‘ಜಿಹಾದ್’ ಎಂಬ ಅರಬಿ ಶಬ್ದದ ಅರ್ಥವನ್ನು ಹೇಗೆಯೇ ಹೇಳಿದರೂ, ಕಾಫೀರರ ವಿರುದ್ಧದ ಧರ್ಮಯುದ್ಧವೇ ಆಗಿದೆ. ಯುದ್ಧವನ್ನು ವಿವಿಧ ರೀತಿಯಲ್ಲಿ ಮತ್ತು ವಿವಿಧ ಸ್ತರಗಳಲ್ಲಿ ಹೋರಾಡಲಾಗುತ್ತದೆ. ‘ಹಲಾಲ್ ಜಿಹಾದ್’ ಇದು ಆರ್ಥಿಕ ಸ್ತರದ ಯುದ್ಧವೇ ಆಗಿದೆ. ‘ಹಲಾಲ್ ಆರ್ಥಿಕ ವ್ಯವಸ್ಥೆ’ಯಿಂದ ನಿರ್ಮಾಣವಾಗುವ ಪ್ರಚಂಡ ಧನಶಕ್ತಿಯಿಂದ ಜಗತ್ತಿನಾದ್ಯಂತ ಯಾವ ರೀತಿಯಲ್ಲಿ ಭಯೋತ್ಪಾದಕರಿಗೆ ಸಹಾಯ ಮಾಡಲಾಗುತ್ತಿದೆಯೋ, ಹಾಗೆಯೇ ಭಾರತದಲ್ಲಿ ಭಯೋತ್ಪಾದಕರಿಗೆ ಖಟ್ಲೆಗಳನ್ನು ಹೋರಾಡಲೂ ಉಪಯೋಗಿಸ ಲಾಗುತ್ತಿದೆ, ಅದೇ ರೀತಿ ಭವಿಷ್ಯದಲ್ಲಿ ದೇಶವಿರೋಧಿ ಶಕ್ತಿಗಳಿಗೆ ಬಲ ನೀಡುವ, ಅವರ ಹಿಂದೆ ರಾಜಕೀಯ ಶಕ್ತಿಯನ್ನು ನಿರ್ಮಿಸುವ ಮತ್ತು ದೇಶದಲ್ಲಿನ ವ್ಯವಸ್ಥೆಗಳಲ್ಲಿ ನುಸುಳಿ ಅವುಗಳನ್ನು ಖರೀದಿ ಸುವ ಷಡ್ಯಂತ್ರವನ್ನೂ ಮಾಡಬಹುದು. ಆದ್ದರಿಂದ ಈ ‘ಆರ್ಥಿಕ ಜಿಹಾದ್’ಗೆ ಪ್ರತಿಕಾರ ಮಾಡುವುದು ಆವಶ್ಯಕವಾಗಿದೆ, ಆಗಲೇ ನಾವು ‘ಇಸ್ಲಾಮಿಕ್ ಬ್ಯಾಂಕ್’ಗೆ ಸಮಾನಾಂತರವಾಗಿ ನಿರ್ಮಿಸಿದ ‘ಹಲಾಲ್ ಆರ್ಥಿಕ ವ್ಯವಸ್ಥೆ’ಯ ಮತ್ತು ಅದರಿಂದ ಭವಿಷ್ಯದಲ್ಲಿ ರಾಷ್ಟ್ರದ ಮೇಲೆ ಬರುವಂತಹ ಸಂಕಟಗಳನ್ನು ತಡೆಗಟ್ಟಬಹುದು.
ಈ ‘ಹಲಾಲ್ ಆರ್ಥಿಕವ್ಯವಸ್ಥೆ’ಯ ವಿರುದ್ಧ ಭಾರತದರಾಷ್ಟ್ರಪ್ರೇಮಿ ವ್ಯಕ್ತಿಗಳು ಮತ್ತು ಸಂಘಟನೆಗಳು ವೈಯಕ್ತಿಕ ಸ್ತರದಲ್ಲಿ ಮತ್ತು ಸಂಘಟಿತರಾಗಿ ಪ್ರಯತ್ನ ಮಾಡುವುದು ಆವಶ್ಯಕವಾಗಿದೆ. ಈ ದೃಷ್ಟಿಯಿಂದ ಕೃತಿ ಮಾಡಲು ಇಚ್ಛಿಸುವವರಿಗೆ ಮುಂದೆ ಕೆಲವು ಪ್ರಯತ್ನಗಳನ್ನು ಉದಾಹರಣೆಗಾಗಿ ನೀಡಲಾಗಿದೆ. ಅದರಿಂದ ಜಗತ್ತಿನಾದ್ಯಂತದ ‘ಹಲಾಲ್’ ಆರ್ಥಿಕವ್ಯವಸ್ಥೆಯನ್ನು ತಡೆಗಟ್ಟುವುದು ಸಾಧ್ಯವಿಲ್ಲದಿದ್ದರೂ, ಭಾರತದ ವಿರುದ್ಧ ನಡೆಯುವ ಷಡ್ಯಂತ್ರಗಳನ್ನು ಮಾತ್ರ ಖಂಡಿತವಾಗಿ ತಡೆಗಟ್ಟಬಹುದು.
ವೈಯಕ್ತಿಕ ಸ್ತರದಲ್ಲಿ ಮಾಡಬೇಕಾದ ಕೃತಿಗಳು
|
೧. ‘ಹಲಾಲ್’ ಮುಕ್ತ ಉತ್ಪನ್ನಗಳ ಪಟ್ಟಿಯನ್ನು ತಯಾರಿಸಿ ಅದನ್ನು ಸ್ಥಳೀಯ ಅಂಗಡಿಯವರಿಗೆ ಕೊಡಿ !
೨. ನಗರಪಾಲಿಕೆಯ ಮೂಲಕ ನಡೆಸುತ್ತಿರುವ ಕಸಾಯಿಖಾನೆಗಳಲ್ಲಿ ಕೇವಲ ‘ಹಲಾಲ್’ ಮಾಂಸ ಸಿಗುತ್ತಿದ್ದರೆ ಅದರ ವಿರುದ್ಧ ದೂರು ನೀಡಿ ! ಹಾಗೆಯೇ ಅಲ್ಲಿ ಕಸಾಯಿ ಸಮಾಜದ ಹಿಂದೂಗಳಿಗೂ ಕೆಲಸ ಸಿಗಲು ಪ್ರಯತ್ನಿಸಿ !
೩. ಸರಕಾರಿ ಸಂಸ್ಥೆಗಳಲ್ಲಿ ಕೇವಲ ‘ಹಲಾಲ್’ ಖಾದ್ಯಪದಾರ್ಥಗಳನ್ನು ಕೊಡುತ್ತಿದ್ದಲ್ಲಿ ಅದರ ವಿರುದ್ಧ ಆಂದೋಲನಗಳನ್ನು ನಡೆಸಿ !
೪. ಭಾರತದಲ್ಲಿನ ಸರಕಾರಿ ‘FSSAI’ ಮತ್ತು ‘FDA’ ಈ ಸಂಸ್ಥೆಗಳನ್ನು ಬಿಟ್ಟು ಇತರ ಖಾಸಗಿ ಮುಸಲ್ಮಾನ ಸಂಸ್ಥೆಗಳಿಗೆ ‘ಹಲಾಲ್ ಪ್ರಮಾಣಪತ್ರ’ ನೀಡಲು ನಿಷೇಧ ಹೇರಲು ಹಾಗೂ ಆ ಅಧಿಕಾರವನ್ನು ಸರಕಾರಿ ಸಂಸ್ಥೆಗೆ ಕೊಡಲು ತಮ್ಮ ಬೇಡಿಕೆಯನ್ನು ಮನವಿಪತ್ರ, ಅಂಚೆ, ವಿ-ಅಂಚೆ, ಫ್ಯಾಕ್ಸ್ ಇತ್ಯಾದಿಗಳ ಮೂಲಕ ನೀಡಿರಿ ! ಇದರ ಬಗ್ಗೆ ಆಂದೋಲನ ನಡೆಸಿ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಸಂಘಟಿತರಾಗಿ ದೂರು ನೀಡಿ !
೫. ‘ಹಲಾಲ್ ಪ್ರಮಾಣಪತ್ರ’ವನ್ನು ಕೊಡುವ ಸಂಸ್ಥೆಗಳು ‘ಹಲಾಲ್ ಪ್ರಮಾಣಪತ್ರ’ದಿಂದ ಸಂಗ್ರಹಿಸಿದ ಹಣವನ್ನು ಹೇಗೆ ಬಳಸುತ್ತವೆ ?’ ಹಾಗೆಯೇ ‘ಅದರಿಂದ ಜಿಹಾದಿ ಭಯೋತ್ಪಾದಕರಿಗೆ ಮತ್ತು ಪ್ರತ್ಯೇಕತಾವಾದಿಗಳಿಗೆ ಸಹಾಯವನ್ನು ಮಾಡುತ್ತಿಲ್ಲವಲ್ಲ’ ಎಂಬುದರ ಬಗ್ಗೆ ವಿಚಾರಣೆ ಮಾಡಲು ಮನವಿಪತ್ರ, ಅಂಚೆ, ವಿ-ಅಂಚೆ, ಫ್ಯಾಕ್ಸ್ ಇತ್ಯಾದಿಗಳ ಮೂಲಕ ಕೇಂದ್ರೀಯ ಗೃಹ ಸಚಿವಾಲಯಕ್ಕೆ ಬೇಡಿಕೆ ಸಲ್ಲಿಸಿರಿ !
೬. ‘ಹಲಾಲ್ ಪ್ರಮಾಣಪತ್ರ’ವನ್ನು ಕೊಡುವ ಸಂಸ್ಥೆಗಳು ‘ಪ್ರಮಾಣ ಪತ್ರವನ್ನು ಯಾವ ಕಾಯಿದೆಯ ಅಡಿಯಲ್ಲಿ ಕೊಡುತ್ತಿವೆ’ ಎಂಬುದರ ಮಾಹಿತಿಯನ್ನು ‘ಮಾಹಿತಿ ಹಕ್ಕು ಕಾಯಿದೆ, ೨೦೦೫’ರ ಅಡಿಯಲ್ಲಿ ಪಡೆಯಿರಿ ! ಈ ರೀತಿಯ ವಿತರಣೆಯು ಕಾನೂನುಬಾಹಿರವಾಗಿದ್ದಲ್ಲಿ ಅದರ ವಿರುದ್ಧ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ದೂರು ನೀಡಿ ! ಇದರ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೂಲಕ ಅಥವಾ ಕಾನೂನುಬದ್ಧ ಮಾರ್ಗದಿಂದ ನಿರ್ಬಂಧದ ಬೇಡಿಕೆಯನ್ನು ಮಾಡಿರಿ !
೭. ‘ಹಲಾಲ್ ಆರ್ಥಿಕವ್ಯವಸ್ಥೆ’ಯ ವಿರುದ್ಧದ ಬೇಡಿಕೆಗಳ ಮನವಿಯನ್ನು ತಯಾರಿಸಿ ಅದನ್ನು ಸ್ಥಳೀಯ ವ್ಯಾಪಾರಿ ಸಂಘಟನೆ, ‘ಛೇಂಬರ್ ಆಫ್ ಕಾಮರ್ಸ್’, ‘ಉದ್ಯಮಿಗಳ ಸಂಘಟನೆ’, ‘ಸಗಟು ಮಾರಾಟಗಾರರ ಸಂಘಟನೆ’ ಮುಂತಾದವರ ‘ಲೆಟರ್‌ಹೆಡ್’ ನಲ್ಲಿ ‘ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI)’, ಕೇಂದ್ರೀಯ ವಾಣಿಜ್ಯ ಮಂತ್ರಿ ಮತ್ತು ‘ಪ್ರಧಾನಮಂತ್ರಿ ಕಾರ್ಯಾಲಯ’ ಇವರಿಗೆ ಕಳುಹಿಸಿ, ಹಾಗೆಯೇ ಈ ಮನವಿ ಯನ್ನು ಸ್ಥಳೀಯ ಜಿಲ್ಲಾಧಿಕಾರಿಗಳಿಗೂ ನೀಡಿರಿ !
೮. ‘ಹಲಾಲ್ ಆರ್ಥಿಕವ್ಯವಸ್ಥೆ’ಯ ಬಗ್ಗೆ ಸಮವಿಚಾರಿ ವಕೀಲರನ್ನು ಸೇರಿಸಿ ಜಾಗೃತಿ ಸಭೆಯನ್ನು ತೆಗೆದುಕೊಂಡು ಅದರ ಮೂಲಕ ‘ಮಾಹಿತಿ ಹಕ್ಕು’ ಬಳಸಿ ಇದರ ಬಗ್ಗೆ ಕಾನೂನುಬದ್ಧ ಮಾಹಿತಿಯನ್ನು ಸಂಗ್ರಹಿಸಲು ಪ್ರಯತ್ನಿಸಿ !
೯. ಜಗತ್ತಿನೆಲ್ಲೆಡೆ ಪ್ರಾಣಿಗಳ ಬಗೆಗಿನ ಕ್ರೂರತೆಯನ್ನು ತಡೆಗಟ್ಟಲು ಮಾಂಸ ಮಾರಾಟಗಾರರು ರಸ್ತೆಯ ಮೇಲೆ ಪ್ರಾಣಿವಧೆ ಮಾಡಲು ನಿರ್ಬಂಧವನ್ನು ಹಾಕಲಾಗಿದೆ, ಹಾಗೆಯೇ ‘ಹಲಾಲ್’ ಮಾಡುವ ಮೊದಲು ಪ್ರಾಣಿಯ ಪ್ರಜ್ಞೆಯನ್ನು ತಪ್ಪಿಸುವುದು ಕಡ್ಡಾಯ ಮಾಡಲಾಗಿದೆ. ಭಾರತದಲ್ಲೂ ‘ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯಿದೆ, ೧೯೬೦’ ಎಂಬ ಕಾಯಿದೆಯಲ್ಲಿ ತಿದ್ದುಪಡಿ ಮಾಡಲು ಆಗ್ರಹಿಸಿ ‘ಹಲಾಲ್’ ಪದ್ಧತಿಯಲ್ಲಿನ ಅನುಚಿತ ಕೃತ್ಯಗಳ ಮೇಲೆ ನಿರ್ಬಂಧ ತರಲು ಪ್ರಯತ್ನಿಸಿ !
೧೦. ತಮ್ಮ ಪ್ರದೇಶದಲ್ಲಿನ ಹಿಂದುತ್ವವಾದಿ ರಾಜಕೀಯ ನೇತಾರರಿಗೆ ಈ ಸಂಕಟದ ಬಗ್ಗೆ ಮಾಹಿತಿ ಕೊಡಿ ! ಅವರಿಗೆ ‘ಹಲಾಲ್ ಆರ್ಥಿಕವ್ಯವಸ್ಥೆ’ಯ ಬಗ್ಗೆ ವಿಧಾನಸಭೆಯಲ್ಲಿ, ಹಾಗೆಯೇ ಸಂಸತ್ತಿನಲ್ಲಿ ಸರಕಾರಕ್ಕೆ ಪ್ರಶ್ನೆಗಳನ್ನು ಕೇಳಲು ಪ್ರೋತ್ಸಾಹಿಸಿ !
೧೧. ಹಿಂದೂ ಸಮಾಜದಲ್ಲಿ ಈ ‘ಹಲಾಲ್ ಆರ್ಥಿಕವ್ಯವಸ್ಥೆ’ಯ ಸಂಕಟದ ಬಗ್ಗೆ ಜಾಗೃತಿ ಮೂಡಿಸಲು ವ್ಯಾಖ್ಯಾನಗಳನ್ನು ಮತ್ತು ಚರ್ಚಾಗೋಷ್ಠಿಗಳನ್ನು ಆಯೋಜಿಸಿ !
ಈ ಕಾರ್ಯಕ್ರಮದಲ್ಲಿ ವಿಷಯ ಮಂಡಿಸಲು ‘ಹಿಂದೂ ಜನಜಾಗೃತಿ ಸಮಿತಿ’ಯು ತಮಗೆ ಸಹಾಯ ಮಾಡುವುದು.
೧೨. ಭಾರತದಲ್ಲಿ ವ್ಯಾಪಾರ ಮಾಡುವ ಮತ್ತು ಹಿಂದೂಗಳಿಗೂ ‘ಹಲಾಲ್’ ಪದಾರ್ಥಗಳನ್ನೇ ತಿನ್ನಿಸುವ ‘ಮ್ಯಾಕ್‌ಡೊನಾಲ್ಡ್’, ‘ಕೀಫ್‌ಸಿ’
ಮುಂತಾದ ಬಹುರಾಷ್ಟ್ರೀಯ ಕಂಪನಿಗಳ ವಿರುದ್ಧ ದೂರು ದಾಖಲಿಸಿ ಅವರ ಮೇಲೆ ಬಹಿಷ್ಕಾರ ಹಾಕಲು ಕರೆ ನೀಡಿ !
(ಆಧಾರ : ಹಿಂದೂ ಜನಜಾಗೃತಿ ಸಮಿತಿ ಪುರಸ್ಕೃತ ಗ್ರಂಥ ‘ಹಲಾಲ್ ಜಿಹಾದ್’)