ನಾಮಜಪದ ಮಹತ್ವ

ದೇವರ ಪೂಜೆ ಮಾಡುವುದು, ಸಂತರ ಪಾದಪೂಜೆ ಅಥವಾ ಅವರ ಪಾದುಕೆಗಳ ಪೂಜೆ ಮಾಡುವುದು ಇವುಗಳಂತಹ ಉಪಾಸನೆಗಳ ಕೃತಿ ಮಾಡುವಾಗಲೂ ಮನಸ್ಸು ಏಕಾಗ್ರವಾಗಿದ್ದರೆ ಮಾತ್ರ ಅದರಿಂದ ಪೂರ್ಣ ಲಾಭವಾಗುತ್ತದೆ. ನಾಮಜಪದಿಂದ ಮನಸ್ಸಿನ ಏಕಾಗ್ರತೆಯನ್ನು ಸಾಧಿಸಬಹುದು. ಇದಕ್ಕಾಗಿ ಪೂಜೆಯಂತಹ ಕೃತಿಯನ್ನು ನಾಮಜಪಿಸುತ್ತಾ ಮಾಡಬೇಕು.

ಹಿಂದೂಗಳೇ, ಕಾಲಕ್ಕನುಸಾರ ಸಾಧನೆಯು ಬದಲಾಗುತ್ತದೆ ಎಂಬುದನ್ನು ಗಮನದಲ್ಲಿಡಿ !

‘ಸಂಪತ್ಕಾಲದಲ್ಲಿ, ಅಂದರೆ ಪ್ರಾಚೀನ ಯುಗಗಳಲ್ಲಿ ‘ಗೋದಾನ ಮಾಡುವುದು’ ಸಾಧನೆಯಾಗಿತ್ತು. ಸದ್ಯದ ಆಪತ್ಕಾಲದಲ್ಲಿ ಗೋವುಗಳ ಅಸ್ತಿತ್ವದ ಪ್ರಶ್ನೆ ಉದ್ಭವಿಸಿದೆ. ಹಾಗಾಗಿ ‘ಗೋದಾನವಲ್ಲ, ಗೋರಕ್ಷಣೆ ಮಾಡುವುದು’ ಮಹತ್ವದ್ದಾಗಿದೆ !’

– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ