ಜಗದ್ಗುರು ಸಂತ ತುಕಾರಾಂ ಮಹಾರಾಜರ ಹೆಸರಿನಲ್ಲಿ 'ಇಸ್ಲಾಮಿ' ಪ್ರಚಾರ ಮಾಡುತ್ತಾ ವಾರಕರಿಗಳ ದಿಕ್ಕುತಪ್ಪಿಸುವ ಪ್ರಯತ್ನ!

ಪುಣೆ – ಜಗದ್ಗುರು ಸಂತ ತುಕಾರಾಂ ಮಹಾರಾಜರ ಪಾಲಖಿ ಮೆರವಣಿಗೆ ಪುಣ್ಯನಗರಿಗೆ ಆಗಮಿಸುತ್ತಿರುವಾಗಲೇ ನಗರದಲ್ಲಿ ‘ಮಹಾರಾಷ್ಟ್ರ ಮುಸ್ಲಿಂ ಕಾನ್ಫರೆನ್ಸ್’ ಸಂಘಟನೆಯು ವಿವಾದಾತ್ಮಕ ಫಲಕಗಳನ್ನು ಅಳವಡಿಸಿದೆ. ಸ್ವಾರಗೇಟ್‌ನ ಸೆವೆನ್ ಲವ್ಸ್ ಚೌಕ್‌ನಲ್ಲಿ ಅಳವಡಿಸಿರುವ ಫಲಕದಲ್ಲಿ ಸಂತ ತುಕಾರಾಂ ಮಹಾರಾಜರ ಚಿತ್ರದೊಂದಿಗೆ ಅವರ ಅಭಂಗದ ಸಾಲುಗಳಾದ ‘ಅಲ್ಲಾ ದೇವೇ ಅಲ್ಲಾ ದಿಲಾವೇ’ ಮತ್ತು ‘ಅಲ್ಲಾ ಏಕ್ ತು, ನಬಿ ಏಕ್ ತು’ ಎಂದು ಬರೆಯಲಾಗಿದೆ. ಕಳೆದ ವರ್ಷವೂ ಇದೇ ರೀತಿಯ ಫಲಕಗಳನ್ನು ಅಳವಡಿಸಿ ವಾರಕರಿ ಸಂಪ್ರದಾಯವನ್ನು ಉದ್ದೇಶಪೂರ್ವಕವಾಗಿ ಇಸ್ಲಾಮೀಕರಣ ಮಾಡುವ ಪ್ರಯತ್ನ ನಡೆಸಲಾಗಿತ್ತು, ಅದರ ಪುನರಾವರ್ತನೆಯನ್ನು ಈ ವರ್ಷವೂ ಮಾಡಲಾಗಿದೆ.
ನಗರದ ವೃತ್ತಗಳಲ್ಲಿ ಅಳವಡಿಸಲಾದ ಈ ಫಲಕದಲ್ಲಿ ಒಂದು ಕಡೆ ಜಗದ್ಗುರು ಸಂತ ತುಕಾರಾಂ ಮಹಾರಾಜರ ಮತ್ತು ಇನ್ನೊಂದು ಕಡೆ ಸಂಘಟನೆಯ ಸಂಸ್ಥಾಪಕ-ಅಧ್ಯಕ್ಷ ಹಾಜಿ ಜುಬೇರ್ ಮೆಮನ್ ಅವರ ದೊಡ್ಡ ಭಾವಚಿತ್ರವನ್ನು ಮುದ್ರಿಸಲಾಗಿದೆ. ಕೆಳಭಾಗದಲ್ಲಿ ಸಂಘಟನೆಯ ವಿವಿಧ ಪದಾಧಿಕಾರಿಗಳ ಭಾವಚಿತ್ರಗಳಿವೆ. (ತುಕಾರಾಂ ಮಹಾರಾಜರು ಹಿಂದೂ ಧರ್ಮದ ಶ್ರೇಷ್ಠತೆಯನ್ನು ಸಾರುವ ಅನೇಕ ಅಭಂಗಗಳು ಲಭ್ಯವಿವೆ. ತುಕಾರಾಂ ಮಹಾರಾಜರು ಮತ್ತು ವಾರಕರಿಗಳ ಬಗ್ಗೆ ಸೌಹಾರ್ದತೆ ತೋರಿಸುವವರು ಈ ಅಭಂಗಗಳನ್ನು ಸಹ ಅಧ್ಯಯನ ಮಾಡಬೇಕು! – ಸಂಪಾದಕರು)
ಈ ಫಲಕದ ಮೇಲೆ ಸಂತರ ಅಭಂಗಗಳ ಸಾಲುಗಳನ್ನು ಸಂದರ್ಭದಿಂದ ಬೇರ್ಪಡಿಸಿ, ಅದನ್ನು ತಮ್ಮ ಸ್ವಂತ ಧಾರ್ಮಿಕ ಅಜೆಂಡಾಕ್ಕಾಗಿ (ಕಾರ್ಯಸೂಚಿಗಾಗಿ) ಬಳಸಲಾಗಿದೆ ಎಂಬುದು ಸ್ಪಷ್ಟವಾಗಿ ಕಂಡುಬರುತ್ತದೆ.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ