ಅಮೆರಿಕದ 250ನೇ ಸಂಸ್ಥಾಪನಾ ದಿನದ ಆಚರಣೆಯ ಸಂದರ್ಭದಲ್ಲಿ ನ್ಯೂಯಾರ್ಕ್ ಮೇಯರ್ ಮಮದಾನಿ ಅವರ ಪತ್ನಿ ಸ್ಪೇನ್‌ನ ಇಸ್ಲಾಮಿಕ್ ಕಾರ್ಯಕ್ರಮಕ್ಕೆ ತೆರಳಿದರು!

ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ

ನ್ಯೂಯಾರ್ಕ್ (ಅಮೆರಿಕ) – ನ್ಯೂಯಾರ್ಕ್ ನಗರದ ಮೇಯರ್ ಜೊಹ್ರಾನ್ ಮಮದಾನಿ ಅವರು ಒಂದು ಕಡೆ ಅಮೆರಿಕದ 250ನೇ ಸಂಸ್ಥಾಪನಾ ದಿನದ ಅಧಿಕೃತ ಕಾರ್ಯಕ್ರಮಗಳಲ್ಲಿ ಬಿಡುವಿಲ್ಲದಂತೆ ಇದ್ದರೆ, ಇನ್ನೊಂದೆಡೆ ಅವರ ಪತ್ನಿ ರಮಾ ದುವಾಜಿ ಅವರು ಸ್ಪೇನ್‌ನಲ್ಲಿ ‘ದಿ ವುಮೆನ್ಸ್ ಸ್ಯಾಂಕ್ಚುರಿ’ ಆಯೋಜಿಸಿದ್ದ ‘ಪ್ಲಾಂಟ್ಸ್ ಆಫ್ ದಿ ಕುರಾನ್’ ಎಂಬ ‘ರಿಟ್ರೀಟ್’ (ಆಧ್ಯಾತ್ಮಿಕ/ಸಾಂಸ್ಕೃತಿಕ ಶಿಬಿರ) ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಅಷ್ಟೇ ಅಲ್ಲದೆ, ಅವರು ಜುಲೈ 9 ರಿಂದ 14 ರವರೆಗೆ ಫ್ರಾನ್ಸ್‌ನ ಕೋರ್ಸಿಕಾದಲ್ಲಿ ನಡೆಯಲಿರುವ ‘ಮೇರಿ ಇನ್ ದಿ ಕುರಾನ್’ ಕಾರ್ಯಕ್ರಮದಲ್ಲೂ ಪಾಲ್ಗೊಳ್ಳಲಿದ್ದಾರೆ. ಈ ಎಲ್ಲಾ ಬೆಳವಣಿಗೆಗಳಿಂದಾಗಿ, ‘ಅವರು ಈ ಪ್ರವಾಸಕ್ಕಾಗಿ ನಿಖರವಾಗಿ ಇದೇ ಸಮಯವನ್ನು ಏಕೆ ಆರಿಸಿಕೊಂಡರು?’ ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿದೆ.

ಇಲ್ಲಿನ ನಗರ ಪರಿಷತ್ತಿನ ಮಹಿಳಾ ಸದಸ್ಯೆ ಜೋನ್ ಅರಿಯೊಲಾ ಅವರು, ‘ಅಮೆರಿಕದ ಉತ್ಸವವನ್ನು ಬಿಟ್ಟು ರಜೆ ಮೇಲೆ ಹೋಗುವ ರಮಾ ದುವಾಜಿ ಅವರ ನಿರ್ಧಾರದಿಂದ ಅವರ ಅಮೆರಿಕ ವಿರೋಧಿ ಸಿದ್ದಾಂತವು ಬಹಿರಂಗಗೊಳ್ಳುತ್ತದೆ’ ಎಂದು ಹೇಳಿದ್ದಾರೆ. ನಗರ ಪರಿಷತ್ ಸದಸ್ಯ ಫ್ರಾಂಕ್ ಮೊರಾನ್ ಕೂಡ ಇದು ಅತ್ಯಂತ ನಿರಾಶಾದಾಯಕ ಘಟನೆ ಎಂದು ಹೇಳಿದ್ದಾರೆ. ಮೇಯರ್ ಕಚೇರಿಯು ಈ ಟೀಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದೆ.

ಸಂಪಾದಕೀಯ ನಿಲುವು

ಮೇಯರ್ ಜೊಹ್ರಾನ್ ಮಮದಾನಿ ಅವರೇ ಸ್ವತಃ ಹೋಗಿಲ್ಲ ಎಂಬುದೇ ನ್ಯೂಯಾರ್ಕ್ ಜನತೆಗೆ ಆಶ್ಚರ್ಯ ತಂದಿರಬಹುದು! ಯಾವುದೇ ಮುಸ್ಲಿಮನಿಗೆ ದೇಶಕ್ಕಿಂತ ಧರ್ಮವೇ ಹೆಚ್ಚು ಮುಖ್ಯ ಎಂದು ಅನಿಸುವುದು ಕೇವಲ ಭಾರತದಲ್ಲಷ್ಟೇ ಅಲ್ಲ, ವಿದೇಶಗಳಲ್ಲೂ ಕಂಡುಬರುತ್ತದೆ!