ಇಸ್ಲಾಮಿ ಧರ್ಮಗ್ರಂಥಗಳಲ್ಲಿ ಮಾಂಸದ ಹೊರತು ಇತರ ಕ್ಷೇತ್ರಗಳಿಗೆ ‘ಹಲಾಲ್’ ಪರಿಕಲ್ಪನೆಯನ್ನು ಸ್ಪಷ್ಟವಾಗಿ ಹೇಳಿಲ್ಲ. ಆದ್ದರಿಂದ ಅದನ್ನು ಸ್ಥಳೀಯ ಪರಿಸ್ಥಿತಿಗನುಸಾರ ನಿರ್ಧರಿಸಲಾಗುತ್ತಿದೆ ಮತ್ತು ಅದರ ಮೂಲಕ ‘ಹಲಾಲ್’ ಪರಿಕಲ್ಪನೆಯನ್ನು ವಿಸ್ತರಿಸಲಾಗುತ್ತಿದೆ.
೧. ‘ಹಲಾಲ್ ಆರ್ಥಿಕವ್ಯವಸ್ಥೆ’ಯನ್ನು ವ್ಯಾಪಕಗೊಳಿಸಲು ‘ಹರಾಮ್’ ವಿಷಯಗಳನ್ನು ‘ಹಲಾಲ್’ ಎಂದು ನಿರ್ಧರಿಸುವುದು : ‘ಹಲಾಲ್’ ಪರಿಕಲ್ಪನೆಗೆ ಆರ್ಥಿಕವ್ಯವಸ್ಥೆಯನ್ನು ಜೋಡಿಸಿದ್ದರಿಂದ ಕೆಲವು ವರ್ಷಗಳ ಹಿಂದೆ ‘ಹರಾಮ್’ ಎಂದು ಪರಿಗಣಿಸಲ್ಪಟ್ಟ ವಿಷಯಗಳನ್ನೂ ಇಂದು ‘ಹಲಾಲ್’ ಎಂದು ನಿರ್ಧರಿಸಲಾಗುತ್ತಿದೆ. ‘ಹರಾಮ್’ ವಸ್ತುಗಳಿಗೆ ‘ಹಲಾಲ್’ ಎಂದು ನಿರ್ಧರಿಸುವ ಉದಾಹರಣೆಯೆಂದರೆ ಕೆಲವು ವರ್ಷಗಳ ಹಿಂದೆ ‘ಅಜಾನ್’ನ ಕರೆಯು ಈಶ್ವರನ ಪವಿತ್ರ ಧ್ವನಿಯಾಗಿದೆ ಎಂದು ಪರಿಗಣಿಸ ಲಾಗುತ್ತಿತ್ತು, ಅದಕ್ಕಾಗಿ ಮನುಷ್ಯನಿರ್ಮಿತ ಧ್ವನಿವರ್ಧಕ ವ್ಯವಸ್ಥೆಯನ್ನು ಬಳಸುವುದು ‘ಹರಾಮ್’ ಎಂದು ಪರಿಗಣಿಸಲಾಗುತ್ತಿತ್ತು. ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಇತರ ಧರ್ಮದವರು ಅದನ್ನು ಬಳಸುವುದನ್ನು ಗಮನಲ್ಲಿಟ್ಟುಕೊಂಡು ಧ್ವನಿವರ್ಧಕ ಯಂತ್ರವನ್ನು ನಂತರದ ಕಾಲದಲ್ಲಿ ‘ಹಲಾಲ್’ ಎಂದು ನಿರ್ಧರಿಸಲಾಯಿತು. ಇಂದು ಮಸೀದಿಗಳ ಮೇಲಿನ ಇದೇ ಧ್ವನಿವರ್ಧಕ ಯಂತ್ರಗಳ ದೊಡ್ಡ ಧ್ವನಿಯಿಂದ ಸಾಮಾಜಿಕ ಶಾಂತಿ ಭಂಗವಾಗುತ್ತಿದೆ. ಅದೇ ರೀತಿ ಕೆಲವು ವರ್ಷಗಳ ಹಿಂದೆ ಸೌಂದರ್ಯವರ್ಧಕಗಳನ್ನು ಬಳಸಿ ‘ಮೇಕಪ್’ ಮಾಡಿಕೊಳ್ಳುವುದನ್ನು ‘ಹರಾಮ್’ ಎಂದು ಪರಿಗಣಿಸಲಾಗುತ್ತಿತ್ತು. ಆದರೆ ಇಂದು ಸೌಂದರ್ಯವರ್ಧಕಗಳಿಗೇ ‘ಹಲಾಲ್ ಪ್ರಮಾಣಪತ್ರ’ವನ್ನು ನೀಡಲಾಗುತ್ತಿದೆ. ‘ಹಲಾಲ್ ಆರ್ಥಿಕವ್ಯವಸ್ಥೆ’ಯನ್ನು ನಿರ್ಮಿಸಲು ಈ ರೀತಿ ನಿಯಮಗಳನ್ನು ಸಡಿಲಿಸಿ ಬದಲಾವಣೆಗಳನ್ನು ಮಾಡಿ ‘ಹಲಾಲ್’ ಪರಿಕಲ್ಪನೆಯನ್ನು ವ್ಯಾಪಕಗೊಳಿಸಲಾಗುತ್ತಿದೆ.
೨. ಮಾಂಸಾಹಾರಿ ಮತ್ತು ಸಸ್ಯಾಹಾರಿ ಖಾದ್ಯಪದಾರ್ಥಗಳು : ಈಗ ಮಾಂಸಾಹಾರಿ ಪದಾರ್ಥಗಳಷ್ಟೇ ಅಲ್ಲ, ಸುಪ್ರಸಿದ್ಧ ‘ಹಲ್ದೀರಾಮ್’ನ ಶುದ್ಧ ಸಸ್ಯಾಹಾರಿ ನಮಕೀನಗಳೂ (ಖಾದ್ಯಗಳೂ) ‘ಹಲಾಲ್’ ಪ್ರಮಾಣೀಕೃತವಾಗಿವೆ. ಧಾನ್ಯ, ಅಡುಗೆ ಎಣ್ಣೆ, ಗೋಧಿಹಿಟ್ಟು, ಒಣಹಣ್ಣುಗಳು, ಮಿಠಾಯಿಗಳು, ಚಾಕಲೇಟ್, ತಂಪುಪಾನೀಯ ಇತ್ಯಾದಿಗಳನ್ನೂ ‘ಹಲಾಲ್’ ಪ್ರಮಾಣೀಕೃತಗೊಳಿಸಲಾಗಿದೆ.
೩. ಪಾಶ್ಚಾತ್ಯ ಅಂತಾರಾಷ್ಟ್ರೀಯ ಖಾದ್ಯಪದಾರ್ಥಗಳು : ಈಗ ‘ಮ್ಯಾಕಡೊನಾಲ್ಡ್’ನ ಬರ್ಗರ್, ‘ಡಾಮಿನೋಸ್’ನ ಪಿಜ್ಜಾ, ಹಾಗೆಯೇ ಬಹುತೇಕ ಎಲ್ಲ ವಿಮಾನಗಳಲ್ಲಿ ಸಿಗುವ ಭೋಜನ, ಇವೆಲ್ಲವೂ ‘ಹಲಾಲ್’ ಆಗಿವೆ.
೪. ಔಷಧಗಳು : ಯುನಾನಿ, ಆಯುರ್ವೇದೀಯ ಇತ್ಯಾದಿ ಔಷಧಗಳು, ಹಾಗೆಯೇ ಜೇನುತುಪ್ಪ ಇವುಗಳಿಗೂ ‘ಹಲಾಲ್’ನ ಪರಿಕಲ್ಪನೆಯನ್ನು ಅನ್ವಯಿಸಲಾಗಿದೆ. ಔಷಧಗಳಲ್ಲಿನ ‘ಹಲಾಲ್’ನ ವಿಸ್ತರಣೆಯ ಒಂದು ಉದಾಹರಣೆಯೆಂದರೆ ತುಳಸಿ ಅರ್ಕ, ಹಾಗೆಯೇ ತುಳಸಿ-ಶುಂಠಿ ಚಹಾ ಈ ಉತ್ಪನ್ನಗಳೂ ‘ಹಲಾಲ್’ ದೃಢೀಕೃತವಾಗಿವೆ.
೫. ಸೌಂದರ್ಯವರ್ಧಕಗಳು : ಸಾಬೂನು, ಕಾಡಿಗೆ, ‘ಶ್ಯಾಂಪು’, ‘ಟೂತ್‌ಪೇಸ್ಟ್’, ‘ನೈಲ್‌ಪಾಲಿಶ್’, ‘ಲಿಪ್‌ಸ್ಟಿಕ್’ ಇತ್ಯಾದಿ ಸೌಂದರ್ಯ ವರ್ಧಕಗಳನ್ನೂ ಈಗ ‘ಹಲಾಲ್’ ದೃಢೀಕೃತಗೊಳಿಸಲಾಗಿದೆ.
೬. ‘ಹಲಾಲ್ ಫ್ಯಾಶನ್’ : ಇದರ ಅಂತರ್ಗತ ಮುಸಲ್ಮಾನ ಸ್ತ್ರೀಯರಿಗೆ ‘ಹಿಜಾಬ್’, ‘ಬುರ್ಖಾ’, ಹಾಗೆಯೇ ಇತರ ಇಸ್ಲಾಮಿ ಉಡುಪುಗಳನ್ನು ಆಧುನಿಕ ಪದ್ಧತಿಯಲ್ಲಿ ಉಪಲಬ್ಧ ಮಾಡಿ ಕೊಡಲಾಗಿದೆ. ಇಂದು ಜಗತ್ತಿನಾದ್ಯಂತ ‘ಹೌಟೆ ಹಿಜಾಬ್’, ‘ಎಟಲಿಯರ್ ಹಿಜಾಬ್’, ‘ವೇಲಾ ಸ್ಕಾರ್ಫ್ಸ್’ ಮುಂತಾದ ಅನೇಕ ಪ್ರಸಿದ್ಧ ‘ಹಲಾಲ್ ಫ್ಯಾಶನ್’ ಕಂಪನಿಗಳಿವೆ.
೭. ‘ಹಲಾಲ್’ ದೃಢೀಕೃತ ಆಸ್ಪತ್ರೆಗಳು : ಚೆನ್ನೈ, ತಮಿಳುನಾಡಿ ನಲ್ಲಿನ ‘ಗ್ಲೋಬಲ್ ಹೆಲ್ತ್ ಸಿಟಿ’ ಎಂಬ ಆಸ್ಪತ್ರೆಯನ್ನು ‘ಹಲಾಲ್ ದೃಢೀಕೃತ’ ಆಸ್ಪತ್ರೆ ಎಂದು ಘೋಷಿಸಲಾಗಿದೆ. ಅವರ ಹೇಳಿಕೆಯೇನೆಂದರೆ, ನಾವು ಇಸ್ಲಾಮಿನಲ್ಲಿ ಹೇಳಿದ ಪ್ರಕಾರ ಸ್ವಚ್ಛತೆ ಮಾಡುತ್ತೇವೆ ಮತ್ತು ‘ಹಲಾಲ್’ ಆಹಾರ ಕೊಡುತ್ತೇವೆ. ಕೊಲ್ಲಿ ದೇಶಗಳ ಶ್ರೀಮಂತ ಮುಸಲ್ಮಾನ ರೋಗಿಗಳನ್ನು ಆಕರ್ಷಿಸುವುದೇ ಇದರ ಮುಖ್ಯ ಕಾರಣವಾಗಿದೆ.
(ಆಧಾರ : ಹಿಂದೂ ಜನಜಾಗೃತಿ ಸಮಿತಿ ಪುರಸ್ಕೃತ ಗ್ರಂಥ ‘ಹಲಾಲ್ ಜಿಹಾದ್’)