜ್ಞಾನದಲ್ಲಿ ಪ್ರಯೋಗಗಳನ್ನು ಮಾಡು ವುದು, ಅಂಕಿಅಂಶಗಳನ್ನು ಸಂಗ್ರಹಿಸಿ ಅದರ ವಿಶ್ಲೇಷಣೆ ಮಾಡುವುದು ಇತ್ಯಾದಿಗಳ ಮಾಧ್ಯಮದಿಂದ ನಿಷ್ಕರ್ಷಕ್ಕೆ ಬರುತ್ತಾರೆ. ತದ್ವಿರುದ್ಧ ಅಧ್ಯಾತ್ಮದಲ್ಲಿ ನಿಷ್ಕರ್ಷವು ತಕ್ಷಣವೇ ತಿಳಿಯುತ್ತದೆ !’
ಹಿಂದೂ ರಾಷ್ಟ್ರದಲ್ಲಿ ಆಂಗ್ಲ ಭಾಷೆ ಇರುವುದಿಲ್ಲ !
‘ಹಿಂದೂಗಳೇ, ಹಿಂದೂ ರಾಷ್ಟ್ರದಲ್ಲಿ ಗುಲಾಮಗಿರಿಯ ದ್ಯೋತಕವಾದ ರಜ-ತಮ ಪ್ರಧಾನವಾದ ಆಂಗ್ಲ ಭಾಷೆ ಭಾರತದಲ್ಲಿ ಇರುವುದಿಲ್ಲ. ರಾಜ್ಯಗಳ ಭಾಷೆಯೇ ಆಡಳಿತಾತ್ಮಕ ಭಾಷೆಯಾಗಿರಲಿದೆ. ಆದ್ದರಿಂದ ಒಂದು ವೇಳೆ ಮುಂದೆ ತಮ್ಮ ಮಕ್ಕಳಿಗೆ ನೌಕರಿ ಸಿಗಬೇಕು ಎಂದು ತಮಗೆ ಅನಿಸುತ್ತಿದ್ದರೆ, ಅವರಿಗೆ ಈಗಿನಿಂದಲೇ ಭಾರತೀಯ ರಾಜ್ಯಭಾಷೆಗಳ ಶಿಕ್ಷಣ ನೀಡಿರಿ !’
ಅಧ್ಯಾತ್ಮದ ಅದ್ವಿತೀಯತೆ !
‘ಯಾವುದೇ ಸಂಗತಿಗೆ ಸಂಬಂಧಪಟ್ಟಂತೆ ಮೂಲ ಕಾರಣವನ್ನು ಹುಡುಕದೆ, ಆಧುನಿಕ ವೈದ್ಯರು, ನ್ಯಾಯಾಧೀಶರು, ಸರಕಾರ ಮುಂತಾದ ವರೆಲ್ಲರೂ ಅದಕ್ಕೆ ಮೇಲುಮೇಲಿನ ಪರಿಹಾರಗಳನ್ನು ನೀಡುತ್ತಾರೆ. ತದ್ವಿರುದ್ಧ ಅಧ್ಯಾತ್ಮವು ಮಾತ್ರ ವ್ಯಷ್ಟಿ ಮತ್ತು ಸಮಷ್ಟಿ ಪ್ರಾರಬ್ಧ, ಕೊಡು-ಕೊಳ್ಳುವ ಲೆಕ್ಕ, ಕಾಲ ಮುಂತಾದ ಮೂಲಭೂತ ಕಾರಣಗಳನ್ನು ಗಮನದಲ್ಲಿಟ್ಟುಕೊಂಡು ಪರಿಹಾರ ನೀಡಬಲ್ಲದು.’
– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ