ಸೌಭಾಗ್ಯದ ಆಭರಣಗಳೆಂದರೆ ಸ್ತ್ರೀಯರಿಗೆ ಅವರ ಪಾತಿವ್ರತ್ಯದ ಅರಿವು ಮಾಡಿಕೊಡುವ ಮಾಧ್ಯಮಗಳು

ಅ. ಕುಂಕುಮ, ಮಂಗಳಸೂತ್ರ, ಬಳೆ, ಕಾಲುಂಗುರ ಮುಂತಾದ ಘಟಕಗಳ ಸಹಾಯದಿಂದ ಹಾಗೂ ರಜೋಗುಣದ ಸಾಮರ್ಥ್ಯದಿಂದ ವಿವಾಹಿತ ಸ್ತ್ರೀಯು ಕಡಿಮೆ ಕಾಲಾವಧಿಯಲ್ಲಿ ಪುರುಷ ಪ್ರಧಾನ ಶಿವಸ್ವರೂಪ ಕರ್ತೃತ್ವಸ್ವರೂಪದೊಂದಿಗೆ ಏಕರೂಪವಾಗಬಲ್ಲಳು; ಆದುದರಿಂದ ಸ್ತ್ರೀಯಲ್ಲಿರುವ ಕ್ರಿಯಾಶೀಲತೆಯನ್ನು ಜಾಗೃತಗೊಳಿಸಿ, ಪತಿಯ ಕರ್ತವ್ಯಗಳಲ್ಲಿ ಅವನಿಗೆ ಸಂಪೂರ್ಣ ಸಹಾಯ ಮಾಡಿ, ರಜೋಗುಣದ ಸಹಾಯದಿಂದ ಕೃತಿ ಮತ್ತು ಕರ್ಮಗಳ ಯೋಗ್ಯ ಹೊಂದಾಣಿಕೆ ಮಾಡಲು ವಿವಾಹಿತ ಸ್ತ್ರೀಯರಿಗೆ ಆಯಾ ಆಭರಣಗಳ ಕರ್ಮಬಂಧನವನ್ನು ಹಾಕಲಾಗಿದೆ.

ಆ. ಸೌಭಾಗ್ಯಾಲಂಕಾರಗಳ ತೇಜದಾಯಕ ಲಹರಿಗಳ ಸ್ಪರ್ಶದಿಂದ ಸ್ತ್ರೀಯರಿಗೆ ಅವರ ಪಾತಿವ್ರತ್ಯದ ಅರಿವನ್ನು ಮಾಡಿಕೊಡುವ ಆಯೋಜನೆಯನ್ನು ಮಾಡಲಾಗಿದೆ.

ಇ. ಸೌಭಾಗ್ಯಾಲಂಕಾರಗಳ ಬಾಹ್ಯ ಅರಿವಿನಿಂದ ಸಮಾಜವು ಏಕಪತ್ನಿತ್ವ ಮತ್ತು ಪಾತಿವ್ರತ್ಯದ ಜೋಪಾಸನೆಯನ್ನು ಮಾಡಿ ಸ್ವೇಚ್ಛಾಚಾರದಿಂದ ದೂರವಿರಬೇಕೆಂಬ ಯೋಜನೆಯನ್ನು ಮಾಡುವುದು ಕಲಿಯುಗದಲ್ಲಿ ಅನಿವಾರ್ಯವಾಗಿತ್ತು.

ಈ. ಸೌಭಾಗ್ಯಾಲಂಕಾರಗಳೆಂದರೆ ಅಸುರೀ ಶಕ್ತಿಗಳ ಭೋಗದ ಕಣ್ಣುಗಳಿಂದ ರಕ್ಷಣೆ ಯನ್ನು ಪಡೆಯಲು ಮಾಡಿದಂತಹ ಒಂದು ಪ್ರಯತ್ನವಾಗಿದೆ: ಕಲಿಯುಗವು ರಜ-ತಮ ಪ್ರಧಾನವಾಗಿರುವುದರಿಂದ ಸ್ವೇಚ್ಛಾಚಾರಕ್ಕೆ ಅನುಕೂಲ ಮತ್ತು ಸಾಧನೆಗೆ ಪ್ರತಿಕೂಲವಾಗಿದೆ. ಈ ಯುಗದಲ್ಲಿ ಸ್ತ್ರೀರೂಪಿ ಪಾತಿವ್ರತ್ಯಕ್ಕೆ ಅಥವಾ ಸೌಭಾಗ್ಯದ ಶೀಲಕ್ಕೆ ಆಭರಣಗಳ ತೇಜದ ಬೇಲಿಯನ್ನು ಹಾಕಲಾಗಿದೆ. ಈ ತೇಜದ ಬಲದಿಂದ ಅವಳ ಶೀಲದ ರಕ್ಷಣೆಯಾಗುತ್ತದೆ. ಸೌಭಾಗ್ಯವತಿ ಸ್ತ್ರೀಯನ್ನು ಮಂಗಳಸೂತ್ರ, ಬಳೆ ಹಾಗೂ ಕುಂಕುಮ ಈ ಸೌಭಾಗ್ಯಾಲಂಕಾರಗಳಿಂದ ರಕ್ಷಿಸಿರುವುದರಿಂದ ಒಂದು ರೀತಿ ಯಲ್ಲಿ ಅವಳನ್ನು ಆಸುರೀ ಶಕ್ತಿಗಳ ಭೋಗದ ಕಣ್ಣುಗಳಿಂದ ದೂರವಿಡಲು ಕಲಿಯುಗದಲ್ಲಿ ಪ್ರಯತ್ನಿಸಲಾಗಿದೆ.’

– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ