ಮುಸ್ಲಿಂ ಯುವತಿಯಿಂದ ಹಿಂದೂ ಯುವಕನ ಬಲವಂತದ ಮತಾಂತರ!

  • ಶಾಮಲಿ (ಉತ್ತರ ಪ್ರದೇಶ)ಯಲ್ಲಿ ಮತ್ತೊಂದು ಮತಾಂತರ ಪ್ರಕರಣ ಬೆಳಕಿಗೆ.

  • 22 ಎಕರೆ ಭೂಮಿಯನ್ನು ತನ್ನ ಹೆಸರಿಗೆ ವರ್ಗಾಯಿಸಲು ಮುಸ್ಲಿಂ ಯುವತಿಯ ಒತ್ತಡ!

ಶಾಮಲಿ (ಉತ್ತರ ಪ್ರದೇಶ) – ಆಯುಷ್ ಮಲಿಕ್ ಎಂಬಾತನನ್ನು ಮುಸ್ಲಿಂ ಯುವತಿಯೊಬ್ಬಳು ಮತಾಂತರಗೊಳಿಸಿದ ಪ್ರಕರಣ ಇನ್ನು ಹಸಿರಾಗಿರುವಾಗಲೇ, ಇಲ್ಲಿ ಮತ್ತೊಂದು ಮತಾಂತರದ ಪ್ರಕರಣ ಮುನ್ನೆಲೆಗೆ ಬಂದಿದೆ. ಭಾವುಖೇಡಾ ಗ್ರಾಮದ ನಿವಾಸಿಯಾದ ಹಿಂದೂ ವ್ಯಕ್ತಿಯೊಬ್ಬರು, ಮುಸ್ಲಿಂ ಯುವತಿಯೊಬ್ಬಳು ತನ್ನ ಮಗನನ್ನು ಬಲವಂತವಾಗಿ ಮತಾಂತರಗೊಳಿಸಿದ್ದಾಳೆ ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ, ಆ ಮುಸ್ಲಿಂ ಯುವತಿಯು ಮೊಬೈಲ್ ಫೋನ್ ಮೂಲಕ 22 ಎಕರೆ ಜಮೀನನ್ನು ತನ್ನ ಹೆಸರಿಗೆ ಬರೆದುಕೊಡುವಂತೆ ಒತ್ತಡ ಹೇರುತ್ತಿದ್ದಾಳೆ ಮತ್ತು ಹಾಗೆ ಮಾಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾಳೆ ಎಂದು ಈ ಹಿಂದೂ ವ್ಯಕ್ತಿ ಆರೋಪಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

1. ಸಂತ್ರಸ್ತ ಹಿಂದೂ ಯುವಕನ ತಂದೆಯು, ಸುಮಾರು ಒಂದೂವರೆ ವರ್ಷದ ಹಿಂದೆ ತಮ್ಮ ಏಕೈಕ ಮಗನನ್ನು ಸಹರಾನ್‌ಪುರ ನಿವಾಸಿಯಾದ ಮುಸ್ಲಿಂ ಯುವತಿಯೊಬ್ಬಳು ತನ್ನೊಂದಿಗೆ ಕರೆದೊಯ್ದಿದ್ದಳು. ಆಕೆ ಆತನನ್ನು ಮತಾಂತರಗೊಳಿಸಿದ್ದು, ಪ್ರಸ್ತುತ ಆತ ಇಸ್ಲಾಂ ಧರ್ಮವನ್ನು ಪಾಲಿಸುತ್ತಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

2. ಸಂತ್ರಸ್ತ ಯುವಕನ ಕುಟುಂಬದವರು ಇತ್ತೀಚೆಗೆ ಬಘರಾದ ಸಾಧನಾ ಪೀಠ ಆಶ್ರಮದ ಪೀಠಾಧೀಶರಾದ ಸ್ವಾಮಿ ಯಶವೀರ್ ಮಹಾರಾಜ್ ಅವರನ್ನು ಭೇಟಿ ಮಾಡಿ ತಮಗೆ ನ್ಯಾಯ ಕೊಡಿಸುವಂತೆ ವಿನಂತಿಸಿದ್ದಾರೆ. ಯಶವೀರ್ ಮಹಾರಾಜ್ ಅವರು ಈ ವಿಷಯದ ಕುರಿತು ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ಪೊಲೀಸ್ ಆಡಳಿತವು ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

3. ಪೊಲೀಸ್ ವರಿಷ್ಠಾಧಿಕಾರಿ (SP) ಎನ್.ಪಿ. ಸಿಂಗ್ ಅವರು, ಪ್ರಕರಣದ ಗಾಂಭೀರ್ಯವನ್ನು ಪರಿಗಣಿಸಿ ಜಿಂಜಾನಾ ಪೊಲೀಸ್ ಠಾಣೆಯ ಮುಖ್ಯಸ್ಥರಿಗೆ ತನಿಖೆ ನಡೆಸುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಸಂಪಾದಕೀಯ ನಿಲುವು

ಮುಸ್ಲಿಂ ಯುವಕರಷ್ಟೇ ಅಲ್ಲದೆ ಮುಸ್ಲಿಂ ಯುವತಿಯರೂ ಕೂಡ ‘ಲವ್ ಜಿಹಾದ್’ ಮತ್ತು ‘ಮತಾಂತರ’ದಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬುದು ಈ ಘಟನೆಯಿಂದ ಸ್ಪಷ್ಟವಾಗುತ್ತದೆ!