‘ಯಾವ ಉದ್ಯಮಗಳಿಗೆ ಇಸ್ಲಾಮಿ ದೇಶಗಳಿಗೆ ತಮ್ಮ ಉತ್ಪನ್ನಗಳನ್ನು ರಫ್ತು ಮಾಡಬೇಕಾಗಿದೆಯೋ, ಅವರಿಗೆ ‘ಹಲಾಲ್ ಪ್ರಮಾಣಪತ್ರ’ವನ್ನು ಪಡೆಯುವುದು ಕಡ್ಡಾಯ ಮಾಡುವುದು ಮತ್ತು ಅದಕ್ಕಾಗಿ ಸ್ಥಳೀಯ ಇಸ್ಲಾಮಿ ಸಂಸ್ಥೆಗಳು ಅವರಿಂದ ದೊಡ್ಡ ಶುಲ್ಕವನ್ನು ಪಡೆಯುವುದು’ ಇದು ಒಂದು ರೀತಿಯ ‘ಜಿಝಿಯಾ ತೆರಿಗೆ’ಯೇ ಆಗಿದೆ’ ಎಂಬುದನ್ನು ಗಮನಕ್ಕೆ ತೆಗೆದುಕೊಳ್ಳಬೇಕು !
‘FSSAI’ ಯಿಂದ ಎಲ್ಲ ತಪಾಸಣೆ ಮಾಡಿ ಯಾವುದೇ ಪದಾರ್ಥವು ಸಸ್ಯಾಹಾರಿ ಎಂದು ಪ್ರಮಾಣಪತ್ರ ನೀಡಲಾಗುತ್ತದೆ. ಆ ಸರಕಾರಿ ಪ್ರಮಾಣಪತ್ರದ ಮೇಲೆ ವಿಶ್ವಾಸವನ್ನಿಡದೇ ಮತ್ತೊಮ್ಮೆ ಆ ಪದಾರ್ಥದಲ್ಲಿ ‘ಹರಾಮ್’ ಅಥವಾ ಹಂದಿಯ ಮಾಂಸವಿಲ್ಲ’ ಎಂಬುದನ್ನು ಹೇಳುವ ‘ಹಲಾಲ್ ಪ್ರಮಾಣಪತ್ರ’ ಕೊಡುವ ಅನುಮತಿಯನ್ನು ಒಂದು ತಟಸ್ಥ ಖಾಸಗಿ ಇಸ್ಲಾಮಿ ಸಂಸ್ಥೆಗೆ ಏಕೆ ಕೊಡಲಾಗಿದೆ ? ಭಾರತ ಸರಕಾರದ ಅತ್ಯಾಧುನಿಕ ‘ಜಾತ್ಯತೀತ ಪ್ರಯೋಗಶಾಲೆ’ಗಿಂತ ಇಸ್ಲಾಮಿ ಸಂಸ್ಥೆಯ ‘ಹಲಾಲ್ ಪ್ರಮಾಣ ಪತ್ರ’ ಸರ್ವೋಚ್ಚವೆಂದು ಪರಿಗಣಿಸಿದಂತಾಗಿದೆ. ಭಾರತದಲ್ಲಿನ ವಿಜ್ಞಾನಾಧಾರಿತ ವ್ಯವಸ್ಥೆಗೆ ಇದು ಅವಮಾನವಲ್ಲವೇ ?