Sanatan Innocence Proved : ಡಾ. ದಾಭೋಲ್ಕರ ಹತ್ಯೆ ಪ್ರಕರಣದಲ್ಲಿ ಸನಾತನ ಸಂಸ್ಥೆಯ ಸಾಧಕರ ಬಿಡುಗಡೆ

  • ಸನಾತನ ಸಂಸ್ಥೆಯ ವಿಕ್ರಮ ಭಾವೆ, ಹಿಂದೂ ಜನಜಾಗೃತಿ ಸಮಿತಿಗೆ ಸಂಬಂಧಿತ ಡಾ. ವೀರೇಂದ್ರ ಸಿಂಗ ತಾವಡೆ, ಮತ್ತು ನ್ಯಾಯವಾದಿ ಸಂಜೀವ ಪುನಾಲೇಕರರ ಬಿಡುಗಡೆ !

  • ಸಚಿನ ಅಂದುರೆ ಮತ್ತು ಶರದ ಕಳಸಕರರಿಗೆ ಜೀವಾವಧಿ ಶಿಕ್ಷೆ !

  • ಸುಮಾರು 8 ವರ್ಷಗಳ ನಂತರ ಡಾ. ವಿರೇಂದ್ರ ಸಿಂಹ ತಾವಡೆಯವರು ಜೈಲಿನಿಂದ ಹೊರಬರಲಿದ್ದಾರೆ !

  • ಎಲ್ಲ ಆರೋಪಿಗಳ ಮೇಲೆ ಹೇರಲಾಗಿದ್ದ ‘ಯು.ಎ.ಪಿ.ಎ.’ (ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ) ಯನ್ನು ನ್ಯಾಯಾಲಯವು ತೆಗೆದುಹಾಕಿದೆ !

ಪುಣೆ, ಮೇ 10 (ಸುದ್ದಿ.) – ಕಳೆದ 11 ವರ್ಷಗಳಿಂದ ಬಾಕಿ ಇದ್ದ ಹಾಗೂ ಇಡೀ ಮಹಾರಾಷ್ಟ್ರದ ಗಮನ ಸೆಳೆದಿದ್ದ ಅಂಧಶ್ರದ್ಧಾ ನಿರ್ಮೂಲನ ಸಮಿತಿಯ ಡಾ. ನರೇಂದ್ರ ದಾಭೋಲ್ಕರ ರವರ ಹತ್ಯೆಯ ಪ್ರಕರಣದ ಮಹತ್ವದ ತೀರ್ಪನ್ನು ಮೇ 10, 2024 ರಂದು ಪುಣೆಯ ವಿಶೇಷ ನ್ಯಾಯಾಧೀಶರಾದ ಪಿ.ಪಿ. ಜಾಧವರವರು ಘೋಷಿಸಿದರು. ನ್ಯಾಯಾಲಯವು ಈ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳವು (ಸಿಬಿಐ) ಆರೋಪಿಸಿರುವ ಪ್ರಮುಖ ಆರೋಪಿಗಳಾದ ಹಿಂದೂ ಜನಜಾಗೃತಿ ಸಮಿತಿಗೆ ಸಂಬಂಧಿಸಿದ ಡಾ. ವೀರೇಂದ್ರ ಸಿಂಗ ತಾವಡೆ, ಸನಾತನ ಸಂಸ್ಥೆಯ ಸಾಧಕ ಶ್ರೀ. ವಿಕ್ರಮ ಭಾವೆ ಹಾಗೂ ನ್ಯಾಯವಾದಿ ಸಂಜೀವ ಪುನಾಲೇಕರರವರನ್ನು ಬಲವಾದ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಬಿಡುಗಡೆಗೊಳಿಸಿದೆ. ಈ ಕೊಲೆಯ ಪ್ರಕರಣದಲ್ಲಿ ಉಳಿದ ಶಂಕಿತ ಆರೋಪಿಗಳಾದ ಸಚಿನ ಅಂದುರೆ ಹಾಗೂ ಶರದ ಕಳಸಕರರವರನ್ನು ಅಪರಾಧಿಗಳೆಂದು ಘೋಷಿಸಿ ಜೀವಾವಧಿ ಶಿಕ್ಷೆ ಮತ್ತು ತಲಾ 5 ಲಕ್ಷ ರೂಪಾಯಿ ದಂಢ ವಿಧಿಸಿದೆ. ಸಿ.ಬಿ.ಐ.ನ ವತಿಯಿಂದ ವಿಶೇಷ ಸರ್ಕಾರಿ ನ್ಯಾಯವಾದಿಗಳಾದ ಪ್ರಕಾಶ ಸೂರ್ಯವಂಶಿಯವರು ವಾದ ಮಂಡಿಸಿದರು. ಈ ತೀರ್ಪಿನ ನಂತರ ಸಿಬಿಐಯು ಜೂನ್ 10, 2016 ರಂದು ಬಂಧಿಸಿದ್ದ ಡಾ. ವೀರೇಂದ್ರ ಸಿಂಗ ತಾವಡೆಯವರು 8 ವರ್ಷಗಳ ನಂತರ ಜೈಲಿನಿಂದ ಹೊರಬರಲಿದ್ದಾರೆ.

ಈ ವೇಳೆ ನ್ಯಾಯಾಧೀಶರು, ‘ತನಿಖಾ ದಳವು ಡಾ. ವೀರೇಂದ್ರ ಸಿಂಗ ತಾವಡೆಯವರನ್ನು ಮುಖ್ಯ ಸೂತ್ರಧಾರನೆಂದು ಆರೋಪಿಸಿತ್ತು, ಇದನ್ನು ಸರಕಾರಿ ಪಕ್ಷಕ್ಕೆ ಸಾಬೀತುಪಡಿಸಲು ಸಾಧ್ಯವಾಗಲಿಲ್ಲ, ಹಾಗೆಯೇ ಶ್ರೀ. ವಿಕ್ರಮ ಭಾವೆ ಮತ್ತು ನ್ಯಾಯವಾದಿ ಸಂಜೀವ ಪುನಾಲೇಕರರವರ ವಿರುದ್ಧದ ಯಾವುದೇ ಆರೋಪವನ್ನು ಸಾಬೀತುಪಡಿಸಲು ಸಾಧ್ಯವಾಗಲಿಲ್ಲ’ ಎಂದು ಹೇಳಿದರು. ಈ ಪ್ರಕರಣದಲ್ಲಿ ಆರಂಭದಿಂದಲೇ ಸನಾತನ ಸಂಸ್ಥೆಯ ವಿರುದ್ಧ ಯಾವುದೇ ಪುರಾವೆಗಳು ಇಲ್ಲದಿದ್ದರೂ ಬಲವಂತವಾಗಿ ಸಿದ್ಧಪಡಿಸಲಾಯಿತು ಹಾಗೂ ಸನಾತನ ಸಂಸ್ಥೆಯ ಸಾಧಕರನ್ನು ಇದರಲ್ಲಿ ಸಿಲುಕಿಸಲಾಯಿತು. ನ್ಯಾಯಾಲಯದ ಈ ತೀರ್ಪಿನಿಂದ ‘ಸತ್ಯವು ಚಿಂತೆಗೀಡು ಮಾಡಬಹುದು ಆದರೆ ಸೋಲುವುದಿಲ್ಲ’, (ಸತ್ಯ ಬೆಳಕಿಗೆ ಬರಲು ಹೋರಾಟ ಮಾಡಬೇಕಾಗಬಹುದು; ಆದರೆ ಸೋಲಲು ಸಾಧ್ಯವಿಲ್ಲ) ಎಂಬುದು ಮತ್ತೊಮ್ಮೆ ಸಾಬೀತಾಯಿತು.

ಆರೋಪಿಗಳ ಪರವಾಗಿ ಹೋರಾಡುತ್ತಿದ್ದ ನ್ಯಾಯವಾದಿಗಳು !

ಮುಂಬಯಿ ಹೈಕೋರ್ಟ್‌ನ ಹಿರಿಯ ನ್ಯಾಯವಾದಿಗಳಾದ ವೀರೇಂದ್ರ ಇಚಲಕರಂಜಿಕರ, ನ್ಯಾಯವಾದಿ ಪ್ರಕಾಶ ಸಾಳಸಿಂಗಿಕರ ಮತ್ತು ನ್ಯಾಯವಾದಿ ಸುವರ್ಣ ವತ್ಸ-ಅವ್ಹಾಡ ರವರು ನ್ಯಾಯಾಲಯದಲ್ಲಿ ಆರೋಪಿಗಳ ಪರ ವಾದ ಮಂಡಿಸಿದರು. ತನಿಖಾ ದಳಗಳು ಸುಳ್ಳು ಪುರಾವೆ ಮತ್ತು ಸಾಕ್ಷಿಗಳನ್ನು ಸೃಷ್ಟಿಸಿ ಆರೋಪಿಗಳ ಜೀವನವನ್ನು ಹಾಳು ಮಾಡುವ ಸಂಚು ರೂಪಿಸಿದ್ದವು; ಆದರೆ ಅಧ್ಯಯನಪೂರ್ಣ ಮತ್ತು ಖಂಡತುಂಡ ಪ್ರತಿವಾದದೊಂದಿಗೆ ಈ ಎಲ್ಲರೂ ರಣಧೀರರಂತೆ ಹೋರಾಡಿದರು.

ಬಲವಾದ ಪುರಾವೆಗಳನ್ನು ಮಂಡಿಸುವಲ್ಲಿ ತನಿಖಾ ದಳಗಳ ವೈಫಲ್ಯ !

ಈ ಸಂದರ್ಭದಲ್ಲಿ ನ್ಯಾಯಾಧೀಶರು ‘ಡಾ. ವೀರೇಂದ್ರ ಸಿಂಗ ತಾವಡೆಯವರನ್ನು ಕೊಲೆಗೆ ಪ್ರತ್ಯಕ್ಷ ಸಂಚು ರೂಪಿಸಿರುವ ಆರೋಪದ ಅಡಿಯಲ್ಲಿ ಶಂಕಿಸಬಹುದು; ಆದರೆ ತನಿಖಾಧಿಕಾರಿಗಳು ಅವರ ವಿರುದ್ಧ ಬಲವಾದ ಸಾಕ್ಷ್ಯವನ್ನು ನೀಡಲು ವಿಫಲರಾದರು ಮತ್ತು ಅನುಮಾನವನ್ನು ಸಾಕ್ಷ್ಯವನ್ನಾಗಿ ಪರಿವರ್ತಿಸುವಲ್ಲಿ ಸರ್ಕಾರಿ ಪಕ್ಷಗಳು ವಿಫಲಗೊಂಡವು. ಹೀಗಾಗಿ ಅವರನ್ನು ದೋಷಮುಕ್ತಗೊಳಿಸಲಾಗುತ್ತಿದೆ’ ಎಂದು ನಮೂದಿಸಿದರು. ನ್ಯಾಯವಾದಿ ಸಂಜೀವ ಪುನಾಲೇಕರ ಮತ್ತು ಶ್ರೀ. ವಿಕ್ರಮ ಭಾವೆಯವರ ಮೇಲೆ ಶಸ್ತ್ರ ನಾಶಪಡಿಸಲು ಸಹಾಯ ಮಾಡಿರುವುದಾಗಿ ಆರೋಪಿಸಲಾಗಿತ್ತು. ಅದು ತಪ್ಪು ಎಂಬುದು ಈ ತೀರ್ಪಿನಿಂದ ಸ್ಪಷ್ಟವಾಯಿತು.

ಎಲ್ಲಾ ಆರೋಪಿಗಳ ಮೇಲಿನ ‘U.A.P.A.’ಯನ್ನು ತೆಗೆದು ಹಾಕಿದ ನ್ಯಾಯಾಲಯ !

ಡಾ. ದಾಭೋಲ್ಕರ ಹತ್ಯೆ ಪ್ರಕರಣದ ಎಲ್ಲಾ ಆರೋಪಿಗಳ ಮೇಲೆ ಕೇಂದ್ರೀಯ ತನಿಖಾ ದಳವು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ದೇಶದ್ರೋಹದ ಆರೋಪವನ್ನು ದಾಖಲಿಸಿತ್ತು. ನ್ಯಾಯಾಲಯ ಎಲ್ಲಾ ಆರೋಪಿಗಳ ಮೇಲಿನ ಈ ಗಂಭೀರ ಕಲಂಗಳನ್ನು ತೆಗೆದುಹಾಕಿದೆ. ಕಲಂನ್ನು ತೆಗೆಯುವಾಗ ನ್ಯಾಯಾಧೀಶರು, `ಅಧಿಕಾರಿಗಳು ತೋರಿಸಿರುವ ನಿರ್ಲಕ್ಷ್ಯದಿಂದಾಗಿ `ಯುಎಪಿಎ’ಯನ್ನು ಸಾಬೀತಾಗುವುದಿಲ್ಲ’ ಎಂದು ಹೇಳಿದರು.

ಅಂಧ ಶ್ರದ್ಧಾ ನಿರ್ಮೂಲನ ಸಮಿತಿ(ಅಂನಿಸ), ಪ್ರಗತಿಪರರು, ಕಾಂಗ್ರೆಸ್ಸಿಗರು, ಹಾಗೆಯೇ ಸಾಮ್ಯವಾದಿಗಳಿಗೆ ಕಪಾಳಮೋಕ್ಷ !

ಡಾ. ದಾಭೋಲ್ಕರ ಹತ್ಯೆಯ ಪ್ರಕರಣದ ನೆಪದಲ್ಲಿ ಅಂನಿಸ, ಪ್ರಗತಿ(ಅಧೋ)ಪರರು, ಕಾಂಗ್ರೆಸಿಗರು, ಸಾಮ್ಯವಾದಿಗಳು, ಹೇಳಿಕೆಯ ಪ್ರಗತಿಪರರು ಹಾಗೂ ಕೆಲವು ಹಿಂದೂದ್ವೇಷಿ ಮಾಧ್ಯಮಗಳು ನಿರಂತರಾಗಿ ಸನಾತನ ಸಂಸ್ಥೆಯನ್ನು ‘ಭಯೋತ್ಪಾದಕ ಸಂಘಟನೆ’ ಎಂದು ಘೋಷಿಸಿ ಅದರ ಮೇಲೆ ನಿರ್ಬಂಧ ಹೇರಬೇಕು ಎಂದು ಮನವಿ ಮಾಡುತ್ತಿದ್ದವು. ನ್ಯಾಯಾಲಯದ ತೀರ್ಪಿನಿಂದ ಸನಾತನ ಸಂಸ್ಥೆಯು ನಿರಪರಾಧಿ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಹಾಗಾಗಿ ಈ ಪ್ರಕರಣದಲ್ಲಿ ಮೊದಲಿನಿಂದಲೂ ಸನಾತನ ಸಂಸ್ಥೆಯನ್ನು ದೂರುತ್ತಾ ಬಂದಿರುವ ಅಂನಿಸ, ಪ್ರಗತಿಪರರು, ಕಾಂಗ್ರೆಸ್ಸಿಗರು, ಕಮ್ಯುನಿಸ್ಟರಿಗೆ ಕಪಾಳಮೋಕ್ಷವಾಗಿದೆ.

ಕೊಲೆ ಪ್ರಕರಣದ ಘಟನಾವಳಿ !

1. ಡಾ. ನರೇಂದ್ರ ದಾಭೋಲ್ಕರರವರನ್ನು ಆಗಸ್ಟ್ 20, 2013 ರಂದು ಪುಣೆಯ ಮಹರ್ಷಿ ವಿಠ್ಠಲ ಶಿಂಧೆ ಸೇತುವೆಯಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು. ‘ಡಾ. ದಾಭೋಲ್ಕರರವರು ‘ಮಾರ್ನಿಂಗ್ ವಾಕ್’ಗೆಂದು ಹೊರಗೆ ಹೋದಾಗ ಕೊಲೆ ನಡೆದಿದೆ’, ಎಂಬುದು ಸರ್ಕಾರಿ ಪಕ್ಷದ ವಾದವಾಗಿತ್ತು. ಈ ಪ್ರಕರಣದಲ್ಲಿ ಸರ್ಕಾರಿ ಪಕ್ಷದ ಪರವಾಗಿ 5 ಜನರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿತ್ತು. ಇದರಲ್ಲಿ ಡಾ. ವೀರೇಂದ್ರ ಸಿಂಗ ತಾವಡೆಯವರ ಮೇಲೆ ಪ್ರಮುಖ ಸೂತ್ರಧಾರರೆಂದು, ಸಚಿನ ಅಂಧುರೆ ಮತ್ತು ಶರದ ಕಳಸಕರ ರವರ ಮೇಲೆ ಗುಂಡು ಹಾರಿಸಿರುವ ಆರೋಪ ಹೊರಿಸಲಾಗಿದ್ದು, ವಿಕ್ರಮ ಭಾವೆ ಮತ್ತು ನ್ಯಾಯವಾದಿ ಸಂಜೀವ ಪುನಾಲೇಕರರವರ ಮೇಲೆ ಶಸ್ತ್ರಾಸ್ತ್ರಗಳನ್ನು ನಾಶಪಡಿಸಲು ಸಹಾಯ ಮಾಡಿರುವ ಆರೋಪ ಹೊರಿಸಲಾಗಿತ್ತು.

2. ಆರೋಪಿಗಳ ಮೇಲೆ ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್‌ಗಳು 302 (ಕೊಲೆ), 120B (ಅಪರಾಧದ ಸಂಚು ರೂಪಿಸುವುದು), 34ನ ಅನುಸಾರ ಹಾಗೂ ಶಸ್ತ್ರಾಸ್ತ್ರ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳು ಮತ್ತು ಯು.ಎ.ಪಿ.ಎ. ಅಡಿಯಲ್ಲಿ ಅಪರಾಧಗಳನ್ನು ದಾಖಲಿಸಲಾಗಿತ್ತು.

3. ಸೆಪ್ಟೆಂಬರ್ 15, 2021 ರಂದು, ಅವರೆಲ್ಲರ ವಿರುದ್ಧದ ಆರೋಪಗಳನ್ನು ನಿಗದಿಪಡಿಸಿದ ನಂತರ ಖಟ್ಲೆಯ ವಿಚಾರಣೆಯನ್ನು ಪ್ರಾರಂಭಿಸಲಾಯಿತು. ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ 20 ಸಾಕ್ಷಿಗಳ ವಿಚಾರಣೆ ನಡೆಸಲಾಯಿತು. ಇವರಲ್ಲಿ ಮುಖ್ಯವಾಗಿ ಸಿಬಿಐ ತನಿಖಾಧಿಕಾರಿ ಎಸ್.ಆರ್. ಸಿಂಗ, ಡಾ. ನರೇಂದ್ರ ದಾಭೋಲ್ಕರರವರ ಪುತ್ರ ಡಾ. ಹಮೀದ ದಾಭೋಲ್ಕರ ಸೇರಿದ್ದಾರೆ.

 

ಸನಾತನ ಸಂಸ್ಥೆಯು ಸಚಿನ ಅಂಧುರೆ ಮತ್ತು ಶರದ ಕಳಸಕರರವರೊಂದಿಗೆ ಬಲವಾಗಿ ನಿಂತಿದೆ – ಚೇತನ ರಾಜಹಂಸ

ಡಾ. ದಾಭೋಲ್ಕರ ಹತ್ಯೆಯ ಪ್ರಕರಣದಲ್ಲಿ ಸನಾತನ ಸಂಸ್ಥೆಯು ನಿರಪರಾಧಿ ಎಂದು ಸಾಬೀತಾದರೂ ಹಿಂದುತ್ವನಿಷ್ಠರಾದ ಶ್ರೀ. ಸಚಿನ ಅಂಧುರೆ ಮತ್ತು ಶ್ರೀ. ಶರದ ಕಳಸಕರರವರಿಗೆ ಶಿಕ್ಷೆಯನ್ನು ವಿಧಿಸಲಾಗಿದೆ. ಹಿಂದುತ್ವನಿಷ್ಠರಾದ ಶ್ರೀ. ಅಂಧುರೆ ಮತ್ತು ಶ್ರೀ. ಕಳಸಕರರನ್ನು ನಗರ ನಕ್ಸಲಿಸಂನ ಹಿಂದೂವಿರೋಧಿ ಪಿತೂರಿಯ ಭಾಗವಾಗಿ ಸಿಲುಕಿಸಲಾಯಿತು. ಆದುದರಿಂದ ಶ್ರೀ. ಅಂಧುರೆ ಮತ್ತು ಶ್ರೀ. ಕಳಸಕರರಿಗೆ ನ್ಯಾಯ ಸಿಗುವವರೆಗೂ ಸನಾತನ ಸಂಸ್ಥೆಯು ಅವರೊಂದಿಗೆ ಬಲವಾಗಿ ನಿಂತಿದೆ. ಇವರಿಗೆ ನ್ಯಾಯ ದೊರಕಿಸಲು ಉಚ್ಚ ನ್ಯಾಯಾಲಯದಲ್ಲಿಯೂ ಹೋರಾಟ ನಡೆಸುವೆವು.

 

ಕಂಚಿ ಪೀಠಾಧೀಶ್ವರ ಸ್ವಾಮಿ ಜಯೇಂದ್ರ ಸರಸ್ವತಿ

ದೈನಿಕ ‘ಸನಾತನ ಪ್ರಭಾತ’ದಲ್ಲಿ ಜೂನ್ 12, 2016 ರಂದು ಡಾ. ತಾವಡೆಯವರನ್ನು ಬಂಧಿಸಿರುವ ವಾರ್ತೆಯನ್ನು ಪ್ರಕಟಿಸಲಾಗಿತ್ತು. ಆ ಬಗ್ಗೆ ಕಂಚಿ ಪೀಠಾಧೀಶ್ವರ ಸ್ವಾಮಿ ಜಯೇಂದ್ರ ಸರಸ್ವತಿಯವರು’ ಧರ್ಮದ್ರೋಹಿಗಳ ಆರೋಪಗಳಿಂದ ತಾನು ನಿರಪರಾಧಿ ಎಂದು ಬಿಡುಗಡೆಯಾದೆನು, ಸಾಧ್ವಿ ಪ್ರಜ್ಞಾ ಸಿಂಗರವರ ಮೇಲಿನ ಆರೋಪವೂ ಸುಳ್ಳೆಂದು ಸಾಬೀತಾಗಿಯಿತು, ಅದರಂತೆಯೇ ಸನಾತನ ಸಂಸ್ಥೆಯು ಭವಿಷ್ಯದಲ್ಲಿ ನಿರಪರಾಧಿ ಎಂದು ಸಾಬೀತಾಗುತ್ತದೆ !’ ಎಂದು ಹೇಳಿದ್ದರು. ಇಂದು, ಮೇ 10, 2024ರಂದು ‘ಸನಾತನದ ಅಮಾಯಕತೆ’ ಸಾಬೀತಾಗಿದೆ.